Homeಮುಖಪುಟಮೋದಿ ಚೀನಾ ಅಧ್ಯಕ್ಷರ ಹಿಂದೆ ಏಕೆ ಓಡುತ್ತಾರೆ?: ಓವೈಸಿ ವಾಗ್ದಾಳಿ

ಮೋದಿ ಚೀನಾ ಅಧ್ಯಕ್ಷರ ಹಿಂದೆ ಏಕೆ ಓಡುತ್ತಾರೆ?: ಓವೈಸಿ ವಾಗ್ದಾಳಿ

- Advertisement -
- Advertisement -

ಲಡಾಖ್ ಗಡಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ನಾಗರಿಕರನ್ನು ಕತ್ತಲಲ್ಲಿಡುತ್ತಿದ್ದಾರೆ ಎಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಶುಕ್ರವಾರ ತೀವು ವಾಗ್ದಾಳಿ ನಡೆಸಿದ್ದಾರೆ.

”ಮೊದಲು ಚೀನಾ ಮಾತನಾಡಲು ಬಯಸಿದೆ ಎನ್ನಲಾಯಿತು. ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕಿ ಜಿನ್‌ಪಿಂಗ್‌ ನಡುವಿನ ಮಾತುಕತೆಯ ನಂತರ ಅಧಿಕೃತವಾಗಿ ವಿದೇಶಾಂಗ ಸಚಿವಾಲಯ ಹೇಳಿಕೆಯನ್ನು ಬಿಡುಗಡೆ ಮಾಡಬೇಕಿತ್ತು. ಚೀನಾದ ವಿದೇಶಾಂಗ ಸಚಿವಾಲಯವು ಪ್ರಧಾನಿ ಮೋದಿ ಮಾತನಾಡಲು ಬಯಸಿದೆ ಎಂದು ಹೇಳಿದೆ. ಆದರೆ ನಂತರ ನಮ್ಮ ವಿದೇಶಾಂಗ ಕಾರ್ಯದರ್ಶಿ ಮತ್ತೇನೋ ಹೇಳಿದರು. ನಾನು ಬಿಜೆಪಿಯನ್ನು ಕೇಳಲು ಬಯಸುತ್ತೇವೆ, ಚೀನಾ ಅಧ್ಯಕ್ಷರ ಹಿಂದೆ ಮಾತನಾಡಲು ಪ್ರಧಾನಿ ಏಕೆ ಓಡುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

”ತಮ್ಮ ಪರಿಹಾರವನ್ನು ಒಪ್ಪಿಕೊಳ್ಳುವಂತೆ ಪುಧಾನಿ ಮೋದಿ ಸರಕಾರ ಸೇನೆಯ ಮೇಲೆ ಒತ್ತಡ ಹೇರಲು ಕಾರಣವೇನು? ಚೀನಾ ಸೈನಿಕರಿಗೆ ಪುರಸ್ಕಾರ ಕೂಡಲು ಇವರೇಕೆ ಬಯಸುತ್ತಾರೆ? ಬಿಜೆಪಿ ಸರಕಾರ ಈ ಬಗ್ಗೆ ಮೌನ ವಹಿಸುತ್ತಿರುವುದೇಕೆ? 2000 ಕಿಮೀ ಚದರ ಪ್ರದೇಶದ ನಷ್ಟದ ಬಗ್ಗೆ ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನವನ್ನು ನಾವು ಒತ್ತಾಯಿಸುತ್ತೇವೆ” ಎಂದರು

”ಪ್ರಧಾನಿಯವರು ಮಾತುಕತೆಗಾಗಿ ಚೀನಾ ಅಧ್ಯಕ್ಷರ ಹಿಂದೆ ಏಕೆ ಓಡುತ್ತಾರೆ? ಲಡಾಖ್ ಗಡಿಯಲ್ಲಿ ಏನಾಗಿದೆ ಎನ್ನುವುದರ ಬಗ್ಗೆ ಪ್ರಧಾನಿಯವರು ದೇಶಕ್ಕೆ ಏಕ ಮಾಹಿತಿ ನೀಡುತ್ತಿಲ್ಲ” ಎಂದು ಒವೈಸಿ ಪ್ರಶ್ನಿಸಿದ್ದಾರೆ.

”ನಮ್ಮ ಸೈನಿಕರು ಎತ್ತರದ ಬೆಟ್ಟಗಳ ನಡುವೆ ಚೀನಿ ಸೈನಿಕರನ್ನು ಕಳೆದ 40 ತಿಂಗಳಿನಿಂದ ಎದುರಿಸುತ್ತಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರ ಚೀನಾದ ಮುಂದೆ ನಡು ಬಗಿಸಿದ್ದರಿಂದ ನಾವು ನಮ್ಮ ಪ್ರದೇಶ ಕಳೆದುಕೊಳ್ಳಬೇಕಾಯಿತು. ಚೀನಾ ವಶಪಡಿಸಿಕೊಂಡಿರುವ 2 ಸಾವಿರ ಚದರ ಕಿ.ಮೀ ಭೂಮಿಯು ಬಿಜೆಪಿಯ ಖಾಸಗಿ ಸ್ವತ್ತಲ್ಲ ಈ ದೇಶದ ನೆಲ ಇದು ನಮ್ಮ ದೇಶದ ಭದ್ರತೆಯ ಅವಿಭಾಜ್ಯ ಅಂಗವಾಗಿದೆ” ಎಂದು ಒವೈಸಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ರೈಲ್ವೇ ಪೊಲೀಸ್‌ ಗುಂಡಿನ ದಾಳಿ ಕುರಿತು ಪತ್ರಕರ್ತೆ ಅಯ್ಯೂಬ್‌, ಓವೈಸಿ ಮಾಡಿದ ಟ್ವೀಟ್‌ಗೆ ಕೇಂದ್ರದ ತಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...