Homeಮುಖಪುಟಚುನಾವಣೆಯಲ್ಲಿ ಗೆಲ್ಲಲು ಬಂದೂಕು ಬಳಸಬೇಕು: ಬಿಜೆಪಿ ಯುವ ಮುಖಂಡನ ವಿಡಿಯೊ ವೈರಲ್‌

ಚುನಾವಣೆಯಲ್ಲಿ ಗೆಲ್ಲಲು ಬಂದೂಕು ಬಳಸಬೇಕು: ಬಿಜೆಪಿ ಯುವ ಮುಖಂಡನ ವಿಡಿಯೊ ವೈರಲ್‌

- Advertisement -
- Advertisement -

“ಚುನಾವಣೆಯಲ್ಲಿ ಗೆಲ್ಲಬೇಕಾದರೆ ಬಂದೂಕು ಬಳಸಬೇಕು” ಎಂದು ಬಿಜೆಪಿ ಯುವ ಮೋರ್ಚಾದ ವಿದ್ಯಾರ್ಥಿ ಮುಖಂಡರೊಬ್ಬರು ಹೇಳಿಕೆ ನೀಡಿರುವ ವಿಡಿಯೊವೊಂದು ಬೆಳಕಿಗೆ ಬಂದಿದೆ.

ಭಾರತೀಯ ಜನತಾ ಪಕ್ಷದ ವಿದ್ಯಾರ್ಥಿ ಘಟಕವಾದ ಭಾರತೀಯ ಯುವ ಮೋರ್ಚಾದ ವಿದ್ಯಾರ್ಥಿ ಮುಖಂಡರೊಬ್ಬರು ಸದರ್ ಬಜಾರ್ ಘಟಕದಲ್ಲಿ ಈ ಹೇಳಿಕೆಗಳನ್ನು ನೀಡಿದ್ದಾರೆಂದು ‘ಎಪಿಎನ್‌ಲೈವ್.ಕಾಂ’ ವರದಿ ಮಾಡಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ವೀಡಿಯೊದಲ್ಲಿ ವಿದ್ಯಾರ್ಥಿ ಮುಖಂಡರೊಬ್ಬರು ಮಾತನಾಡುವುದನ್ನು, ವಿದ್ಯಾರ್ಥಿ ಘಟಕವನ್ನು ಉದ್ದೇಶಿಸಿ ಅವರು ಘೋಷಣೆಗಳನ್ನು ಕೂಗುವುದನ್ನು ಕಾಣಬಹುದು.

“ಉತ್ತಮ ವಾಗ್ಮಿ ಎಂಬ ಬಗ್ಗೆ ತನಗೆ ಹೆಚ್ಚು ತಿಳಿದಿಲ್ಲ” ಎಂದು ವಿದ್ಯಾರ್ಥಿ ನಾಯಕ ಹೇಳುವುದನ್ನು ಕಾಣಬಹುದು. “ಆದರೆ ಪಕ್ಷದ ವಿದ್ಯಾರ್ಥಿ ಕಾರ್ಯಕರ್ತರ ಶಕ್ತಿ ಮತ್ತು ಶ್ರಮಕ್ಕೆ ಸಾಕ್ಷಿಯಾಗಿರುವುದರಿಂದ  ಪಕ್ಷವು ಚುನಾವಣೆಯಲ್ಲಿ ಗೆಲ್ಲುತ್ತದೆ” ಎನ್ನುತ್ತಾರೆ.

ಪಕ್ಷದ ವಿದ್ಯಾರ್ಥಿ ಕಾರ್ಯಕರ್ತರು ಚುನಾವಣೆ ಗೆಲ್ಲಲು ದೇಹ, ಮನಸ್ಸು, ಹಣ, ಬೇಕಿದ್ದರೆ ಬಂದೂಕು ಬಳಸುತ್ತಾರೆ ಎಂಬ ಮಾತುಗಳನ್ನು ಉಲ್ಲೇಖಿಸುತ್ತಾರೆ. ಈ ಮಾತುಗಳನ್ನು ಯಾರೋ ದೊಡ್ಡ ನಾಯಕರೊಬ್ಬರಿಗೆ ಹೇಳುತ್ತಿರುವಂತೆ ತೋರುತ್ತದೆ. ಆದರೆ ವಿಡಿಯೋದಲ್ಲಿ ಈ ದೊಡ್ಡ ಮುಖಂಡ ಯಾರೆಂಬುದು ದಾಖಲಾಗಿಲ್ಲ.

ಟ್ವಿಟರ್‌ನಲ್ಲಿ ವಿಡಿಯೊ ವೈರಲ್‌: ಬಂದೂಕು ಬಳಸುವ ಪ್ರಸ್ತಾಪವನ್ನು ಮಾಡುತ್ತಿರುವ ವೀಡಿಯೊ ವೈರಲ್ ಆದ ನಂತರ, ಅನೇಕ ಟ್ವಿಟರ್‌ ಬಳಕೆದಾರರು ವಿದ್ಯಾರ್ಥಿ ಮುಖಂಡನ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ವಿದ್ಯಾರ್ಥಿ ಮುಖಂಡನ ವಿರುದ್ಧ ಕ್ರಮಕೈಗೊಳ್ಳುವಂತೆ ಭಾರತೀಯ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ. ಇಂತಹ ಪ್ರಚೋದನಕಾರಿ ಹೇಳಿಕೆಗಳನ್ನು ಪರಿಶೀಲಿಸುವ ಅಧಿಕಾರವನ್ನು ಚುನಾವಣಾ ಆಯೋಗ ಹೊಂದಿದ್ದರೂ, ಇಂತಹ ಆಕ್ಷೇಪಾರ್ಹ ಹೇಳಿಕೆಗಳು ಹೊರಬೀಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಆಯೋಗ ತನ್ನ ಘನತೆಯನ್ನು ಉಳಿಸಿಕೊಳ್ಳಲು ಇಂಥವರ ವಿರುದ್ಧ ಕ್ರಮ ಜರುಗಿಸಬೇಕು. ಈ ವಿಚಾರದಲ್ಲಿ ಆಯೋಗ ವಿಫಲವಾದರೆ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವೆರಿಫೈ ಮಾಡಲ್ಪಟ್ಟ ಅನೇಕ ಟ್ವಿಟರ್‌ ಖಾತೆದಾರರು ಈ ವಿಡಿಯೊವನ್ನು ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಚುನಾವಣೆಯಲ್ಲಿ ಬಂದೂಕು ಬಳಸಬೇಕು ಅಂತ ಹೇಳ್ತಾರೆ…ಆದರೆ ಅದೇ ಬಂದೂಕು ಅವನಿಗೆ ತಿರುಗಿ ಮುಟ್ಟಿದರೆ ಸುಖ ಸುಮ್ಮನೆ ಅವನೇ ಸಾಯ್ಬೇಕಲ್ಲ…ಹಾಗಾಗಿ ಇಂಥ ಹೇಳಿಕೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು….

  2. “ಬಂದೂಕು ಬಳಸಬೇಕು” ಎಂದು ಹೇಳಿರುವವನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.

LEAVE A REPLY

Please enter your comment!
Please enter your name here

- Advertisment -

Must Read