HomeಮುಖಪುಟInstagram ರೀಲ್‌ನಲ್ಲಿ ದ್ವೇಷದ ಕಾಮೆಂಟ್‌: 16 ವರ್ಷದ ಕ್ವೀರ್ ಕಲಾವಿದ ಆತ್ಮಹತ್ಯೆ

Instagram ರೀಲ್‌ನಲ್ಲಿ ದ್ವೇಷದ ಕಾಮೆಂಟ್‌: 16 ವರ್ಷದ ಕ್ವೀರ್ ಕಲಾವಿದ ಆತ್ಮಹತ್ಯೆ

- Advertisement -
- Advertisement -

ಮಧ್ಯಪ್ರದೇಶದ ಉಜ್ಜಯಿನಿಯ 16 ವರ್ಷದ ಕ್ವೀರ್ ಕಲಾವಿದನ ವಿರುದ್ಧ Instagramನಲ್ಲಿ ದ್ವೇಷದ ಕಾಮೆಂಟ್‌ ಮಾಡಲಾಗಿತ್ತು. ಇದರಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.

16 ವರ್ಷದ ಕ್ವೀರ್ ಕಲಾವಿದ ಪ್ರಾಂಶು ಅವರು ಮಂಗಳವಾರ ತಮ್ಮ ತಾಯಿಯ ದುಪಟ್ಟಾದಿಂದ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಪ್ರಾಂಶು ಒಬ್ಬ ಮೇಕಪ್ ಕಲಾವಿದರಾಗಿದ್ದರು ಮತ್ತು ಅವರು Instagramನಲ್ಲಿ 14,500ಕ್ಕೂ ಹೆಚ್ಚು ಅನುಯಾಯಿಗಳೊಂದಿಗೆ ಮೇಕಪ್ ಮತ್ತು ಸೌಂದರ್ಯಕ್ಕೆ ಸಂಬಂಧಿಸಿದ ವಿಷಯವನ್ನು ಹಂಚಿಕೊಳ್ಳುತ್ತಿದ್ದರು.

ದೀಪಾವಳಿಯ ಸಮಯದಲ್ಲಿ, ಪ್ರಾಂಶು ಅವರು ಸೀರೆ ಧರಿಸಿಕೊಂಡಿರುವ ರೀಲ್‌ನ್ನು ಪೋಸ್ಟ್ ಮಾಡಿದರು, ಅದರ ನಂತರ ಅನೇಕ ಜನರು ರೀಲ್ ಬಗ್ಗೆ ದ್ವೇಷಪೂರಿತ ಮತ್ತು ಹೋಮೋಫೋಬಿಕ್ (ಸಲಿಂಗಕಾಮಿ) ಎಂದು ಟೀಕೆಗಳನ್ನು ಮಾಡಿದ್ದರು.

‘ಮೇಡ್ ಇನ್ ಹೆವನ್’ ವೆಬ್ ಸರಣಿಯ ನಟ ತ್ರಿನೇತ್ರ ಹಲ್ದಾರ್ ಗುಮ್ಮರಾಜು ಅವರು, ಕಲಾವಿದ ಪ್ರಾಂಶು ಅವರಿಗೆ 4,000ಕ್ಕೂ ಹೆಚ್ಚು ಹೋಮೋಫೋಬಿಕ್ (ಸಲಿಂಗಕಾಮಿ) ಎಂಬ ಟೀಕೆಗಳು ಕಾಮೆಂಟ್ ವಿಭಾಗದಲ್ಲಿ ಬಂದಿವೆ, ಅದು ಅವರನ್ನು ಆತ್ಮಹತ್ಯೆಯಿಂದ ಸಾಯಲು ಪ್ರೇರೇಪಿಸಿತು. ಕಲಾವಿದರು ತಮ್ಮ Instagram ಹ್ಯಾಂಡಲ್‌ನಲ್ಲಿ 16,500 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದರು, glamitupwithpranshu” ಎಂದು ಪೋಸ್ಟ್ ಮಾಡಿದ್ದಾರೆ.

 

View this post on Instagram

 

A post shared by Trinetra Haldar Gummaraju (@trintrin)

”ಮೆಟಾ ಒಡೆತನದ Instagram ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು LGBTQ ಸಮುದಾಯದ ಜನರಿಗೆ ಸುರಕ್ಷಿತ ಸ್ಥಳವನ್ನು ಒದಗಿಸಲು ಪದೇ ಪದೇ ವಿಫಲವಾಗಿವೆ ಮತ್ತು #JusticeForPranshu ಎನ್ನುವ ಯಾವುದೇ ಪೋಸ್ಟ್‌ಗಳನ್ನು ಮಾಡಲಾಗಿಲ್ಲ” ಎಂದು ನಟ ತ್ರಿನೇತ್ರ ಅಸಮಾಧಾನ ಹೊರಹಾಕಿದ್ದಾರೆ.

ಈ ಘಟನೆ ಬಳಿಕ LGBTQ ಸಮುದಾಯದ ಹಲವಾರು ಸದಸ್ಯರು ತಮ್ಮ ದುಃಖವನ್ನು ವ್ಯಕ್ತಪಡಿಸಿದರು.

ಘಟನೆ ಕುರಿತು ಮಾತನಾಡಿದ ನಾಗ್‌ಜಿರಿ ಪೊಲೀಸ್ ಠಾಣೆಯ ಉಸ್ತುವಾರಿ ಕೆಎಸ್ ಗೆಹ್ಲೋಟ್ ಅವರು, ”ಆತ್ಮಹತ್ಯೆಗೆ ನಿಖರವಾದ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ ಮತ್ತು ಈ ವಿಷಯದಲ್ಲಿ ತನಿಖೆ ನಡೆಯುತ್ತಿದೆ” ಎಂದು ಫ್ರೀ ಪ್ರೆಸ್ ಜರ್ನಲ್ ವರದಿ ಮಾಡಿದೆ.

2021 ರಲ್ಲಿ ಸಂಸ್ಥೆಯನ್ನು ತೊರೆದ ಮಾಜಿ ಮೆಟಾ ಕಾರ್ಯನಿರ್ವಾಹಕ ಆರ್ಥರ್ ಬೇಜಾರ್ ಅವರು, ಹದಿಹರೆಯದವರಿಗಾಗಿ ತನ್ನ ವೇದಿಕೆಯ ಸುರಕ್ಷತೆಯ ಬಗ್ಗೆ Instagram ತಪ್ಪುದಾರಿಗೆಳೆಯುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ನಾವು ಎರಡನೇ ದರ್ಜೆಯ ನಾಗರಿಕರು’: ಸುಪ್ರೀಂ ತೀರ್ಪಿಗೆ ನಿರಾಸೆ ವ್ಯಕ್ತಪಡಿಸಿದ LGBTQ ಸಮುದಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...