Homeಕರ್ನಾಟಕರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಹಾಕದಿರಲು ಹೋರಾಟಗಾರ ರಾಮಕೃಷ್ಣಪ್ಪ ನೀಡಿದ ಒಂಬತ್ತು ಕಾರಣಗಳು

ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಹಾಕದಿರಲು ಹೋರಾಟಗಾರ ರಾಮಕೃಷ್ಣಪ್ಪ ನೀಡಿದ ಒಂಬತ್ತು ಕಾರಣಗಳು

ನನ್ನ ಈ ನಿರ್ಧಾರ ರಾಜ್ಯದಾದ್ಯಂತ ನನ್ನ ಸಂಘಟನೆ, ಪ್ರಗತಿಪರ ಸಂಘಟನೆಗಳು, ಮಹಿಳಾ ಸಂಘಟನೆಗಳು ಹಾಗೂ ರೈತ ಸಂಘಟನೆಗಳ ಹೋರಾಟಕ್ಕೆ ಬೆಂಬಲ!!

- Advertisement -
- Advertisement -

ನಿವೃತ್ತ ಮುಖ್ಯ ಶಿಕ್ಷಕರು, ಸಮಾನ ಶಿಕ್ಷಣ, ಸುಸ್ಥಿರ ಪರಿಸರಕ್ಕಾಗಿ ಕಾರ್ಯಕರ್ತ, ಹೋರಾಟಗಾರರಾದ ರಾಮಕೃಷ್ಣಪ್ಪನವರು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕಲು ನಿರಾಕರಿಸಿದ್ದಾರೆ…ಯಾಕೆ? ಇಲ್ಲಿ ಓದಿ.

ರಾಜ್ಯೋತ್ಸವ ಪ್ರಶಸ್ತಿ ಬೇಡ……!!?

ನಾನು ಈ ದೇಶದ ನಾಗರೀಕ. ಜನ ವಿಜ್ಞಾನ ಚಳುವಳಿಯ ಸಾಮಾನ್ಯ ಕಾರ್ಯಕರ್ತ. ನನಗೆ 2019 – 2020 ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಾಗಿ Biodata ಕಳುಹಿಸುವಂತೆ ತುಮಕೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಿಂದ online ಪತ್ರ ಬಂದಿದೆ. ಆತ್ಮೀಯ ಗೆಳೆಯ ಕೆಂಕೆರೆ ಮಲ್ಲಿಕಾರ್ಜುನ್ ಮತ್ತು ಸಂಘಟನೆಯ ಸಂಗಾತಿ ಎನ್ ಇಂದಿರಮ್ಮ ವಿವರ ಕಳುಹಿಸುವಂತೆ ಒತ್ತಾಯಿಸುತ್ತಿದ್ದಾರೆ. ನನ್ನ ಶಿಷ್ಯ ಮತ್ತು ಶಿರಡಿ ಸಾಯಿ ಸೇವಾ ಟ್ರಸ್ಟ್‌ನ ಸಂಸ್ಥಾಪಕ ವಿಠಲ್ ಭೀಮಯ್ಯ ರಾಜ್ಯೋತ್ಸವ ಪ್ರಶಸ್ತಿಗೆ ನನ್ನ ಹೆಸರನ್ನು ಶಿಫಾರಸು ಮಾಡುವಂತೆ ಫೇಸ್‌ಬುಕ್‌ನಲ್ಲಿ ಕಾನೂನು ಸಚಿವವರಿಗೆ ಮನವಿ ಮಾಡಿದ್ದಾರೆ. ನನ್ನ ಬಗ್ಗೆ ಅಭಿಮಾನವಿಟ್ಟಿರುವ ಆತ್ಮೀಯ ಗೆಳೆಯರು ಮತ್ತು ಅಧಿಕಾರಿಗಳಿಗೆ ನಾನು ಆಬಾರಿ.

ಇದನ್ನೂ ಓದಿ: ನೊಬೆಲ್​ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಟ್ರಂಪ್ ಹೆಸರು ಶಿಫಾರಸ್ಸು: ನಾರ್ವೇಯ ಸಂಸತ್ ಸದಸ್ಯ

ರಾಜ್ಯೋತ್ಸವ ಪ್ರಶಸ್ತಿಗೆ ನಾನು ಅರ್ಜಿ ಸಲ್ಲಿಸಬೇಕೇ? ಈಗಿನ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು ನನ್ನನ್ನು ನಾನೇ ಪ್ರಶ್ನಿಸಿಕೊಂಡೆ?

  1. ಕೃಷಿ ಮತ್ತು ರೈತ ಸಮುದಾಯಕ್ಕೆ ಮಾರಕವಾಗಬಹುದಾದ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ ಜಾರಿಗೊಂಡಿರುವಾಗ ರೈತನಾದ ನಾನು ಪ್ರಶಸ್ತಿಗೆ ಅರ್ಜಿ ಸಲ್ಲಿಸಿದರೆ ನನ್ನ ಒಡನಾಡಿ ಅನ್ನದಾತರಿಗೆ ಮಾಡುವ ವಂಚನೆಯಾಗುವುದಿಲ್ಲವೇ?
  2. ಶಿಕ್ಷಕರು ಮತ್ತು ಮೂಲಭೂತ ಸೌಕರ್ಯಗಳಿಲ್ಲದೆ ಅನಾಥವಾಗಿರುವ ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ಪ್ರಯತ್ನಗಳಿಲ್ಲದೆ ಅವುಗಳನ್ನು ಮುಚ್ಚಲು ತಯಾರಿ ನಡೆದಿರುವ ಸಂದರ್ಭದಲ್ಲಿ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನದ ಕಾರ್ಯಕರ್ತನಾದ ನಾನು ಪ್ರಶಸ್ತಿ ಪಡೆಯುವುದು ಕುಗ್ರಾಮಗಳ ಮತ್ತು ಆರ್ಥಿಕ ಅಶಕ್ತರ ಮಕ್ಕಳ ಶಿಕ್ಷಣವನ್ನು ನಿರಾಕರಿಸಲು ಕೈಜೋಡಿಸಿದಂತಲ್ಲವೇ!!
  3. ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮತ್ವ ಕುಸಿಯುತ್ತದೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಇಂಗ್ಲಿಷ್ ಮಾಧ್ಯಮ ವಿಜೃಂಭಿಸುತ್ತಿದೆ. ಹಿಂದಿ ಹೇರಿಕೆಯಾಗುತ್ತಿದೆ. ಇಂತಹ ಕನ್ನಡ ಅನಾಥವಾಗಿರುವ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತಿನ ಒಬ್ಬ ಸದಸ್ಯನಾಗಿ “ಕನ್ನಡ” ರಾಜ್ಯೋತ್ಸವ ಪ್ರಶಸ್ತಿ ಕೇಳುವುದು ಕನ್ನಡಮ್ಮನಿಗೆ ಎಸಗುವ ದ್ರೋಹ ಅಲ್ಲವೇ?
  4. ಭೂಮಂಡಲದಲ್ಲಿ ಪಾರಿಸಾರಿಕ ಮಹತ್ವ ಪಡೆದಿರುವ ಪಶ್ಚಿಮ ಘಟ್ಟಗಳು ದಾಳಿಗೊಳಗಾಗಿವೆ, ನೈಸರ್ಗಿಕ ಸಂಪನ್ಮೂಲಗಳು(ನೀರು,ಖನಿಜ, ಕಲ್ಲು, ಮರಳು.. ) ಲೂಟಿಯಾಗುತ್ತಿರುವ ಸಮಯದಲ್ಲಿ, ಗಾಡ್ಗೀಳ್‌‌ರವರ ಜೊತೆ ಜೀವ ವೈವಿಧ್ಯ ದಾಖಲಾತಿ ಮಾಡಿರುವ ಮತ್ತು ಅರಣ್ಯ ಬೆಳೆಸುವ ಪ್ರಯತ್ನದಲ್ಲಿರುವ ನಾನು ಪ್ರಶಸ್ತಿಗೆ ಅಹವಾಲು ಸಲ್ಲಿಸುವುದು ಪರಿಸರ ವಿನಾಶಕ್ಕೆ ಕುಮ್ಮಕ್ಕು ಕೊಟ್ಟಂತಲ್ಲವೇ!?
  5. ಪರಿಹಾರ ಸಿಗದ ನೆರೆ ಸಂತ್ರಸ್ತರು ಮತ್ತು ಅರಣ್ಯವನ್ನೇ ನಂಬಿ ಸಾವಿರಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದ ಮುಗ್ಧ ಅರಣ್ಯ ವಾಸಿಗಳು ಕಾಡಿನಿಂದ ಹೊರದಬ್ಬಲ್ಪಟ್ಟು ಬೆತ್ತಲೆಯಾಗಿ ಬೀದಿಯಲ್ಲಿ ಬಿದ್ದಿರುವಾಗ ಪ್ರಶಸ್ತಿ ಸಂದರ್ಭದಲ್ಲಿ ಹೊದ್ದಿಸುವ ಶಾಲು ನನ್ನನ್ನು ಅಣಕಿಸುವುದಿಲ್ಲವೇ??
  6. ಕೊರೊನಾ ತಂದಿತ್ತ ಸಂಕಷ್ಟದಿಂದ ಪಾರಾಗಲು ನೂರಾರು ಕಿ. ಮೀ. ಲಗೇಜು, ಕುಟುಂಬ ಸಮೇತ ಊರುಗಳಿಗೆ ಮರಳಿದ, ಇನ್ನೂ ಅತಂತ್ರರಾಗಿರುವ ಈ ದೇಶಕ್ಕಾಗಿ ದುಡಿದ ವಲಸೆ ಕಾರ್ಮಿಕರ ಮಕ್ಕಳು ಹಿಡಿ ಅನ್ನಕ್ಕಾಗಿ ಕೈಚಾಚಿದಂತೆ ಗೋಚರಿಸುವುದಿಲ್ಲವೇ ಪ್ರಶಸ್ತಿ ಫಲಕ!!!!
  7. ದಶಕಗಳಿಂದ ಉತ್ತಿ ಬಿತ್ತಿ ಜೀವ ಸವೆಸಿರುವ ಭೂಹೀನರಿಗೆ ನೀಡಬೇಕಿರುವ ಸಾಗುವಳಿ ಪತ್ರ ಮತ್ತು ವಸತಿ ರಹಿರಿಗೆ ಕೊಡಬೇಕಿರುವ ಹಕ್ಕು “ಪತ್ರ ಪ್ರಶಸ್ತಿ” ಪತ್ರಕ್ಕಿಂತ ಹೆಚ್ಚು ಮೌಲ್ಯಯುತವಾದುದಲ್ಲವೇ??
  8. ಗಾಂಧಿ ಪ್ರತಿಪಾದಿಸಿದ ಮೌಲ್ಯ ಗಳು ಹಿನ್ನಲೆಗೆ ಸರಿದು ಗೂಡ್ಸೆ ಸಂಸ್ಕೃತಿ ಮುನ್ನೆಲೆಗೆ ಬರುತ್ತಿರುವ ಕಾಲಘಟ್ಟದಲ್ಲಿ Gandhian collective India ದ ಸತ್ಯಾಗ್ರಹಿಯಾದ ನಾನು ಪ್ರಶಸ್ತಿ ಬಯಸುವುದು ಗಾಂಧಿ ಮತ್ತು ಇತಿಹಾಸಕ್ಕೆ ಅಪಚಾರ ಎಸಗಿದಂತಲ್ಲವೇ??
  9. ಮಹಿಳೆಯರ ಮೇಲೆ ಅತ್ಯಾಚಾರ, ದಲಿತರ ಮೇಲೆ ದೌರ್ಜನ್ಯ, ಕೋಮು ಗಲಭೆ, ವೈಚಾರಿಕ ಚಿಂತಕರ ಬಂಧನ ಮುಂತಾದವುಗಳು ತಗ್ಗಿಲ್ಲ, ಗೌರಿ, ಕಲ್ಬುರ್ಗಿಯಂತಹ ವಿಚಾರವಾದಿಗಳನ್ನು ಕಳೆದು ಕೊಂಡಿರುವ ವಿಜ್ಞಾನ ಸಂಘಟನೆಗಳ ಕಾರ್ಯಕರ್ತನಾದ ನಾನು ನನ್ನ ವಿವೇಕ ಮತ್ತು ಆತ್ಮ ಸಾಕ್ಷಿಗೆ ಅನುಗುಣವಾಗಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕುವುದಿಲ್ಲ.

ನನ್ನ ಈ ನಿರ್ಧಾರ ಅಹಂಕಾರ, ಮೂರ್ಖತನ, ದಡ್ಡತನ ಮುಂತಾಗಿ ಭಾವಿಸಬಹುದು. ಅದ್ಯಾವುದೂ ಅಲ್ಲ. ನನ್ನ ಈ ನಿರ್ಧಾರ ರಾಜ್ಯದಾದ್ಯಂತ ನನ್ನ ಸಂಘಟನೆ, ಪ್ರಗತಿಪರ ಸಂಘಟನೆಗಳು, ಮಹಿಳಾ ಸಂಘಟನೆಗಳು ಹಾಗೂ ರೈತ ಸಂಘಟನೆಗಳ ಹೋರಾಟಕ್ಕೆ ಬೆಂಬಲ!!

ನಮಸ್ಕಾರ,
~ರಾಮಕೃಷ್ಣಪ್ಪ

ಇದನ್ನೂ ಓದಿ: ಜರ್ಮನ್ ಬುಕ್‌ ಟ್ರೇಡ್‌ನ ಶಾಂತಿ ಪ್ರಶಸ್ತಿ ಗೆದ್ದ ಭಾರತೀಯ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...