Homeಮುಖಪುಟಇಂಗ್ಲೆಡ್‌ನಲ್ಲಿ ಹಿಂದೂ ಪ್ರಧಾನಿ: ಭಾರತದಲ್ಲಿ ‘ಮುಸ್ಲಿಂPM’, ‘ದಲಿತPM' ಚರ್ಚೆ ಮುನ್ನೆಲೆಗೆ

ಇಂಗ್ಲೆಡ್‌ನಲ್ಲಿ ಹಿಂದೂ ಪ್ರಧಾನಿ: ಭಾರತದಲ್ಲಿ ‘ಮುಸ್ಲಿಂPM’, ‘ದಲಿತPM’ ಚರ್ಚೆ ಮುನ್ನೆಲೆಗೆ

- Advertisement -
- Advertisement -

ಯುಕೆಯ ಕನ್ಸರ್‌ವೇಟಿವ್‌ ಪಕ್ಷದಲ್ಲಿ ಭಾರತ ಮೂಲದ ಬ್ರಿಟಿಷ್ ನಾಯಕ ರಿಷಿ ಸುನಕ್ ಪ್ರಧಾನಿಯಾದ ಬಳಿಕ ಭಾರತದಲ್ಲಿ ವಿವಾದಾತ್ಮಕ ಕಾನೂನುಗಳಾದ ಪೌರತ್ವ (ತಿದ್ದುಪಡಿ) ಕಾಯಿದೆ, ಎನ್‌ಆರ್‌ಸಿ ಕುರಿತು ಚರ್ಚೆಯಾಗುತ್ತಿದೆ. ಜೊತೆಗೆ ದಲಿತ ಪಿಎಂ, ಮುಸ್ಲಿಂ ಪಿಎಂ ಚರ್ಚೆ ಮುನ್ನೆಲೆಗೆ ಬಂದಿದೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪ್ರತಿಕ್ರಿಯಿಸಿ, “ಭಾರತೀಯ ಮೂಲದವರು ಯುಕೆ ಪ್ರಧಾನಿಯಾಗಿರುವುದು ಹೆಮ್ಮೆಯ ಕ್ಷಣವಾಗಿದೆ. ಆದರೆ ಭಾರತವು ಎನ್‌ಆರ್‌ಸಿ, ಸಿಎಎಯಂತಹ ವಿಭಜಕ ಮತ್ತು ತಾರತಮ್ಯ ಕಾನೂನುಗಳಿಂದ ಇನ್ನೂ ಸಂಕೋಲೆಯಲ್ಲಿದೆ” ಎಂದಿದ್ದಾರೆ.

ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಟ್ವೀಟ್ ಮಾಡಿ, “ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಅಲ್ಪಸಂಖ್ಯಾತರನ್ನು ಒಪ್ಪಿಕೊಳ್ಳುತ್ತೀರಾ?” ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥರನ್ನು ಪ್ರಶ್ನಿಸಿದ್ದಾರೆ.

ರಿಷಿ ಸುನಕ್‌ ಪ್ರಧಾನಿಯಾದ ಬೆನ್ನಲ್ಲೇ ಭಾರತದಲ್ಲಿ ಸಂಭ್ರಮಾಚರಣೆಗಳು ನಡೆಯುತ್ತಿವೆ. ಇದರ ನಡುವೆ ಗಂಭೀರ ಚರ್ಚೆಗಳು ಶುರುವಾಗಿವೆ. ಭಾರತದಲ್ಲಿ ಇದುವರೆಗೆ ಒಬ್ಬರೇ ಒಬ್ಬರು ಮುಸ್ಲಿಂ ಮತ್ತು ದಲಿತ ವ್ಯಕ್ತಿ ಪ್ರಧಾನಿ ಯಾಕೆ ಆಗಿಲ್ಲ ಎಂದು ಹಲವು ಟ್ವಿಟರ್‌ ಬಳಕೆದಾರರು ಪ್ರಶ್ನಿಸಿದ್ದಾರೆ.

#MuslimPM ಹ್ಯಾಶ್‌ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದ್ದು, ಸದ್ಯ ಸ್ವೀಡನ್‌ನಲ್ಲಿರುವ ಖ್ಯಾತ ಅಂಕಣಕಾರ ಅಶೋಕ್‌ ಸ್ವೈನ್‌, “ಓರ್ವ ಹಿಂದೂ ಇಂಗ್ಲೆಂಡ್‌ ದೇಶದ ಪ್ರಧಾನಿಯಾಗುವುದಾದರೆ ಒಬ್ಬ ಮುಸ್ಲಿಂ ಅಥವಾ ಕ್ರಿಶ್ಚಿಯನ್‌ ಅಥವಾ ದಲಿತರೊಬ್ಬರು ದೇಶದ ಪ್ರಧಾನಿ ಯಾಕಾಗಬಾರದು?” ಎಂದು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟನ್ನು ಸುಮಾರು 45,000ಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದು, 7000ಕ್ಕೂ ಹೆಚ್ಚು ಮಂದಿ ರೀಟ್ವೀಟ್‌ ಮಾಡಿದ್ದಾರೆ.

“ಜಾಸ್ಮಿನ್‌ ಫೆರ್ನಾಂಡೋ ಎಂಬುವವರು ಈ ಕುರಿತು ಟ್ವೀಟ್‌ ಮಾಡಿದ್ದು, ನಾವು ಮುಸ್ಲಿಂ ಪ್ರಧಾನಿಯ ಬೇಡಿಕೆ ಇಡೋದಿಲ್ಲ. ಯಾಕೆಂದರೆ ನಿಮ್ಮ ಮೈಂಡ್‌ ಸೆಟ್‌ ಅದಕ್ಕೆ ಒಪ್ಪಿಗೆ ನೀಡುವುದಿಲ್ಲ. ದಯವಿಟ್ಟು ಭಾರತದಲ್ಲಿ ಅಲ್ಪಸಂಖ್ಯಾತರನ್ನು ನೆಮ್ಮದಿಯಾಗಿ ಬದುಕಲು ಬಿಡಿ. ಭಾರತದಲ್ಲಿ ಒಬ್ಬ ದಲಿತ ಪ್ರಧಾನಿಯೂ ಆಗುವ ಸಾಧ್ಯತೆ ಇಲ್ಲ. ಯಾಕೆಂದರೆ ಹಿಂದೂ ಧಾರ್ಮಿಕ ಪುಸ್ತಕಗಳು ದಲಿತರನ್ನು ಆಡಳಿತಗಾರನ್ನಾಗಿಸಲು ಬಿಡುವುದಿಲ್ಲ” ಎಂದು ಹೇಳಿದ್ದಾರೆ.

ಇಂಗ್ಲೆಂಡ್‌ ನಲ್ಲಿ ಕೇವಲ 1.5% ಹಿಂದೂಗಳಿದ್ದಾರೆ. ಕ್ರಿಶ್ಚಿಯನ್‌ ಮೆಜಾರಿಟಿ ಇರುವ ಆ ದೇಶದಲ್ಲಿ ಒಬ್ಬ ಹಿಂದೂ ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ಮಾಡಲಾಗುತ್ತಿದೆ. ಭಾರತದಲ್ಲಿ ಶೇ.15ರಷ್ಟು ಮಂದಿ ಮುಸ್ಲಿಮರಿದ್ದಾರೆ. ಮುಸ್ಲಿಂ ಪ್ರಧಾನಿಯ ವಿಷಯ ಹಾಗಿರಲಿ, ಲೋಕಸಭೆಯ 543 ಸದಸ್ಯ ಸ್ಥಾನ ಗಳಲ್ಲಿ ಮುಸ್ಲಿಮರ ಸಂಖ್ಯೆ ಕೇವಲ 27. (ಶೇ.5) ಎಂದು ಪತ್ರಕರ್ತ ಸಂದೀಪ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

“ನಮ್ಮ ಭಾರತವು ಮುಸ್ಲಿಂ ಪ್ರಧಾನಿಯನ್ನು ಆಯ್ಕೆ ಮಾಡಬೇಕೇ? ಪ್ರಧಾನಿಯ ಧರ್ಮ ಅಥವಾ ಲಿಂಗವನ್ನು ಲೆಕ್ಕಿಸದೆ ಭಾರತವು ಸಮರ್ಥ ಪ್ರಧಾನಿಯನ್ನು ಆಯ್ಕೆ ಮಾಡಬೇಕಾಗಿದೆ! ನಮ್ಮ ಪ್ರಧಾನಿ ಹಿಂದೂ, ಮುಸ್ಲಿಂ, ಜೈನ, ನಾಸ್ತಿಕ, ಉಭಯಲಿಂಗಿ, ಸಲಿಂಗಿ, ಅಲೈಂಗಿಕ, ಪುರುಷ, ಮಹಿಳೆ, ಟ್ಯಾನ್ಸ್ಜೆಂಡರ್ ಆಗಿದ್ದರೂ ಪರವಾಗಿಲ್ಲ ನಮ್ಮ ಭಾರತೀಯ ಪ್ರಧಾನಿಗೆ ದೂರದೃಷ್ಟಿ ಇರಬೇಕು” ಎಂದು ರಾಜಕೀಯ ವಿಶ್ಲೇಷಕ ತಹಸೀನ್‌ ಪೂನಾವಾಲ್ಲಾ ಅಭಿಪ್ರಾಯಪಟ್ಟಿದ್ದಾರೆ.

“ಮುಸ್ಲಿಂ ಪ್ರಧಾನಿ ಆಯ್ಕೆ ವಿಚಾರ ಅಪ್ರಸ್ತುತವಾಗಿದೆ. ಏಕೆಂದರೆ ನಮ್ಮ ಭಾರತವು ಸಂಸದೀಯ ಪ್ರಜಾಪ್ರಭುತ್ವವನ್ನು ಹೊಂದಿದೆ ಹೊರತು ಅಧ್ಯಕ್ಷೀಯ ಮಾದರಿಯಲ್ಲ. ಜನರು ರಾಜಕೀಯ ಪಕ್ಷವನ್ನು ಆಯ್ಕೆ ಮಾಡುತ್ತಾರೆ. ಅದರ ಸಂಸದರು ನಂತರ ಪ್ರಧಾನಿಯನ್ನು ಆಯ್ಕೆ ಮಾಡುತ್ತಾರೆ. ಯಾರಿಗಾದರೂ ಬಹುಪಾಲು ಸಂಸದರ ಬೆಂಬಲವಿದ್ದರೆ, ಪ್ರಧಾನಿಯಾಗಲು ಯಾವುದೇ ಸಾಂವಿಧಾನಿಕ ಅಡ್ಡಿಯಿಲ್ಲ! ಉದಾ: ಡಾ ಎಂಎಂಎಸ್!” ಎಂದು ಮತ್ತೊಂದು ಟ್ವೀಟ್‌ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...