Homeಮುಖಪುಟಬೃಹತ್ ಮುನ್ನಡೆ: ಗುಜರಾತ್‌ನಲ್ಲಿ ಸತತ 7ನೇ ಬಾರಿಗೆ ಅಧಿಕಾರದತ್ತ ಬಿಜೆಪಿ

ಬೃಹತ್ ಮುನ್ನಡೆ: ಗುಜರಾತ್‌ನಲ್ಲಿ ಸತತ 7ನೇ ಬಾರಿಗೆ ಅಧಿಕಾರದತ್ತ ಬಿಜೆಪಿ

- Advertisement -
- Advertisement -

ಗುಜರಾತ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು ಹಲವು ಸುತ್ತಿನ ಮತ ಎಣಿಕೆಯಲ್ಲಿ ಆಡಳಿತರೂಢ ಬಿಜೆಪಿಯು ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಸದ್ಯಕ್ಕೆ ಒಟ್ಟು 182 ಕ್ಷೇತ್ರಗಳ ಪೈಕಿ ಬಿಜೆಪಿಯು 152 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸತತ 7ನೇ ಬಾರಿಗೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿದೆ.

ಕಳೆದ 2017ರ ಚುನಾವಣೆಯಲ್ಲಿ ಬಿಜೆಪಿಯು 99 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಏದುಸಿರು ಬಿಟ್ಟಿತ್ತು. ಆದರೆ ಈ ಬಾರಿ ಅನಾಯಾಸವಾಗಿ 140-150 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆಯಿದೆ. ಆ ಮೂಲಕ ಇದುವರೆಗಿನ ಅತಿ ದೊಡ್ಡ ಅಂತರದ ಬೃಹತ್ ವಿಜಯಕ್ಕೆ ಸನಿಹದಲ್ಲಿದೆ. ಗುಜರಾತ್‌ನಲ್ಲಿ ಇದುವರೆಗಿನ ಬಿಜೆಪಿ ಸಾಧನೆ ಕೆಳಗಿನಂತಿದೆ.

1980: ಬಿಜೆಪಿ – 09, ಕಾಂಗ್ರೆಸ್- 141

1985: ಬಿಜೆಪಿ -11, ಕಾಂಗ್ರೆಸ್- 149

1990: ಬಿಜೆಪಿ -67, ಕಾಂಗ್ರೆಸ್- 33, ಜನತಾದಳ-70

1995: ಬಿಜೆಪಿ -121, ಕಾಂಗ್ರೆಸ್- 45

1998: ಬಿಜೆಪಿ -117, ಕಾಂಗ್ರೆಸ್- 53

2002: ಬಿಜೆಪಿ -127, ಕಾಂಗ್ರೆಸ್- 51

2007: ಬಿಜೆಪಿ -117, ಕಾಂಗ್ರೆಸ್- 59

2012: ಬಿಜೆಪಿ -119, ಕಾಂಗ್ರೆಸ್- 57

2017: ಬಿಜೆಪಿ -99, ಕಾಂಗ್ರೆಸ್- 77

2022: ಬಿಜೆಪಿ -152(ಮುನ್ನಡೆ), ಕಾಂಗ್ರೆಸ್- 20(ಮುನ್ನಡೆ)

2002ರ ನಂತರ ಅತಿ ದೊಡ್ಡ ಸಾಧನೆ

ಬಿಜೆಪಿಯು ಗುಜರಾತ್‌ನಲ್ಲಿ 1995ರಿಂದ ಅಧಿಕಾರದಲ್ಲಿದೆ. ಅದು 2002ರಲ್ಲಿ 127 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅತಿದೊಡ್ಡ ಸಾಧನೆ ಮಾಡಿತ್ತು. ಆದರೆ 2017ರ ವೇಳೆಗೆ ಅದರ ಸಾಧನೆ 99 ಸೀಟುಗಳಿಗೆ ಕುಸಿದಿತ್ತು. ಈಗ 2022ರಲ್ಲಿ 150 ರಷ್ಟು ಸ್ಥಾನ ಗೆಲ್ಲುವ ಮೂಲಕ ತನ್ನ ಐಸಿಹಾಸಿಕ ಸಾಧನೆಗೆ ಸಜ್ಜಾಗಿದೆ.

ಕುಸಿದ ಕಾಂಗ್ರೆಸ್

ಕಾಂಗ್ರೆಸ್ ಪಕ್ಷವು 1985ರಲ್ಲಿ 149 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಭರ್ಜರಿ ಸಾಧನೆ ಮಾಡಿತ್ತು. ಆದರೆ ಆನಂತರ ಅದು ನಿಧಾನವಾಗಿ ಕುಸಿಯುತ್ತಲೇ ಸಾಗಿದೆ. 1990ರಲ್ಲಿ ಅದು ಕೇವಲ 33 ಸ್ಥಾನ ಗಳಿಸುವ ಮೂಲಕ ಕಳಪೆ ಸಾಧನೆ ತೋರಿತ್ತು. ಆದರೆ ಈ ಬಾರಿ ಅದು ಇನ್ನೂ ಕುಸಿಯುವ ಸಾಧ್ಯತೆಯಿದೆ.

ವೋಟು ಗಳಿಸಿದರೆ ಹೆಚ್ಚು ಸೀಟು ಗಳಿಸಲಾಗದ ಆಪ್

ಗುಜರಾತ್ ಚುನಾವಣೆಗೆ ಭರ್ಜರಿ ಎಂಟ್ರಿ ಕೊಟ್ಟಿದ್ದ ಆಪ್ ಪಕ್ಷವು ಶೇ.13 ರಷ್ಟು ಮತಗಳನ್ನು ಪಡೆದಿದೆ ಗಮನ ಸೆಳೆದಿದೆ. ಆದರೆ 6 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ಆಪ್ ನಗರ ಪ್ರದೇಶಗಳಲ್ಲಿ ಬಿಜೆಪಿಯ ಮತ ಕಬಳಿಸುತ್ತದೆ ಎಂದು ಅಂದಾಜಿಸಲಾಗಿತ್ತು, ಆದರೆ ಅದು ಕಾಂಗ್ರೆಸ್‌ನ ಮತಗಳನ್ನು ಬುಟ್ಟಿಗೆ ಹಾಕಿಕೊಂಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಚುನಾವಣಾ ಫಲಿತಾಂಶ; ಗುಜರಾತ್‌ನಲ್ಲಿ ಬಿಜೆಪಿ, ಹಿಮಾಚಲದಲ್ಲಿ ಕಾಂಗ್ರೆಸ್ ಮುನ್ನಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...