Homeಕರ್ನಾಟಕ’ನಮ್ಮ ಮಕ್ಕಳನ್ನು ಕೂಡಾ ಇದೇ ರೀತಿ ಕರೆದುಕೊಂಡು ಹೋಗಬಹುದು ಎಂಬ ಆತಂಕವಿದೆ’

’ನಮ್ಮ ಮಕ್ಕಳನ್ನು ಕೂಡಾ ಇದೇ ರೀತಿ ಕರೆದುಕೊಂಡು ಹೋಗಬಹುದು ಎಂಬ ಆತಂಕವಿದೆ’

ದಿಶಾ ರವಿ ಬಂಧನ ಖಂಡಿಸಿ, ಮಕ್ಕಳ ಸ್ವಾತಂತ್ಯ್ರ, ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿ ಸರ್ಕಾರಕ್ಕೆ ಪತ್ರ ಬರೆದ ಪೋಷಕರು

- Advertisement -
- Advertisement -

ಗ್ರೇಟಾ ಥನ್‌ಬರ್ಗ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಟೂಲ್ಕಿಟ್ ಪ್ರಕರಣದಲ್ಲಿ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿರುವುದನ್ನು ಯುವಜನರು ಮತ್ತು ಮಕ್ಕಳನ್ನು ಹೊಂದಿರುವ ಪೋಷಕರು ಖಂಡಿಸಿದ್ದು, ಮಕ್ಕಳ ಸ್ವಾತಂತ್ಯ್ರ, ಸುರಕ್ಷತೆಯ ಬಗ್ಗೆ ಖಚಿತ ಪಡಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ, “ದೆಹಲಿ ಪೊಲೀಸರು ದಿಶಾ ಅವರನ್ನು ಮನೆಯಿಂದ ಬಂಧಿಸಿ ದೆಹಲಿಗೆ ಕರೆದೊಯ್ದರು. ಅವರನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರು ಪಡಿಸಲಿಲ್ಲ ಮತ್ತು ತಮ್ಮ ವಕೀಲರನ್ನು ಸಂಪರ್ಕಿಸಲು ಸಹ ಅವಕಾಶ ಮಾಡಿಕೊಡಲಿಲ್ಲ. ಸಾಂವಿಧಾನಿಕ ಮತ್ತು ಕ್ರಿಮಿನಲ್‌ ಕಾನೂನಿನಲ್ಲಿ ಸ್ಥಾಪಿಸಲಾದ ಕಾರ್ಯವಿಧಾನಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಈ ಬಂಧನವನ್ನು ನಡೆಸಲಾಗಿದೆ. ಭಾನುವಾರ ಮಧ್ಯಾಹ್ನ ದೆಹಲಿಯ ಮ್ಯಾಜಿಸ್ಟ್ರೇಟ್‌ ಎದುರು ಹಾಜರಾಗುವವರೆಗೂ ದಿಶಾ ಕುಟುಂಬಕ್ಕೆ ಅವರು ಇರುವ ಸ್ಥಳದ ಬಗ್ಗೆ ಯಾವುದೆ ಮಾಹಿತಿ ನೀಡಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ: ರೈತರ ಮೊಮ್ಮಗಳನ್ನು ಬಂಧಿಸಿದರೆ ಹೋರಾಟ ದುರ್ಬಲಗೊಳ್ಳುವುದಿಲ್ಲ: ದಿಶಾ ರವಿಗೆ ಜಾಗತಿಕ ಬೆಂಬಲ

“ಅವರು ಮಾಡಿರುವ ಅಪರಾಧವೆಂದರೆ, ರೈತರ ಪ್ರತಿಭಟನೆಯ ಬಗ್ಗೆ ಒಂದು ಟೂಲ್‌ ಕಿಟ್‌ ತನ್ನ ಸಾಮಾಜಿಕ ಮಾಧ್ಯಮಗಳ‌ ಮೂಲಕ ಹಂಚಿದ್ದು, ಅದರಲ್ಲಿ ಸ್ವಲ್ಪ ತಿದ್ದುಪಡಿ ಮಾಡಿದ್ದು. ಈ ‘ಟೂಲ್ಕಿಟ್‌’ – ದೇಶದ್ರೋಹದ ಪಿತೂರಿಯ ಭಾಗವಾಗಿದೆ ಎಂದು ಪೊಲೀಸರು ಹೇಳಿಕೊಳ್ಳುತ್ತಾರೆ. ಆದರೆ ವಾಸ್ತವವಾಗಿ ಇದು ಕೆಲವು ಲೇಖಕನಗಳು, ಸಾಮಾಜಿಕ ಮಾಧ್ಯಮಗಳು ಮತ್ತು ರೈತರ ಪ್ರತಿಭಟನೆಯ ಮಾಹಿತಿಯನ್ನು ಒಂದು ಕಡೆ ಸಂಗ್ರಹ ಮಾಡುವ ಒಂದು ಡಾಕ್ಯುಮೆಂಟ್‌. ಈ ವಿಷಯದ ಬಗ್ಗೆ ಕಲಿಯಲು ಬಯಸುವ ಯಾರಿಗಾದರು ಸುಲಭವಾಗಿ ಮಾಹಿತಿ ಹಂಚಲು ಒಂದು ಗೈಡ್‌ ಅಷ್ಟೆ” ಎಂದ ಪತ್ರದಲ್ಲಿ ಪೋಷಕರು ಸರ್ಕಾರಕ್ಕೆ ತಿಳಿಸಿದ್ದಾರೆ.

“ಟೂಲ್ಕಿಟ್‌ ಅನ್ನು ಪರಿಶೀಲಿಸಿದ ವಕೀಲರು ಮತ್ತು ತಜ್ಞರು ಇದು ಅಹಿಂಸಾತ್ಮಕ ಪ್ರತಿಭಟನೆಯ ವಿವಿಧ ವಿಧಾನಗಳೆಂದು ಹೇಳಿದ್ದು, ಅದರಲ್ಲಿ ಕಾನೂನುಬಾಹಿರ ಏನೂ ಇಲ್ಲ ಎಂದಿದ್ದಾರೆ. ಹಾಗೆಯೇ ಟೂಲ್‌‌ಕಿಟ್‌ನಲ್ಲಿ ನಮೂದಿಸಿದ ‘ಟ್ವೀಟ್‌ ಬಿರುಗಾಳಿಗಳು’ (ಟ್ವಿಟ್ಟರ್‌ ಸ್ಟಾರ್ಮ್‌) ವೈವಿಧ್ಯಮಯ ವಿಷಯಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತೊಡಗಿಸಿಕೊಳ್ಳುವ ಒಂದು ಸಾಮಾನ್ಯ ರೂಪವಾಗಿದೆ” ಎಂದು ಹೇಳಿದ್ದಾರೆ.

ಮಕ್ಕಳ, ಯುವಜನರ ಪೋಷಕರಾದ ನಾವು ಈ ಬಂಧನದಿಂದ ಆಘಾತಕ್ಕೊಳಗಾಗಿದ್ದೇವೆ ಎಂದಿರುವ ಪೋಷಕರು, ಸರ್ಕಾರ ಮತ್ತು ಸಾಮಾಜಿಕ ಚಳುವಳಿಗಳು ಬಳಸುವ ಸಾಮಾನ್ಯ ಸಾಧನವನ್ನು (ಟೂಲ್‌ ಕಿಟ್‌) ಅಪರಾಧೀಕರಿಸುವ ಈ ಪ್ರಕರಣದಲ್ಲಿ ಯುವಕರು ಮತ್ತು ಪೋಷಕರಲ್ಲಿ ಭೀತಿ ಉಂಟು ಮಾಡಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೈತ ಹೋರಾಟಕ್ಕೆ ಮಹಾತ್ಮಾ ಗಾಂಧಿ ಮೊಮ್ಮಗಳ ಬೆಂಬಲ: ಅವರು ಹೇಳಿದ್ದೇನು?

“ಕಾನೂನು ಬಾಹಿರವಾಗಿ ದಿಶಾ ಅವರನ್ನು ಬಂಧಿಸಿಲಾಗಿ, ಬೇರೆ ನಗರಕ್ಕೆ ಕರೆದೊಯ್ಯಲಾಯಿತು ಮತ್ತು ಪೊಲೀಸ್‌ ಕಸ್ಟಡಿಯಲ್ಲಿ ಇರಿಸಲಾಯಿತು ಎಂದು ನಮಗೆ ಆಕ್ರೋಶ ಮತ್ತು ಆತಂಕವಿದೆ. ಅವರ ಬಂಧನದ ಬಗ್ಗೆ ಸಂವಹನ ನಡೆಸಲು ಯಾವುದೇ ಅವಕಾಶವನ್ನು ಅವರ ಕುಟುಂಬಕ್ಕೆ ನೀಡಲಾಗಿಲ್ಲ. ನಮ್ಮ ಮಕ್ಕಳನ್ನು ಸಹ ಇದೇ ರೀತಿಯಲ್ಲಿ, ಕಾನೂನು ಬಾಹಿರವಾಗಿ ಯಾರಾದರೂ ಕರೆದುಕೊಂಡು ಹೋಗಬಹುದು ಎಂಬ ಆತಂಕವಿದ್ದು, ನ್ಯಾಯಕ್ಕಾಗಿ ಹೋರಾಡುತ್ತಿರುವ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಧ್ವನಿ ಎತ್ತಿರುವ ಹಲವು ಸಾಮಾಜಕ ಕಾರ್ಯಕರ್ತರನ್ನು ಸರ್ಕಾರ ಬಂಧಿಸಿದೆ’’ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟೇ ಅಲ್ಲದೆ, ದಿಶಾರನ್ನು ಕೊಲೆ ಮಾಡಲು ಹರ್ಯಾಣದ ಮಂತ್ರಿಗಳೊಬ್ಬರು ಕರೆ ನೀಡಿರುವುದು ಮಾತ್ರವಲ್ಲದೆ, ಅವರನ್ನು ಭಯೋತ್ಪಾದರಿಗೆ ಹೋಲಿಸಿರುವುದು ನಮ್ಮಲ್ಲಿ ಗಾಬರಿ ಉಂಟು ಮಾಡಿದೆ ಎಂದು ಪೋಷಕರು ಹೇಳಿದ್ದಾರೆ.

ಸಾಮಾಜಿಕವಾಗಿ ಧ್ವನಿ ಎತ್ತಿರುವ ಹಲವು ಯುವತಿಯರನ್ನು ಬಂಧಿಸಿರುವುದನ್ನು ಖಂಡಿಸುರುವ ಪತ್ರವು, “ಮಕ್ಕಳ ಸಂಪೂರ್ಣ ಅಭಿವೃದ್ಧಿಗೆ ಅವರ ಹಲವು ವಿಭಿನ್ನ ದೃಷ್ಟಿಕೋನಗಳನ್ನು ಸ್ವಾಗತಿಸಬೇಕು, ಅದರ ಬಗ್ಗೆ ಆತ್ಮಾವಲೋಕನ ಮಾಡಬೇಕು. ಮಕ್ಕಳನ್ನು ಬರೀ ಅವರ ವಿಧ್ಯಾಭ್ಯಾಸದ ಮೇಲೆ ಅಸಕ್ತಿ ತೋರಿಸಬೇಕೆಂದು ಒತ್ತಾಯಿಸುವ ಮನೋಭಾವ ಅಪಾಯಕಾರಿಯಾಗಿದೆ. ಇದರಿಂದ ಸಮ್ಮಮಕ್ಕಳು ಕೇವಲ ಪುಸ್ತಕದ ಬದನೆಕಾಯಿಗಲಾಗುವ, ಕೂಪದ ಮಂಡೂಕಗಳಾಗುವ ಸಾಧ್ಯತೆಗಳೇ ಹೆಚ್ಚು” ಎಂದು ಪತ್ರವು ಹೇಳಿದೆ.

ಇದನ್ನೂ ಓದಿ: ’ನಮ್ಮ ಮೇಲಿನ ಕೇಸುಗಳು ನಾವು ಹೋರಾಟ ನಡೆಸದಂತೆ ತಡೆಯಲು ಸಾಧ್ಯವಿಲ್ಲ’- ರೈತ ಮುಖಂಡರು

ಯುವಜನರ ಮಾತನ್ನು, ಅವರ ಅಭಿಪ್ರಾಯ-ಅನಿಸಿಕೆಗಳನ್ನು ಅಪರಾಧೀಕರಿಸುವುದರಿಂದ, ಅವರ ಭವಿಷ್ಯವನ್ನು ಅವರಿಂದ ಕದ್ದಂತಾಗುತ್ತದೆ. ನಮ್ಮ ಮಕ್ಕಳನ್ನು ರಕ್ಷಿಸುವದರಲ್ಲಿ ನಮಗೆ ಸಹಾಯ ಮಾಡಬೇಕಾದ ನಮ್ಮ ಸರ್ಕಾರ ಮತ್ತು ನಮ್ಮ ಕಾನೂನು ವ್ಯವಸ್ಥೆಯು ಅವರನ್ನು ಮಾರಣಾಂತಿಕ ಅಪಾಯಕ್ಕೆ ಸಿಲುಕಿಸಿವೆ ಎಂದಿರುವ ಪೋಷಕರು, ಮೂರು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ.

  1. ಯುವ ವಯಸ್ಕರ ಕಾನೂನಾತ್ಮಕ ಅಭಿವ್ಯಕ್ತಿ ಹಕ್ಕನ್ನು ಹತ್ತಿಕ್ಕುವ ಈ ಅಸಂಬದ್ಧ ತನಿಖೆಯನ್ನು ದಿಲ್ಲಿ ಪೊಲೀಸ್‌ ಕೈಬಿಟ್ಟು ದಿಶಾ ರವಿ ಅವರನ್ನು ಬಿಡುಗಡೆ ಮಾಡಬೇಕು.
  2. ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಮತ್ತು ರಾಜದ್ರೋಹ (ಸೆಡಿಶನ್‌) ಕಾನೂನನ್ನು ಸಂಸತ್ತು ರದ್ದುಪಡಿಸಬೇಕು
  3. ಕರ್ನಾಟಕ ಸರ್ಕಾರವು ಈ ವಿಷಯದ ಬಗ್ಗೆ ತನಿಖೆ ನಡೆಸಬೇಕು ಮತ್ತು ದಿಲ್ಲಿ ಪೊಲೀಸ್‌‌ನ ಈ ಕಾರ್ಯಾಚರಣೆ ಸಾಂವಿಧಾನಿಕ ಮತ್ತು ಕ್ರಿಮಿನಲ್‌ ಕಾನೂನಿನಲ್ಲಿ ಸ್ಥಾಪಿಸಲಾದ ಕಾರ್ಯ ವಿಧಾನಗಳು ಬದ್ಧವಾಗಿತ್ತೆ ಎಂದು ಖಚಿತಪಡಿಸಬೇಕು, ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಟೀ ಮಾರುವವನಿಗೆ ಬಡವರ ನೋವಿನ ಅರಿವಿರುತ್ತೆ ಎಂಬ ಭ್ರಮೆಯಲ್ಲಿ ಮತ ನೀಡಿದ್ದೆವು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...