Homeಕರ್ನಾಟಕಹಾಸ್ಟೆಲ್ ಸ್ವಚ್ಛಗೊಳಿಸಿ, ಗಿಡ ನೆಟ್ಟು ಗಾಂಧಿ ಜಯಂತಿ ಆಚರಿಸಿದ ವಿದ್ಯಾರ್ಥಿಗಳು

ಹಾಸ್ಟೆಲ್ ಸ್ವಚ್ಛಗೊಳಿಸಿ, ಗಿಡ ನೆಟ್ಟು ಗಾಂಧಿ ಜಯಂತಿ ಆಚರಿಸಿದ ವಿದ್ಯಾರ್ಥಿಗಳು

- Advertisement -
- Advertisement -

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಸ್ವಚ್ಛತೆ ಕಾಪಾಡುವುದಿಲ್ಲ, ಶಿಸ್ತಿನಿಂದ ಇರುವುದಿಲ್ಲ, ಸೋಮಾರಿಗಳು ಎಂಬುದು ಸಾಮಾನ್ಯ ಆರೋಪ. ಅದನ್ನು ಸುಳ್ಳು ಮಾಡುವಂತೆ ಬೆಂಗಳೂರಿನ ಅರಳಿದ ಗುಲಾಬಿ ರಸ್ತೆಯಲ್ಲಿರುವ ‘ಸರ್ಕಾರಿ ಕಲಾ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯ’ದಲ್ಲಿ ಇಂದು ಮುಂಜಾನೆಯೇ ವಿದ್ಯಾರ್ಥಿಗಳು ಹಾಸ್ಟೆಲ್ ಸ್ವಚ್ಛಗೊಳಿಸಿ, ಗಿಡ ನೆಟ್ಟು ವಿಶಿಷ್ಟವಾಗಿ ಗಾಂಧಿ ಜಯಂತಿ ಆಚರಿಸಿದ್ದಾರೆ.

ಈ ಬಾರಿಯ ಗಾಂಧಿ ಜಯಂತಿಯಂದು ಸ್ವಚ್ಛತಾ ಅಭಿಯಾನ ನಡೆಸಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಕರೆ ನೀಡಿದ್ದರು. ಅದಕ್ಕೆ ಸ್ಪಂದಿಸಿರುವ ವಿದ್ಯಾರ್ಥಿಗಳು ತಮ್ಮ ನಿಯಲಪಾಲಕರಾದ ಶಶಿಧರ್‌ರವರ ನೇತೃತ್ವದಲ್ಲಿ ಸಂಪೂರ್ಣ ಹಾಸ್ಟೆಲ್ ಸ್ವಚ್ಛಗೊಳಿಸಿದ್ದಾರೆ. ಹತ್ತಾರು ಗಿಡಗಳನ್ನು ನೆಟ್ಟಿದ್ದಾರೆ. ಅಲ್ಲದೇ ಗಾಂಧೀಯವರ ಮಾದರಿಯ ಸರಳ ಜೀವನವನ್ನು ಮೈಗೂಡಿಸಿಕೊಳ್ಳುತ್ತೇವೆ ಎಂದು ಶಪಥ ಮಾಡಿದ್ದಾರೆ.

ಈ ಸಂದರ್ಭದಲ್ಲಿ ನಿಲಯಪಾಲಕರಾದ ಶಶಿಧರ್‌ರವರು ಮಾತನಾಡಿ “ಇಂದು ನಮ್ಮ ವಿದ್ಯಾರ್ಥಿಗಳು ತಮ್ಮ ಮನೆಗಿಂತಲೂ ಹೆಚ್ಚಿನ ಕಾಳಜಿಯೊಂದಿಗೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಗಾಂಧಿ ಜಯಂತಿಯನ್ನು ಹಬ್ಬದ ರೀತಿ ಆಚರಿಸಿದ್ದಾರೆ. ಗಾಂಧೀಜಿಯವರ ಆಶಯಗಳನ್ನು ಮೈಗೂಡಿಸಿಕೊಂಡು, ನಿರಂತರವಾಗಿ ಸ್ವಚ್ಛತೆ ಕಾಪಾಡಿಕೊಳ್ಳುವ ಭರವಸೆ ನೀಡುತ್ತೇನೆ” ಎಂದರು.

ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಮುಖಂಡರಾದ ಮನೋಜ್ ಆಜಾದ್ ಮಾತನಾಡಿ “ಇದುವರೆಗೂ ವಿದ್ಯಾರ್ಥಿಗಳು ಹೆಚ್ಚು ಗಂಭೀರವಾಗಿರಲಿಲ್ಲ. ಆದರೆ ನೂತನ ನಿಲಯಪಾಲಕರು ಬಂದ ನಂತರ ನಮಗೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಹಾಗಾಗಿ ಈ ಬಾರಿಯ ಗಾಂಧಿ ಜಯಂತಿಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದ್ದೇವೆ. ಗಾಂಧಿಯವರ ಕುರಿತು ಹೆಚ್ಚು ಹೆಚ್ಚು ಓದುತ್ತೇವೆ” ಎಂದರು.

ವಿಡಿಯೋ ನೋಡಿ


ಇದನ್ನೂ ಓದಿ: ಮಹಾತ್ಮಾ ಗಾಂಧಿಯವರ ಕೆಲವು ಮರೆತುಹೋದ ಗುರಿಗಳು: ರಾಜಮೋಹನ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read