Homeಮುಖಪುಟನೂಹ್ ಹಿಂಸಾಚಾರದ ಐದು ಅರ್ಧಸತ್ಯಗಳು

ನೂಹ್ ಹಿಂಸಾಚಾರದ ಐದು ಅರ್ಧಸತ್ಯಗಳು

- Advertisement -
- Advertisement -

“ಧಾರ್ಮಿಕ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದ ಹಿಂದೂ ಭಕ್ತಾದಿಗಳ ಮೇಲೆ ಮುಸ್ಲಿಂ ದಂಗೆಕೋರರಿಂದ ಸಂಯೋಜಿತ ದಾಳಿ… ಎರಡು ಸಮುದಾಯಗಳ ಸಂಘರ್ಷದ ಮುಂದೆ ಅಸಹಾಯಕರಾದ ಪೊಲೀಸರು”- ಜುಲೈ 31ರ ಸಂಜೆ ನೂಹ್‌ನ ಈ ಸುದ್ದಿಗಳನ್ನು ನೋಡಿ ನನ್ನ ಚಿಂತೆ ಎಲ್ಲೆಮೀರಿತ್ತು. ಕಳೆದ ಇಪ್ಪತ್ತರೆಡು ವರ್ಷಗಳಿಂದ ಹರಿಯಾಣದ ಮೇವಾತ್ ಪ್ರದೇಶದೊಂದಿಗೆ ನನ್ನ ನಿಕಟ ಸಂಬಂಧವಿದೆ. ಮಾರನೆಯ ದಿನ ಆಗಸ್ಟ್ 1ರಂದೇ ನಾನು ದೇಶದ ಅತ್ಯಂತ ಹಿಂದುಳಿದ ಜಿಲ್ಲೆಯ ಮುಖ್ಯಾಲಯ ನೂಹ್ ತಲುಪಿದೆ. ಅಲ್ಲಿ ಡಿಸಿ ಮತ್ತು ಎಸ್‌ಪಿ ಅವರನ್ನು ಭೇಟಿಯಾದೆ. ಘಟನಾ ಸ್ಥಳಕ್ಕೆ ಭೇಟಿ ಕೊಟ್ಟೆ, ಹಿಂಸಾಚಾರಕ್ಕೆ ಬಲಿಯಾದ ಕೆಲವು ಸಂತ್ರಸ್ತರನ್ನು ಭೇಟಿಯಾದೆ ಹಾಗೂ ಅನೇಕ ಪ್ರತ್ಯಕ್ಷ ಸಾಕ್ಷಿಗಳನ್ನು ಕಂಡೆ. ಈ ಘಟನೆಗೆ ಸಂಬಂಧಿಸಿದಂತೆ ಅನೇಕ ವಿದೇವ್ ಮತ್ತು ಇತರ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದೆ, ಮಾಧ್ಯಮಗಳು ಮತ್ತು ಕೇವಲ ಸ್ವಾರ್ಥಕ್ಕಾಗಿ ಹರಡಿಸಲಾಗುತ್ತಿದ್ದ ಪ್ರೊಪಗಾಂಡಾಗಳನ್ನು ಕೇಳುತ್ತಿದ್ದೆ. ಒಟ್ಟಾರೆಯಾಗಿ ದೇಶದ ಎದುರಿಗೆ ಅರ್ಧಸತ್ಯಗಳಿಂದ ಕೂಡಿದ ಒಂದು ಭ್ರಮಾತ್ಮಕ ಚಿತ್ರಣವನ್ನು ರಚಿಸಲಾಗುತ್ತಿದೆ, ಅದು ರಾಷ್ಟ್ರೀಯ ಏಕತೆಗೆ ಮಾರಕವಾಗಿದೆ. ಹಾಗಾಗಿ, ಈ ಘಟನೆ ಮತ್ತು ಇದರ ಸಂದರ್ಭದ ಸಂಪೂರ್ಣ ಸತ್ಯವನ್ನು ದೇಶದ ಮುಂದೆ ಇಡುವುದು ಅತ್ಯವಶ್ಯಕವಾಗಿದೆ.

ಅರ್ಧಸತ್ಯ #1: “ಇದು ಮುಸ್ಲಿಂ ದಂಗೆಕೋರರು ಮಾಡಿದ ಸಂಯೋಜಿತ ದಾಳಿ”. ಹೌದು, ಕಲ್ಲು ಎಸೆತ ಮತ್ತು ಹಿಂಸೆಯ ಆರಂಭವು ಮುಸ್ಲಿಂ ಗುಂಪುಗಳಿಂದ ಆಗಿತ್ತು. ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಸುರಕ್ಷತೆಯ ನೈತಿಕ ಹೊಣೆಗಾರಿಕೆ ಮುಸ್ಲಿಂ ಸಮುದಾಯದ್ದಾಗಿರುತ್ತೆ ಎಂಬುದೂ ಸತ್ಯ. ಆದರೆ, ಅಪರಾಧಿಗಳನ್ನು ಗುರುತಿಸುವ ಈ ಕಥನದಲ್ಲಿ ಅನೇಕ ಸುಳ್ಳುಗಳು ಅಡಗಿವೆ. ಮೊದಲನೆಯದು, ಈ ಕಥಾನಕವು ಕೆಲವೇ ಕೆಲವು ಮುಸ್ಲಿಂ ಗೂಂಡಾಗಳ ಕುಕೃತ್ಯದ ಹೊಣೆಗಾರಿಕೆಯನ್ನು ಇಡೀ ಮುಸ್ಲಿಂ ಸಮುದಾಯದ ಮೇಲೆ ಹಾಕುತ್ತದೆ. ಇದನ್ನು ಒಂದುವೇಳೆ ಒಪ್ಪಿಕೊಳ್ಳಬೇಕೆಂದರೆ, ಗುರುಗಾಂವದಲ್ಲಿ ಮಸೀದಿಯ ಮೇಲೆ ಆದ ದಾಳಿ ಮತ್ತು ಅದರ ಮೌಲ್ವಿಯ ಕೊಲೆಯ ಹೊಣೆಗಾರಿಕೆಯನ್ನು ಹಿಂದೂ ಸಮುದಾಯದ ಮೇಲೆ ಹಾಕಬಹುದೇ? ಎರಡನೆಯದಾಗಿ, ಇಷ್ಟು ದೊಡ್ಡ ಪ್ರಮಾಣದ ಹಿಂಸೆ ಯಾವುದೇ ರೀತಿಯ ಸಿದ್ಧತೆಯಿಲ್ಲದೇ ಆಗಲು ಸಾಧ್ಯವಿಲ್ಲ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ, ಆದರೆ ಇದರಲ್ಲಿ ಯಾವುದೇ ಸಂಘಟನೆಯ ಕೈವಾಡ ಇರುವುದಕ್ಕೆ ಯಾವ ಪ್ರಮಾಣಗಳೂ ಇಲ್ಲ. ಮೂರನೆಯದಾಗಿ, ಈ ಕಥಾನಕ ಒಂದು ಸತ್ಯವನ್ನು ಮರೆಮಾಚುತ್ತದೆ, ಅದೇನೆಂದರೆ, ದಾಳಿಯನ್ನು ಆರಂಭಿಸುವವರು ಮುಸಲ್ಮಾನರಾಗಿದ್ದಾಗ, ನೂಹ್‌ನ ಮ್ಯಾಜಿಸ್ಟ್ರೇಟ್, ಭಾದಸ ಗ್ರಾಮದ ಗುರುಕಲು ಹಾಗೂ ಬಡಕಲಿ ಚೌಕಿನ ಹಿಂದೂ ವ್ಯಾಪಾರಿಗಳನ್ನು ರಕ್ಷಿಸುವವರೂ ಮುಸಲ್ಮಾನರೇ ಆಗಿದ್ದರು ಎಂಬುದು.

ಮಮತಾ ಸಿಂಗ್

ಅರ್ಧಸತ್ಯ #2: “ಈ ಹಿಂಸಾಚಾರದ ಬಲಿಪಶುಗಳು ಒಂದು ಧಾರ್ಮಿಕ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಹಿಂದೂ ಭಕ್ತಾದಿಗಳು.”- ಈ ಹಿಂಸಾಚಾರದ ಬಲಿಪಶುಗಳನ್ನು ಗುರುತಿಸುವ ಈ ಕಥಾನಕವೂ ಅರ್ಧಸತ್ಯವಾಗಿದೆ. ನಲಹಡನ ಶಿವ ಮಂದಿರದ ಪರಂಪರೆಯ ಅನುಗುಣವಾಗಿ ಈ ಯಾತ್ರೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅನೇಕ ಭಕ್ತಾದಿಗಳು ಪಾಲ್ಗೊಂಡಿದ್ದರು. ಸ್ವಾಭಾವಿಕವಾಗಿಯೇ ಅವರ್‍ಯಾರೂ ದಂಗೆ ಮಾಡಲು ಬಂದಿದ್ದಿಲ್ಲ. ಆರಂಭಿಕ ಹಿಂಸಾಚಾರದ ಬಲಿಪಶುಗಳು ಬಹುತೇಕರು ಹಿಂದೂಗಳೇ ಆಗಿದ್ದರು ಎಂಬುದು ಸತ್ಯವಾಗಿದೆ. ಆದರೆ, ವಾಸ್ತವವೇನೆಂದರೆ ಈ ಜಲಾಭಿಷೇಕ ಶೋಭಾ ಯಾತ್ರೆಯಲ್ಲಿ ಸಾಮಾನ್ಯ ಭಕ್ತಾದಿಗಳೊಂದಿಗೆ ದೊಡ್ಡ ಸಂಖ್ಯೆಯಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಉಪದ್ರವಕಾರಿ ವ್ಯಕ್ತಿಗಳೂ ಪಾಲ್ಗೊಂಡಿದ್ದರು, ಅವರು ಧಾರ್ಮಿಕ ಕಾರಣಕ್ಕಾಗಿ ಅಲ್ಲಿ ಬರದೇ ಪರಿಸ್ಥಿತಿ ಉದ್ರೇಕಗೊಳಿಸುವ ಉದ್ದೇಶದಿಂದ ಹಾಗೂ ದಂಗೆಗಳನ್ನು ಶುರು ಮಾಡುವ ಉದ್ದೇಶದಿಂದ ಅದಕ್ಕೆ ಎಲ್ಲಾ ತಯ್ಯಾರಿ ಮಾಡಿಕೊಂಡೇ ಅಲ್ಲಿ ಸೇರಿಕೊಂಡಿದ್ದರು. ಹಿಂಸೆ ಮತ್ತು ಪ್ರತಿಕ್ರಿಯಾತ್ಮಕ ಹಿಂಸಾಚಾರದೊಂದಿಗೆ ಭಕ್ತಾದಿಗಳಿಗೆ ಯಾವ ಸಂಬಂಧವೂ ಇರಲಿಲ್ಲ. ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಯಾವುದೇ ಮಹಿಳೆಯೊಂದಿಗೆ ಯಾವ ರೀತಿಯ ಕಿರುಕುಳ ಅಥವಾ ಅನುಚಿತ ವರ್ತನೆಯ ಯಾವ ಘಟನೆಯೂ ಆಗಿಲ್ಲ, ಹಾಗೆಂದು ಇದನ್ನು ರಾಜ್ಯದ ಎಡಿಜಿಪಿ ಮಮತಾ ಸಿಂಗ್ ಅವರೇ ಪುಷ್ಟೀಕರಿಸಿದ್ದಾರೆ. ಹಿಂಸಾಚಾರದಿಂದ ಬಚಾವಾಗಲು ದೇವಸ್ಥಾನದಲ್ಲಿ ಸೇರಿಕೊಂಡ ಭಕ್ತಾದಿಗಳನ್ನು ಸುತ್ತುವರಿದು, ಅವರ ಮೇಲೆ ಸಂಯೋಜಿತ ದಾಳಿ ನಡೆಸಿದ ವಿಷಯವೂ ಸುಳ್ಳು. ದೇವಸ್ಥಾನದ ಪುಜಾರಿಯೇ ಇದನ್ನು ನಿರಾಕರಿಸಿದ್ದಾರೆ.

ಅರ್ಧಸತ್ಯ #3: “ಎರಡು ಸಮುದಾಯಗಳ ನಡುವೆ ಕೋಮು ಹಿಂಸಾಚಾರ ಭುಗಿಲೆದ್ದಿತು.”- ಈ ಸಂಘರ್ಷದಲ್ಲಿ ಒಂದೆಡೆ ಹಿಂದೂಗಳಿದ್ದರು, ಇನ್ನೊಂದೆಡೆ ಮುಸ್ಲಿಮರಿದ್ದರು ಎಂಬುದು ವಾಸ್ತವ, ಆದರೆ ಈ ಎರಡೂ ಸಮುದಾಯಗಳ ನಡುವೆ ಸಂಘರ್ಷವಾಗಿಲ್ಲ. ಒಂದೆಡೆ ಮುಸ್ಲಿಂ ಗಲಭೆಕೋರರಿದ್ದರೆ ಇನ್ನೊಂದೆಡೆ ಹಿಂದೂ ಗಲಭೆಕೋರರಿದ್ದರು. 31ನೆಯ ತಾರೀಕಿನಿಂದ ಇಂದಿನವರೆಗೆ ಮೇವಾತ್‌ನಲ್ಲಿ ಎಲ್ಲಿಯೂ, ಈಶಾನ್ಯ ದೆಹಲಿ ಪ್ರದೇಶದಲ್ಲಿ ಇರುವ ಹಾಗೆ ಸ್ಥಳೀಯ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳಲ್ಲಿ ಹಿಂಸೆ ಅಥವಾ ಘರ್ಷಣೆಯ ಯಾವ ಒಂದು ಘಟನೆಯೂ ನಡೆದಿಲ್ಲ.

ಇದನ್ನೂ ಓದಿ: ಹರಿಯಾಣ: ಪ್ರಚೋದನಕಾರಿ ವಿಡಿಯೋ ಶೇರ್ ಮಾಡುತ್ತಿರುವ ಬಲಪಂಥೀಯ ಮಾಧ್ಯಮಗಳಿಗೆ ಡಿಜಿಪಿ ಎಚ್ಚರಿಕೆ

ಅರ್ಧಸತ್ಯ#4: “ಹಠಾತ್ತಾಗಿ ಭುಗಿಲೆದ್ದ ಈ ಹಿಂಸಾಚಾರದ ಎದುರು ಪೊಲೀಸ್ ಮತ್ತು ಆಡಳಿತ ಅಸಹಾಯಕವಾಗಿತ್ತು.”- ವಾಸ್ತವವೇನೆಂದರೆ, ಜುಲೈ 31ರಂದು ಭುಗಿಲೆದ್ದ ಹಿಂಸಾಚಾರ ದಿಢೀರನೇ ಆಗಿದ್ದಲ್ಲ. ಈ ಜಲಾಭಿಷೇಕ ಯಾತ್ರೆಯಲ್ಲಿ 2 ವರ್ಷಗಳ ಹಿಂದೆಯೂ ಮಜಾರ್ ಒಡೆದುಹಾಕುವ ಘಟನೆ ನಡೆದಿತ್ತು. ಜುಲೈ 25 ಮತ್ತು 26ರ ತನಕ ಮೋನು ಮನೇಸರ್ ಮತ್ತು ಬಿಟ್ಟು ಬಜರಂಗಿಯ ಪ್ರಚೋದನಕಾರಿ ವಿದೇವ್‌ಗಳು ಹರಿದಾಡುತ್ತಿದ್ದವು, ಗುಪ್ತಚರ ವರದಿಗಳು ಆಗಲೇ ಬಂದಿದ್ದವು. ಜುಲೈ 27ರಂದು ಸ್ಥಳೀಯ ಶಾಂತಿ ಸಮಿತಿಯ ಸಭೆಯಲ್ಲಿ ಈ ವಿದೇವ್‌ಗಳನ್ನು ಪೊಲೀಸ್ ಆಡಳಿತದ ಉನ್ನತ ಅಧಿಕಾರಿಗಳಿಗೆ ತೋರಿಸಲಾಗಿತ್ತು. ಅದಾಗ್ಯೂ ಒಂದುವೇಳೆ ಈ ಯಾತ್ರೆಯಲ್ಲಿ ನೂರೈವತ್ತಕ್ಕೂ ಹೆಚ್ಚು ವಾಹನಗಳು ಬರಲು ಅವಕಾಶ ಮಾಡಿಕೊಡಲಾಗುತ್ತದೆ, ಯಾತ್ರಿಗಳ ನಡುವೆ ನಡೆಯುತ್ತಿರುವ ಗಲಭೆಕೋರರನ್ನು ತಡೆಯಲಾಗಿಲ್ಲ, ಬದಲಿಗೆ ಅವರು ಲಾಠಿಗಳು, ತಲವಾರಗಳು ಹಾಗೂ ಬಂದೂಕುಗಳನ್ನು ತೆಗೆದುಕೊಂಡು ನಡೆಯಲು ಅನುವು ಮಾಡಿಕೊಡಲಾಗುತ್ತದೆಂದರೆ ಒಂದೋ ಪೊಲೀಸ್ ಮತ್ತು ಆಡಳಿತದ ಅಪರಾಧಿಕ ನಿರ್ಲಕ್ಷ್ಯವಿತ್ತು ಅಥವಾ ಉದ್ದೇಶಪೂರ್ವಕವಾಗಿ ಇವೆಲ್ಲ ಆಗಲು ಅನುವು ಮಾಡಿಕೊಟ್ಟರು ಎನ್ನುವುದು ಸ್ಪಷ್ಟವಾಗುತ್ತದೆ.

ಮೋನು ಮನೇಸರ್, ಬಿಟ್ಟು ಬಜರಂಗಿ

ಅರ್ಧಸತ್ಯ #5: “ಸ್ಥಳೀಯ ಮಟ್ಟದಲ್ಲಿ ಏನೇ ತಪ್ಪುಗಳಾಗಿದ್ದರೂ, ರಾಜ್ಯ ಸರಕಾರವು ಈಗ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಶಾಂತಿ ನೆಲೆಸುವಂತೆ ಮಾಡಿದೆ.”- ಮೇಲ್ನೋಟಕ್ಕೆ ಇದು ನಿಜ ಅನಿಸಬಹುದು, ಆದರೆ ವಾಸ್ತವದಲ್ಲಿ ಈ ಅಶಾಂತಿಯ ಮೂಲದಲ್ಲಿ ರಾಜ್ಯದ ಬಿಜೆಪಿ ಸರಕಾರವಿತ್ತು ಹಾಗೂ ಈಗ ಶಾಂತಿಯ ಬದಲಿಗೆ ದೀರ್ಘಾವಧಿಯ ಅಶಾಂತಿಯ ಬೀಜ ಬಿತ್ತಲಾಗುತ್ತಿದೆ. ರೈತರ ಹೋರಾಟದಿಂದ ಹಿನ್ನಡೆ ಅನುಭವಿಸಿದ ಹರಿಯಾಣದ ಬಿಜೆಪಿಯು ನೂಹ್‌ನ ಕಿಡಿಯನ್ನು ತನ್ನ ಚುನಾವಣೆಯ ಒಲೆ ಹೊತ್ತಿಸುವುದಕ್ಕಾಗಿ ಬಳಕೆ ಮಾಡಿದೆ ಎಂಬ ಸಂದೇಹ ಸ್ವಾಭಾವಿಕವಾಗಿದೆ. ಅಶಾಂತಿ ಆಗಬಹುದು ಎಂಬ ಸಂಪೂರ್ಣ ಆತಂಕದ ಹೊರತಾಗಿಯೂ ಹಿಂಸಾಚಾರ ಆಗಲು ಬಿಟ್ಟಿದ್ದಾರೆ ಎಂದರೆ ಅದು ರಾಜ್ಯ ಸರಕಾರದ ಸೂಚನೆಯಿಲ್ಲದೇ ಸಾಧ್ಯವಿದ್ದಿಲ್ಲ. ಹಿಂಸಾಚಾರ ಆದಕೂಡಲೇ ಹರಿಯಾಣದಲ್ಲಿ ಇದು ನಾಲ್ಕನೆಯ ಬಾರಿ (ಹಿಸಾರ್, ಪಂಚಕುಲಾ, ಝಜ್ಜರ್ ಹಾಗೂ ನೂಹ್) ಪೊಲೀಸ್ ನಾಪತ್ತೆಯಾದ ಪ್ರಕ್ರಿಯೆ ಕಂಡುಬಂದಿದೆ. ಈ ಹಿಂಸಾಚಾರದ ನಂತರ ರಾಜ್ಯದ ಇತರ ಪ್ರದೇಶಗಳಲ್ಲಿ ಮುಸಲ್ಮಾನರ ಸುರಕ್ಷತೆಗಾಗಿ ರಾಜ್ಯ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ, ಹಾಗಾಗಿ ಸಾವಿರಾರು ಬಡ ಮುಸಲ್ಮಾನರು ರಾತ್ರೋರಾತ್ರಿ ವಲಸೆ ಹೋಗಬೇಕಾಗಿಬಂತು. ಹಿಂಸಾಚಾರದಲ್ಲಿ ಭಾಗಿಯಾದ ಅಪರಾಧಿಗಳನ್ನು ಪತ್ತೆಹಚ್ಚುವ ಬದಲಿಗೆ ಬೇಕಾಬಿಟ್ಟಿಯಾಗಿ ಜನರನ್ನು ಬಂಧಿಸಲಾಯಿತು ಹಾಗೂ ತದನಂತರ ಕಾನೂನನ್ನು ಬದಿಗಿಟ್ಟು, 200 ರಿಂದ 300ರ ತನಕ ಮನೆ ಮತ್ತು ಅಂಗಡಿಗಳನ್ನು ಅತಿಕ್ರಮಣದ ಹೆಸರಿನಲ್ಲಿ ಕೆಡವಲಾಯಿತು. ಕೊನೆಗೆ ಹೈಕೋರ್ಟ್ ಇದನ್ನು ನಿಲ್ಲಿಸಿತು. ಇವೆಲ್ಲ ಶಾಂತಿ ಸ್ಥಾಪಿಸುವ ಬದಲಿಗೆ ಒಂದು ಪಕ್ಷದಿಂದ ಇನ್ನೊಂದು ಪಕ್ಷದ ಮೇಲೆ ಸೇಡು ತೀರಿಸಿಕೊಳ್ಳುವ ಕ್ರಮದಂತೆ ಕಾಣುತ್ತಿದೆ. ಇಂತಹ ಬೆಂಕಿಯಲ್ಲಿ ಕೇವಲ ಒಂದು ಪಕ್ಷ ಸುಡುವುದಿಲ್ಲ ಎಂದು ಇತಿಹಾಸ ನಮಗೆ ಹೇಳುತ್ತದೆ. ಅನ್ಯಾಯ ಮತ್ತು ದಬ್ಬಾಳಿಕೆ ಎಂದೂ ಶಾಂತಿ ನೆಲೆಸುವಂತೆ ಮಾಡುವುದಿಲ್ಲ, ಅದರಿಂದ ದೀರ್ಘಾವಧಿಯಲ್ಲಿ ಅಸಮಧಾನ, ಪ್ರತ್ಯೇಕತಾವಾದ ಹಾಗೂ ಉಗ್ರವಾದವು ಹುಟ್ಟಿಬೆಳೆಯುತ್ತವೆ.

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...