Homeಕರ್ನಾಟಕಜ.17ರಿಂದ ಲಾರಿ ಚಾಲಕರ ಅನಿರ್ದಿಷ್ಟಾವಧಿ ಮುಷ್ಕರ

ಜ.17ರಿಂದ ಲಾರಿ ಚಾಲಕರ ಅನಿರ್ದಿಷ್ಟಾವಧಿ ಮುಷ್ಕರ

- Advertisement -
- Advertisement -

ಹೊಸ ಕ್ರಿಮಿನಲ್ ಕಾನೂನು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳಿಗೆ ಕಠಿಣ ಜೈಲು ಮತ್ತು ದಂಡದ ನಿಯಮಗಳನ್ನು ವಿರೋಧಿಸಿ ಕರ್ನಾಟಕ ಲಾರಿ ಮಾಲೀಕರ ಸಂಘ ಜನವರಿ 17ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ. ನವೀನ್ ರೆಡ್ಡಿ, “ಕೇಂದ್ರ ಸರ್ಕಾರ ಕಾನೂನು ತಜ್ಞರು, ಸಾರಿಗೆ ವಲಯದ ಪ್ರತಿನಿಧಿಗಳೊಂದಿಗೆ ಯಾವುದೇ ರೀತಿಯ ಸಮಾಲೋಚನೆ ನಡೆಸದೆ ಈ ಕಾನೂನು ಜಾರಿಗೊಳಿಸಲು ಮುಂದಾಗಿದೆ. ಹೊರ ರಾಜ್ಯಗಳಲ್ಲಿ ಅಪಘಾತ ಸಂಭವಿಸಿದಾಗ ಚಾಲಕರ ಡ್ರೈವಿಂಗ್ ಲೈಸೆನ್ಸ್ ವಶಪಡಿಸಿಕೊಳ್ಳಲಾಗುತ್ತದೆ. ಲಾರಿ ಚಾಲಕರಿಗೆ ಜಾಮೀನು ನೀಡಲು ಸ್ಥಳೀಯ ಭದ್ರತೆ ಕೇಳುವ ಅಂಶವನ್ನು ಈ ಕಾನೂನಿನಿಂದ ಕೈಬಿಡಬೇಕು” ಎಂದರು.

ಅಪಘಾತಗಳ ಸಂದರ್ಭದಲ್ಲಿ ವಶಪಡಿಸಿಕೊಳ್ಳುವ ಟ್ರಕ್‌ಗಳನ್ನು ಬಿಡುಗಡೆ ಮಾಡುವುದು ಮತ್ತು ಅನಗತ್ಯ ಸಂಚಾರ ದಟ್ಟಣೆಯ ಆಧಾರದ ಮೇಲೆ ವಿಧಿಸುವ ದಂಡವನ್ನು ಕಡಿತಗೊಳಿಸುವುದು ನಮ್ಮ ಇತರ ಬೇಡಿಕೆಗಳು. ಹಿಟ್ ಅಂಡ್ ರನ್ ಪ್ರಕರಣಗಳಿಗೆ ಭಾರೀ ದಂಡ ಮತ್ತು 10 ವರ್ಷ ಜೈಲು ಶಿಕ್ಷೆ ವಿಧಿಸುವ ಹೊಸ ಪ್ರಸ್ತಾವನೆಯಿಂದ ದೇಶಾದ್ಯಂತ ಚಾಲಕರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.

ದೇಶದ ಸಾರಿಗೆ ವಲಯ ಶೇ.27ರಷ್ಟು ಚಾಲಕರ ಕೊರತೆ ಎದುರಿಸುತ್ತಿದೆ. ಹೊಸ ಕಾನೂನಿಂದ ಹೊಸಬರು ಚಾಲಕ ವೃತ್ತಿಗೆ ಬರಲು ಹೆದರುವಂತಾಗಿದೆ. ಅಪಘಾತ ಸಂಭವಿಸಿದಾಗ ದೊಡ್ಡ ವಾಹನಗಳದ್ದೇ ತಪ್ಪು ಎಂದು ಹೇಳುವ ಪರಿಪಾಠ ನಮ್ಮಲ್ಲಿ ಚಾಲ್ತಿಯಲ್ಲಿದೆ ಎಂದು ನವೀನ್ ರೆಡ್ಡಿ ಅಸಮಧಾನ ವ್ಯಕ್ತಪಡಿಸಿದರು.

ಹಿಟ್ ಅಂಡ್ ರನ್ ಪ್ರಕರಣಗಳ ಶಿಕ್ಷೆ ಪ್ರಮಾಣ ವಿರೋಧಿಸಿ ಜನವರಿ 1ರಂದು ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ (ಎಐಎಂಟಿಸಿ) ನೇತೃತ್ವದಲ್ಲಿ ಲಾರಿ ಚಾಲಕರು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದರು. ಜನವರಿ 2ರಂದು ನವದೆಹಲಿಯಲ್ಲಿ ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿ ಅಜಯ್ ಭಲ್ಲಾ ಅವರೊಂದಿಗಿನ ಸಭೆಯ ನಂತರ ಮುಷ್ಕರ ಹಿಂಪಡೆಯಲಾಗಿತ್ತು.

“ಹೊಸ ಕಾನೂನುಗಳು ಇನ್ನೂ ಜಾರಿಗೆ ಬಂದಿಲ್ಲ. ಎಐಎಂಟಿಸಿಯೊಂದಿಗೆ ಸಮಾಲೋಚನೆ ನಡೆಸಿದ ನಂತರವೇ ಜಾರಿಗೆ ತರಲಾಗುವುದು ಎಂದು ಕೇಂದ್ರ ಸರ್ಕಾರದ ಪರವಾಗಿ ಅಜಯ್‌ ಭಲ್ಲಾ ಭರವಸೆ ನೀಡಿದ್ದರು. ಆದರೆ, ಇದೀಗ ಕೇಂದ್ರ ಸರ್ಕಾರ ಯಾರೊಂದಿಗೂ ಸಮಾಲೋಚನೆ ನಡೆಸದೆ ಕಾನೂನು ಜಾರಿಗೆ ಮುಂದಾಗಿದೆ. ಹಾಗಾಗಿ ಜನವರಿ 17ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ” ಎಂದು ನವೀನ್‌ ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ: ಮುಖ್ಯಮಂತ್ರಿ ಜೊತೆಗಿನ ಸಭೆ ಯಶಸ್ವಿ: ಮುಷ್ಕರ ಕೈಬಿಟ್ಟ ಅತಿಥಿ ಉಪನ್ಯಾಸಕರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...