Homeಅಂತರಾಷ್ಟ್ರೀಯಗಾಝಾ: ಶಾಲೆಗಳು, ನಿರಾಶ್ರಿತರ ಶಿಬಿರಗಳ ಮೇಲೆ ಇಸ್ರೇಲ್ ದಾಳಿ

ಗಾಝಾ: ಶಾಲೆಗಳು, ನಿರಾಶ್ರಿತರ ಶಿಬಿರಗಳ ಮೇಲೆ ಇಸ್ರೇಲ್ ದಾಳಿ

- Advertisement -
- Advertisement -

ಇಸ್ರೇಲ್‌- ಪ್ಯಾಲೆಸ್ತೀನ್‌ ಮೇಲೆ ಘೋಷಿಸಿದ ಯುದ್ಧ ಇಂದಿಗೆ 44ನೇ ದಿನಕ್ಕೆ ಕಾಲಿಟ್ಟಿದೆ.  ಉತ್ತರ, ಮಧ್ಯ ಮತ್ತು ದಕ್ಷಿಣ ಗಾಝಾದಲ್ಲಿ ನಡೆಸಿದ ವೈಮಾನಿಕ ದಾಳಿಗೆ ಮಕ್ಕಳು ಸೇರಿದಂತೆ ನೂರಾರು ಜನರು ಮೃತಪಟ್ಟಿದ್ದಾರೆ ಎಂದು ಅಲ್‌ ಜಝೀರಾ ವರದಿ ಮಾಡಿದೆ.

ಗಾಝಾದಲ್ಲಿರುವ ಬುರೇಜ್ ಮತ್ತು ನುಸಿರಾತ್ ನಿರಾಶ್ರಿತರ ಶಿಬಿರಗಳ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್‌ನ  ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.

ವೆಸ್ಟ್‌ಬ್ಯಾಂಕ್‌ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಕನಿಷ್ಠ ಇಬ್ಬರು ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ.

ದಕ್ಷಿಣ ಖಾನ್ ಯೂನಿಸ್ ನಗರದಲ್ಲಿ ನಡೆದ ದಾಳಿಯಲ್ಲಿ ಓರ್ವ ಮಹಿಳೆ ಮತ್ತು ಆಕೆಯ ಮಗು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ತೀನ್ ಸುದ್ದಿ ಸಂಸ್ಥೆ ವಫಾ ವರದಿ ಮಾಡಿದೆ.

ಜೆನಿನ್ ನಿರಾಶ್ರಿತರ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ 46 ವರ್ಷದ ಅಂಗವಿಕಲ ವ್ಯಕ್ತಿ ಇಸ್ಸಾಮ್ ಅಲ್-ಫಾಯೆದ್ ಮೃತಪಟ್ಟಿದ್ದಾರೆ. 20 ವರ್ಷದ ಒಮರ್ ಲಾಹಮ್ ಬೆಥ್ ಲೆಹೆಮ್‌ನ ದಕ್ಷಿಣದಲ್ಲಿರುವ ಧೈಶೆಹ್ ನಿರಾಶ್ರಿತರ ಶಿಬಿರದ ಮೇಲಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ.

ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿರುವ ಅಲ್-ಫಖೂರಾ ಶಾಲೆಯ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಅಲ್-ಫಖೂರಾ ಶಾಲೆಯನ್ನು ವಿಶ್ವಸಂಸ್ಥೆ ನಡೆಸುತ್ತಿತ್ತು. ಈ ಶಾಲೆಯನ್ನು ಸ್ಥಳಾಂತರಗೊಂಡ ಪ್ಯಾಲೆಸ್ತೀನಿಯನ್ನರ ತಾತ್ಕಾಲಿಕ ಶಿಬಿರವನ್ನಾಗಿ ಪರಿವರ್ತಿಸಲಾಗಿತ್ತು.

ಮತ್ತೊಂದು ಕಟ್ಟಡದ ಮೇಲೆ ನಡೆದ ಪ್ರತ್ಯೇಕ ದಾಳಿಯಲ್ಲಿ ಒಂದೇ ಕುಟುಂಬದ 32 ಮಂದಿ ಹತ್ಯೆಗೀಡಾಗಿದ್ದು ಇವರಲ್ಲಿ 19 ಮಂದಿ ಮಕ್ಕಳು ಸೇರಿದ್ದಾರೆ. ಟಾಲ್ ಅಜ್-ಝಾತಾರ್‌ನ ಶಾಲೆಯ ಮೇಲಿನ ದಾಳಿಯಿಂದ ಅಪಾರ ಸಾವುನೋವುಗಳು ವರದಿಯಾಗಿವೆ.

ದೃಶ್ಯಗಳು ಭಯಾನಕವಾಗಿದ್ದವು. ಮಹಿಳೆಯರು ಮತ್ತು ಮಕ್ಕಳ ಶವಗಳು ನೆಲದ ಮೇಲೆ ಬಿದ್ದಕೊಂಡಿದೆ. ಜನರು ಸಹಾಯಕ್ಕಾಗಿ ಕಿರುಚುತ್ತಿದ್ದರು ಎಂದು ಅಲ್-ಫಖೂರಾ ದಾಳಿಯಲ್ಲಿ ಬದುಕುಳಿದ ಅಹ್ಮದ್ ರಾಡ್ವಾನ್ ಮಾದ್ಯಮಗಳಿಗೆ ತಿಳಿಸಿದ್ದಾರೆ.

ಮೃತದೇಹಗಳು ಚದುರಿಹೋಗಿವೆ, ಮಾಂಸದ ತುಂಡುಗಳು ಬಿದ್ದುಕೊಂಡಿದೆ. ಯಾರೂ ಕೂಡ ತಮ್ಮ ಮಕ್ಕಳನ್ನು ಗುರುತಿಸಲು ಸಾಧ್ಯವಿಲ್ಲ. ನಮ್ಮ ಜೀವನ ನರಕವಾಗಿದೆ ಎಂದು ವ್ಯಕ್ತಿಯೋರ್ವರು ಅಲ್‌ ಜಝೀರಾ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಯುಎನ್‌ಆರ್‌ಡಬ್ಲ್ಯುಎ ಏಜೆನ್ಸಿಯ ಮುಖ್ಯಸ್ಥ ಫಿಲಿಪ್ ಲಜ್ಜರಿನಿ ಘಟನೆಯ ಭಯಾನಕ ಚಿತ್ರಗಳನ್ನು ವಿವರಿಸಿದರೆ, ಈಜಿಪ್ಟ್ ಬಾಂಬ್ ದಾಳಿಯನ್ನು ಯುದ್ಧಾಪರಾಧ ಮತ್ತು ವಿಶ್ವಸಂಸ್ಥೆಗೆ ಉದ್ದೇಶಪೂರ್ವಕ ಅವಮಾನ ಎಂದು ಕರೆದಿದೆ.

ಗಾಝಾ ಮೇಲೆ ಇಸ್ರೇಲ್‌ ಯುದ್ಧ ಘೋಷಿಸಿದ ಬಳಿಕ ಈವೆರೆಗೆ ಪ್ಯಾಲೆಸ್ತೀನ್‌ನಲ್ಲಿ 12,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ  5,000ಕ್ಕೂ ಹೆಚ್ಚು ಮಕ್ಕಳು ಮತ್ತು 3,300 ಮಹಿಳೆಯರು ಸೇರಿದ್ದಾರೆ. 30,000 ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ತೀನ್ ಸರಕಾರಿ ಮಾದ್ಯಮ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ವರದಿಯ ಪ್ರಕಾರ 1,800 ಮಕ್ಕಳು ಸೇರಿದಂತೆ ಸುಮಾರು 3,750 ಜನರು ಇನ್ನೂ ಪತ್ತೆಯಾಗಿಲ್ಲ. ಮೃತರಲ್ಲಿ ಒಟ್ಟು 200 ವೈದ್ಯರು, 22 ಸಿವಿಲ್ ಡಿಫೆನ್ಸ್ ಸಿಬ್ಬಂದಿ ಮತ್ತು 51 ಪತ್ರಕರ್ತರು ಕೂಡ ಸೇರಿದ್ದಾರೆ.

ಇಸ್ರೇಲ್‌ ಆಕ್ರಮಣದಿಂದ 25 ಆಸ್ಪತ್ರೆಗಳು ಮತ್ತು 52 ಆರೋಗ್ಯ ಕೇಂದ್ರಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಇದಲ್ಲದೆ 55 ಆಂಬ್ಯುಲೆನ್ಸ್‌ಗಳನ್ನು ಇಸ್ರೇಲ್‌ ಪಡೆಗಳು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇಸ್ರೇಲ್‌ ದಾಳಿಯಲ್ಲಿ ಆಸ್ಪತ್ರೆಗಳು, ಮಸೀದಿಗಳು ಮತ್ತು ಚರ್ಚ್‌ಗಳು ಸೇರಿದಂತೆ ಸಾವಿರಾರು ಕಟ್ಟಡಗಳು ಧ್ವಂಸಗೊಂಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...