Homeಮುಖಪುಟಜಾದವ್‌ಪುರ ವಿವಿ ಹಾಸ್ಟೆಲ್ ನಲ್ಲಿ ರ್ಯಾಗಿಂಗ್ ಗೆ ವಿದ್ಯಾರ್ಥಿ ಬಲಿ

ಜಾದವ್‌ಪುರ ವಿವಿ ಹಾಸ್ಟೆಲ್ ನಲ್ಲಿ ರ್ಯಾಗಿಂಗ್ ಗೆ ವಿದ್ಯಾರ್ಥಿ ಬಲಿ

- Advertisement -
- Advertisement -

ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದ 18 ವರ್ಷದ ವಿದ್ಯಾರ್ಥಿ ಸ್ವಪ್ನದೀಪ್ ರ್ಯಾಗಿಂಗ್ ಮತ್ತು ಆತ್ಮಹತ್ಯೆ ಪ್ರಕರಣದಲ್ಲಿ ಇನ್ನಿಬ್ಬರನ್ನು ಬಂಧಿಸಲಾಗಿದೆ. ಘಟನೆಯ ತನಿಖೆಯ ವೇಳೆ ಪೊಲೀಸರು ಎರಡನೇ ವರ್ಷದ ಅರ್ಥಶಾಸ್ತ್ರ ವಿದ್ಯಾರ್ಥಿ ದೀಪಶೇಖರ್ ದತ್ತಾ ಮತ್ತು ಎರಡನೇ ವರ್ಷದ ಸಮಾಜಶಾಸ್ತ್ರ ವಿದ್ಯಾರ್ಥಿ ಮನೋತೋಷ್ ಘೋಷ್ ಅವರನ್ನು ಬಂಧಿಸಿದ್ದಾರೆ.

ಇದಕ್ಕೂ ಮುನ್ನ ಪೊಲೀಸರು ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಸೌರಭ್ ಚೌಧುರಿ ಅವರನ್ನು ಬಂಧಿಸಿದ್ದರು. ಶನಿವಾರ, ಅವರನ್ನು ಆಗಸ್ಟ್ 22 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಮಾಜಿ ವಿದ್ಯಾರ್ಥಿ, ಚೌಧರಿ ಅಕ್ರಮವಾಗಿ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದರು. ಅವರು 2022 ರಲ್ಲಿ ಗಣಿತಶಾಸ್ತ್ರದಲ್ಲಿ ಎಂಎಸ್ಸಿ ಮಾಡಿದ್ದರು.

ಪ್ರಾಥಮಿಕ ತನಿಖೆಯು  ಸ್ವಪ್ನದೀಪ್ ಆತ್ಮಹತ್ಯೆಗೆ ರ್ಯಾಗಿಂಗ್ ಕಾರಣ ಎನ್ನಲಾಗಿದ್ದು,  ಲೈಂಗಿಕ ಕಿರುಕುಳದ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.

ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಹಾಸ್ಟೆಲ್ ವಿದ್ಯಾರ್ಥಿಗಳು ಲೈಂಗಿಕ ಕಿರುಕುಳಕ್ಕೆ ಕೂಡ ಒಳಗಾಗುತ್ತದ್ದರು ಎನ್ನತ್ತಿದ್ದು,  ಈ ಕುರಿತು ತನಿಖೆ ಕೂಡ ನಡೆಯುತ್ತಿದೆ.

ಬೆಂಗಾಲಿ ಮೂಲದ ಸ್ವಪ್ನದೀಪ್ ಕುಂದು ಮೊದಲ ವರ್ಷದ ಪದವಿಪೂರ್ವ ವಿದ್ಯಾರ್ಥಿಯಾಗಿದ್ದು,  ಆಗಸ್ಟ್ 9 ರಂದು ರಾತ್ರಿ 11:45ರ ಸುಮಾರಿಗೆ ವಿಶ್ವವಿದ್ಯಾಲಯದ ಮುಖ್ಯ ಹಾಸ್ಟೆಲ್ ಕಟ್ಟಡದ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು 4:30ಕ್ಕೆ ಮೃತಪಟ್ಟಿದ್ದಾರೆ.

ಬುಧವಾರ ಸಂಜೆ ಸ್ವಪ್ನದೀಪ್ ತನ್ನ ತಾಯಿಯೊಂದಿಗೆ ಮಾತನಾಡುತ್ತಾ, ನಾನು ಚೆನ್ನಾಗಿಲ್ಲ ಮತ್ತು ನನಗೆ ಭಯವಾಗುತ್ತಿದೆ ಎಂದು ಹೇಳಿದ್ದಾನೆ. ಅವನ ತಾಯಿ ಏನಾಯಿತು ಎಂದು ಕೇಳಿದ್ದಾರೆ ಈ ವೇಳೆ ವಿದ್ಯಾರ್ಥಿ, ಅಮ್ಮ ಬೇಗ ಬನ್ನಿ.. ನಾನು ನಿಮಗೆ ಹೇಳಲು ಬಹಳಷ್ಟು ವಿಷಯಗಳಿವೆ ಎಂದು ಹೇಳಿದ್ದಾನೆ. ತಾಯಿ ಮತ್ತೆ ಕರೆ ಮಾಡಿದಾಗ ಅವರು ಉತ್ತರಿಸಲಿಲ್ಲ. ಸುಮಾರು ಒಂದು ಗಂಟೆಯ ನಂತರ,  ಪೋಷಕರಿಗೆ ತಮ್ಮ ಮಗ ಕಟ್ಟಡದಿಂದ ಬಿದ್ದ ಬಗ್ಗೆ ಕರೆ ಬಂದಿದೆ ಎಂದು ಸಂತ್ರಸ್ತ ಯುವಕನ  ಚಿಕ್ಕಪ್ಪ ಅರೂಪ್ ಕುಂದು ಹೇಳಿದ್ದಾರೆ.

ವಿದ್ಯಾರ್ಥಿಯ ದೇಹವನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಆದರೆ ವೈದ್ಯರು ದೇಹದ ಮೇಲೆ ಗಾಯದ ಗುರುತುಗಳನ್ನು ತೋರಿಸಿದ್ದಾರೆ. ಇದು ರ್ಯಾಗಿಂಗ್ ಮಾಡದಿದ್ದರೆ ಇದು ಹೇಗೆ ಸಂಭವಿಸುತ್ತದೆ? ಎಂದು ಕುಂದು ಕೇಳಿದ್ದಾರೆ.

ಸ್ವಪ್ನದೀಪ್ ಅವರ ತಂದೆ ರಾಮಪ್ರಸಾದ್ ಕುಂದು ಎಂಬುವರು ಈ ಕುರಿತು ಪೊಲೀಸ್ ದೂರು ದಾಖಲಿಸಿದ್ದು, ತಮ್ಮ ಮಗನ ಸಾವಿಗೆ ಕೆಲವು ಹಾಸ್ಟೆಲ್‌ ವಿದ್ಯಾರ್ಥಿಗಳು ಕಾರಣ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ: ತಮಿಳುನಾಡು: ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಮಾಂಸಹಾರಿ ಹೋಟೆಲ್: ರಾಜ್ಯಪಾಲರಿಂದ ಆಕ್ಷೇಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಲೋಕಸಭಾ ಅಭ್ಯರ್ಥಿಗಳ ಪೈಕಿ ಶೇ. 25ರಷ್ಟು ಮಂದಿ ಇತರ ಪಕ್ಷಗಳಿಂದ ವಲಸೆ ಬಂದವರು

0
ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪೈಕಿ ಶೇ 25ರಷ್ಟು ಮಂದಿ ಬೇರೆ ಪಕ್ಷಗಳಿಂದ ವಲಸೆ ಬಂದವರು ಎಂದು ವರದಿಗಳು ಹೇಳಿವೆ. ಬಿಜೆಪಿ ಕಣಕ್ಕಿಳಿಸಿರುವ 435 ಅಭ್ಯರ್ಥಿಗಳ ಪೈಕಿ 106 ಮಂದಿ...