Homeಚಳವಳಿಎಚ್.ಎಸ್.ದೊರೆಸ್ವಾಮಿಯವರ ಮಡದಿ ಶ್ರೀಮತಿ ಲಲಿತಮ್ಮ ನಿಧನ..

ಎಚ್.ಎಸ್.ದೊರೆಸ್ವಾಮಿಯವರ ಮಡದಿ ಶ್ರೀಮತಿ ಲಲಿತಮ್ಮ ನಿಧನ..

- Advertisement -
- Advertisement -

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌ ದೊರೆಸ್ವಾಮಿಯವರಿಗೆ ಪತ್ನಿ ವಿಯೋಗವಾಗಿದ್ದು ಅವರ ಮಡದಿ ಶ್ರೀಮತಿ ಲಲಿತಮ್ಮನವರು ಇಂದು ನಿಧನರಾಗಿದ್ದಾರೆ.

89 ವರ್ಷದ ಲಲತಮ್ಮನವರು ಬಹುಅಂಗಾಗ ವೈಫಲ್ಯಗಳಿಂದ ಬಳಲುತ್ತಿದ್ದರು. ಅವರನ್ನು ಬಿಎಂಸಿಯ ಎಮರ್ಜೆನ್ಸಿ ಅಂಡ್‌ ಟ್ರಾಮ ಕೇರ್‌ ಆಸ್ಪತ್ರೆಯಿಂದ ಜಯದೇವ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಅಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.

ತಮ್ಮ ಪತಿ ಶತಾಯುಷಿ ಎಚ್‌.ಎಸ್‌ ದೊರೆಸ್ವಾಮಿಯವರನ್ನು ಸೇರಿಂದತೆ ಒಬ್ಬ ಮಗ ಮತ್ತು ಒಬ್ಬ ಮಗಳನ್ನು ಅವರು ಅಗಲಿದ್ದಾರೆ.

ಅವರ ಪಾರ್ಥಿವ ಶರೀರವನ್ನು 12:30ಕ್ಕೆ ಅವರ ಜಯನಗರದ ನಾಲ್ಕನೇ ಟಿ ಬ್ಲಾಕ್‌‌ನ ಮನೆಯ ಬಳಿ ತರುತ್ತಾರೆ. ನಂತರ 3 ಗಂಟೆಗೆ ಕಿಮ್ಸ್‌ಗೆ ದೇಹದಾನ ಮಾಡುತ್ತಾರೆ ಎಂದು ಎಚ್‌.ಎಸ್‌ ದೊರೆಸ್ವಾಮಿಯವರು ತಿಳಿಸಿದ್ದಾರೆ.

ದೊರೆಸ್ವಾಮಿ – ಲಲಿತಮ್ಮ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದರೂ ಸಹ ಅವರು ಸ್ವತಂತ್ರವಾಗಿ ಬದುಕುತ್ತಿದ್ದರು. ದೊರೆಸ್ವಾಮಿಯವರಂತೂ ನೂರು ವರ್ಷ ತುಂಬಿದ್ದರೂ ಸಹ ಹಣ ಅಧಿಕಾರದ ಯಾವುದೇ ಫಲಾಫೇಕ್ಷೆಯಿಲ್ಲದೇ ಇಂದಿಗೂ ಸಹ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದವರು. ಮೊನ್ನೆ ತಾನೇ ದೊರೆಸ್ವಾಮಿಯವರು ಸಮಾಜವಾದಿಗಳ ಸಮಾಗಮ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಅದಕ್ಕೆ ಸಾಕ್ಷಿ.

ಬಡವರು, ಶೋಷಿತರ ಹೋರಾಟ ಕರ್ನಾಟಕದ ಯಾವ ಭಾಗದಲ್ಲಿ ನಡೆದರೂ ಪಾಲ್ಗೊಂಡು ಬಡವರ ಪರ ದನಿ ಎತ್ತುತ್ತಿದ್ದ, ಸರ್ಕಾರಕ್ಕೆ ಚಾಟೀ ಬೀಸುತ್ತಿದ್ದ ದೊರೆಸ್ವಾಮಿಯವರ ಬೆನ್ನೆಲುಬಾಗಿ ನಿಂತಿದ್ದು ಅವರ ಪತ್ನಿ ಲಲಿತಮ್ಮನವರು. ಅವರು ಕೂಡ ಸಾರ್ವಜನಿಕ ಕೆಲಸಗಳಿಗೆ ಸದಾ ಕಾಲ ಬೆಂಬಲ ನೀಡುತ್ತಾ ಬಂದಿದ್ದರು.

ಬಹಳಷ್ಟು ಸ್ವತಂತ್ರ ಹೋರಾಟಗಾರರು ಅಧಿಕಾರಕ್ಕೇರಿದರೆ ದೊರೆಸ್ವಾಮಿಯವರು ಮಾತ್ರ ಸಂಪೂರ್ಣ ಹೋರಾಟಕ್ಕೆ ತಮ್ಮ ಜೀವನವನ್ನು ಮೀಸಲಿಟ್ಟಿದ್ದರು. ಅದಕ್ಕೆ ಅವರ ಪತ್ನಿ ಸಂಪೂರ್ಣ ಜೊತೆ ನಿಂತಿದ್ದರು. ಅದಕ್ಕಾಗಿಯೇ ಇತ್ತೀಚೆಗೆ ದೊರೆಸ್ವಾಮಿಯವರಿಗೆ ಯಾರೇ ಸನ್ಮಾನ ಮಾಡಿದರೂ ಸಹ ಅವರ ಪತ್ನಿಗೂ ಜೊತೆ ಸೇರಿ ಸನ್ಮಾನ ಮಾಡುತ್ತಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...