Homeಮುಖಪುಟಮಾನವ ಕಳ್ಳಸಾಗಾಣಿಕೆ ಆರೋಪ: 14 ಟ್ರಾವೆಲ್ ಏಜೆಂಟ್‌ಗಳ ವಿರುದ್ಧ ಎಫ್‌ಐಆರ್ ದಾಖಲು

ಮಾನವ ಕಳ್ಳಸಾಗಾಣಿಕೆ ಆರೋಪ: 14 ಟ್ರಾವೆಲ್ ಏಜೆಂಟ್‌ಗಳ ವಿರುದ್ಧ ಎಫ್‌ಐಆರ್ ದಾಖಲು

- Advertisement -
ಯುಎಯಿಂದ ನಿಕರಾಗುವಾಕ್ಕೆ 303 ಭಾರತೀಯರನ್ನು ಹೊತ್ತು ಸಾಗುತ್ತಿದ್ದ ವಿಮಾನವನ್ನು ಪ್ಯಾರಿಸ್‌ನಲ್ಲಿ ತಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ, 14 ಟ್ರಾವೆಲ್ ಏಜೆಂಟ್‌ಗಳ ವಿರುದ್ದ ಮಾನವ ಕಳ್ಳಸಾಗಣಿಕೆ ಆರೋಪದ ಮೇಲೆ ಗುಜರಾತ್ ಪೊಲೀಸರ ಅಪರಾಧ ತನಿಖಾ ವಿಭಾಗ(ಸಿಐಡಿ) ಎಫ್‌ಐಆರ್‌ ದಾಖಲಿಸಿದೆ.
ಡಿಸೆಂಬರ್ 22, 2023ರಂದು ಮಾನವ ಕಳ್ಳಸಾಗಾಣಿಕೆ ಶಂಕೆ ಮೇಲೆ ಯುಎಯಿಂದ ಹೊರಟ್ಟಿದ್ದ ವಿಮಾನವನ್ನು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಎರಡು ದಿನಗಳ ಕಾಲ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೂಲಂಕುಶವಾಗಿ ಪರಿಶೀಲನೆ ನಡೆಸಿದ ಬಳಿಕ 275 ಮಂದಿಯನ್ನು ವಾಪಸ್ ಭಾರತಕ್ಕೆ ಕಳುಹಿಸಿಕೊಡಲಾಗಿತ್ತು.
ಒಟ್ಟು ಪ್ರಯಾಣಿಕರ ಪೈಕಿ ಗುಜರಾತ್‌ನ ನಿವಾಸಿಗಳಾದ 66 ಮಂದಿಯನ್ನು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೂಡಲೇ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.
ದಿ ಹಿಂದೂ ವರದಿ ಪ್ರಕಾರ, ಪ್ರಸ್ತುತ ಪೊಲೀಸರು ಎಫ್‌ಐಆರ್‌ ದಾಖಲಿಸಿರುವ ಟ್ರಾವೆಲ್ ಏಜೆಂಟ್‌ಗಳು ಗುಜರಾತ್, ಮುಂಬೈ ಮತ್ತು ನವದೆಹಲಿ ಮೂಲದವರು. ಇವರು ಪಂಜಾಬ್ ಮತ್ತು ಗುಜರಾತ್‌ನ ಪ್ರಯಾಣಿಕರಿಂದ 60-70 ಲಕ್ಷ ರೂ. ಹಣ ಪಡೆದು ಅಮೆರಿಕಾಗೆ ಅಕ್ರಮ ಪ್ರವೇಶ ಕಲ್ಪಿಸಲು ಕರೆದುಕೊಂಡು ಹೋಗುತ್ತಿದ್ದರು.
ಪ್ರಯಾಣಿಕರನ್ನು ಯುಎಯಿಂದ ಮಧ್ಯ ಅಮೆರಿಕದ ನಿಕರಾಗುವಾಕ್ಕೆ ಕರೆದೊಯ್ದು,ಅಲ್ಲಿಂದ ಮೆಕ್ಸಿಕೋ ಮೂಲಕ ಗಡಿ ದಾಟಿಸುವ ಯೋಜನೆ ರೂಪಿಸಲಾಗಿತ್ತು. ಅಮೆರಿಕ ತಲುಪುವ ಜನರಿಗೆ ಭಾರತೀಯರು ನಡೆಸುವ ವ್ಯವಹಾರಗಳಲ್ಲಿ ಉದ್ಯೋಗಗಳನ್ನು ಹುಡುಕಲು ಏಜೆಂಟರು ಸಹಾಯ ಮಾಡುವ ಭರವಸೆ ನೀಡಿದ್ದರು ಎಂದು ಆರೋಪಿಸಲಾಗಿದೆ.
“ಇದು ಗುಜರಾತ್ ಸೇರಿದಂತೆ ಭಾರತದ ವಿವಿಧ ಭಾಗಗಳಿಂದ ಯುಎಸ್‌ಗೆ ಮಾನವ ಕಳ್ಳಸಾಗಾಣಿಕೆ ಮಾಡುವ ಅಂತಾರಾಷ್ಟ್ರೀಯ ಏಜೆಂಟ್‌ಗಳೂ ಒಳಗೊಂಡಿರುವ ಬಹು ದೊಡ್ಡ ದಂಧೆಯಾಗಿದೆ. ಭಾರತದಿಂದ ಯುಎಸ್‌ಗೆ ಕಳ್ಳದಾರಿಯ ಮೂಲಕ ಜನರನ್ನು ಕರೆಯೊಯ್ಯವ ಸಂಘಟಿತ ಜಾಲವಾಗಿದೆ” ಎಂದು ಗುಜರಾತ್‌ನ ಅಪರಾಧ ತನಿಖಾ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಎಸ್ ಪಾಂಡಿಯಾ ರಾಜ್‌ಕುಮಾರ್ ತಿಳಿಸಿದ್ದಾರೆ.
ಭಾರತೀಯರು ಮಾತ್ರವಲ್ಲದೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯುನೈಟೆಡ್ ಸ್ಟೇಟ್ಸ್(ಯುಎಸ್‌) ಮೆಕ್ಸಿಕೊ ಮತ್ತು ನಿಕರಾಗುವಾ ಮೂಲದ ಜನರೂ ಈ ಜಾಲದಲ್ಲಿ ಒಳಗೊಂಡಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಈ ರೀತಿಯ ಮೂರು ವಿಮಾನಗಳು ಜನರನ್ನು ಮಧ್ಯ ಅಮೆರಿಕಕ್ಕೆ ಯಶಸ್ವಿಯಾಗಿ ಕರೆದೊಯ್ದಿವೆ ಎಂದು ಪಾಂಡಿಯಾ ರಾಜ್‌ಕುಮಾರ್ ಮಾಹಿತಿ ನೀಡಿದ್ದಾರೆ.
ಗಡಿ ದಾಟುವಾಗ ಸಿಕ್ಕಿ ಬಿದ್ದರೆ ಏನಾದರು ಸಬೂಬು ಹೇಳಲು ಏಜೆಂಟ್‌ಗಳು ಪ್ರಯಾಣಿಕರಿಗೆ ಮೊದಲೇ ಹೇಳಿ ಕೊಡುತ್ತಿದ್ದರು. ಉದಾಹರಣೆಗೆ ಪಂಜಾಬ್‌ನವರು ಸಿಕ್ಕಿ ಬಿದ್ದರೆ ಖಲಿಸ್ತಾನಿಗಳು ಎಂದು ಹೇಳುತ್ತಿದ್ದರು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.
ಪ್ಯಾರಿಸ್‌ನಿಂದ ಗುಜರಾತ್‌ಗೆ ಬಂದಿಳಿದ 66 ಪ್ರಯಾಣಿಕರು ಅಹಮದಾಬಾದ್, ಮುಂಬೈ ಮತ್ತು ದೆಹಲಿಯಿಂದ ಡಿಸೆಂಬರ್ 10 ಮತ್ತು ಡಿಸೆಂಬರ್ 20ರ ನಡುವೆ ಮಾನ್ಯ ಪ್ರವಾಸಿ ವೀಸಾದಲ್ಲಿ ದುಬೈ ತಲುಪಿದ್ದರು. ಡಿಸೆಂಬರ್ 21 ರಂದು  ಯುಎಇಯ ಫುಜೈರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೊಮೇನಿಯನ್ ಚಾರ್ಟರ್ ಕಂಪನಿ ಲೆಜೆಂಡ್ ಏರ್‌ಲೈನ್ಸ್ ನಿರ್ವಹಿಸುವ ನಿಕರಾಗುವಾಗೆ ಹೋಗುವ ವಿಮಾನವನ್ನು ಹತ್ತಿದ್ದರು ತಿಳಿದು ಬಂದಿದೆ.
14 ಟ್ರಾವೆಲ್‌ ಏಜೆಂಟ್‌ಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 370 (ಮಾನವ ಕಳ್ಳಸಾಗಣೆ), 201 (ಸಾಕ್ಷ್ಯ ನಾಶಪಡಿಸುವುದು) ಮತ್ತು 120-ಬಿ (ಅಪರಾಧ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...