2025 ರಲ್ಲಿ ಭಾರತದ ಜನಸಂಖ್ಯೆಯು 146 ಕೋಟಿ ತಲುಪಲಿದ್ದು, ಈ ಜನಸಂಖ್ಯೆ ವಿಶ್ವದಲ್ಲೇ ಅತಿ ಹೆಚ್ಚಾಗಿದ್ದರೂ, ದೇಶದ ಫಲವತ್ತತೆ ದರಗಳು ಬದಲಿ ಮಿತಿಗಿಂತ ಕಡಿಮೆಯಾಗಿದೆ ಎಂದು ಮಂಗಳವಾರ ಬಿಡುಗಡೆಯಾದ ವಿಶ್ವಸಂಸ್ಥೆಯ ವರದಿಯೊಂದು ಹೇಳಿದೆ. ಈ ದರವು ಮುಂಬರುವ ದಶಕಗಳಲ್ಲಿ ಜನಸಂಖ್ಯೆಯ ಗಾತ್ರವನ್ನು ಸ್ಥಿರಗೊಳಿಸುತ್ತದೆ ಎಂದು ವರದಿ ತಿಳಿಸಿದೆ. ಜನಸಂಖ್ಯೆ ಅಧಿಕವಿದ್ದರೂ ಕಡಿಮೆಯಾದ
“ನಿಜವಾದ ಫಲವತ್ತತೆ ಬಿಕ್ಕಟ್ಟು” ಎಂಬ ಶೀರ್ಷಿಕೆಯ ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ವರದಿಯು, ಮುಂದಿನ 40 ವರ್ಷಗಳಲ್ಲಿ ಭಾರತದ ಜನಸಂಖ್ಯೆಯು ಕುಸಿತ ಪ್ರಾರಂಭವಾಗುವ ಮೊದಲು 1.7 ಶತಕೋಟಿಗೆ ಏರುತ್ತದೆ ಎಂದು ಅಂದಾಜಿಸಿದೆ. ಪ್ರಸ್ತುತ 1.41 ಶತಕೋಟಿ ಜನಸಂಖ್ಯೆಯನ್ನು ಹೊಂದಿರುವ ಚೀನಾ ಭಾರತದ ನಂತರ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ.
ಫಲವತ್ತತೆ ಕುಸಿತ ಭೀತಿ ಮೂಡಿಸಿದ್ದು, ಇದನ್ನು ಬದಲಿಸುವುದು ಅತ್ಯಗತ್ಯ ಎಂದು ವರದಿಯಲ್ಲಿ ಹೇಳಲಾಗಿದೆ. ಲಕ್ಷಾಂತರ ಜನರಿಗೆ ನಿಜವಾದ ಫಲವತ್ತತೆಯ ಗುರಿಗಳು ಏನು ಎಂಬುದನ್ನು ಅರ್ಥೈಸಿಕೊಳ್ಳಲು ಆಗುತ್ತಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
“ಭಾರತದಲ್ಲಿ ಪ್ರತಿ ಮಹಿಳೆಯ ಸರಾಸರಿ ಫಲವತ್ತತೆ 2.1 ಇದೆ. ಆದರೆ ಅದು ಈಗ 1.9ಕ್ಕೆ ಕುಸಿದಿದೆ. ಅಂದರೆ, ತಲೆಮಾರಿನಿಂದ ತಲೆಮಾರಿಗೆ ದೇಶದ ಜನಸಂಖ್ಯಾ ಗಾತ್ರವನ್ನು ಕಾಪಾಡಲು ಅಗತ್ಯವಿರುವಷ್ಟು ಮಕ್ಕಳಿಗೆ ಜನ್ಮನೀಡುವ ಸಾಮರ್ಥ್ಯ ಭಾರತೀಯ ಮಹಿಳೆಯರಲ್ಲಿ ಕುಸಿಯುತ್ತಿದೆ. ಈ ಕಾರಣದಿಂದಾಗಿ ಭಾರತದಲ್ಲಿ ಸದ್ಯ ಇರುವ ಯುವಶಕ್ತಿ ಹೆಚ್ಚಿನ ಮಹತ್ವ ಪಡೆದುಕೊಂಡಿದ್ದಾರೆ. ಇದರಲ್ಲಿ 0–14ರ ವಯೋಮಾನದವರ ಸಂಖ್ಯೆ ಶೇ 24ರಷ್ಟಿದೆ. 10ರಿಂದ 19ರ ವಯೋಮಾನದವರು ಶೇ 17ರಷ್ಟು ಮತ್ತು 10ರಿಂದ 24 ವರ್ಷದವರು ಶೇ 26ರಷ್ಟಿದೆ’’ ಎಂದು ವರದಿ ಹೇಳಿದೆ.
ಜಾಗತಿಕ ಜನಸಂಖ್ಯೆಯ 37% ರಷ್ಟಿರುವ 14 ದೇಶಗಳಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಸೇರಿ 14,000 ವಯಸ್ಕರ ಆನ್‌ಲೈನ್ ಸಮೀಕ್ಷೆಯ ಮೂಲಕ ಈ ವರದಿಯ ಅಂಕಿ-ಅಂಶಗಳನ್ನು ಸಂಗ್ರಹಿಸಲಾಗಿದೆ.
ಭಾರತದಲ್ಲಿ ಸರಿಯಾದ ಉದ್ಯೋಗಾವಕಾಶ ಮತ್ತು ಸರ್ಕಾರದ ನೀತಿಗಳು ಬೆಂಬಲಿಸಿದ್ದೇ ಆದಲ್ಲಿ ಈಗಲೂ 15ರಿಂದ 64ರ ವಯೋಮಾನದ ದುಡಿಯುವ ವರ್ಗ ಶೇ 68ರಷ್ಟಿದೆ. 65ಕ್ಕಿಂತ ಮೇಲಿನವರ ಸಂಖ್ಯೆ ಶೇ 7ರಷ್ಟಿದೆ. ಇದು ಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಾಗಲಿದೆ. ಜತೆಗೆ ಜನರ ಜೀವಿತಾವಧಿಯೂ ಹೆಚ್ಚಳವಾಗಲಿದೆ. 2025ರಲ್ಲಿ ಭಾರತೀಯರ ಜೀವಿತಾವಧಿಯು ಸರಾಸರಿಯಾಗಿ ಪುರುಷರಲ್ಲಿ 71 ವರ್ಷ ಹಾಗೂ ಮಹಿಳೆಯರಲ್ಲಿ 74 ವರ್ಷಕ್ಕೆ ಹೆಚ್ಚಳವಾಗಿದೆ.
‘ವಿಶ್ವಸಂಸ್ಥೆಯ ವರದಿಯನ್ವಯ ಭಾರತದ ಜನಸಂಖ್ಯೆ 170 ಕೋಟಿ ತಲುಪುವ ಮೊದಲೇ ಇದರ ಕುಸಿತವೂ (40 ವರ್ಷಗಳ ನಂತರ) ಆರಂಭವಾಗಲಿದೆ. ಈ ಸಂಖ್ಯೆಗಳ ಹಿಂದೆ ಕುಟುಂಬವನ್ನು ಹೊಂದುವ ಅಥವಾ ವಿಸ್ತರಿಸುವ ಆಲೋಚನೆಯುಳ್ಳ ಲಕ್ಷಾಂತರ ದಂಪತಿಗಳ ಕಥೆಗಳು ಅಡಗಿವೆ. ಇದು ಕುಟುಂಬ ಬೇಕೇ ಅಥವಾ ಬೇಡವೇ, ಬೇಕಾದರೆ ಎಂದು ಅಥವಾ ಎಷ್ಟು ಬಾರಿ ಗರ್ಭಧರಿಸಬಹುದು ಎಂಬುದನ್ನು ನಿರ್ಧರಿಸುತ್ತದೆ’ ಎಂಬುದನ್ನೂ ಈ ವರದಿ ಹೇಳಿದೆ.
ಸಮುದಾಯದ ನಿರೀಕ್ಷೆಗಳಿಂದಾಗಿ ಭಾರತದಲ್ಲಿ ಐದು ಮಹಿಳೆಯರಲ್ಲಿ ಒಬ್ಬರು ಉದ್ದೇಶಿತಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿದ್ದಾರೆ ಎಂದು ಸಮೀಕ್ಷೆ ತೋರಿಸುತ್ತದೆ. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಒತ್ತಡದಿಂದಾಗಿ ಫಲವತ್ತತೆ ಗುರಿಗಳನ್ನು ಸಾಧಿಸುವಲ್ಲಿ ವಿಫಲರಾಗಿದ್ದೇವೆ ಎಂದು ಪ್ರತಿಕ್ರಿಯಿಸಿದವರಲ್ಲಿ ಹದಿನಾಲ್ಕು ಪ್ರತಿಶತದಷ್ಟು ಜನರು ಭಾವಿಸಿದರೆ, 30 ಪ್ರತಿಶತದಷ್ಟು ಮಹಿಳೆಯರು ಬಯಸದಿದ್ದಾಗ ಗರ್ಭಧಾರಣೆಯನ್ನು ಉಳಿಸಿಕೊಳ್ಳಲು ಒತ್ತಡಕ್ಕೊಳಗಾಗಿದ್ದೇವೆ ಎಂದು ಹೇಳಿದ್ದಾರೆ. ಜನಸಂಖ್ಯೆ ಅಧಿಕವಿದ್ದರೂ ಕಡಿಮೆಯಾದ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಕುಂಭಮೇಳ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 37 ಅಲ್ಲ, 82; ಸುಳ್ಳು ಹೇಳಿದ ಯುಪಿ ಆದಿತ್ಯನಾಥ್ ಸರ್ಕಾರ!
ಕುಂಭಮೇಳ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 37 ಅಲ್ಲ, 82; ಸುಳ್ಳು ಹೇಳಿದ ಯುಪಿ ಆದಿತ್ಯನಾಥ್ ಸರ್ಕಾರ!