Homeಮುಖಪುಟಹಿಂದೂ ಸಮಾಜ ಸಾವಿರ ವರ್ಷಗಳಿಂದ ಯುದ್ಧ ನಡೆಸುತ್ತಿದೆ: ಮೋಹನ್ ಭಾಗವತ್

ಹಿಂದೂ ಸಮಾಜ ಸಾವಿರ ವರ್ಷಗಳಿಂದ ಯುದ್ಧ ನಡೆಸುತ್ತಿದೆ: ಮೋಹನ್ ಭಾಗವತ್

- Advertisement -
- Advertisement -

“ಹಿಂದೂ ಸಮಾಜವು 1000 ವರ್ಷಗಳಿಂದ ಯುದ್ಧ ನಡೆಸುತ್ತಿದೆ. ಈ ಹೋರಾಟವು ವಿದೇಶಿ ಆಕ್ರಮಣ, ವಿದೇಶಿ ಪ್ರಭಾವ ಮತ್ತು ವಿದೇಶಿ ಪಿತೂರಿಗಳ ವಿರುದ್ಧವಿದೆ. ಈ ಕಾರಣಕ್ಕೆ ಸಂಘವು ತನ್ನ ಬೆಂಬಲವನ್ನು ನೀಡಿದೆ. ಅದರ ಬಗ್ಗೆ ಮಾತನಾಡುವ ಅನೇಕರು ಇದ್ದಾರೆ. ಇವೆಲ್ಲವುಗಳಿಂದಾಗಿ ಹಿಂದೂ ಸಮಾಜವು ಜಾಗೃತಗೊಂಡಿದೆ. ಯುದ್ಧದಲ್ಲಿರುವ ಜನರು ಆಕ್ರಮಣಕಾರಿಯಾಗಿರುವುದು ಸಹಜ” ಎಂದು ಆರ್‌ಎಸ್‌ಎಸ್ ಸರಸಂಚಾಲಕ ಮೋಹನ್ ಭಾಗವತ್‌ ಹೇಳಿದ್ದಾರೆ.

ಆರ್‌ಎಸ್‌ಎಸ್‌ ಮುಖವಾಣಿ ‘ಆರ್ಗನೈಸರ್‌’ ನಡೆಸಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ಭಗವದ್ಗೀತೆಯನ್ನು ಉಲ್ಲೇಖಿಸಿ ಮಾತನಾಡಿದ್ದಾರೆ. “(ಭಗವದ್ಗೀತೆಯಲ್ಲಿ) ಹೇಳಿರುವಂತೆ ಆಲಸ್ಯವಿಲ್ಲದೆ ಹೋರಾಡಬೇಕು. ಈ ಸೂತ್ರವನ್ನು ಎಲ್ಲರೂ ಅನುಸರಿಸಲು ಸಾಧ್ಯವಿಲ್ಲ. ಆದರೆ, ಸಂಘದ ಮೂಲಕ ಸಾಮಾಜಿಕ ಜಾಗೃತಿಯ ಕಾರ್ಯವನ್ನು ಕೈಗೆತ್ತಿಕೊಂಡವರಿದ್ದಾರೆ. ಸಾಮಾಜಿಕ ಜಾಗೃತಿಯ ಈ ಸಂಪ್ರದಾಯವು ಸಾಕಷ್ಟು ಹಳೆಯದು. ಮೊದಲ ಆಕ್ರಮಣಕಾರನಾದ ಅಲೆಕ್ಸಾಂಡರ್ ನಮ್ಮ ಗಡಿಯನ್ನು ತಲುಪಿದ ದಿನದಂದು ಇದು ಪ್ರಾರಂಭವಾಯಿತು” ಎಂದು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಇದು ಯುದ್ಧವಾಗಿರುವುದರಿಂದ, ಜನರು ಅತಿಯಾದ ಉತ್ಸಾಹಿತರಾಗುವ ಸಾಧ್ಯತೆಯಿದೆ” ಎಂದು ಅವರು ಹೇಳಿದ್ದಾರೆ.

ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿಅಂಶಗಳನ್ನು ಉಲ್ಲೇಖಿಸಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಕಳೆದ ತಿಂಗಳು ಸಂಸತ್ತಿಗೆ ಮಾತನಾಡುತ್ತಾ, “2017 ಮತ್ತು 2021ರ ನಡುವೆ ಭಾರತದಲ್ಲಿ 2,900ಕ್ಕೂ ಹೆಚ್ಚು ಕೋಮು ಅಥವಾ ಧಾರ್ಮಿಕ ಗಲಭೆ ಪ್ರಕರಣಗಳು ದಾಖಲಾಗಿವೆ. 2021ರಲ್ಲಿ 378 ಕೋಮುಗಲಭೆ ಪ್ರಕರಣಗಳು ದಾಖಲಾಗಿವೆ, 2020ರಲ್ಲಿ 857, 2019ರಲ್ಲಿ 438, 2018ರಲ್ಲಿ 512 ಮತ್ತು 2017ರಲ್ಲಿ 723 ಘಟನೆಗಳಾಗಿವೆ” ಎಂದು ವಿವರಿಸಿದ್ದರು.

ಇದನ್ನೂ ಓದಿರಿ: ಮುಸ್ಲಿಮರನ್ನು ಭಯೋತ್ಪಾದಕರಂತೆ ಚಿತ್ರಿಸಿದ ಕಲಾ ತಂಡ ಬ್ಯಾನ್ : ಕೇರಳ ಸರ್ಕಾರ ನಿರ್ಧಾರ

ಹಿಂದುತ್ವ ಸಿದ್ಧಾಂತ ಪ್ರತಿಪಾದಿಸುವ ‘ಒಳಗಿನ ಶತ್ರು’ ಕುರಿತು ಭಾಗವತ್ ಮಾತನಾಡುತ್ತಾ, “ಈ ಯುದ್ಧವು ಹೊರಗಿನ ಶತ್ರುಗಳ ವಿರುದ್ಧ ಅಲ್ಲ, ಆದರೆ ಒಳಗಿನ ಶತ್ರುವಿನ ವಿರುದ್ಧ. ಹಾಗಾಗಿ ಹಿಂದೂ ಸಮಾಜ, ಹಿಂದೂ ಧರ್ಮ ಮತ್ತು ಹಿಂದೂ ಸಂಸ್ಕೃತಿಯನ್ನು ರಕ್ಷಿಸಲು ಯುದ್ಧ ನಡೆಯುತ್ತಿದೆ. ವಿದೇಶಿ ಆಕ್ರಮಣಕಾರರು ಇನ್ನು ಮುಂದೆ ಇರುವುದಿಲ್ಲ, ಆದರೆ ವಿದೇಶಿ ಪ್ರಭಾವ ಮತ್ತು ವಿದೇಶಿ ಪಿತೂರಿಗಳು ಮುಂದುವರೆಯುತ್ತವೆ” ಎಂದಿದ್ದಾರೆ.

“ನಾವು ಸಾಕಷ್ಟು ಶಕ್ತಿಯನ್ನು ಪಡೆದಾಗ, ಭವಿಷ್ಯದ ಆದ್ಯತೆಗಳ ಬಗ್ಗೆ ಸ್ಪಷ್ಟವಾಗಿರಬೇಕು. ಹೋರಾಟದ ಕ್ರಮದಲ್ಲಿ ಶಾಶ್ವತವಾಗಿ ಉಳಿಯುವುದು ನಮಗೆ ಯಾವುದೇ ಒಳ್ಳೆಯದನ್ನು ಮಾಡುವುದಿಲ್ಲ. ರಾಷ್ಟ್ರೀಯ ಜೀವನದಲ್ಲಿ ಇದು ಈ ರೀತಿ ನಡೆಯುವುದಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಒಳಗಿನ ಶತ್ರುಗಳು ಅಂದರೆ ಪುರೋಹಿತರನ್ನ ಬಿಟ್ಟು ಉಳಿದ ಶೂದ್ರ ,ದಲಿತ ಸಮುದಾದವರೆ ಭಾಗವತರೆ? ಅಂದರೆ ನಿಮ್ಮ ಅರ್ಥಕೋಶದ ಪ್ರಕಾರ ಹಿಂದುತ್ವ ಅಂದರೆ ಬ್ರಾಹ್ಮಣರು ಶ್ರೇಷ್ಠರು ಉಳಿದ ಶೂದ್ರ ಮತ್ತು ದಲಿತ ಸಮುದಾಯಗಳು ಕನಿಷ್ಟವೆ,? ಅಂದರೆ ನಿನ್ನ ಪ್ರಕಾರ ಈ ಅಸಮಾನತೆ,ಹೀನ ಕೃತ್ಯಗಳನ್ನು ಪ್ರಶ್ನೆ ಮಾಡಿದ ಶೂದ್ರ ದಲಿತರೆಲ್ಲಾ ಹಿಂದುತ್ವದ ಒಳ ಶತ್ರುಗಳು ಅಲ್ವಾ ,ಇನ್ನೂ ಎಷ್ಟು ಹೀನಾತಿಹೀನವಾಗಿದೆ ನಿಮ್ಮ ಪುರೋಹಿತರ ಮಾನಸಿಕ ಸ್ಥಿತಿ, ನಿಜವಾಗಿಯೂ ನಿಮಗೆ ಹಿಂದುತ್ವವನ್ನ ಉಳಿಸಲೇ ಬೇಕು ಅನ್ನೋ ನಿಜವಾದ ಆಸಕ್ತಿ ಇದ್ದರೆ. ಎಲ್ಲಾ ಶೂದ್ರ,ದಲಿತ ಸಮುದಾಯಗಳನ್ನ ನಿಮ್ಮ ಪುರೋಹಿತ ಸಮುದಾಯಕ್ಕೆ ಸೇರಿಸಿ,ಬಸವಣ್ಣನವರು ಮಾಡಿದ ಕ್ರಾಂತಿಯನ್ನ ಮಾಡಲು ಸಾಧ್ಯವೇ? ಇಲ್ಲವಾದರೆ ನೀವೆಲ್ಲಾ ಭುಟಾಟಿಕೆ ದಾಸರು.

  2. ಯುದ್ಧ, ಯುದ್ಧ, ಯುದ್ಧ,
    ಪ್ರಪಂಚ ಸಾಕಷ್ಟು ಯುದ್ಧಗಳನ್ನು ಕಂಡಿದೆ ಅದರ ಪರಿಣಾಮಗಳ ಅರಿವು ಇಂದಿನ ನಾಗರೀಕ ಜಗತ್ತಿಗೆ ಇದೆ. ಯುದ್ಧಗಳಲ್ಲಿ ಮಡಿದ ಶವಗಳನ್ನು ಹೊತ್ತ ಹೆಚ್ಚಿನ ವಾಹನಗಳು ಹೋಗಿ ನಿಲ್ಲುವುದು ಯಾವುದೋ ಹಳ್ಳಿಯಲ್ಲಿನ ಬಡ ಕುಟುಂಬದ ಮನೆ ಬಾಗಿಲಲ್ಲಿ ” ಎಂಬ ಸತ್ಯ ಭದ್ರತಾ ಪಡೆಗಳಿಂದ ಸುತ್ತುವರೆದ ಹವಾನಿಯಂತ್ರಿತ ಕೊಠಡಿಗಳಲ್ಲಿ ಮೈಕ್ ಹಿಡಿದುಕೊಂಡು ವೀರಾವೇಶದ ಭಾಷಣ ಬಿಗಿಯುವ ಉತ್ತರ ಕುಮಾರರಿಗೆ ಗೊತ್ತಿರಲಿ.

  3. *हिन्दू और मुसलमान*. दोनो सुनें , थोडा धीरज से और थोडा ध्यान से पढ़े ?
    ** 250 वर्ष का इतिहास खंगालने पर पता चलता है , कि आधुनिक विश्व मतलब 1800 के बाद , जो दुनिया मे तरक़्क़ी हुई , उसमें पश्चिमी मुल्को यानी सिर्फ *यहूदी और ईसाई* लोगो का ही हाथ है ! *हिन्दू और मुस्लिम* का इस विकास मे 1% का भी योगदान नही है !
    ** आप देखिये के 1800 से लेकर 1940 तक *हिंदू और मुसलमान* सिर्फ बादशाहत या गद्दी के लिये लड़ते रहे !
    अगर आप दुनिया के *100 बड़े वैज्ञानिको* के नाम लिखें , तो बस *एक या दो नाम हिन्दू और मुसलमान* के मिलेंगे !
    ** पूरी दुनिया मे *61 इस्लामी मुल्क* है , जिनकी जनसंख्या *1.50 अरब* के करीब है और कुल *435 यूनिवर्सिटी* है !
    दूसरी तरफ *हिन्दू की जनसंख्या 1.26 अरब* के क़रीब है और *385 यूनिवर्सिटी* है !
    जबकि *अमेरिका* मे 3 हज़ार से अधिक और *जापान* मे 900 से अधिक *यूनिवर्सिटी* है !
    *ईसाई* दुनिया के *45% नौजवान यूनिवर्सिटी* तक पहुंचते हैं ! वहीं *मुसलमान नौजवान 2%* और *हिन्दू नौजवान 8 %* तक *यूनिवर्सिटी* तक पहुंचते हैं !
    दुनिया के *200 बड़ी यूनिवर्सिटी* मे से *54 अमेरिका , 24 इंग्लेंड , 17 ऑस्ट्रेलिया , 10 चीन , 10 जापान , 10 हॉलॅंड , 9 फ़्राँस , 8 जर्मनी , 2 भारत और 1 इस्लामी मुल्क* में हैं !
    ** अब हम आर्थिक रूप से देखते है !
    *अमेरिका* का *जी. डी. पी 14.9 ट्रिलियन डॉलर* है !
    जबकि पूरे *इस्लामिक मुल्क* का कुल *जी. डी. पी 3.5 ट्रिलियन डॉलर* है ! वहीं *भारत का 1.87 ट्रिलियन डॉलर* है !
    दुनिया मे इस समय *38,000 मल्टिनॅशनल कम्पनियाँ* हैं ! इनमे से *32000 कम्पनियाँ* सिर्फ *अमेरिका* और *युरोप* में हैं !
    अब तक दुनिया के *15,000 बड़े अविष्कारों* मे *6103 अविष्कार* अकेले *अमेरिका* में और *8410 अविष्कार ईसाइयों या यहूदियों* ने किये हैं !
    दुनिया के *50 अमीरो* में *20 अमेरिका* , *5 इंग्लेंड* , *3 चीन* , *2 मक्सिको* , *2 भारत* और *1 अरब मुल्क* से हैं !
    ** अब आपको बताते है , कि हम *हिन्दू और मुसलमान जनहित , परोपकार या समाज सेवा* मे भी *ईसाईयों और यहूदियों से पीछे* हैं ! *रेडक्रॉस दुनिया* का सब से *बड़ा मानवीय संगठन* है , इस के बारे मे बताने की जरूरत नहीं है !
    ** बिल गेट्स ने *10 बिलियन डॉलर* से *बिल- मिलिंडा गेट्स फाउंडेशन* की बुनियाद रखी , जो कि पूरे *विश्व के 8 करोड़ बच्चो* की सेहत का ख्याल रखती है !
    जबकि हम जानते है , कि भारत में कई अरबपति हैं !
    *मुकेश अंबानी* अपना घर बनाने मे 4000 करोड़ खर्च कर सकते हैं और *अरब का अमीर शहज़ादा* अपने स्पेशल जहाज पर 500 मिलियन डॉलर खर्च कर सकते हैं ! मगर *मानवीय सहायता* के लिये दोनों ही आगे नही आ सकते हैं !
    ** यह भी जान लीजिये की *ओलंपिक खेलों* में *अमेरिका* ही सब से *अधिक गोल्ड* जीतता है , हम खेलो में भी आगे नहीं !
    ** *हम अपने अतीत पर गर्व तो कर सकते हे , किन्तु व्यवहार से स्वार्थी ही है ! आपस में लड़ने पर अधिक विश्वास रखते हैं !*
    ** *मानसिक रूप में आज भी हम विदेशी व्यक्ति से अधिक प्रवाभित हैं ! अपनी संस्कृति को छोड़ कर , विदेशी संस्कृति अधिक अपनाते हैं !*
    *” बस हर हर महादेव और अल्लाह हो , अकबर के नारे लगाने मे , हम सबसे आगे हैं ! अब जरा सोचिये , कि हमें किस तरफ अधिक ध्यान देने की जरुरत है ! क्यों ना हम भी दुनिया में मजबूत स्थान और भागीदारी पाने के लिए प्रयास करें , बजाय विवाद उत्पन्न करने के और हर समय हिन्दु – मुस्लिम करने के , खुद कि और देश की ऊन्नती पे ध्यान दे !
    समय देने के लिए , *धन्यवाद*,प्राप्त किया,पढ़ा, भेजा ।

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...