Homeಮುಖಪುಟಹನಿಮೂನ್ ಹತ್ಯೆ: ಮೇಘಾಲಯ ಜನರ ಕುರಿತು ಮಾಧ್ಯಮಗಳಿಂದ ಅಪಪ್ರಚಾರ; ಕ್ಷಮೆಗೆ ಒತ್ತಾಯಿಸಿ ರ‍್ಯಾಲಿ

ಹನಿಮೂನ್ ಹತ್ಯೆ: ಮೇಘಾಲಯ ಜನರ ಕುರಿತು ಮಾಧ್ಯಮಗಳಿಂದ ಅಪಪ್ರಚಾರ; ಕ್ಷಮೆಗೆ ಒತ್ತಾಯಿಸಿ ರ‍್ಯಾಲಿ

- Advertisement -
- Advertisement -

ಉದ್ಯಮಿ ಪತ್ನಿ ಮತ್ತು ಇತರ ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು

ಗುವಾಹಟಿ: ತಮ್ಮ ಪಟ್ಟಣ ಮತ್ತು ಮೇಘಾಲಯವನ್ನು ಅಪರಾಧ ಚಟುವಟಿಕೆಗಳಿಂದ ತುಂಬಿರುವ ಮತ್ತು ಪ್ರವಾಸಿಗರಿಗೆ ಅಸುರಕ್ಷಿತ ಸ್ಥಳವೆಂದು ಚಿತ್ರಿಸಲಾಗಿರುವುದರಿಂದ ಬೇಸರಗೊಂಡ ಸೊಹ್ರಾ (ಚಿರಾಪುಂಜಿ) ಜನರು ಮಂಗಳವಾರದಂದು ಹನಿಮೂನ್ ಪ್ರವಾಸದ ಸಮಯದಲ್ಲಿ ಕೊಲೆಯಾದ ಇಂದೋರ್‌ನ ಉದ್ಯಮಿ ರಾಜಾ ರಘುವಂಶಿಗೆ ಶ್ರದ್ದಾಂಜಲಿ ಸಲ್ಲಿಸಿದರು ಮತ್ತು ಮೇಣದಬತ್ತಿಯ ಮೆರವಣಿಗೆ ನಡೆಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ರಾಜಾ ರಘುವಂಶಿ ಮತ್ತು ಅವರ 24 ವರ್ಷದ ಪತ್ನಿ ಸೋನಮ್ ಅವರ ಜೀವಗಳನ್ನು ಸ್ಥಳೀಯರು ಬಲಿ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಕ್ಕಾಗಿ ಕೆಲವು ಪ್ರಮುಖ ಮಾಧ್ಯಮ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಅವರು ರ‍್ಯಾಲಿಯನ್ನು ಸಹ ಆಯೋಜಿಸಿದ್ದರು. ಜೂನ್ 2ರಂದು ಆಳವಾದ ಕಣಿವೆಯಲ್ಲಿ ರಾಜಾ ಅವರ ದೇಹವು ಪತ್ತೆಯಾಗಿದ್ದು “ಕಾಣೆಯಾದ” ದಂಪತಿಯ ಕಥೆಯಲ್ಲಿ ತಿರುವು ನೀಡಿತ್ತು.

ಸೊಹ್ರಾದಲ್ಲಿ ರಕ್ಷಣಾ ಸಿಬ್ಬಂದಿ “ಕಾಣೆಯಾದ” ಇಂದೋರ್ ದಂಪತಿಗಾಗಿ ಹುಡುಕುತ್ತಿದ್ದಾಗ ಮೇಘಾಲಯದ ಜನರನ್ನು ನಿಂದಿಸುತ್ತಿದ್ದ ರಘುವಂಶಿ ಕುಟುಂಬದವರು ಸೇರಿದಂತೆ ಕೆಲವು ದೂರದರ್ಶನ ವಾಹಿನಿಗಳು, ಆನ್‌ಲೈನ್ ವ್ಯಾಖ್ಯಾನಕಾರರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರ ವಿರುದ್ಧ ಇದೀಗ ಸ್ಥಳೀಯರ ಕೋಪಕ್ಕೆ ತುತ್ತಾಗಿದೆ. ರಘವಂಶಿಯ ಶವ ಪತ್ತೆಯಾದ ನಂತರ ತಮ್ಮ ಕುರಿತು ಅಪಪ್ರಚಾರ ನಡೆಸಲಾಗಿತ್ತು ಎಂದು ಮೇಘಾಲಯದ ಜನತೆ ಆರೋಪಿಸಿದ್ದಾರೆ.

ಸೊಹ್ರಾ ಶಾಸಕ ಗವಿನ್ ಮಿಗುಯೆಲ್ ಮೈಲ್ಲಿಯೆಮ್, ಮೇಣದಬತ್ತಿಯ ಮೆರವಣಿಗೆ ಸಮಯದಲ್ಲಿ ಸಮುದಾಯದ ನೋವು ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದರು. “ಇದು ನಮ್ಮೆಲ್ಲರನ್ನೂ ತೀವ್ರವಾಗಿ ಬೆಚ್ಚಿಬೀಳಿಸಿದ ದುರಂತ. ರಾಜಾ ನಮ್ಮ ಭೂಮಿಗೆ ಅತಿಥಿಯಾಗಿದ್ದರು. ಸೊಹ್ರಾ ಜನರು ರಾಜಾ ದಂಪತಿಯನ್ನು ಮುಕ್ತ ಹೃದಯದಿಂದ ಸ್ವಾಗತಿಸಿದರು ಮತ್ತು ಅವರಿಗೆ ಏನಾಯಿತೋ ಅದು ಇಲ್ಲಿನ ಜನರ ಕಾರಣಕ್ಕಾಗಿ ನಡೆದಿದ್ದಲ್ಲ” ಎಂದು ಅವರು ಹೇಳಿದರು.

“ಸೊಹ್ರಾ ಮತ್ತು ಅಲ್ಲಿನ ಜನರ ಕುರಿತು ಸುಳ್ಳು ಮತ್ತು ಅವಹೇಳನಕಾರಿ ವಿಷಯವನ್ನು ಹರಡಿದ ರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿರುವ ವ್ಯಕ್ತಿಗಳು ಬೇಷರತ್ತಾದ ಕ್ಷಮೆಯಾಚನೆಯನ್ನು ನಾವು ಒತ್ತಾಯಿಸುತ್ತೇವೆ. ಮುಂದಿನ 24 ಗಂಟೆಗಳಲ್ಲಿ ಯಾವುದೇ ಕ್ಷಮೆಯಾಚನೆಯನ್ನು ನೀಡದಿದ್ದರೆ, ನಾವು ಎಫ್‌ಐಆರ್‌ಗಳನ್ನು ದಾಖಲಿಸಲು ಮತ್ತು ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ” ಎಂದು ಹಿಮಾ ಸೊಹ್ರಾ (ಸಾಂಪ್ರದಾಯಿಕ ಸಂಸ್ಥೆ) ವಕ್ತಾರರು ಹೇಳಿದ್ದಾರೆ.

ಸೋನಮ್ ರಘುವಂಶಿ ಮೇಘಾಲಯದಲ್ಲಿ ರಜೆಯ ಸಮಯದಲ್ಲಿ ತನ್ನ ಪತಿಯ ಕೊಲೆಗೆ ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ. ಇಂದೋರ್ ದಂಪತಿಯ ಪ್ರಕರಣದಿಂದ ಪ್ರವಾಸೋದ್ಯಮ ವ್ಯವಹಾರದ ಮೇಲೆ ತಾತ್ಕಾಲಿಕವಾಗಿ ಕೆಟ್ಟ ಪರಿಣಾಮ ಬೀರಿದ ಸೊಹ್ರಾ ಮತ್ತು ಪಕ್ಕದ ಗ್ರಾಮಗಳಲ್ಲಿ ನಡೆದ ಗಂಭೀರ ಘಟನೆಯ ಆರೋಪಿಗಳನ್ನು ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಶಿಲ್ಲಾಂಗ್‌ಗೆ ಬಂಧಿಸಿ ಕರೆ ತರಲಾಗಿದೆ.

ಸೋನಮ್ ರಘುವಂಶಿ ಸೇರಿದಂತೆ ಆರೋಪಿಗಳನ್ನು ಇಂದು (ಬುಧವಾರ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಅಪರಾಧವನ್ನು ಪುನರ್ನಿರ್ಮಿಸಲು ಅವರನ್ನು ಸೊಹ್ರಾಕ್ಕೆ ಕರೆದೊಯ್ಯಲಾಗುವುದು ಎಂದು ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಪೊಲೀಸ್ ಅಧೀಕ್ಷಕ ವಿವೇಕ್ ಸೈಮ್ ಹೇಳಿದರು.

ಮೇಘಾಲಯ ಪೊಲೀಸರು ಇಂದೋರ್ (ಮಧ್ಯಪ್ರದೇಶ) ಮತ್ತು ಲಲಿತಪುರ (ಉತ್ತರಪ್ರದೇಶ)ದಲ್ಲಿ ಸಿಕ್ಕಿಬಿದ್ದ ನಾಲ್ವರು ಆರೋಪಿಗಳನ್ನು ಆರು ದಿನಗಳ ಕಾಲ ವಶಕ್ಕೆ ಪಡೆದರು. ಘಾಜಿಪುರದಲ್ಲಿ ಪೊಲೀಸರಿಗೆ ಶರಣಾದ ಸೋನಮ್ ರಘುವಂಶಿಯ ಅವರನ್ನು ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿತ್ತು.

ಪ್ರಕರಣದ ಹಿನ್ನೆಲೆ

ಮೇ 23ರಂದು ಮಧ್ಯಪ್ರದೇಶದ ಇಂದೋರ್ ಮೂಲದ ರಾಜಾ ರಘವಂಶಿ ಮತ್ತು ಸೋನಮ್ ರಘುವಂಶಿ  ಹನಿಮೂನ್‌ಗೆ ಹೋಗಿದ್ದರು. ಈ ವೇಳೆ ಸುಪಾರಿ ಕೊಟ್ಟು ತನ್ನ ಪತಿ ರಾಜ ರಘುವಂಶಿಯನ್ನು ಕೊಲೆ ಮಾಡಿಸಿದ ಆರೋಪವನ್ನು ಹೊತ್ತಿರುವ ಪತ್ನಿ ಸೋನಮ್ ರಘುವಂಶಿ “ದರೋಡೆಕೋರರು ನನ್ನ ಪತಿಯನ್ನು ಹತ್ಯೆ ಮಾಡಿದರು. ನನ್ನ ಆಭರಣಗಳನ್ನು ದೋಚಲು ದರೋಡೆಕೋರರು ಯತ್ನಿಸಿದ್ದರು” ಎಂದು ಹೇಳಿಕೊಂಡಿದ್ದರು. ಹನಿಮೂನ್ ಕೊಲೆ ಪ್ರಕರಣ ಎಂದೆ ಕರೆಯಲಾಗುತ್ತಿರುವ ಈ ಪ್ರಕರಣವು ಸದ್ಯ ದೇಶದಾದ್ಯಂತ ಸಂಚಲನ ಮೂಡಿಸಿದೆ.

ಮೇ 11ರಂದು ಇವರ ವಿವಾಹವಾಗಿತ್ತು. ತಮ್ಮ ಹನಿಮೂನ್‌ಗಾಗಿ ಮೇಘಾಲಯದ ಶಿಲ್ಲಾಂಗ್‌ಗೆ ಹೋಗಿದ್ದರು. ಬಳಿಕ ಮೇ 23ರಂದು ಇಬ್ಬರೂ ನಾಪತ್ತೆಯಾಗಿದ್ದರು. ಈ ಪೈಕಿ ರಾಜಾ ಅವರ ಮೃತದೇಹವು ಜೂನ್ 2ರಂದು ಪೂರ್ವ ಖಾಸಿ ಬೆಟ್ಟದ ಜಿಲ್ಲೆಯ ಕಮರಿಯಲ್ಲಿ ಪತ್ತೆಯಾಗಿತ್ತು. ಆದರೆ ಸೋನಮ್ ಪತ್ತೆಯಾಗಿರಲಿಲ್ಲ.

ಸೋನಮ್‌ಗಾಗಿ ಹುಡುಕಾಟ ನಡೆಯುತ್ತಿರುವಾಗಲೇ ಸೋಮವಾರ ಉತ್ತರ ಪ್ರದೇಶ ಗಾಜಿಪುರದ ಪೊಲೀಸರ ಮುಂದೆ ಸೋಮವಾರ ಸೋನಮ್ ಶರಣಾಗಿದ್ದರು. ಆಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮೇಘಾಲಯ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿಗಳು ಈ ಕೊಲೆಗೆ ಸೋನಮ್ ಅವರೇ ಸುಪಾರಿ ನೀಡಿದ್ದಾರೆ ಎಂದಿದ್ದಾರೆ.

ಹಾಗಾಗಿ ಪೊಲೀಸರು ಸೋನಮ್ ಬಂಧನ ಮಾಡಿದ್ದಾರೆ. ಢಾಬಾ ಒಂದರಲ್ಲಿ ಸಹಾಯ ಕೋರಿ ಸೋನಮ್ ಬಂದಿದ್ದರು. ಬಳಿಕ ಅಲ್ಲಿಂದಲೇ ತಮ್ಮ ಕುಟುಂಬಸ್ಥರಿಗೆ ಕರೆ ಮಾಡಿದ್ದರು ಎನ್ನಲಾಗಿದೆ. “ಸೋನಮ್ ತುಂಬಾ ದುಖಿಃತರಾಗಿದ್ದರು” ಎಂದು ಢಾಬಾ ಮಾಲೀಕ ಸಾಹಿಲ್ ಹೇಳಿದ್ದಾರೆ.

ಮೇಘಾಲಯ ಪೊಲೀಸರು ಸೋನಮ್ ತನ್ನ ಪತಿಯ ಕೊಲೆಗಾಗಿ ಸುಪಾರಿ ನೀಡಿದ್ದರು ಎಂದು ಹೇಳಿದ್ದಾರೆ. ಈ ಸಂಬಂಧ ಸೋನಂ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇತ್ತ ಘಾಜಿಪುರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಸೋನಮ್ ಯಾವುದೇ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ” ಎಂದಿದ್ದಾರೆ.

ಜನಸಂಖ್ಯೆ ಅಧಿಕವಿದ್ದರೂ ಕಡಿಮೆಯಾದ ಭಾರತದ ಸಂತಾನೋತ್ಪತ್ತಿ ದರ: ವಿಶ್ವಸಂಸ್ಥೆ ವರದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -