Homeಮುಖಪುಟ‘ಶಾಲೆಗಳಲ್ಲಿ ಭಗವದ್ಗೀತೆ’ ಬೋಧನೆ: ನಿರ್ಣಯ ಅಂಗೀಕರಿಸಿದ ಗುಜರಾತ್ ವಿಧಾನಸಭೆ

‘ಶಾಲೆಗಳಲ್ಲಿ ಭಗವದ್ಗೀತೆ’ ಬೋಧನೆ: ನಿರ್ಣಯ ಅಂಗೀಕರಿಸಿದ ಗುಜರಾತ್ ವಿಧಾನಸಭೆ

- Advertisement -
- Advertisement -

‘ಶಾಲೆಗಳಲ್ಲಿ ಭಗವದ್ಗೀತೆ’ ಬೋಧಿಸುವ ಶಿಕ್ಷಣ ಇಲಾಖೆಯ ಇತ್ತೀಚಿನ ನಿರ್ಧಾರವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ಣಯವನ್ನು ಗುಜರಾತ್ ವಿಧಾನಸಭೆ ಬುಧವಾರ ಸರ್ವಾನುಮತದಿಂದ ಅಂಗೀಕರಿಸಿದೆ.

ಆಮ್ ಆದ್ಮಿ ಪಕ್ಷವು (ಎಎಪಿ) ನಿರ್ಣಯವನ್ನು ಸ್ವಾಗತಿಸಿ ಅದಕ್ಕೆ ತನ್ನ ಬೆಂಬಲವನ್ನು ನೀಡಿದರೆ, ಕಾಂಗ್ರೆಸ್ ಸದಸ್ಯರು ಆರಂಭದಲ್ಲಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದು, ನಂತರ ಮತದಾನದ ಸಮಯದಲ್ಲಿ ಅದನ್ನು ಬೆಂಬಲಿಸಿದ್ದಾರೆ. ಸರ್ಕಾರದ ನಿರ್ಣಯವನ್ನು ಸದನದಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಜ್ಯ ಶಿಕ್ಷಣ ಇಲಾಖೆಯು ಭಗವದ್ಗೀತೆಯಲ್ಲಿರುವ ತತ್ವಗಳು ಮತ್ತು ಮೌಲ್ಯಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ 6 ರಿಂದ 12ನೇ ತರಗತಿಯವರೆಗೆ ಕಲಿಸಲಾಗುವುದು ಎಂದು ಘೋಷಿಸಿತ್ತು.

ಸದನದಲ್ಲಿ ನಿರ್ಣಯ ಮಂಡಿಸಿದ ಸಚಿವ ಪ್ರಫುಲ್ ಪನ್ಶೇರಿಯಾ

ಈ ನಿರ್ಣಯವನ್ನು ಶಿಕ್ಷಣ ಖಾತೆ ರಾಜ್ಯ ಸಚಿವ ಪ್ರಫುಲ್ ಪನ್ಶೇರಿಯಾ ಅವರು ಸದನದಲ್ಲಿ ಮಂಡಿಸಿದ್ದರು. ಪನ್ಶೇರಿಯಾ ಅವರು ತಮ್ಮ ಭಾಷಣದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ 2020’ ವಿದ್ಯಾರ್ಥಿಗಳಲ್ಲಿ ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಸಂಸ್ಕೃತಿ ಮತ್ತು ಜ್ಞಾನ ವ್ಯವಸ್ಥೆಗಳು ಮತ್ತು ಸಂಪ್ರದಾಯಗಳಿಗೆ ಹೆಮ್ಮೆಯ ಭಾವನೆ ಮತ್ತು ಸಂಪರ್ಕವನ್ನು ಬೆಳೆಸಲು ಒತ್ತು ನೀಡುತ್ತದೆ. ಅದಕ್ಕೆ ಅನುಗುಣವಾಗಿ, ಭಾರತೀಯ ಸಂಸ್ಕೃತಿಯನ್ನು ವಿದ್ಯಾರ್ಥಿಗಳ ದೈನಂದಿನ ಜೀವನದಲ್ಲಿ ಸಂಯೋಜಿಸುವುದು ಅತ್ಯಗತ್ಯ, ಇದರಿಂದ ಅವರು ಭಾರತೀಯ ಸಂಸ್ಕೃತಿಯ ಶ್ರೀಮಂತ ಪರಂಪರೆಗೆ ತೆರೆದುಕೊಳ್ಳುತ್ತಾರೆ ಮತ್ತು ಭಾರತೀಯರೆಂದು ಹೆಮ್ಮೆಪಡುತ್ತಾರೆ. ಇದಕ್ಕಾಗಿ, ಭಗವದ್ಗೀತೆಯಲ್ಲಿ ಅಡಕವಾಗಿರುವ ಮೌಲ್ಯಗಳು ಮತ್ತು ತತ್ವಗಳನ್ನು ಶಾಲೆಗಳಲ್ಲಿ ಬೋಧಿಸಲು ನಿರ್ಧರಿಸಲಾಗಿದೆ ಎಂದು ಪನ್ಶೇರಿಯಾ ಹೇಳಿದ್ದಾರೆ.

6ರಿಂದ 8ನೇ ತರಗತಿವರೆಗೆ ಸಂಗೀತ, ಚಿತ್ರಕಲೆ, ದೈಹಿಕ ಶಿಕ್ಷಣ ಒಳಗೊಂಡಿರುವ ಸರ್ವಾಂಗೀಣ ಶಿಕ್ಷಣ ವಿಷಯದ ಪಠ್ಯಪುಸ್ತಕದಲ್ಲಿ ಕಥೆ ಮತ್ತು ವಾಚನದ ರೂಪದಲ್ಲಿ ಭಗವದ್ಗೀತೆ ಪರಿಚಯಿಸಲಾಗುವುದು, ಗೀತಾ ಬೋಧನೆಗಳನ್ನು ಪ್ರಥಮ ಭಾಷೆಯಲ್ಲಿ ಅಳವಡಿಸಲಾಗುವುದು. 9 ರಿಂದ 12 ನೇ ತರಗತಿಯವರೆಗೆ ಕಥೆಗಳು ಮತ್ತು ಪಠಣಗಳಾಗಿ ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ ಸೇರಿಸಲಾಗುವುದು. ಭಗವದ್ಗೀತೆಯು ಭಾರತದ ಸಂತರು ಮತ್ತು ಕ್ರಾಂತಿಕಾರಿಗಳಿಗೆ ನಿರ್ದೇಶನ ನೀಡಿರುವುದು ಮಾತ್ರವಲ್ಲದೆ ಆಧುನಿಕ ಮತ್ತು ಪಾಶ್ಚಿಮಾತ್ಯ ಚಿಂತಕರ ಮೇಲೂ ಹೆಚ್ಚಿನ ಪ್ರಭಾವ ಬೀರಿದೆ. ಗೀತೆಯು ಯಾವುದೇ ಗಡಿಗಳಿಲ್ಲದ ಗ್ರಂಥವಾಗಿದೆ ಎಂದು ಸದನದಲ್ಲಿ ಹೇಳಿದ್ದಾರೆ.

6 ರಿಂದ 12ನೇ ತರಗತಿಯ ಪಠ್ಯಕ್ರಮದಲ್ಲಿ ಭಗವದ್ಗೀತೆಯ ಬೋಧನೆಗಳನ್ನು ಸೇರಿಸಲು ರಾಜ್ಯ ಸರ್ಕಾರವು ನಿರ್ಧರಿಸಿದೆ. ಈ ಸದನವು ರಾಜ್ಯ ಸರ್ಕಾರ ಅದರ ಸಂಪೂರ್ಣ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿನಂತಿಸುತ್ತದೆ ಎಂದು ಪನ್ಶೇರಿಯಾ ಹೇಳಿದ್ದಾರೆ.

ಪ್ರತಿಪಕ್ಷಗಳ ಪ್ರತಿಕ್ರಿಯೆ:

ನಿರ್ಣಯದ ಕುರಿತು ಮಾತನಾಡಿದ ಕಾಂಗ್ರೆಸ್ ಶಾಸಕ ಕಿರಿತ್ ಪಟೇಲ್, ಬಿಜೆಪಿ ಸರ್ಕಾರ ತಮ್ಮ ವೈಫಲ್ಯಗಳನ್ನು ಮರೆಮಾಚಲು ಈ ನಿರ್ಣಯವನ್ನು ತಂದಿದೆ. ಇತ್ತೀಚಿನ ವರದಿಯ ಪ್ರಕಾರ, ವಿದ್ಯಾರ್ಥಿ-ಶಿಕ್ಷಕರ ಅನುಪಾತದಲ್ಲಿ 18 ದೊಡ್ಡ ರಾಜ್ಯಗಳ ಪೈಕಿ ಗುಜರಾತ್ 15ನೇ ಸ್ಥಾನದಲ್ಲಿದೆ. ಗುಜರಾತ್‌ನಲ್ಲಿ ಡ್ರಾಪ್-ಔಟ್ ಅನುಪಾತವೂ ಹೆಚ್ಚುತ್ತಿದೆ ಮತ್ತು ಶಿಕ್ಷಕರ ಕೊರತೆಯೂ ಗಂಭೀರ ಸಮಸ್ಯೆಯಾಗಿದೆ. ನಿಮ್ಮ ವೈಫಲ್ಯಗಳನ್ನು ಮರೆಮಾಚಲು ನೀವು ಈ ನಿರ್ಣಯವನ್ನು ತಂದಿದ್ದೀರಿ, ನಮ್ಮ ಪಕ್ಷವು ಅದನ್ನು ವಿರೋಧಿಸುತ್ತದೆ ಎಂದು ಪಟೇಲ್ ಹೇಳಿದ್ದಾರೆ.

ಬಿಜೆಪಿ ಸರ್ಕಾರ ಪ್ರಚಾರಕ್ಕಾಗಿ ಈ ನಿರ್ಣಯವನ್ನು ತಂದಿರುವುದರಿಂದ ತಮ್ಮ ಪಕ್ಷವು ಈ ನಿರ್ಣಯವನ್ನು ವಿರೋಧಿಸುತ್ತದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಅಮಿತ್ ಚಾವ್ಡಾ ಹೇಳಿದ್ದಾರೆ. ಪಠ್ಯಕ್ರಮದಲ್ಲಿ ಗೀತಾ ಅಳವಡಿಕೆಗೆ ನಮ್ಮ ವಿರೋಧವಿಲ್ಲ, ಕೇವಲ ಪ್ರಚಾರದ ಉದ್ದೇಶದಿಂದ ಈ ನಿರ್ಣಯವನ್ನು ತರಲಾಗಿದೆ. ಶಾಲೆಗಳಲ್ಲಿ ಗೀತಾ ಅಳವಡಿಕೆಯ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನೀವು ಈ ನಿರ್ಣಯವನ್ನು ತರಬೇಕಾಗಿತ್ತು ಎಂದು ಹೇಳಿದ್ದಾರೆ.

ಎಎಪಿ ಶಾಸಕ ಉಮೇಶ್ ಮಕ್ವಾನಾ ಅವರು ನಿರ್ಣಯಕ್ಕೆ ತಮ್ಮ ಪಕ್ಷದ ಸಂಪೂರ್ಣ ಬೆಂಬಲವನ್ನು ನೀಡಿದರು ಮತ್ತು ಇದನ್ನು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಂಸ್ಕೃತ ಭಾಷಾ ಶಿಕ್ಷಕರನ್ನು ನೇಮಿಸಬೇಕೆಂದು  ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹಿಂದೂ ಮಹಾಕಾವ್ಯ ‘ರಾಮಾಯಣ’ದ ಕೆಲವು ಭಾಗಗಳನ್ನು 11 ಮತ್ತು 12 ನೇ ತರಗತಿಗಳಲ್ಲಿ ಕಲಿಸಲು ಅವರು ಸಲಹೆ ನೀಡಿದ್ದಾರೆ.

ಇದನ್ನು ಓದಿ: ಕೇಂದ್ರದಿಂದ ಅನುದಾನ ತಾರತಮ್ಯ ಎಂದ ಜಗನ್‌ಮೋಹನ್‌ ರೆಡ್ಡಿ : ಬಿಜೆಪಿ ಸಖ್ಯ ತೊರೆದ್ರಾ ಆಂಧ್ರ ಸಿಎಂ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ರಾಜ್ಯಪಾಲರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ದೂರು ದಾಖಲು

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು,  ರಾಜಭವನದ ಮಹಿಳಾ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆ 2019ರಿಂದ ರಾಜಭವನದಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿ ಕೆಲಸ...