Homeಮುಖಪುಟ8 ರಾಜ್ಯಗಳಿಗೆ ಚುನಾವಣಾ ಸಮಿತಿಗಳನ್ನು ನೇಮಿಸಿದ ಕಾಂಗ್ರೆಸ್‌

8 ರಾಜ್ಯಗಳಿಗೆ ಚುನಾವಣಾ ಸಮಿತಿಗಳನ್ನು ನೇಮಿಸಿದ ಕಾಂಗ್ರೆಸ್‌

- Advertisement -
- Advertisement -

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ ಪಕ್ಷವು, ರಾಜಸ್ಥಾನ, ಮಧ್ಯಪ್ರದೇಶ, ಕೇರಳ, ಛತ್ತೀಸ್‌ಗಢ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ 8 ರಾಜ್ಯಗಳಿಗೆ ಕಾಂಗ್ರೆಸ್ ಚುನಾವಣಾ ಸಮಿತಿಗಳನ್ನು ರಚಿಸಿದೆ.

ರಾಜಸ್ಥಾನ, ಕೇರಳ, ತೆಲಂಗಾಣ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ ಮತ್ತು ತ್ರಿಪುರಾ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಚುನಾವಣಾ ಸಮಿತಿಗಳನ್ನು ರಚಿಸಿದ್ದು, ಇದಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅನುಮೋದಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದೆ.

ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ ಸಮಿತಿ ಮುಖ್ಯಸ್ಥರಾದ ಗೋವಿಂದ್ ಸಿಂಗ್ ದೋತಸ್ರಾ ಅವರನ್ನು ರಾಜಸ್ಥಾನ ಪ್ರದೇಶ ಚುನಾವಣಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸಮಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌, ಮಹೇಂದ್ರಜೀತ್ ಸಿಂಗ್ ಮಾಳವೀಯ, ಮೋಹನ್ ಪ್ರಕಾಶ್, ಸಿ ಪಿ ಜೋಶಿ, ಹರೀಶ್ ಚೌಧರಿ, ರಾಮಲಾಲ್ ಜಾಟ್, ಪ್ರಮೋದ್ ಜೈನ್ ಭಯ, ಪ್ರತಾಪ್ ಸಿಂಗ್ ಖಚರಿಯಾವಾಸ್, ಮಮತಾ ಭೂಪೇಶ್, ಭಜನ್ ಲಾಲ್ ಜಾತವ್, ಮುರಾರಿ ಲಾಲ್ ಮೀನಾ, ಅಶೋಕ್ ಚಂದನಾ, ನೀರಜ್ ಡಾಂಗಿ, ಜುಬೇರ್ ಖಾನ್, ಧೀರಜ್ ಶರ್ಜಾರ್, ರೋಹಿತ್ ಬೋಹ್ರಾ, ಇಂದ್ರ ಮೀನಾ, ಡುಂಗರ್ ರಾಮ್ ಗೆದರ್, ಶಿಮ್ಲಾ ದೇವಿ ನಾಯಕ್ ಮತ್ತು ಲಲಿತ್ ಯಾದವ್ ಅವರು ಸದಸ್ಯರಾಗಿದ್ದಾರೆ. ಇದಲ್ಲದೆ ಯುವ ಕಾಂಗ್ರೆಸ್ ಅಧ್ಯಕ್ಷರು, ಎನ್‌ಎಸ್‌ಯುಐ ಅಧ್ಯಕ್ಷರು, ಸೇವಾದಳದ ಮುಖ್ಯ ಸಂಘಟಕರು ಮತ್ತು ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಸಮಿತಿಯ ಸದಸ್ಯರಾಗಿರಲಿದ್ದಾರೆ.

ಕೆ ಸುಧಾಕರ್ ಅವರನ್ನು ಕೇರಳ ಪ್ರದೇಶ ಚುನಾವಣಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಕೇರಳ ಪ್ರದೇಶ ಕಾಂಗ್ರೆಸ್‌ ಚುನಾವಣಾ ಸಮಿತಿಯ ಸಮಿತಿಯಲ್ಲಿ ಎ ಕೆ ಆಂಟನಿ, ಕೆ ಸಿ ವೇಣುಗೋಪಾಲ್, ರಮೇಶ್ ಚೆನ್ನಿತ್ತಲ, ವಯಲಾರ್ ರವಿ, ವಿ ಡಿ ಸತೀಶನ್, ಕೆ ಸುರೇಶ್, ಶಶಿ ತರೂರ್, ಮತ್ತು ಮುಲ್ಲಪಲ್ಲಿ ರಾಮಚಂದ್ರನ್ ಸೇರಿದಂತೆ ಹಿರಿಯ ನಾಯಕರು ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ.

ತೆಲಂಗಾಣದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಚುನಾವಣಾ ಸಮಿತಿಯ ಅಧ್ಯಕ್ಷರಾಗಿ ನೇಮಿಸಲಾಗಿದೆ. ಸಮಿತಿಯಲ್ಲಿ ಉಪಮುಖ್ಯಮಂತ್ರಿ ಭಟ್ಟಿವಿಕ್ರಮಾರ್ಕ ಮಲ್ಲು, ಉತ್ತಮ್ ಕುಮಾರ್ ರೆಡ್ಡಿ ಮತ್ತು ವಿ ಹನುಮಂತ ರಾವ್ ಅವರು ಕೂಡ ಸದಸ್ಯರಾಗಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷೆ ಪ್ರತಿಭಾ ಸಿಂಗ್ ಅವರನ್ನು ಚುನಾವಣಾ ಸಮಿತಿ ಮುಖ್ಯಸ್ಥರಾಗಿ ನೇಮಿಸಲಾಗಿದೆ. ಸಮಿತಿಯಲ್ಲಿ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಉಪ ಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ, ಆನಂದ್ ಶರ್ಮಾ, ವಿಪ್ಲೋವ್ ಠಾಕೂರ್, ಆಶಾ ಕುಮಾರಿ, ರಾಮ್ ಲಾಲ್ ಠಾಕೂರ್, ಠಾಕೂರ್ ಕೌಲ್ ಮುಂತಾದ ಹಿರಿಯ ನಾಯಕರಿದ್ದಾರೆ.

ಜಿತು ಪಟ್ವಾರಿ ಅವರನ್ನು ಮಧ್ಯಪ್ರದೇಶದ ಪ್ರದೇಶ ಚುನಾವಣಾ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಸಮಿತಿಯಲ್ಲಿ ದಿಗ್ವಿಜಯ ಸಿಂಗ್, ವಿವೇಕ್ ಟಂಖಾ, ಸುರೇಶ್ ಪಚೌರಿ, ಕಾಂತಿಲಾಲ್ ಭೂರಿಯಾ ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಸೇರಿದ್ದಾರೆ. ಇದಲ್ಲದೆ ಮಧ್ಯಪ್ರದೇಶಕ್ಕೆ ರಾಜಕೀಯ ವ್ಯವಹಾರಗಳ ಸಮಿತಿಯನ್ನು ಕೂಡ ನೇಮಕ ಮಾಡಲಾಗಿದೆ.

ಛತ್ತೀಸ್‌ಗಢದ ಪ್ರದೇಶ ಕಾಂಗ್ರೆಸ್‌ ಸಮಿತಿಯ ಮುಖ್ಯಸ್ಥ ದೀಪಕ್ ಬೈಜ್ ಅವರನ್ನು ಛತ್ತೀಸ್‌ಗಢದ ಪ್ರದೇಶ ಚುನಾವಣಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸಮಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಟಿಎಸ್ ಸಿಂಗ್ ದೇವ್ ಅವರು ಸದಸ್ಯತ್ವವನ್ನು ಹೊಂದಿದ್ದಾರೆ.

ಮಣಿಪುರದಲ್ಲಿ ಕೆ ಮೇಘಚಂದ್ರ ಸಿಂಗ್ ಅವರನ್ನು ಪ್ರದೇಶ ಚುನಾವಣಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸಮಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಇಬೋಬಿ ಸಿಂಗ್ ಮತ್ತು ಮಾಜಿ ಉಪಮುಖ್ಯಮಂತ್ರಿ ಗೈಖಾಂಗಮ್  ಅವರು ಸದಸ್ಯರಾಗಿರಲಿದ್ದಾರೆ.

ಎಸ್ ಸುಪೊಂಗ್ಮೆರೆನ್ ಜಮೀರ್ ಅವರನ್ನು ನಾಗಾಲ್ಯಾಂಡ್ ಪ್ರದೇಶ ಚುನಾವಣಾ ಸಮಿತಿಯ ಅಧ್ಯಕ್ಷರನ್ನಾಗಿ ಮತ್ತು ಆಶಿಶ್ ಕುಮಾರ್ ಸಾಹಾ ಅವರನ್ನು ತ್ರಿಪುರ ಪ್ರದೇಶ ಚುನಾವಣಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಇದನ್ನು ಓದಿ: ‘ಜೈಲಿನಲ್ಲಿ ಸತ್ತರೆ ಒಳ್ಳೆಯದು’: ಕೋರ್ಟ್‌ನಲ್ಲಿ ಕಣ್ಣೀರಿಟ್ಟ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್‌ ಗೋಯಲ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...