Homeಮುಖಪುಟಕೇರಳ:NCERT ತೆಗೆದು ಹಾಕಿದ್ದ ಗಾಂಧಿ ಹತ್ಯೆ, ಗುಜರಾತ್ ಗಲಭೆ ಕುರಿತ ಕಲಿಕೆಗೆ ಪೂರಕ ಪಠ್ಯ ವಿತರಣೆ

ಕೇರಳ:NCERT ತೆಗೆದು ಹಾಕಿದ್ದ ಗಾಂಧಿ ಹತ್ಯೆ, ಗುಜರಾತ್ ಗಲಭೆ ಕುರಿತ ಕಲಿಕೆಗೆ ಪೂರಕ ಪಠ್ಯ ವಿತರಣೆ

- Advertisement -
- Advertisement -

ಎನ್‌ಸಿಇಆರ್‌ಟಿ(NCERT) ತೆಗೆದು ಹಾಕಿದ್ದ ಗಾಂಧಿ ಹತ್ಯೆ, ಗುಜರಾತ್ ಗಲಭೆ ಕುರಿತು ಕಲಿಕೆಗೆ  ಕೇರಳ ಶಿಕ್ಷಣ ಇಲಾಖೆಯು 11 ಮತ್ತು 12ನೇ ತರಗತಿಗಳಿಗೆ ಪೂರಕ ಪಠ್ಯಪುಸ್ತಕಗಳನ್ನು ವಿತರಿಸುತ್ತದೆ. ಇದರಲ್ಲಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ತನ್ನ ಈ ಹಿಂದೆ ತೆಗೆದುಹಾಕಿದ್ದ ಪಠ್ಯದ ಭಾಗಗಳನ್ನು ಸೇರಿಸಲಾಗಿದೆ.

ಮುಂದಿನ ತಿಂಗಳು ಪೂರಕ ಪಠ್ಯಪುಸ್ತಕಗಳು ಲಭ್ಯವಾಗಲಿವೆ ಎಂದು ಕೇರಳ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಶನಿವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.ಪೂರಕ ಪಠ್ಯಪುಸ್ತಕಗಳಲ್ಲಿ ಎನ್‌ಸಿಇಆರ್‌ಟಿ ಇತಿಹಾಸ ಪಠ್ಯಪುಸ್ತಕಗಳಿಂದ ಅಳಿಸಲಾದ ಮಹಾತ್ಮ ಗಾಂಧಿಯವರ ಹತ್ಯೆ ಮತ್ತು ಗುಜರಾತ್ ಗಲಭೆ ಕುರಿತ  ಭಾಗಗಳನ್ನು ಒಳಗೊಂಡಿರುತ್ತವೆ ಎಂದು ಅವರು ಹೇಳಿದರು.

ಈ ಹಿಂದೆ, ಕೇರಳ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (SCERT) 11 ಮತ್ತು 12 ನೇ ತರಗತಿಗಳ ಪಠ್ಯಪುಸ್ತಕಗಳಿಂದ NCERT ಅಳಿಸಿದ ಭಾಗಗಳನ್ನು ಕಲಿಸಲು ನಿರ್ಧರಿಸಿತ್ತು.ಇದೀಗ  ಪೂರಕ ಪಠ್ಯಪುಸ್ತಕಗಳನ್ನು ಹೊರತರುವ ನಿರ್ಧಾರವನ್ನು SCERT ಪಠ್ಯಕ್ರಮ ಸಮಿತಿಯು ತೆಗೆದುಕೊಂಡಿದೆ.

ಪಠ್ಯಪುಸ್ತಕಗಳಿಂದ ಕೆಲವು ಭಾಗಗಳನ್ನು ತೆಗೆದುಹಾಕುವ NCERT ನಿರ್ಧಾರವನ್ನು ಕೇರಳದ CPI(M) ಸರ್ಕಾರ ತೀವ್ರವಾಗಿ ವಿರೋಧಿಸಿತ್ತು.

ಕೇರಳದಲ್ಲಿ 11 ಮತ್ತು 12 ನೇ ತರಗತಿಗಳಿಗೆ ಮಾತ್ರ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳು ಅವಲಂಬಿಸಿದೆ. ಎನ್‌ಸಿಇಆರ್‌ಟಿ ಮಾಡಿದ ಬದಲಾವಣೆಗಳು 6 ರಿಂದ 10 ನೇ ತರಗತಿಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವುದಿಲ್ಲ.

ಈ ಕುರಿತು ‘ನಾನು ಗೌರಿ’ ಮಾದ್ಯಮದ ಜೊತೆ  ಮಾತನಾಡಿದ ಶಿಕ್ಷಣ ತಜ್ಞರಾದ ನಿರಂಜನಾರಾಧ್ಯ, ಈ ಕುರಿತು ರಾಜ್ಯಗಳಿಗೆ  ಪೂರ್ಣವಾದ ಸ್ವಾತಂತ್ರ್ಯ ಇದೆ. ಕರ್ನಾಟಕದಲ್ಲಿ ಪಠ್ಯ  ಪರಿಷ್ಕರಣೆ ಮಾಡುತ್ತೇವೆ ಎಂದಿದ್ದನ್ನೇ ಈವರೆಗೆ ಪೂರ್ಣ ಮಾಡಿಲ್ಲ.ಕೇಂದ್ರ ಸರಕಾರ ಪ್ರೇಮ್ ವರ್ಕ್ ಕೊಡುತ್ತದೆ. ಅದನ್ನು ಅಳವಡಿಸುವುದು ಆಯಾ  ರಾಜ್ಯ ಸರಕಾರಕ್ಕೆ ಸಂಪೂರ್ಣ ಅಧಿಕಾರ ಇದೆ.ಕೇರಳದಂತೆ ಕರ್ನಾಟಕದಲ್ಲೂ ಇದೇ ರೀತಿ ಮಾಡಬಹುದು. ಪಠ್ಯ  ಪುಸ್ತಕ ಪರಿಶೀಲನೆಗೆ ನೇಮಿತ ಸಮಿತಿಯವರು ಈ ಕುರಿತು ಪರಿಶೀಲನೆ ಮಾಡಿ ಮಾಡಬೇಕಿದೆ ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ಪತನ ಶುರು: ‘ಸೋನ್ ಪಾಪ್ಡಿ’ಯಿಂದ ಮೂವರಿಗೆ ಜೈಲು ಶಿಕ್ಷೆ

0
ಪತಂಜಲಿ ನವರತ್ನ ಎಲೈಚಿ ಸೋನ್ ಪಾಪ್ಡಿ(ಸಾಂಪ್ರದಾಯಿಕ ಸಿಹಿತಿಂಡಿ) ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆ ಉತ್ತರಾಖಂಡದ ನ್ಯಾಯಾಲಯವು ಪತಂಜಲಿ ಆಯರ್ವೇದ ಲಿಮಿಟೆಡ್‍ನ ಸಹಾಯಕ ವ್ಯವಸ್ಥಾಪಕ ಸೇರಿದಂತೆ ಮೂರು ಮಂದಿಗೆ ಆರು ತಿಂಗಳ ಜೈಲು ಶಿಕ್ಷೆ...