Homeಮುಖಪುಟಗುಜರಾತ್‌: ಹಝರತ್ ಶಹೀದ್ ದರ್ಗಾ ತೆರವಿಗೆ ಹೈಕೋರ್ಟ್‌ ತಡೆ

ಗುಜರಾತ್‌: ಹಝರತ್ ಶಹೀದ್ ದರ್ಗಾ ತೆರವಿಗೆ ಹೈಕೋರ್ಟ್‌ ತಡೆ

- Advertisement -
- Advertisement -

ಅಹಮದಾಬಾದ್‌ನ ಕಲುಪುರ್ ರೈಲು ನಿಲ್ದಾಣದ ಬಳಿ ಇರುವ 500 ವರ್ಷಗಳಿಗೂ ಹೆಚ್ಚು ಹಳೆಯದಾದ ಹಝರತ್ ಕಲು ಶಹೀದ್ ದರ್ಗಾವನ್ನು ರೈಲ್ವೆ ಅಧಿಕಾರಿಗಳು ತೆರವಿಗೆ ನೋಟಿಸ್ ನೀಡಿದ್ದು, ಇದಕ್ಕೆ ಗುಜರಾತ್‌ ಹೈಕೋರ್ಟ್‌ ತಡೆ ನೀಡಿದೆ.

ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ದರ್ಗಾದ ಆಡಳಿತ ಮಂಡಳಿ, ಇದು ಅನಧಿಕೃತ ಎಂಬ ರೈಲ್ವೇ ಅಧಿಕಾರಿಗಳ ವಾದವನ್ನು  ಸುಳ್ಳು ಎನ್ನಲು ನಮ್ಮ ಬಳಿ ಅಗತ್ಯವಾದ ದಾಖಲೆಗಳು ಇದೆ ಎಂದು ಕೋರ್ಟ್‌ ಗಮನಕ್ಕೆ ತಂದಿದ್ದು, ಕೋರ್ಟ್‌ ದರ್ಗಾವನ್ನು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ನೀಡಿದೆ.

ಅ.26 ರಂದು ಅಹಮದಾಬಾದ್‌ನ ರೈಲ್ ಲ್ಯಾಂಡ್ ಡೆವಲಪ್‌ಮೆಂಟ್ ಅಥಾರಿಟಿ (ಆರ್‌ಎಲ್‌ಡಿಎ) ಮತ್ತು ಪಶ್ಚಿಮ ರೈಲ್ವೆಯ ಹಿರಿಯ ವಿಭಾಗ ಇಂಜಿನಿಯರ್ ಹೊರಡಿಸಿದ ನೋಟೀಸ್‌ನಲ್ಲಿ ಅಹಮದಾಬಾದ್ ರೈಲ್ವೇ ನಿಲ್ದಾಣದ ಅಭಿವೃದ್ಧಿ ಕಾರ್ಯವನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಮತ್ತು 14ದಿನಗಳೊಳಗೆ ದರ್ಗಾ ತೆರವಿಗೆ ಸೂಚಿಸಲಾಗಿದೆ. ನೋಟಿಸ್‌ನಲ್ಲಿ ದರ್ಗಾವನ್ನು ಅನಧಿಕೃತ ರಚನೆ ಎಂದು ರೈಲ್ವೇ ಅಧಿಕಾರಿಗಳು ಆರೋಪಿಸಿದ್ದರು.

ದರ್ಗಾದ ಉಸ್ತುವಾರಿ ಮಂಜೂರ್ ಮಾಲೆಕ್ ನೋಟಿಸ್‌ಗೆ ಪ್ರತಿಕ್ರಿಯಿಸಿದ್ದು, ಹಝರತ್ ಕಲು ಶಹೀದ್ ಅವರ ದರ್ಗಾವು 500 ವರ್ಷಗಳಿಗಿಂತ ಹೆಚ್ಚು ಹಳೆಯದು. ಪ್ರತಿನಿತ್ಯ ಕನಿಷ್ಠ 500 ಜನ ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಇದು ಕೇವಲ ದರ್ಗಾ ಮಾತ್ರವಲ್ಲ, ದರ್ಗಾ ಆವರಣದಲ್ಲಿರುವ ಮಸೀದಿಯಲ್ಲಿಯೂ ಮುಸ್ಲಿಮರು ನಮಾಝ್‌ ಮಾಡುತ್ತಾರೆ ಮತ್ತು ಶತಮಾನಗಳಿಂದ ಇಲ್ಲಿ ಪ್ರಾರ್ಥನೆ ಮಾಡುತ್ತಾ ಬಂದಿದ್ದಾರೆ. ರಾತ್ರೋರಾತ್ರಿ ದರ್ಗಾ ಅಕ್ರಮ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಧ್ವನಿವರ್ಧಕ ಬಳಕೆ, ವಿದ್ಯುತ್ ಸಂಪರ್ಕ ಸೇರಿದಂತೆ ಹಲವು ವರ್ಷಗಳಿಂದ ಸಕ್ಷಮ ಅಧಿಕಾರಿಗಳಿಂದ ವಿವಿಧ ಅನುಮತಿಗಳನ್ನು ಪಡೆದ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ ಎಂದು ಹೇಳಿದ್ದಾರೆ.

ಸುನ್ನಿ ಅವಾಮಿ ಫೋರಂನ ಫಿರೋಜ್ ಖಾನ್ ಅಮೀನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ದರ್ಗಾವು 1947ರ ಹಿಂದೆ ಮಾನ್ಯತೆ ಪಡೆದಿದೆ ಮತ್ತು ಅಧಿಕೃತವಾಗಿದೆ. ಅದನ್ನು ಯಾಕೆ ಕೆಡವಬಾರದು ಎಂದು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.

ರೈಲ್ವೇ ಅಧಿಕಾರಿಗಳ ನೋಟಿಸ್‌ನ್ನು ಪ್ರಶ್ನಿಸಿ ದರ್ಗಾ ಆಡಳಿತ ಮಂಡಳಿಯು ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಅರ್ಜಿಯ ವಿಚಾರಣೆ ನ.10 ರಂದು ನಡೆದಿದೆ. ನ್ಯಾಯಮೂರ್ತಿ ವೈಭವಿ ನಾನಾವತಿ ಅವರು ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕಕ್ಷಿದಾರರಿಗೆ ಆದೇಶಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಜ.16ರಂದು ನಡೆಯಲಿದೆ.

35 ವರ್ಷಗಳಿಂದ ದರ್ಗಾಕ್ಕೆ ಭೇಟಿ ನೀಡುತ್ತಿರುವ ರಾಜು ಬಲದೇವ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ದರ್ಗಾ ಶಾಂತಿಯುತ  ಮತ್ತು ಸೌಹಾರ್ಧತೆಯ ಸಂಕೇತವಾಗಿದೆ. ಇದು 800 ವರ್ಷಗಳ ನಂಬಿಕೆ ಮತ್ತು ಇತಿಹಾಸವನ್ನು ಹೊಂದಿದೆ. ರೈಲ್ವೇ ಅಸ್ತಿತ್ವದಲ್ಲಿರುವುದಕ್ಕಿಂತ ಮುಂಚೆಯೇ ಇದು ಅಸ್ತಿತ್ವದಲ್ಲಿತ್ತು ಎಂದು ಹೇಳಿದ್ದಾರೆ.

ಇದನ್ನು ಓದಿ: 80 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ ಪಾಕಿಸ್ತಾನ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...