Homeಮುಖಪುಟಹಲಾಲ್ ಮಾಂಸ ಬಳಕೆ; 'ಸ್ಟಾರ್ ಬಕ್ಸ್ 'ನ್ನು ಬಹಿಷ್ಕರಿಸುವಂತೆ ಹಿಂದುತ್ವ ಗ್ರೂಪ್ ಕರೆ

ಹಲಾಲ್ ಮಾಂಸ ಬಳಕೆ; ‘ಸ್ಟಾರ್ ಬಕ್ಸ್ ‘ನ್ನು ಬಹಿಷ್ಕರಿಸುವಂತೆ ಹಿಂದುತ್ವ ಗ್ರೂಪ್ ಕರೆ

- Advertisement -
- Advertisement -

ಹಲಾಲ್ ಮಾಂಸ ಬಳಸುತ್ತಿದ್ದಾರೆಂದು “ಸ್ಟಾರ್ ಬಕ್ಸ್ “ನ್ನು ಬಹಿಷ್ಕರಿಸುವಂತೆ ಹಿಂದುತ್ವ ಗ್ರೂಪ್  ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.

Free press journal ಈ ಕುರಿತು ವರದಿ ಮಾಡಿದ್ದು, ಸ್ಟಾರ್ ಬಕ್ಸ್ ಹಲಾಲ್ ಮಾಂಸದ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುತ್ತದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ರಮೇಶ್ ಶಿಂಧೆ Fpj ಜೊತೆ ಮಾತನಾಡುತ್ತಾ ಆರೋಪಿಸಿದ್ದಾರೆ.ಹಿಂದೂ ಜನಜಾಗೃತಿ ಸಮಿತಿ ಸ್ಟಾರ್ ಬಕ್ಸ್  ಮಳಿಗೆಗಳಿಗೆ ತಮ್ಮ ಸ್ವಯಂ ಸೇವಕರನ್ನು ಕಳುಹಿಸಿದ್ದು, ಅಲ್ಲಿ ಹಲಾಲ್ ಮಾಂಸದ ಉತ್ಪನ್ನ ಮಾತ್ರ ಮಾರಾಟ ಮಾಡುತ್ತಾರೆ ಎನ್ನುವ ವಿಡಿಯೋವನ್ನು ಕೂಡ ಸೆರೆ ಹಿಡಿದಿದ್ದಾರೆ ಎಂದು ಹೇಳಿದ್ದಾರೆ.

ಹಲಾಲ್ ಉತ್ಪನ್ನಗಳನ್ನು ಮಾರಾಟ ಮಾಡುವ ಸಂಸ್ಥೆಯು ಇಸ್ಲಾಮಿಕ್ ಸಂಸ್ಥೆಯಿಂದ ಪ್ರಮಾಣಪತ್ರವನ್ನು ಪಡೆಯಬೇಕು ಎಂದು ಶಿಂದೆ ಹೇಳಿದರು. ಈ ಹಣವನ್ನು ಪ್ರಶ್ನಾರ್ಹ ಉದ್ದೇಶಗಳಿಗಾಗಿ ಬಳಸಲಾಗುತ್ತದೆ ಎಂದು ಶಿಂದೆ ಆರೋಪಿಸಿದ್ದಾರೆ.

ಯಾವುದೇ ಸಂದರ್ಭದಲ್ಲಿ, ಮುಸ್ಲಿಮೇತರರ ಮೇಲೆ ಹಲಾಲ್ ಮೀಟ್ ಹೇರುವುದು ಅತ್ಯಂತ ಅನ್ಯಾಯವಾಗಿದೆ ಎಂದು ಶಿಂದೆ ಹೇಳಿದ್ದು,  ಹಿಂದೂ  ಜನಜಾಗೃತಿ ಸಮಿತಿ ಕಳೆದ ಹಲವು ತಿಂಗಳುಗಳಿಂದ ಹಲಾಲ್  ವಿರುದ್ಧ ಅಭಿಯಾನವನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಜಾದವ್‌ಪುರ ವಿವಿ ಹಾಸ್ಟೆಲ್ ನಲ್ಲಿ ರ್ಯಾಗಿಂಗ್ ಗೆ ವಿದ್ಯಾರ್ಥಿ ಬಲಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read