Homeಮುಖಪುಟಅತೀಕ್ ಅಹ್ಮದ್ ಹತ್ಯೆ: ಯೋಗಿ ಸರಕಾರಕ್ಕೆ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

ಅತೀಕ್ ಅಹ್ಮದ್ ಹತ್ಯೆ: ಯೋಗಿ ಸರಕಾರಕ್ಕೆ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

- Advertisement -
- Advertisement -

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಮಾಜಿ ಲೋಕಸಭಾ ಸದಸ್ಯ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಇದರ ಜೊತೆಗೆ 2017 ರಿಂದ ನಡೆದ 183 “ಪೊಲೀಸ್ ಎನ್‌ಕೌಂಟರ್‌ಗಳ”  ಬಗ್ಗೆ ವರದಿಯನ್ನು ರಾಜ್ಯ ಸರ್ಕಾರದಿಂದ ಕೇಳಿದೆ.

ರಾಜ್ಯ ಪೊಲೀಸರ ಪ್ರಕಾರ, ಯೋಗಿ ಆದಿತ್ಯನಾಥ್ ಸರ್ಕಾರವು ಮಾರ್ಚ್ 2017 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಪೊಲೀಸ್ ಎನ್‌ಕೌಂಟರ್‌ಗಳಲ್ಲಿ 183 ಜನರು ಸಾವನ್ನಪ್ಪಿದ್ದಾರೆ.

ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಅರವಿಂದ್ ಕುಮಾರ್ ಅವರ ಪೀಠವು ಎನ್‌ಕೌಂಟರ್‌ಗಳ ವಿವರಗಳು, ತನಿಖೆಯ ಸ್ಥಿತಿ, ಸಲ್ಲಿಸಿದ ಚಾರ್ಜ್‌ಶೀಟ್‌ಗಳು ಮತ್ತು ವಿಚಾರಣೆಯ ಸ್ಥಿತಿಯ ವಿವರಗಳನ್ನು ನೀಡಿ ಆರು ವಾರಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.

5 ರಿಂದ 10 ಮಂದಿ  ಅತೀಕ್ ಗೆ ಕಾವಲು ಕಾಯುತ್ತಿದ್ದರು…ಯಾರೋ ಸುಮ್ಮನೆ ಬಂದು ಗುಂಡು ಹಾರಿಸುವುದು ಹೇಗೆ? ಇದು ಹೇಗೆ ಆಗುತ್ತದೆ? ಯಾರೋ  ಶಾಮೀಲಾಗಿದ್ದಾರೆ ಎಂದು ಪೀಠವು ಈ ವಿಚಾರದಲ್ಲಿ ಗಮನಿಸಿದೆ.

ಅತೀಕ್ ಅಹ್ಮದ್‌  ಸಹೋದರಿ ಆಯಿಷಾ ನೂರಿ ತನ್ನ ಸಹೋದರನ ಹತ್ಯೆಯ ಸಮಗ್ರ ತನಿಖೆಗೆ ನಿರ್ದೇಶನವನ್ನು ಕೋರಿ ಮಾಡಿದ ಮನವಿಯ ಮೇರೆಗೆ ಯುಪಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ.

ಆದರೆ  ಪೊಲೀಸ್ ಎನ್ ಕೌಂಟರ್ ಗಳ ಕುರಿತು ತನಿಖೆ ನಡೆಸಲು ಸ್ವತಂತ್ರ ನ್ಯಾಯಾಂಗ ತನಿಖಾ ಸಂಸ್ಥೆ ಸ್ಥಾಪಿಸಬೇಕೆಂಬ ವಿಶಾಲ್ ತಿವಾರಿ ಅವರ ಕೋರಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ. ರಾಜ್ಯ ಸರ್ಕಾರವು ಈಗಾಗಲೇ ಅಂತಹ ಆಯೋಗವನ್ನು ರಚಿಸಿದೆ ಎಂದು ಹೇಳಿದೆ.

ಅತೀಕ್ ಹತ್ಯೆ ಕುರಿತು ತನಿಖೆ ನಡೆಸಲು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ತನಿಖಾ ಆಯೋಗವನ್ನು ರಚಿಸುವಂತೆ ಕೋರಿ ಅತೀಕ್ ಸಹೋದರಿ  ಆಯಿಷಾ ನೂರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.ಇದರ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಯನ್ನು ನೀಡಿದೆ.

ಮಾಜಿ ಸಂಸದ ಅತೀಕ್ ಅಹ್ಮದ್ (60) ಮತ್ತು ಸಹೋದರ ಅಶ್ರಫ್ ಅವರನ್ನು ಏಪ್ರಿಲ್ 15 ರಂದು  ಪರೀಕ್ಷೆಗಾಗಿ ವೈದ್ಯಕೀಯ ಕಾಲೇಜಿಗೆ ಪೊಲೀಸ್ ಸಿಬ್ಬಂದಿ ಕರೆದೊಯ್ಯುತ್ತಿದ್ದಾಗ  ಪೊಲೀಸರ ಸಮ್ಮುಖದಲ್ಲೇ ಪತ್ರಕರ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಘಟನೆಯ ಲೈವ್ ದೃಶ್ಯಗಳು ಸಂಪೂರ್ಣ ಮಾದ್ಯಮದ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪ್ರಕರಣ ದೇಶದಲ್ಲಿ ಭಾರೀ ಸಂಚಲನವನ್ನು ಮೂಡಿಸಿತ್ತು.

ಇದನ್ನು ಓದಿ:ತೆಲಂಗಾಣ: ಎತ್ತು ಹೊಲಕ್ಕೆ ನುಗ್ಗಿದ್ದಕ್ಕೆ ದಂಡವಾಗಿ ದಲಿತನನ್ನು ಕಂಬಕ್ಕೆ ಕಟ್ಟಿ ಥಳಿತ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read