Homeಮುಖಪುಟಹರ್ಯಾಣ ಹಿಂಸಾಚಾರ: ಮುಸ್ಲಿಮರ ರಕ್ಷಣೆಗೆ ನಿಲ್ಲುವುದಾಗಿ ನಿರ್ಣಯ ತೆಗೆದುಕೊಂಡ ರೈತ ಮುಖಂಡರು

ಹರ್ಯಾಣ ಹಿಂಸಾಚಾರ: ಮುಸ್ಲಿಮರ ರಕ್ಷಣೆಗೆ ನಿಲ್ಲುವುದಾಗಿ ನಿರ್ಣಯ ತೆಗೆದುಕೊಂಡ ರೈತ ಮುಖಂಡರು

- Advertisement -
- Advertisement -

ಹರ್ಯಾಣದ ನುಹ್ ಜಿಲ್ಲೆಯಲ್ಲಿ ಹಿಂಸಾಚಾರದ ಬಳಿಕ ಮುಸ್ಲಿಮರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಬಹಿಷ್ಕಾರಕ್ಕೆ ಕರೆ ನೀಡಿದ್ದ ಬೆಳವಣಿಗೆಯ ಬೆನ್ನಲ್ಲೇ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ.

ಮುಸ್ಲಿಂ ಸಮುದಾಯದವರು ಇಲ್ಲೇ ಇರುತ್ತಾರೆ, ಅವರ ಮೇಲೆ ದೌರ್ಜನ್ಯಕ್ಕೆ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹರಿಯಾಣದ ರೈತ ಸಂಘಟನೆಗಳು ಮತ್ತು ಖಾಪ್ ಪಂಚಾಯತ್‌ಗಳ ಮುಖಂಡರು  ಘೋಷಿಸಿದ್ದಾರೆ.

ರಾಜ್ಯದಲ್ಲಿನ ಕೋಮುಗಲಭೆಯನ್ನು ತಡೆಯಲು ಸಂಕಲ್ಪ ಮಾಡುವ ಉದ್ದೇಶದಿಂದ ರೈತರು  ಹಿಸಾರ್‌ನ ಬಾಸ್ ಗ್ರಾಮದಲ್ಲಿ ಜಮಾಯಿಸಿದ್ದರು. ಹಿಂದೂ, ಮುಸ್ಲಿಂ ಮತ್ತು ಸಿಖ್ ಸಮುದಾಯಗಳ ಸುಮಾರು 2,000 ರೈತರು  ರೈತ ಪಂಚಾಯತ್ ನಲ್ಲಿ ಪಾಲ್ಗೊಂಡಿದ್ದರು.  ಹಿಂಸಾಚಾರದ ನಂತರ ಹರಿಯಾಣದಲ್ಲಿ ಇದೇ ಮೊದಲ ಬಾರಿಗೆ ಒಗ್ಗಟ್ಟನ್ನು ಪ್ರದರ್ಶಿಸಲು ರೈತರು ಮುಂದಾಗಿದ್ದಾರೆ.

ಹರ್ಯಾಣದಲ್ಲಿ ಮುಸ್ಲಿಮರಿಗೆ ಬೆದರಿಕೆಗಳು ಮತ್ತು ಅಲ್ಪಸಂಖ್ಯಾತ ಸಮುದಾಯದ ಸದಸ್ಯರಿಗೆ ತಮ್ಮ ಗ್ರಾಮಗಳ ಪ್ರವೇಶದ ವಿರುದ್ಧ ಕೆಲವು ಗ್ರಾಮ ಪಂಚಾಯತ್‌ಗಳು ನಿರ್ಣಯ ಕೈಗೊಂಡಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ರೈತ ಮುಖಂಡ ಸುರೇಶ್ ಕೋತ್ ಈ ಕುರಿತು ಮಾತನಾಡಿ, ಮುಸ್ಲಿಮರು ಇಲ್ಲೇ ಇರುತ್ತಾರೆ, ಯಾರೂ ಅವರನ್ನು ಮುಟ್ಟುವಂತಿಲ್ಲ. ಎಲ್ಲಾ ರೈತರು ಅವರ ರಕ್ಷಣೆಗೆ ಜವಾಬ್ದಾರರು. ಕೆಲವು ಹಳ್ಳಿಗಳಲ್ಲಿ ಮುಸ್ಲಿಮರ ಪ್ರವೇಶ ನಿಷೇಧದ ಬಗ್ಗೆ ವರದಿಗಳು ಸುಳ್ಳು ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ಬುಧವಾರದ ಪಂಚಾಯತ್‌ನಲ್ಲಿ, ರೈತರು ನೂಹ್‌ನಲ್ಲಿ ಶಾಂತಿ ಮರುಸ್ಥಾಪಿಸುವ ಪ್ರಯತ್ನಗಳನ್ನು ಮಾಡುವುದರ ಹೊರತಾಗಿ ಯಾವುದೇ ರೀತಿಯ ಜಾತಿ ಅಥವಾ ಕೋಮು ಹಿಂಸಾಚಾರದಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳನ್ನು ಅಪ್‌ಲೋಡ್ ಮಾಡುವ ಮೂಲಕ ಜನರನ್ನು ಪ್ರಚೋದಿಸುವವರ ವಿರುದ್ಧ ಕ್ರಮಕೈಗೊಳ್ಳಲು ಪಂಚಾಯತ್ ಒತ್ತಾಯಿಸಿದೆ.

ಇದನ್ನು ಓದಿ: ಲೋಕಸಭೆ ದಾಖಲೆಯಿಂದ ‘ಭಾರತ ಮಾತೆ’ ಗೆ ಸಂಬಂಧಿಸಿದ ರಾಹುಲ್ ಗಾಂಧಿ ಟೀಕೆ ಕಡಿತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...