Homeಕರ್ನಾಟಕಆರ್‌ಎಸ್‌ಎಸ್‌ನವರಿದ್ದರು, ಪೊಲೀಸರ ರಕ್ಷಣೆ ಸಿಗದಿದ್ದರೆ ಹಲ್ಲೆಯಾಗುತ್ತಿತ್ತೇನೋ: ‘ಟಿಪ್ಪು’ ನಾಟಕ ವಿವಾದ ಕುರಿತು ಟಿ.ಗುರುರಾಜ್ ಹೇಳಿಕೆ

ಆರ್‌ಎಸ್‌ಎಸ್‌ನವರಿದ್ದರು, ಪೊಲೀಸರ ರಕ್ಷಣೆ ಸಿಗದಿದ್ದರೆ ಹಲ್ಲೆಯಾಗುತ್ತಿತ್ತೇನೋ: ‘ಟಿಪ್ಪು’ ನಾಟಕ ವಿವಾದ ಕುರಿತು ಟಿ.ಗುರುರಾಜ್ ಹೇಳಿಕೆ

- Advertisement -
- Advertisement -

ಪೊಲೀಸರ ಬಿಗಿ ಭದ್ರತೆಯಲ್ಲಿ ‘ಟಿಪ್ಪು ನಿಜಕನಸುಗಳು’ ನಾಟಕವನ್ನು ಮೈಸೂರು ರಂಗಾಯಣದ ಭೂಮಿಗೀತದಲ್ಲಿ ಭಾನುವಾರ ಪ್ರದರ್ಶಿಸಲಾಯಿತು. ಆ ನಾಟಕ ನೋಡಲು ಪತ್ರಕರ್ತ ಟಿ.ಗುರುರಾಜ್‌ ಮತ್ತು ರಂಗಾಯಣದ ಮಾಜಿ ನಿರ್ದೇಶಕರಾದ ಸಿ.ಬಸವಲಿಂಗಯ್ಯ ಹೋಗಿದ್ದರು. ಆದರೆ ಇವರನ್ನು ಒಳಗೆ ಪ್ರವೇಶಿಸದಂತೆ ಪೊಲೀಸರು ಅಡಚಣೆ ಉಂಟು ಮಾಡಿದ್ದು ಸುದ್ದಿಯಾಗಿದೆ.

ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ರಚನೆ ಮಾಡಿ ನಿರ್ದೇಶಿಸಿರುವ ಈ ನಾಟಕವನ್ನು ರಂಗಾಯಣ ರೆಪರ್ಟರಿ ಕಲಾವಿದರು ಅಭಿನಯಿಸಿದ್ದು, ಸುಮಾರು 250ಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆಯಲ್ಲಿ ನಾಟಕ ಪ್ರದರ್ಶನವಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ, ಲೇಖಕ ಡಾ.ಪ್ರಧಾನ ಗುರುದತ್ತ, ಶಾಸಕ ಕೆ.ಜಿ.ಬೋಪಯ್ಯ, ಆರ್‌ಎಸ್‌ಎಸ್‌ ಮುಖಂಡ ಮಾ.ವೆಂಕಟರಾಮ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ, ಸಂಸದ ಪ್ರತಾಪ ಸಿಂಹ ಪತ್ನಿ ಅರ್ಪಿತಾ ಸಿಂಹ ವೀಕ್ಷಿಸಿದರು. ಟಿಪ್ಪು ನೈಜ ಇತಿಹಾಸದ ಕುರಿತು ಮೊದಲಿನಿಂದಲೂ ಮಾತನಾಡುತ್ತಾ ಬಂದಿರುವ ‘ಹಲೋ ಮೈಸೂರು’ ಪತ್ರಿಕೆಯ ಸಂಪಾದಕರಾದ ಟಿ.ಗುರುರಾಜ್‌ ಹಾಗೂ ರಂಗಕರ್ಮಿ ಬಸವಲಿಂಗಯ್ಯ ಅವರು ನಾಟಕ ವೀಕ್ಷಿಸಲು ತೆರಳಿದ್ದರು. “ಟಿಕೆಟ್ ಇದ್ದರೂ ಪ್ರವೇಶ ನೀಡದ ಪೊಲೀಸರೊಂದಿಗೆ” ಸಿ.ಬಸವಲಿಂಗಯ್ಯ ಹಾಗೂ ಪತ್ರಕರ್ತ ಟಿ.ಗುರುರಾಜ್ ಮಾತಿನ ಚಕಮಕಿ ನಡೆಸಿದರು. ದ್ವಾರದಲ್ಲೇ ಧರಣಿ ಕುಳಿತ ಅವರು, ‘ಅನುಮಾನವಿದ್ದರೆ ನಮ್ಮೊಂದಿಗೆ ಪೊಲೀಸರೂ ಬರಲಿ’ ಎಂದು ಮನವರಿಕೆ ಮಾಡಿದ ನಂತರ ಪ್ರವೇಶಕ್ಕೆ ಅನುಮತಿ ಕೊಡಲಾಯಿತು.

ಘಟನೆಯ ಕುರಿತು ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಟಿ.ಗುರುರಾಜ್‌, “ನನ್ನ ಮತ್ತು ಬಸವಲಿಂಗಯ್ಯನವರ ಅಕ್ಕಪಕ್ಕ ಇಬ್ಬರು- ಮೂವರು ಪೊಲೀಸರು ಕೂತುಕೊಂಡಿದ್ದರು. ಇವರಿಲ್ಲದಿದ್ದರೆ ಬಹುಶಃ ನಮ್ಮ ಮೇಲೆ ಹಲ್ಲೆಯಾಗುತ್ತಿತ್ತೇನೋ. ಅಲ್ಲಿ ಸಂಘಪರಿವಾರದವರು ಇದ್ದರು. ನಾಟಕ ನೋಡಿ ಹೊರಬಂದ ಬಳಿಕ ರಂಗಾಯಣದ ನಿರ್ದೇಶಕ ಕಾರ್ಯಪ್ಪ ಮಾತನಾಡಿ ನಮ್ಮ ವಿರುದ್ಧ ಗದಾಪ್ರಹಾರ ಮಾಡಿದರೆಂದು ತಿಳಿಯಿತು. ನಮಗೆ ಸೂಕ್ತ ಭದ್ರತೆ ನೀಡಿದ ಪೊಲೀಸರಿಗೆ ಧನ್ಯವಾದಗಳು” ಎಂದರು.

“ನಾಟಕದ ಬಗ್ಗೆ ಹೇಳುವುದಾದರೆ ಗಿರೀಶ್ ಕಾರ್ನಾಡರು ಬರೆದಿರುವ ಸಾಲುಗಳನ್ನು ಯಥಾವತ್ತು ಕದ್ದು ಈ ನಾಟಕದಲ್ಲಿ ಸೇರಿಸಲಾಗಿದೆ. ಸತ್ಯಗಳಿಗೆ ಸುಳ್ಳಿನ ಪರದೆ ಹೊದಿಸಿ, ಇದೇ ಸತ್ಯವೆಂದು ಬಿಂಬಿಸಲಾಗಿದೆ. ಇಡೀ ನಾಟಕದ ಆಶಯ ಮೂರೇ ಮೂರು ಅಂಶಗಳನ್ನು ಒಳಗೊಂಡಿದೆ. ಜಿಹಾದ್‌, ಅಲ್ಲಾ ಓ ಅಕ್ಬರ್‌, ಮುಸಲ್ಮಾನರ ರಾಜ್ಯವನ್ನಾಗಿ ಪಣತೊಟ್ಟ ಟಿಪ್ಪು ಸುಲ್ತಾನ್- ಈ ಮೂರರ ಮೇಲೆ ಇಡೀ ನಾಟಕ ಕೇಂದ್ರೀಕೃತವಾಗಿದೆ” ಎಂದು ವಿವರಿಸಿದರು.

“ಅಡ್ಡಂಡ ಕಾರ್ಯಪ್ಪನವರಿಗೆ ಮೈಸೂರು ಇತಿಹಾಸದ ಕನಿಷ್ಠ ಪ್ರಜ್ಞೆಯೂ ಇಲ್ಲ. ಯಾವ ರಾಜರು ಹೈದರಾಲಿಯ ಕಾಲದಲ್ಲಿ ಆಳುತ್ತಿದ್ದರು ಎಂಬ ಪರಿವೇ ಇಲ್ಲ. ಇಮ್ಮಡಿ ಕೃಷ್ಣರಾಜ ಒಡೆಯರ ಹೆಸರಿನ ಬದಲಿಗೆ ನಂಜರಾಜ ಒಡೆಯರ್‌ ಎಂದು ಹೇಳಿಸಿದ್ದಾರೆ. ಶೃಂಗೇರಿ ಅರಸರು ಟಿಪ್ಪುವಿನೊಂದಿಗೆ ನಡೆಸುವ ಪತ್ರ ವ್ಯವಹಾರ 1791, 1792ರ ಅವಧಿಗೆ ಸೇರಿವೆ. ಆದರೆ ಅಡ್ಡಂಡ ಕಾರ್ಯಪ್ಪ ಈ ಪತ್ರವನ್ನು 1799, ಮೇ 4ನೇ ತಾರೀಖಿನಂದು ಬರೆಸಿದ್ದಾರೆ. ಈ ನಾಟಕ ಆಭಾಸಗಳಿಂದ ತುಂಬಿ ತುಳುಕುತ್ತಿದೆ. ಇಲ್ಲಿಯವರೆಗೆ ಯಾವ ಇತಿಹಾಸಕಾರರು ಬರೆಯದ, ಯಾವುದೇ ಕೃತಿಯಲ್ಲೂ ಇರದ ಉರಿಗೌಡ ಮತ್ತು ದೊಡ್ಡ ನಂಜೇಗೌಡ ಎಂಬವರು ಟಿಪ್ಪುವನ್ನು ಕೊಂದಿರುವುದಾಗಿ ಕೊನೆಯಲ್ಲಿ ತೋರಿಸಲಾಗಿದೆ. ವಾಟ್ಸಾಪ್‌ ವಿಶ್ವವಿದ್ಯಾನಿಲಯ ಸಂಶೋಧನೆಯು ನಾಟಕವೊಂದರ ನಿಜಪಾತ್ರವಾಗಿ ಬಂದಿದೆ” ಎಂದು ವಿಷಾದಿಸಿದರು.

“‘ನಮ್ಮ ಟಿಪ್ಪು: ವದಂತಿ ಮತ್ತು ಸತ್ಯಸಂಗತಿ’ ಎಂಬ ಪುಟ್ಟ ಕೃತಿಯನ್ನು ರಚಿಸುತ್ತಿದ್ದೇನೆ. ಟಿಪ್ಪುವನ್ನು ಸಮರ್ಥಿಸುವ ಕೆಲಸವನ್ನೇನೂ ನಾನು ಮಾಡುತ್ತಿಲ್ಲ. ರಾಜಪ್ರಭುತ್ವದ ಕಾಲದವನಾದ ಟಿಪ್ಪು ಮಾಡಿದ ತಪ್ಪುಗಳನ್ನು ನಾವು ಒಪ್ಪಿಕೊಳ್ಳಬೇಕು. ರಾಜಪ್ರಭುತ್ವ ಮತ್ತು ಪ್ರಜಾಪ್ರಭುತ್ವಕ್ಕೂ ವ್ಯತ್ಯಾಸಗಳಿವೆ. ಭೂತವನ್ನು ವರ್ತಮಾನದಲ್ಲಿಟ್ಟು, ವರ್ತಮಾನದಲ್ಲಿ ಭವಿಷ್ಯಕ್ಕೆ ಮಾರಕವಾಗುವಂತೆ ನಡೆದುಕೊಳ್ಳುವುದು ಮತ್ತಷ್ಟು ಆಘಾತಕಾರಿ. ನಾವು ಕಟ್ಟುವ ಕೆಲಸ ಮಾಡಬೇಕು, ಒಡೆಯುವ ಕೆಲಸವನ್ನಲ್ಲ. ಭಾರತೀಯತೆ ನಮ್ಮ ಎದೆಯೊಳಗೆ ಇದೆ. ಅದರ ಪಾಠವನ್ನು ಇನ್ನ್ಯಾರೋ ಮಾಡುವ ಅಗತ್ಯವಿಲ್ಲ” ಎಂದು ತಿಳಿಸಿದರು.

ಇದನ್ನೂ ಓದಿರಿ: ಮತ್ತೊಂದು ವಿವಾದಕ್ಕೆ ರಂಗಾಯಣ ನಿರ್ದೇಶಕರ ರೂಪುರೇಷೆ; ‘ಟಿಪ್ಪು’ ಕುರಿತ ನಾಟಕ ಪ್ರದರ್ಶನಕ್ಕೆ ಸಿದ್ಧ

“ಟಿಪ್ಪುವಿನ ಬಗ್ಗೆ ಇವರು ಎತ್ತಿರುವ ಎಲ್ಲ ಪ್ರಶ್ನೆಗಳಿಗೆ ಐತಿಹಾಸಿಕವಾದ ಉತ್ತರವನ್ನು ಕೊಡುವ ಪ್ರಯತ್ನವನ್ನು ಈ ಪುಟ್ಟ ಕೃತಿಯಲ್ಲಿ ಮಾಡುತ್ತಿದ್ದೇನೆ. ನಾನು ಬರೆದಿರುವುದು ಸುಳ್ಳು ಎಂದು ಯಾರಾದರೂ ದಾಖಲೆ ಸಮೇತ ಸಾಬೀತುಪಡಿಸಿದರೆ ಒಪ್ಪಿಕೊಳ್ಳಲು ಸಿದ್ಧವಿದ್ದೇನೆ. ಟಿಪ್ಪು ಯಾರನ್ನೂ ಕೊಂದಿಲ್ಲ, ಮತಾಂತರ ಮಾಡಿಲ್ಲ ಎಂದು ಮೊಂಡುವಾದ ಮಾಡಲ್ಲ. ಇಡೀ ರಾಜಪ್ರಭುತ್ವದ ಚರಿತ್ರೆಯನ್ನು ನೋಡಿದರೆ ಟಿಪ್ಪುವಿನಂತೆಯೇ ಎಲ್ಲ ಅರಸರ ಇತಿಹಾಸವಿರುತ್ತದೆ. ತಮ್ಮ ಸಂಬಂಧಿಕರನ್ನೇ ಕೊಂದ ಘಟನೆಗಳು ಸಿಗುತ್ತವೆ. ಸತ್ಯಕ್ಕೆ ವಿದಾಯ ಹೇಳಿರುವ ಅಡ್ಡಂಡ ಕಾರ್ಯಪ್ಪ ಸರ್ಕಾರಕ್ಕೆ ಋಣಸಂದಾಯ ಮಾಡಿದ್ದಾರೆ ಅನಿಸುತ್ತದೆ. 30 ವರ್ಷಗಳ ರಂಗಾಯಣ ಇತಿಹಾಸದಲ್ಲಿ ಈ ನಮೂನೆಯ ಪೊಲೀಸರು ಯಾವತ್ತೂ ಬರಲಿಲ್ಲ. ಬಸವಲಿಂಗಯ್ಯನವರು ಇಡೀ ರಾತ್ರಿ ‘ಮಲೆಗಳಲ್ಲಿ ಮದುಮಗಳು’ ನಾಟಕವನ್ನು ಆಡಿಸಿದ್ದರು. ಸಾವಿರಾರು ಜನ ಬೇರೆ ಬೇರೆ ದೇಶಗಳಿಂದ ಬಂದು ನೋಡಿದರು. ಅಂದು ಹೀಗೆ ಪೊಲೀಸರು ಪ್ರವೇಶಿಸಿರಲಿಲ್ಲ” ಎಂದು ಹೇಳಿದರು.

“ನಾಟಕ ನೋಡಲು ಹೋಗದಂತೆ ನಮ್ಮನ್ನು ತಡೆಯಲಾಯಿತು. ಆದರೆ ಪೊಲೀಸರ ಅಕ್ಕಪಕ್ಕ ಕೂತು ನಾಟಕ ವೀಕ್ಷಿಸಲು ಅನುಮತಿ ಕೊಡಲಾಯಿತು. ನಮ್ಮ ಅಕ್ಕಪಕ್ಕದಲ್ಲಿ ಕೂತಿದ್ದ ಪೊಲೀಸರಿಗೆ ನಾವು ಕೃತ್ಯಜ್ಞತೆಯನ್ನು ಅರ್ಪಿಸುತ್ತೇವೆ. ಯಾಕೆಂದರೆ ನಾಟಕ ನೋಡಲು ಸಂಘಪರಿವಾರದ ಪ್ರೀತಿಪಾತ್ರರು ಬಂದಿದ್ದರು. ಉದ್ದೇಶಪೂರ್ವಕವಾಗಿ ನಾಟಕ ಮುಗಿದ ಮೇಲೆ ಅಡ್ಡಂಡ ಕಾರ್ಯಪ್ಪ ನಮ್ಮ ಹೆಸರನ್ನು ಪ್ರಸ್ತಾಪಿಸಿದ್ದಾರೆ. ನಮ್ಮ ಮೇಲೆ ಹಲ್ಲೆ ನಡೆಸುವ ಸಾಧ್ಯತೆಯೂ ಇತ್ತು. ಬಹುಶಃ ಪೊಲೀಸರು ಇಲ್ಲದೆ ಇದ್ದಿದ್ದರೆ ನಾವು ಏಟು ತಿಂದುಕೊಂಡು ಹೊರಬರಬೇಕಿತ್ತೇನೋ, ಗೊತ್ತಿಲ್ಲ. ಹೀಗಾಗಿ ಅವರಿಗೆ ಥ್ಯಾಂಕ್ಸ್‌ ಹೇಳಬೇಕು” ಎಂದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ನೋಟಿಸ್ ನೀಡಿದರೆ ಸಾಲದು, ಹೊರಗಿಟ್ಟ ಮತದಾರರ ಲೆಕ್ಕ ಕೊಡಿ ಚುನಾವಣಾ ಆಯೋಗಕ್ಕೆ ಜಾಗೃತ ಕರ್ನಾಟಕ ಒತ್ತಾಯ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಲಕ್ಷಾಂತರ ಮತದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗಳನ್ನು ನಡೆಸಿದ ನಂತರ, ಅಂತಿಮವಾಗಿ ಎಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ...

ಗಣೇಶ ಮೆರವಣಿಗೆ ಡಿಜೆ ವಿಚಾರಕ್ಕೆ ಗಲಾಟೆ : ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; 31 ಜನರ ಮೇಲೆ ಎಫ್‌ಐಆರ್

ಗಣೇಶ ಮೆರವಣಿಗೆಯ ಡಿಜೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 31 ಜನರ ವಿರುದ್ಧ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ....

ಚಿಕ್ಕಬಳ್ಳಾಪುರ: ಮೂಲ ಗಣಿತ, ಕನ್ನಡ ಬಾರದ 7ನೇ ತರಗತಿ ವಿದ್ಯಾರ್ಥಿಗಳು: 180 ಶಿಕ್ಷಕರಿಗೆ ನೋಟಿಸ್‌ ಜಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7ನೇ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಮೂಲ ಗಣಿತದ ಲೆಕ್ಕಗಳನ್ನು ಮಾಡಲು ಮತ್ತು ಕನ್ನಡ ಅಕ್ಷರಗಳನ್ನು ಬರೆಯಲು ಬರುವುದಿಲ್ಲ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು 180 ಸರ್ಕಾರಿ ಶಾಲೆಗಳ ಶಿಕ್ಷಕರಿಗೆ...

ಕರಾವಳಿಯನ್ನು ‘ಕೋಮುವಾದದ ಪ್ರಯೋಗಶಾಲೆ’ ಮಾಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕಂಡು ಅಸ್ತಿತ್ವದ ಭಯ: ಪ್ರಿಯಾಂಕ್ ಖರ್ಗೆ

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಹಾಗೂ ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿರುವುದನ್ನು ಬಿಜೆಪಿ ಟೀಕಿಸಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

KPSC ಅಕ್ರಮ: ಮೀಟರ್ ಬಡ್ಡಿ ದಂಧೆಯಿಂದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದವರೆಗೆ – ಅಧ್ಯಕ್ಷ ಸಾಹುಕಾರ್ ಬಿಜೆಪಿ ಅವಧಿಯಲ್ಲಿ ನೇಮಕ, ಕಾಂಗ್ರೆಸ್ ಆಡಳಿತದಲ್ಲಿ ರಕ್ಷಣೆ

ಶಿವಶಂಕರಪ್ಪ ಸಾಹುಕಾರ್ ಅವರ ಈ ಇಡೀ ಕಥನವು ಕರ್ನಾಟಕದ ಕಾರ್ಯಾಂಗ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರವು ನಿಯಮಗಳನ್ನು ಗಾಳಿಗೆ ತೂರಿ, ಒಬ್ಬ ಕನಿಷ್ಠ...

ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಝ್ : ಚು. ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ತೃಣಮೂಲಕ ಕಾಂಗ್ರೆಸ್ (ಟಿಎಂಸಿ) ಪಕ್ಷದ ಚಿಹ್ನೆ ಮತ್ತು ಹೆಸರನ್ನು ಭಾರತೀಯ ಚುನಾವಣಾ ಆಯೋಗ ಫ್ರೀಝ್ ಮಾಡಿರುವುದನ್ನು ಪ್ರಶ್ನಿಸಿ, ಪಕ್ಷದ ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌...

ನಂದಿಗ್ರಾಮದ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿಯಿಂದಲೂ ನಾಮಪತ್ರ ವಾಪಸ್ : ಬಂಗಾಳ ಉಪ ಚುನಾವಣೆ ಕಣದಲ್ಲಿ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಹಿನ್ನಡೆ

ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ...

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...