Homeಮುಖಪುಟಮಾಧ್ಯಮ ಸಂಸ್ಥೆಗಳ ಮಾಲೀಕತ್ವ ನಿಯಂತ್ರಣ ಕಾನೂನು ಜಾರಿಗೆ ತರಬೇಕು: ಶಶಿ ತರೂರ್

ಮಾಧ್ಯಮ ಸಂಸ್ಥೆಗಳ ಮಾಲೀಕತ್ವ ನಿಯಂತ್ರಣ ಕಾನೂನು ಜಾರಿಗೆ ತರಬೇಕು: ಶಶಿ ತರೂರ್

- Advertisement -
- Advertisement -

ರಾಜಕೀಯ ವ್ಯಕ್ತಿಗಳು ಮತ್ತು ವ್ಯಾಪಾರ ಕಂಪನಿಗಳ ಮಾಧ್ಯಮ ಸಂಸ್ಥೆಗಳ ಮಾಲೀಕತ್ವವನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರ ಕಾನೂನನ್ನು ಜಾರಿಗೊಳಿಸಬೇಕು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎನ್. ರಾಮಚಂದ್ರನ್ ಫೌಂಡೇಶನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಭಾರತದಲ್ಲಿ ಜವಾಬ್ದಾರಿಯುತ ಪತ್ರಿಕೋದ್ಯಮದ ಅಗತ್ಯವನ್ನು ಒತ್ತಿ ಹೇಳಿದರು. ದೇಶದ ಖಾಸಗಿ ವ್ಯಕ್ತಿಗಳ ಮಾಧ್ಯಮ ಮಾಲೀಕತ್ವದ ಬಗ್ಗೆ ನಿಯಮಾವಳಿಗಳು ಇಲ್ಲದಿರುವುದನ್ನು ಎತ್ತಿ ತೋರಿಸಿ, ಮುಂದುವರಿದ ರಾಷ್ಟ್ರಗಳಲ್ಲಿರುವ ನಿಯಮಗಳು ಭಾರತಕ್ಕಿಂತ ಹೇಗೆ ಭಿನ್ನವಾಗಿವೆ ಎಂದು ವಿವರಿಸಿದರು.

‘ದೇಶದಲ್ಲಿ ದೃಢ, ಸ್ವತಂತ್ರ ಮಾಧ್ಯಮವನ್ನು ಪ್ರೋತ್ಸಾಹಿಸುವ ಮೂಲಕ, ಒಂದೇ ಕಂಪನಿ ಅಥವಾ ರಾಜಕೀಯ ವ್ಯಕ್ತಿಗಳಿಂದ ಬಹು ಸುದ್ದಿ ಸಂಸ್ಥೆಗಳ ನಿಯಂತ್ರಣವನ್ನು ಮಿತಿಗೊಳಿಸುವ ಕಾನೂನುಗಳು ಮತ್ತು ನಿಬಂಧನೆಗಳನ್ನು ಸರ್ಕಾರವು ಪರಿಚಯಿಸಬೇಕು’ ಎಂದು ಅವರು ಹೇಳಿದರು.

ಭಾರತದ ಬಹುತೇಕ ಮಾಧ್ಯಮಗಳು “ಸತ್ಯಗಳ ಕಡೆಗೆ ನಿಷ್ಠುರ ಮನೋಭಾವವನ್ನು ಹೊಂದಿದ್ದು, ಸುದ್ದಿಗೆ ತಿದ್ದುಪಡಿಗಳನ್ನು ನೀಡಲು ಹಿಂಜರಿಯುತ್ತವೆ” ಎಂದು ಹೇಳಿದರು.

ಮಾಧ್ಯಮಗಳೊಂದಿಗಿನ ಅವರ ಸ್ವಂತ ಅನುಭವಗಳು ಮತ್ತು ಅವರ ವಿರುದ್ಧದ ಪತ್ರಿಕಾ ಆರೋಪಗಳ ಕುರಿತು ಕಾನೂನು ಆಶ್ರಯವನ್ನು ಆಯ್ಕೆ ಮಾಡುವ ನಿರ್ಧಾರವನ್ನು ಉಲ್ಲೇಖಿಸಿದ ತರೂರ್, ‘ನ್ಯಾಯಾಧೀಶರು ಒಬ್ಬ ವ್ಯಕ್ತಿಯ ಹತ್ಯೆಯನ್ನು ತಡೆಯುವ ಅರ್ಜಿಯ ವಿಚಾರಣೆಯನ್ನು ನಿಗದಿಪಡಿಸುವ ಮೊದಲೇ ಒಬ್ಬರನ್ನು ಹತ್ಯೆ ಮಾಡಬಹುದು’ ಎಂದರು.

ರಾಷ್ಟ್ರದ ಪ್ರಜಾಪ್ರಭುತ್ವದಲ್ಲಿ ಮುಕ್ತ ಮಾಧ್ಯಮದ ನಿರ್ಣಾಯಕ ಪಾತ್ರ ಹಾಗೂ ಪತ್ರಿಕಾ ಸುಧಾರಣೆಯ ಅಗತ್ಯವನ್ನು ಒತ್ತಿ ಹೇಳಿ, ‘ಸತ್ಯ, ಅಭಿಪ್ರಾಯಗಳು ಮತ್ತು ಊಹಾಪೋಹಗಳ ನಡುವಿನ ವ್ಯತ್ಯಾಸವು ಅಪ್ರಸ್ತುತವಾಗಲು ಬಿಡಬಾರದು’ ಎಂದರು.

ಭಾರತದ ಜಾಗತಿಕ ಚಿತ್ರಣವನ್ನು ಕೇಂದ್ರೀಕರಿಸಿ ಮಾತನಾಡಿದ ತರೂರ್, ‘ಜಾಗತಿಕವಾಗಿ ಜವಾಬ್ದಾರಿಯುತ ದೇಶವಾಗಿ ಮತ್ತು 21ನೇ ಶತಮಾನದ ಪ್ರಜಾಪ್ರಭುತ್ವ ರಾಷ್ಟ್ರವಾಗಿ, ನಾವು ನಮ್ಮನ್ನು ಗಂಭೀರವಾಗಿ ಪರಿಗಣಿಸಬೇಕು. ಜವಾಬ್ದಾರಿಯುತವಾಗಿ ವರ್ತಿಸಬೇಕು’ ಎಂದರು.

‘ಸತ್ಯ, ಅಭಿಪ್ರಾಯಗಳು ಮತ್ತು ಊಹಾಪೋಹಗಳು, ವರದಿಗಳು ಮತ್ತು ವದಂತಿಗಳು, ಮೂಲ ಮಾಹಿತಿ ಮತ್ತು ಆಧಾರರಹಿತ ಆರೋಪಗಳ ನಡುವಿನ ವ್ಯತ್ಯಾಸವು ಭಾರತೀಯ ಮಾಧ್ಯಮಗಳಲ್ಲಿ ಅಪ್ರಸ್ತುತವಾಗಿದೆ. ಮುಕ್ತ ಮಾಧ್ಯಮವು ದೇಶದ ಪ್ರಜಾಪ್ರಭುತ್ವದ ಜೀವಾಳವಾಗಿದೆ ಮತ್ತು ಆದ್ದರಿಂದ ಪತ್ರಿಕಾ ಮಾಧ್ಯಮವೂ ತನ್ನನ್ನು ತಾನು ಸುಧಾರಿಸಿಕೊಳ್ಳಬೇಕು’ ಎಂದು ತರೂರ್ ಹೇಳಿದರು.

ಇದನ್ನೂ ಓದಿ; ಉದ್ಯೋಗಕ್ಕಾಗಿ ಭೂಮಿ ಹಗರಣ: ಇಡಿ ಚಾರ್ಜ್ ಶೀಟ್‌ನಲ್ಲಿ ಲಾಲೂ ಪತ್ನಿ, ಪುತ್ರಿ ಹೆಸರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...