Homeಮುಖಪುಟಇಸ್ರೇಲ್‌-ಪ್ಯಾಲೆಸ್ತೀನ್‌ ಯುದ್ಧ: ಭಾರತದಲ್ಲಿ ಮುಸ್ಲಿಮ್‌ ವಿರೋಧಿ ಪ್ರಚಾರಕ್ಕೆ ಸಾಮಾಜಿಕ ಮಾದ್ಯಮವನ್ನು ಹೇಗೆ ಬಳಸಲಾಗಿದೆ?

ಇಸ್ರೇಲ್‌-ಪ್ಯಾಲೆಸ್ತೀನ್‌ ಯುದ್ಧ: ಭಾರತದಲ್ಲಿ ಮುಸ್ಲಿಮ್‌ ವಿರೋಧಿ ಪ್ರಚಾರಕ್ಕೆ ಸಾಮಾಜಿಕ ಮಾದ್ಯಮವನ್ನು ಹೇಗೆ ಬಳಸಲಾಗಿದೆ?

- Advertisement -
- Advertisement -

2019ರಲ್ಲಿ ಪುಲ್ವಾಮಾ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಸೇನೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ನಡೆಸಿದ ವೈಮಾನಿಕ ದಾಳಿ ಭಾರತೀಯರ ಮನೆ ಮನೆಯನ್ನೂ ತಲುಪಿತ್ತು. ದೇಶದಲ್ಲಿ ಮತ್ತೆ ಅಂತಹದ್ದೇ ವಿದ್ಯಮಾನ ಗಾಝಾ-ಪ್ಯಾಲೆಸ್ತೀನ್‌ ಯುದ್ಧದ ವೇಳೆ ಸ್ಪಷ್ಟವಾಗಿ ಕಂಡುಬಂದಿದೆ. ಬಾಲಾಕೋಟ್ ದಾಳಿ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು, ಮೋದಿಯಿಂದ ಮಾತ್ರ ದೇಶದ ಗಡಿಗಳನ್ನು ರಕ್ಷಿಸಲು ಸಾಧ್ಯ ಎಂದು ಹೇಳಿದ್ದರು. ಇದಲ್ಲದೆ ವಾಟ್ಸಾಸ್‌ ಸಂದೇಶಗಳಲ್ಲಿ ಮೋದಿ ಮಾತ್ರ ದೇಶವನ್ನು ರಕ್ಷಿಸಬಲ್ಲರು ಎಂಬಂತೆ ಬಿಂಬಿಸುವ ಸುದ್ದಿಗಳನ್ನು ಪ್ರಚಾರ ಮಾಡಲಾಗಿತ್ತು. ಈ ಬಾರಿ ವಾಟ್ಸಾಪ್ ಸಂದೇಶಗಳು ಇಸ್ರೇಲ್-ಹಮಾಸ್ ಸಂಘರ್ಷದ ಸುತ್ತ ಸುತ್ತಿವೆ. ಈ ಸಂಘರ್ಷ ನಮ್ಮ ತಾಯ್ನಾಡಿನಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿ ನಡೆಯುತ್ತಿದೆ. ಆದರೂ ಭಾರತದಲ್ಲಿ ಮುಸ್ಲಿಂ ಸಮುದಾಯವನ್ನು ನಕಾರಾತ್ಮಕವಾಗಿ ಚಿತ್ರಿಸಲು ಮತ್ತು ಕೋಮು ವೈಷಮ್ಯವನ್ನು ಬಿತ್ತಲು ಈ ಯುದ್ಧವನ್ನು ಕಟ್ಟರ್ವಾದಿಗಳು ಬಳಸಿಕೊಂಡಿದ್ದಾರೆ. ಆಚ್ಚರಿ ಎಂದರೆ ಸಣ್ಣ ಪಟ್ಟಣಗಳು ​​ಮತ್ತು ಹಳ್ಳಿಗಳಲ್ಲಿ ವಾಟ್ಸಾಪ್‌ಗಳಲ್ಲಿ ಇಂತಹ ಸಂದೇಶಗಳು ವೈರಲ್‌ ಆಗಿದ್ದವು.

ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ತಪ್ಪು ಮಾಹಿತಿಯನ್ನು ಹರಡುವ 60ಕ್ಕೂ ಹೆಚ್ಚು ವೈರಲ್ ಸಂದೇಶಗಳನ್ನು’ ದಿ ವೈರ್‌’ ವಿಶ್ಲೇಷಿಸಿದೆ. ವಿಶೇಷವಾಗಿ ಹಿಂದೂ ಸಮುದಾಯದಲ್ಲಿ ಮುಸ್ಲಿಮರ ಬಗ್ಗೆ ಭಯವನ್ನು ಹುಟ್ಟುಹಾಕುವ ಗುರಿಯನ್ನು ಈ ಸಂದೇಶಗಳು ಹೊಂದಿತ್ತು ಎನ್ನಲಾಗಿದೆ.

ಸುಳ್ಳು ಪ್ರಚಾರ:

ಇಸ್ರೇಲ್‌-ಹಮಾಸ್‌ ಯುದ್ಧವನ್ನು ಮುಂದಿಟ್ಟು ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾದರೆ ಇಂತಹ ಕೃತ್ಯಗಳು ನಡೆಯುತ್ತವೆ ಎಂದು ಹಳೆಯ ಭಾಷಣಗಳು, ಚಿತ್ರಗಳು ಮತ್ತು ವೀಡಿಯೊಗಳನ್ನು ಬಳಸಿಕೊಂಡು ಸುಳ್ಳು ಪ್ರಚಾರ ಮಾಡಲಾಗಿದೆ. ಇದು ಎಕ್ಸ್‌ ಮತ್ತು ವಾಟ್ಸಾಫ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ನಡೆದಿದೆ. ವಾಟ್ಸಾಫ್‌ನಲ್ಲಿನ ವೈರಲ್ ವಿಷಯವು ಹಿಂದೂ ಮತ್ತು ಯಹೂದಿ ಸಮುದಾಯಗಳ ನಡುವೆ ಸಾಮ್ಯತೆಗಳನ್ನು ಒತ್ತಿ ಹೇಳಿದೆ. ಇಂತಹ ಸಂದೇಶಗಳನ್ನು ನೂರಾರು ಸದಸ್ಯರ ಗುಂಪುಗಳಲ್ಲಿ ಹಲವಾರು ಬಾರಿ ಫಾರ್ವರ್ಡ್ ಮಾಡಲಾಗಿದೆ ಎಂದು ಸಂಶೋಧನೆ ಸೂಚಿಸುತ್ತದೆ.

ಉದಾಹರಣೆಗೆ ಇಂಗ್ಲಿಷ್‌ನಿಂದ ಅನುವಾದಿಸಲಾದ ಹಿಂದಿ ಶೀರ್ಷಿಕೆಯ ವೀಡಿಯೊವೊಂದು ಪ್ರಸಾರವಾಗಿತ್ತು. ಇದರಲ್ಲಿ ‘ಬರ್ಬರತೆ’ ಎಂದು ಉಲ್ಲೇಖಿಸಲಾಗಿತ್ತು. ಹಮಾಸ್‌ನ ಭಯೋತ್ಪಾದಕರು ಏನು ಮಾಡುತ್ತಿದ್ದಾರೆ? ಹಮಾಸ್‌ನ ಕ್ರೂರ ಭಯೋತ್ಪಾದಕರು ಇಸ್ರೇಲ್‌ ಸೈನಿಕರನ್ನು ಸರಪಳಿಯಲ್ಲಿ ಕಟ್ಟಿ ಜೀವಂತವಾಗಿ ಸುಟ್ಟು ಕೊಲ್ಲುತ್ತಿದ್ದಾರೆ. ಹಮಾಸ್ ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವುದು ಬಹಳ ಮುಖ್ಯ. ನಾವೆಲ್ಲರೂ ಒಗ್ಗೂಡಿ ಇಸ್ರೇಲ್‌ನ್ನು ಬೆಂಬಲಿಸೋಣ ಎಂದು ಬರೆಯಲಾಗಿತ್ತು. ವೀಡಿಯೊವನ್ನು ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಇದೇ ರೀತಿ ಹೇಳಿಕೊಂಡು ಹಂಚಿಕೊಳ್ಳಲಾಗಿದೆ. ವಾಸ್ತವದಲ್ಲಿ ಡಿಸೆಂಬರ್ 2016ರಲ್ಲಿ ನಡೆದ ಘಟನೆ ಇದಾಗಿದೆ. ಉತ್ತರ ಸಿರಿಯಾದಲ್ಲಿ ಒತ್ತೆಯಾಳಾಗಿ ತೆಗೆದುಕೊಂಡ ನಂತರ ಟರ್ಕಿಯ ಇಬ್ಬರು ಸೈನಿಕರಾದ ಸೆಫ್ಟರ್ ಟಾಸ್ ಮತ್ತು ಫೆಥಿ ಷಾಹಿನ್ ಅವರನ್ನು ಹತ್ಯೆ ಮಾಡುವುದಾಗಿತ್ತು. ಉತ್ತರ ಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ವಿವಿಧ ವಾಟ್ಸಾಪ್‌ ಗುಂಪುಗಳಲ್ಲಿ ಇದನ್ನು ಸುಳ್ಳು ಹೇಳಿಕೊಂಡು ಹಂಚಿಕೊಳ್ಳಲಾಗಿತ್ತು. ಈ ಸಂದೇಶವನ್ನು ಹಿಂದೂಗಳನ್ನು ಉದ್ದೇಶಿಸಿ ಪ್ರಚಾರ ಮಾಡಲಾಗಿದೆ. ಇಸ್ರೇಲ್‌ನಲ್ಲಿ ಅಕ್ಟೋಬರ್ 7ರ ಘಟನೆಗಳನ್ನು ಪ್ರಶ್ನಿಸುವ ಸಂದೇಶಗಳಿಂದ ತುಂಬಿವೆ ಮತ್ತು ಭಾರತದಲ್ಲಿ ಇದೇ ರೀತಿಯ ಘಟನೆಯು ಭವಿಷ್ಯದಲ್ಲಿ ನಡೆಯಬಹುದು ಎಂದು ನಿರೂಪಿಸಲಾಗಿದೆ.

ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಅವರು ನೇರವಾಗಿ ಹಿಂದೂಗಳನ್ನು ಉದ್ದೇಶಿಸಿ ಹೇಳಿದ್ದಾರೆ ಎನ್ನುವ ವೈರಲ್ ಚಿತ್ರವೊಂದು ವೈರಲ್‌ ಆಗಿತ್ತು. ಹಿಂದೂಗಳನ್ನು ಜಾತಿಯಿಂದ ವಿಭಜಿಸಿದರೆ ಅವರನ್ನು ಅಳಿಸಲಾಗುತ್ತದೆ ಎಂದು ಅದರಲ್ಲಿ ಹೇಳಲಾಗಿತ್ತು. ಇನ್ನೊಂದು ಚಿತ್ರದಲ್ಲಿ 70 ಲಕ್ಷ ಯಹೂದಿಗಳನ್ನು ಹೊಂದಿರುವ ಇಸ್ರೇಲ್ 55 ಮುಸ್ಲಿಂ ರಾಷ್ಟ್ರಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ಚಿತ್ರವು ಸೂಚಿಸುತ್ತದೆ. ಆದರೆ ಭಾರತದಲ್ಲಿ 100 ಕೋಟಿ ಹಿಂದೂ ವ್ಯಕ್ತಿಗಳಿದ್ದು ಅವರನ್ನು ದುರ್ಬಲರು ಎಂದು ಚಿತ್ರಿಸಲಾಗಿದೆ ಮತ್ತು ಅವರ ಸ್ವಂತ ದೇಶದಲ್ಲಿ ಅವರ ಮೇಲೆ ದಾಳಿ ನಡೆಯುತ್ತಿದೆ ಎಂಬ ರೀತಿಯಲ್ಲಿ ತಪ್ಪು ನಿರೂಪಣೆಯನ್ನು ಮಾಡಲಾಗಿದೆ.

ಇನ್ನೊಂದು ಸಂದೇಶದಲ್ಲಿ, ಹಮಾಸ್‌ನ್ನು ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳು ಬೆಂಬಲಿಸುತ್ತಿವೆ. ಆದ್ದರಿಂದ, ನೀವು ಏನು ಮಾಡಬೇಕೆಂದು ಯೋಚಿಸಿ. ನಿಮ್ಮ ದೇಶ, ನಿಮ್ಮ ಮಕ್ಕಳು, ನಿಮ್ಮ ನಾಳೆಯ ಭವಿಷ್ಯವನ್ನು ಪರಿಗಣಿಸಿ. ನೀವೇ ಬುದ್ಧಿವಂತರು. ಹಮಾಸ್ ಕಿಡಿಗೇಡಿಗಳ ಕಾರ್ಯಗಳನ್ನು ತೆರೆದ ಕಣ್ಣುಗಳಿಂದ ನೋಡಿ ಮತ್ತು ಅವರನ್ನು ಬೆಂಬಲಿಸುವವರನ್ನು ಪರಿಗಣಿಸಿ. ಇಂದು ಈ ವ್ಯಕ್ತಿಗಳನ್ನು ಬೆಂಬಲಿಸುವವರು ಅದೇ ವ್ಯಕ್ತಿಗಳು ಭಾರತವನ್ನು ಇಸ್ಲಾಮಿಕ್ ದೇಶವಾಗಿ ಪರಿವರ್ತಿಸಲು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ನೆನಪಿನಲ್ಲಿಡಿ. ಯಾವುದೇ ಸಂದರ್ಭದಲ್ಲೂ ಕಾಂಗ್ರೆಸ್ ಅಥವಾ ಇತರ ಯಾವುದೇ ವಿರೋಧ ಪಕ್ಷಗಳು ಭಾರತದಲ್ಲಿ ಸರ್ಕಾರ ರಚಿಸುವುದನ್ನು ತಡೆಯಲು ಪ್ರತಿಯೊಬ್ಬ ಹಿಂದೂ ಶ್ರಮಿಸಬೇಕು. ಹಾಗೆ ಮಾಡಲು ವಿಫಲವಾದರೆ ನಮಗೆ ಮತ್ತು ನಮ್ಮ ಕುಟುಂಬಗಳಿಗೆ ನೋವಿನ ಭವಿಷ್ಯಕ್ಕೆ ಕಾರಣವಾಗಬಹುದು. ಪ್ರತಿಯೊಬ್ಬ ಹಿಂದುವೂ ಮೋದಿಜಿಯನ್ನು ಬೆಂಬಲಿಸಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು. ಜೈ ಹಿಂದ್, ಜೈ ಭಾರತ್, ವಂದೇ ಮಾತರಂ ಎಂದು ಬರೆಯಲಾಗಿತ್ತು.

ಇಸ್ರೇಲ್‌ನ ದಾಳಿಯನ್ನು ಭಾರತೀಯರಲ್ಲಿ ವಿಶೇಷವಾಗಿ ಹಿಂದೂಗಳಲ್ಲಿ ಭಯವನ್ನು ಹುಟ್ಟುಹಾಕಲು ಇಸ್ರೇಲ್‌ನ ದಾಳಿಯನ್ನು ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇಸ್ರೇಲ್‌ನಲ್ಲಿನ ಘಟನೆಗಳಿಗಿಂತ ಹೆಚ್ಚು ಅಶುಭ ಸಂಗತಿಯು ಶೀಘ್ರದಲ್ಲೇ ಭಾರತದಲ್ಲಿ ಸಂಭವಿಸಲಿದೆ ಎಂದು ನಿರೂಪಿಸಲಾಗಿದೆ. ವಾಟ್ಸಾಪ್‌, ಫೇಸ್‌ಬುಕ್‌  ಎಕ್ಸ್‌ನಲ್ಲಿ ವೈರಲ್ ಆಗಿರುವ ಈ ಸಂದೇಶಗಳು ವೀಡಿಯೊಗಳು, ಚಿತ್ರಗಳು ಮತ್ತು ಪಠ್ಯದ ರೂಪದಲ್ಲಿ ತಪ್ಪು ಮಾಹಿತಿಯನ್ನು ಹರಡಲಾಗಿದೆ.

ವಾಟ್ಸಾಪ್‌ನಲ್ಲಿ ವ್ಯಾಪಕವಾಗಿ ಫಾರ್ವರ್ಡ್ ಮಾಡಲಾದ ಒಂದು ನಿರ್ದಿಷ್ಟ ಸಂದೇಶವು ಎಕ್ಸ್‌ನಲ್ಲಿ ವಿಶೇಷವಾಗಿ ವೈರಲ್‌ ಆಗಿತ್ತು. ಈ ಸಂದೇಶವು ಪ್ರಧಾನಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುವುದು ಹಿಂದೂಗಳ ನರಮೇಧಕ್ಕೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸುವ ಚಿತ್ರವನ್ನು ಒಳಗೊಂಡಿದೆ. ಇದನ್ನು ಗೌರವಾನ್ವಿತ ಅಮೇರಿಕನ್ ಪತ್ರಕರ್ತೆ, ಜಾನೆಟ್ ಲೆವಿಗೆ ಲಿಂಕ್ ಮಾಡಲಾಗಿದೆ.  ಇದನ್ನು 300ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಮಾಡಲಾಗಿದೆ ಮತ್ತು 400ಕ್ಕೂ ಹೆಚ್ಚು ಬಾರಿ ಲೈಕ್ ಮಾಡಲಾಗಿದೆ.

ಈ ಪರಿಸ್ಥಿತಿ ನಿಜಕ್ಕೂ ದುರದೃಷ್ಟಕರ. ಸಾಮಾನ್ಯ ಭಾರತೀಯರಿಂದ ಮುಸ್ಲಿಂ ವಿರೋಧಿ ಪ್ರಚಾರ ಮತ್ತು ತಪ್ಪು ಮಾಹಿತಿಯ ಪ್ರಚಾರವು ಭಾರತದ ಸಾಮಾಜಿಕ ಒಗ್ಗಟ್ಟಿಗೆ ಅಪಾಯವನ್ನುಂಟುಮಾಡುತ್ತದೆ. ಗಾಝಾ ಯುದ್ಧ ವಿಚಾರದಲ್ಲಿ ಭಾರತವು ಮೊದಲು ತಟಸ್ಥ ನಿಲುವನ್ನು ಬಿಂಬಿಸಲು ಪ್ರಯತ್ನಿಸಿದೆ. ಬಳಿಕ ಗಾಝಾಕ್ಕೆ ಮಾನವೀಯ ನೆರವು ನೀಡುವಂತೆ ಪ್ರತಿಪಾದಿಸಿದೆ. ಕೆಲವೇ ದಿನಗಳ ಹಿಂದೆ ಭಾರತವು ಯುಎನ್ ಜನರಲ್ ಅಸೆಂಬ್ಲಿಯಲ್ಲಿ ‘ಕದನ ವಿರಾಮ’ವನ್ನು ಬೆಂಬಲಿಸುವ ನಿರ್ಣಯದ ಪರ ಮತಚಲಾಯಿಸಿದೆ. ವ್ಯೂಹಾತ್ಮಕ ಮತ್ತು ಆರ್ಥಿಕ ಕಾರಣಗಳಿಗಾಗಿ ಅರಬ್ ಪ್ರಪಂಚದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳುವುದು ಭಾರತಕ್ಕೆ ನಿರ್ಣಾಯಕವಾಗಿದೆ. ಆದರೆ ಮುಸ್ಲಿಮರ ವಿರುದ್ಧ ತಪ್ಪು ಮಾಹಿತಿಯ ಹರಡುವಿಕೆಯು ಈ ವಿದೇಶಾಂಗ ನೀತಿ ಹಿತಾಸಕ್ತಿಗಳಿಗೆ ಮತ್ತು ಸ್ಥಾನಗಳಿಗೆ ನೇರ ಬೆದರಿಕೆಯಾಗಿದೆ. ಜಾಗತಿಕ ಮಾಧ್ಯಮಗಳು ಈಗಾಗಲೇ ಈ ವಿಚಾರವನ್ನು ಗಮನಿಸಿವೆ. ಅಕ್ಟೋಬರ್ 7ರ ಹಮಾಸ್ ದಾಳಿಯ ನಂತರ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿನ ಹಲವಾರು ವರದಿಗಳು ಮುಸ್ಲಿಮರು ಮತ್ತು ಪ್ಯಾಲೆಸ್ತೀನಿಯರ ವಿರುದ್ಧದ ತಪ್ಪು ಮಾಹಿತಿಯನ್ನು ಭಾರತೀಯ ಖಾತೆಗಳಲ್ಲಿ ಹೇಗೆ ಪತ್ತೆಹಚ್ಚಬಹುದು ಎಂಬುದನ್ನು ಎತ್ತಿ ತೋರಿಸಿವೆ. ಇದು ಅರಬ್ ಜಗತ್ತಿನಲ್ಲಿ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತದ ಅಭಿಮಾನ ಮತ್ತು ಹಿತಾಸಕ್ತಿಗಳಿಗೆ ನೇರ ಸವಾಲನ್ನು ಒಡ್ಡಿದೆ ಎಂದು ವಿದೇಶಾಂಗ ನೀತಿ ತಜ್ಞ ಮೊಹಮ್ಮದ್ ಜೀಶನ್ ಅವರು ಹೇಳಿದ್ದಾರೆ.

ಈ ಹಿಂದೆ, ಕೆಲವು ಹಮಾಸ್ ಸಶಸ್ತ್ರದಾರಿಗಳ ಗುಂಪು ಯಹೂದಿ ಮಗುವನ್ನು ಅಪಹರಿಸುವುದು ಮತ್ತು ಟ್ರಕ್‌ನ ಹಿಂಭಾಗದಲ್ಲಿ ಚಿಕ್ಕ ಬಾಲಕನ ಶಿರಚ್ಛೇದವನ್ನು ಮಾಡುವುದು ವೈರಲ್‌ ಆಗಿತ್ತು. ಇದನ್ನು ಸಾವಿರಾರು ಮಂದಿ ಟ್ವೀಟ್‌ ಮಾಡಿದ್ದರು. ಆದರೆ ಇದು ಸುಳ್ಳು ಎನ್ನುವುದು ಫ್ಯಾಕ್ಟ್‌ ಚೆಕ್‌ ವೇಳೆ ಬಯಲಾಗಿತ್ತು. BOOM ಭಾರತದ ಅತ್ಯಂತ ಹೆಸರುವಾಸಿ ಫ್ಯಾಕ್ಟ್‌ ಸಂಸ್ಥೆಯಾಗಿದೆ. ಇದು ಭಾರತದ ಎಕ್ಸ್‌ ಬಳಕೆದಾರರ ಹೆಚ್ಚಿನ ಸುಳ್ಳು ಮಾಹಿತಿ ಹಂಚಿಕೆಯನ್ನು ಬಯಲು ಮಾಡಿದೆ.

BOOM ಪ್ರಕಾರ, ತಪ್ಪು ಮಾಹಿತಿಯನ್ನು ಹಂಚಿಕೊಳ್ಳುವ ಪ್ರಭಾವಿಗಳು ಹೆಚ್ಚಾಗಿ ಪ್ಯಾಲೆಸ್ತೀನ್‌ ಬಗ್ಗೆ ನೆಗೆಟಿವ್‌ ಮಾಹಿತಿ ವೈರಲ್‌ ಮಾಡುತ್ತಿದ್ದು, ಇಸ್ರೇಲ್‌ನ್ನು ಬೆಂಬಲಿಸುತ್ತಿದ್ದಾರೆ. ಅವರು ಪ್ಯಾಲೆಸ್ತೀನಿಯನ್ನರನ್ನು ಕ್ರೂರವಾಗಿ ಪ್ರದರ್ಶಿಸಲು ಪ್ರಯತ್ನಿಸಿದ್ದಾರೆ. ಉದಾಹರಣೆಗೆ ಖಾತೆಯೊಂದು ವಿಡಿಯೋವನ್ನು ಹಂಚಿಕೊಂಡಿತ್ತು. ಅದು ಪ್ಯಾಲೆಸ್ತೀನಿ ಹೋರಾಟಗಾರರು  ಲೈಂಗಿಕ ಗುಲಾಮರನ್ನಾಗಿ ಮಾಡಿಕೊಂಡಿದ್ದಾರೆಂದು ಡಜನ್‌ಗಟ್ಟಲೆ ಯುವತಿಯರನ್ನು ತೋರಿಸುತ್ತದೆ. ಆದರೆ ವಿಡಿಯೋ ಜೆರುಸಲೆಮ್‌ನ ಶಾಲೆಯ ಪ್ರವಾಸದ ವಿಡಿಯೋವಾಗಿತ್ತು. ವಿಡಿಯೋದಲ್ಲಿ ಯುವತಿಯರು ಮೊಬೈಲ್‌ ಬಳಸುವುದು ಕೂಡ ಕಂಡು ಬಂದಿತ್ತು. ವೀಡಿಯೊವನ್ನು ಸಾವಿರಾರು ಮಂದಿ ರೀಟ್ವೀಟ್‌ ಮಾಡಿದ್ದಾರೆ. ವಿಡಿಯೋ ಕನಿಷ್ಠ 6 ಮಿಲಿಯನ್ ಇಂಪ್ರೆಶನ್‌ಗಳನ್ನು ಗಳಿಸಿತ್ತು. ವಿಡಿಯೋವನ್ನು ಹಂಚಿಕೊಳ್ಳುವ ಖಾತೆಗಳಲ್ಲಿ ಹೆಚ್ಚಿನವು ಭಾರತದ್ದಾಗಿತ್ತು.

ಮತ್ತೊಂದು ಉದಾಹರಣೆಯಲ್ಲಿ ಹಮಾಸ್ ಸಶಸ್ತ್ರ ಗುಂಪು ಯಹೂದಿ ಮಗುವನ್ನು ಅಪಹರಿಸುತ್ತಿದ್ದಾರೆ ಎಂದು ತಪ್ಪಾಗಿ ತೋರಿಸುವ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವೀಡಿಯೊ ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ತಪ್ಪುದಾರಿಗೆಳೆಯುವ ವಿಡಿಯೋವನ್ನು ಅತಿಹೆಚ್ಚು ಭಾರತೀಯ ಖಾತೆಗಳಿಂದ ಹಂಚಿಕೊಳ್ಳಲಾಗಿದೆ. ಈ ಕುರಿತ ಟ್ವೀಟ್‌ಗಳು 3 ಮಿಲಿಯನ್‌ಗಿಂತಲೂ ಹೆಚ್ಚು ಇಂಪ್ರೆಶನ್‌ಗಳನ್ನು ಪಡೆದಿವೆ. ಆದರೆ ವೀಡಿಯೊ ಸೆಪ್ಟೆಂಬರ್‌ನದ್ದಾಗಿದೆ ಮತ್ತು ವಿಡಿಯೋಗೆ ಮತ್ತು ಗಾಜಾಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗಿದೆ.

ಈ ಸುಳ್ಳು ವಿಡಿಯೋಗಳನ್ನು ಹಂಚಿಕೊಳ್ಳುವ ಅನೇಕ ಖಾತೆಗಳು ಎಕ್ಸ್‌ನಲ್ಲಿ ಮುಸ್ಲಿಂ ವಿರೋಧಿ ಕಾಮೆಂಟ್‌ಗಳನ್ನು ಹೆಚ್ಚಾಗಿ ಪೋಸ್ಟ್ ಮಾಡಿದೆ. ಹಮಾಸ್‌ನಿಂದ ಬಾಲಕನ ಶಿರಚ್ಛೇದನದ ಸುಳ್ಳು ವೀಡಿಯೊವನ್ನು ಹಂಚಿಕೊಂಡಿರುವ ಶ್ರೀ ಸಿನ್ಹಾಎಂಬ ಖಾತೆಯು ಅದೇ ಪೋಸ್ಟ್‌ನಲ್ಲಿ #IslamIsTheProblem ಎಂಬ ಹ್ಯಾಶ್‌ಟ್ಯಾಗ್‌ನ್ನು ಸೇರಿಸಿದೆ. ಫೆಲೆಸ್ತೀನಿಯರು ಲೈಂಗಿಕ ಗುಲಾಮರನ್ನಾಗಿಸಲು ಯುವತಿಯರ ಅಪಹರಣ ಎಂಬ ಸುಳ್ಳು ಟ್ವೀಟ್ ಹಂಚಿಕೊಂಡ ಮತ್ತೊಂದು ಖಾತೆಯು ಈ ಹಿಂದೆ ‘ಒಂದೇ ವ್ಯತ್ಯಾಸವೆಂದರೆ ಮುಸ್ಲಿಂ ಹುಡುಗಿಯರು ಹಿಂದೂ ಧರ್ಮಕ್ಕೆ ಮತಾಂತರಗೊಂಡಾಗ ಅವರು ಎಂದೆಂದಿಗೂ ಸಂತೋಷದಿಂದ ಬದುಕುತ್ತಾರೆ. ಆದರೆ ಹಿಂದೂ ಹುಡುಗಿಯರು ಇಸ್ಲಾಂಗೆ ಮತಾಂತರಗೊಂಡಾಗ ಅವರು ಸೂಟ್‌ಕೇಸ್‌ ಅಥವಾ ಫ್ರಿಡ್ಜ್‌ನಲ್ಲಿ ಕೊನೆಗೊಳ್ಳುತ್ತಾರೆ ಎಂದು ಬರೆದಿತ್ತು.

ನಿವೃತ್ತ ಭಾರತೀಯ ಸೈನಿಕನಿಗೆ ಸೇರಿದ್ದೆಂದು ಹೇಳಲಾದ ಒಂದು ಭಾರತೀಯ ಖಾತೆಯು, ಇಸ್ರೇಲ್ ಪ್ಯಾಲೆಸ್ತೀನನ್ನು ಗ್ರಹದಿಂದಲೇ ಕೊನೆಗೊಳಿಸಬೇಕು ಎಂದು ಹೇಳಿದೆ. ಭಾರತವು ಇಸ್ಲಾಮೋಫೋಬಿಯಾ ಸಮಸ್ಯೆಯನ್ನು ಹೊಂದಿದೆ ಎಂಬುದು ರಹಸ್ಯವಲ್ಲ, ಇದು ಪ್ರಧಾನಿ ನರೇಂದ್ರ ಮೋದಿ ಆಳ್ವಿಕೆ ಬಳಿಕ  ಹೆಚ್ಚಾಗಿದೆ. ಆಸ್ಟ್ರೇಲಿಯಾ ಮೂಲದ ಇಸ್ಲಾಮಿಕ್ ಕೌನ್ಸಿಲ್ ಆಫ್ ವಿಕ್ಟೋರಿಯಾದ ವರದಿಯ ಪ್ರಕಾರ, ಎಲ್ಲಾ ಇಸ್ಲಾಮೋಫೋಬಿಕ್ ಟ್ವೀಟ್‌ಗಳಲ್ಲಿ ಹೆಚ್ಚಿನದನ್ನು ಭಾರತದಲ್ಲಿ ಕಾಣಬಹುದು ಎಂದು ಹೇಳಿದೆ.

ಸತ್ಯ-ಪರಿಶೀಲನಾ ವೆಬ್‌ಸೈಟ್ ಆಲ್ಟ್‌ನ್ಯೂಸ್‌ನ ಸಹ-ಸಂಸ್ಥಾಪಕ ಮತ್ತು ಸಂಪಾದಕ ಪ್ರತೀಕ್ ಸಿನ್ಹಾ ಈ ಕುರಿತು ಟ್ವೀಟ್ ಮಾಡಿದ್ದು, ಭಾರತೀಯ ಮುಖ್ಯವಾಹಿನಿಯ ಮಾದ್ಯಮಗಳಲ್ಲಿ ಮತ್ತು ಸಾಮಾಜಿಕ ಮಾದ್ಯಮಗಳಲ್ಲಿ ಇಸ್ರೇಲ್‌ಗೆ ಬೆಂಬಲವಾಗಿ ತನ್ನ ತಪ್ಪು ಮಾಹಿತಿ ರಫ್ತು ಮಾಡಲಾಗುತ್ತಿದೆ. ಜಗತ್ತು ಈಗ ಭಾರತೀಯ ಬಲಪಂಥೀಯರು ಭಾರತವನ್ನು ಹೇಗೆ ವಿಶ್ವದ ತಪ್ಪು ಮಾಹಿತಿಯ ರಾಜಧಾನಿಯನ್ನಾಗಿ ಮಾಡಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು.

ಇದನ್ನು ಓದಿ: ಗೌರಿ ಲಂಕೇಶ್‌ ಹತ್ಯೆ ಪ್ರಕರಣ: ಜಾಮೀನಿನ ಮೇಲಿರುವ ಆರೋಪಿಗೆ ನೊಟೀಸ್‌ ನೀಡಿದ ಸುಪ್ರೀಂಕೋರ್ಟ್‌

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...