Homeಮುಖಪುಟಹುತಾತ್ಮರ ದಿನದಂದು ಮಹಾಘಟಬಂಧನ್‌ನ ಎಲ್ಲಾ ಪಕ್ಷಗಳೂ ಮಾನವ ಸರಪಳಿ ನಿರ್ಮಿಸಲಿವೆ: ತೇಜಸ್ವಿ ಯಾದವ್

ಹುತಾತ್ಮರ ದಿನದಂದು ಮಹಾಘಟಬಂಧನ್‌ನ ಎಲ್ಲಾ ಪಕ್ಷಗಳೂ ಮಾನವ ಸರಪಳಿ ನಿರ್ಮಿಸಲಿವೆ: ತೇಜಸ್ವಿ ಯಾದವ್

ಬಿಹಾರದ ಯುವಜನತೆಗೆ 19 ಲಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡುವುದಾಗಿ ಎನ್‌ಡಿಎ ಮೈತ್ರಿಕೂಟ ಹೇಳಿತ್ತು.

- Advertisement -
- Advertisement -

“ಹುತಾತ್ಮರ ದಿನದಂದು ಮಹಾಘಟಬಂಧನ್‌ನ ಎಲ್ಲಾ ಪಕ್ಷಗಳೂ ಮಾನವ ಸರಪಳಿ ನಿರ್ಮಿಸಲಿವೆ” ಎಂದು ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಹೇಳಿದ್ದಾರೆ.

ಬಿಹಾರದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ ಎಂದು ಆರೋಪಿಸಿರುವ ತೇಜಸ್ವಿ ಯಾದವ್, “ಹುತಾತ್ಮರ ದಿನದಂದು ಮಹಾಘಟಬಂಧನ್‌ನ ಎಲ್ಲಾ ಪಕ್ಷಗಳು ಸೇರಿ ಮಾನವ ಸರಪಳಿಯನ್ನು ನಿರ್ಮಿಸಬೇಕು ಎಂದು ನಾವು ನಿರ್ಧರಿಸಿದ್ದೇವೆ. ಇದು ಪಂಚಾಯತ್ ಹಂತದವರೆಗೂ ನಡೆಯಲಿದೆ. ಹಳ್ಳಿಗಳಲ್ಲಿ ವಾಸಿಸುವವರನ್ನು ಮತ್ತು ಕೃಷಿಯಲ್ಲಿ ತೊಡಗಿರುವವರನ್ನು, ಪದವಿ ಪಡೆದಿರುವ ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ರೈತರಿಗಾಗಿ ಗಲ್ಲಿಗೇರಲು ಸಿದ್ಧ- ತಾಕತ್ತಿದ್ದರೆ ಬಂಧಿಸಿ’: ನಿತೀಶ್‌ಗೆ ತೇಜಸ್ವಿ ಯಾದವ್ ಸವಾಲು

ಈ ಕುರಿತು ಎಎನ್ಐ ಟ್ವೀಟ್ ಮಾಡಿದ್ದು, “2006 ರ ನಂತರ ರೈತರು ಕಾರ್ಮಿಕರಾಗಲು ಪ್ರಾರಂಭಿಸಿದ್ದಾರೆ. ಬಿಹಾರದಲ್ಲಿ ವಲಸೆ ಇನ್ನೂ ನಿಂತಿಲ್ಲ. ಇದು ಪ್ರಮುಖ ವಿಷಯ” ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬಿಹಾರ: 19 ಲಕ್ಷ ಉದ್ಯೋಗ ನೀಡದಿದ್ದರೆ ರಾಜ್ಯದಾದ್ಯಂತ ತೀವ್ರ ಪ್ರತಿಭಟನೆ – ತೇಜಸ್ವಿ ಯಾದವ್ ಎಚ್ಚರಿಕೆ

ಕಳೆದ ವರ್ಷ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಇದರ ಭಾಗವಾಗಿ ಮಹಾಘಟಬಂಧನ್ ಮೈತ್ರಿಕೂಟದ ಪ್ರಣಾಳಿಕೆಯಲ್ಲಿ ಬಿಹಾರದ ಯುವಜನತೆಗೆ 10 ಲಕ್ಷ ಉದ್ಯೋಗ ನೀಡುವುದಾಗಿ ಘೋಷಿಸಲಾಗಿತ್ತು. ಇದರ ನಂತರ ಎನ್‌ಡಿಎ ಮೈತ್ರಿಕೂಟವೂ 19 ಲಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡುವುದಾಗಿ ಹೇಳಿತ್ತು.

ಈ ಪೈಪೋಟಿಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸ್ಪಷ್ಟ ಬಹಮತ ಪಡೆದು ಬಿಹಾರ ಆಡಳಿತದ ಚುಕ್ಕಾಣಿ ಹಿಡಿಯಿತು.

ಆದರೆ ಎದೆಗುಂದದ ತೇಜಸ್ವಿ ಯಾದವ್, “19 ಲಕ್ಷ ಉದ್ಯೋಗ ಸೃಷ್ಟಿಸದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ದೊಡ್ಡ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಸಿದ್ದರು.


ಇದನ್ನೂ ಓದಿ: ಬಿಹಾರ: ಜನಾದೇಶ ನನ್ನ ಪರವಾಗಿದೆ, ಗೆದ್ದಿರುವುದು ನಾನೇ- ತೇಜಸ್ವಿ ಯಾದವ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...