Homeಮುಖಪುಟಗುಜರಾತ್: ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿದ ನ್ಯಾಯಾಧೀಶ ಸೇರಿ 68 ನ್ಯಾಯಾಧೀಶರ ಬಡ್ತಿಗೆ...

ಗುಜರಾತ್: ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿದ ನ್ಯಾಯಾಧೀಶ ಸೇರಿ 68 ನ್ಯಾಯಾಧೀಶರ ಬಡ್ತಿಗೆ ಸುಪ್ರೀಂ ತಡೆ

- Advertisement -
- Advertisement -

ರಾಹುಲ್ ಗಾಂಧಿಯನ್ನು ದೋಷಿ ಎಂದು ತೀರ್ಪು ನೀಡಿದ ನ್ಯಾಯಾಧೀಶರು ಸೇರಿದಂತೆ 68 ನ್ಯಾಯಾಂಗ ಅಧಿಕಾರಿಗಳಿಗೆ ಗುಜರಾತ್‌ನಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಬಡ್ತಿ ನೀಡಲು ಸುಪ್ರೀಂ ಕೋರ್ಟ್ ತಡೆ ನೀಡಿದೆ.

ನ್ಯಾಯಮೂರ್ತಿಗಳಾದ ಎಂ.ಆರ್.ಷಾ ಮತ್ತು ಸಿ.ಟಿ.ರವಿಕುಮಾರ್ ಅವರಿದ್ದ ನ್ಯಾಯಪೀಠವು ಗುಜರಾತ್ ಹೈಕೋರ್ಟ್ ನ್ಯಾಯಾಂಗ ಅಧಿಕಾರಿಗಳ ಬಡ್ತಿಗೆ ನೀಡಿದ್ದ ಶಿಫಾರಸಿಗೆ ತಡೆ ನೀಡಿತು ಮತ್ತು ಶಿಫಾರಸನ್ನು ಜಾರಿಗೊಳಿಸಲು ಸರ್ಕಾರ ಹೊರಡಿಸಿದ ಅಧಿಸೂಚನೆಗೆ ತಡೆ ನೀಡಿದೆ.

“ಅರ್ಜಿಯ ಬಾಕಿ ಇರುವಾಗ ಮತ್ತು ಈ ನ್ಯಾಯಾಲಯವು ನೋಟಿಸ್ ನೀಡಿದ ನಂತರ ರಾಜ್ಯ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿತು. ಹಾಗಾಗಿ ನಾವು ಹೈಕೋರ್ಟ್ ಶಿಫಾರಸು ಮತ್ತು ಸರ್ಕಾರದ ಅಧಿಸೂಚನೆಯನ್ನು ತಡೆಹಿಡಿಯುತ್ತೇವೆ. ಆಯಾ ಬಡ್ತಿದಾರರನ್ನು ಅವರು ಬಡ್ತಿಗೆ ಮೊದಲು ಹೊಂದಿದ್ದ ಅವರ ಮೂಲ ಹುದ್ದೆಗೆ ಕಳುಹಿಸಲಾಗುತ್ತದೆ” ಎಂದು ನ್ಯಾಯಮೂರ್ತಿ ಎಂಆರ್ ಶಾ ಹೇಳಿದ್ದಾರೆ.

“ಮೆರಿಟ್ ಮತ್ತು ಹಿರಿತನದ ತತ್ವದ ಮೇಲೆ ಮತ್ತು ಸೂಕ್ತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೇಲೆ ಬಡ್ತಿಗಳನ್ನು ಮಾಡಬೇಕು. ಆದರೆ ಹೈಕೋರ್ಟ್‌ನ ಶಿಫಾರಸುಗಳು ಮತ್ತು ನಂತರದ ಸರ್ಕಾರದ ಅಧಿಸೂಚನೆಗಳು ಕಾನೂನುಬಾಹಿರ” ಎಂದು ನ್ಯಾಯಮೂರ್ತಿ ಶಾ ಹೇಳಿದ್ದಾರೆ.

ತಡೆಯಾಜ್ಞೆಯಿಂದ ಬಡ್ತಿಯ ಮೇಲೆ ಪರಿಣಾಮ ಬೀರುವ 68 ನ್ಯಾಯಾಧೀಶರಲ್ಲಿ ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿದ ಹರೀಶ್ ಹಸ್ಮುಖ್ ಭಾಯ್ ವರ್ಮಾ ಕೂಡ ಸೇರಿದ್ದಾರೆ. ಇದರಿಂದಾಗಿ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ರದ್ದುಗೊಂಡಿದೆ.

ಪೀಠವು ಅರ್ಜಿಯನ್ನು ವಿಲೇವಾರಿ ಮಾಡುವ ಬದಲು ಮಧ್ಯಂತರ ತೀರ್ಪು ನೀಡಿದೆ. ಆದರೆ ನ್ಯಾಯಮೂರ್ತಿ ಎಂಆರ್ ಶಾರವರು ಮೇ 15 ರಂದು ನಿವೃತ್ತಿಯಾಗುತ್ತಿದ್ದಾರೆ. ಹಾಗಾಗಿ ಸಿಜೆಐ ನೇಮಿಸುವ ಮತ್ತೊಂದು ಪೀಠವು ಅರ್ಜಿಯ ವಿಚಾರಣೆ ಮುಂದುವರೆಸಲಿದೆ.

ಇದನ್ನೂ ಓದಿ: ಪಾಕಿಸ್ತಾನದ ಗೂಢಚಾರಿಕೆ ದಂಧೆಯಲ್ಲಿ ಸಿಕ್ಕಿಬಿದ್ದಿರುವ ಡಿಆರ್‌ಡಿಒ ವಿಜ್ಞಾನಿ ಆರ್‌ಎಸ್‌ಎಸ್ ವ್ಯಕ್ತಿ: ಕಾಂಗ್ರೆಸ್ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read