Homeಮುಖಪುಟಹಿಮಾಚಲಪ್ರದೇಶ ವಿಧಾನಸಭಾ ಚುನಾವಣೆ: ಗೆಲುವಿನತ್ತ ಕಾಂಗ್ರೆಸ್ ಹೆಜ್ಜೆ

ಹಿಮಾಚಲಪ್ರದೇಶ ವಿಧಾನಸಭಾ ಚುನಾವಣೆ: ಗೆಲುವಿನತ್ತ ಕಾಂಗ್ರೆಸ್ ಹೆಜ್ಜೆ

- Advertisement -
- Advertisement -

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾದ ಮೂರು ಗಂಟೆಗಳಿಗೂ ಹೆಚ್ಚು ಸಮಯದ ನಂತರ ಬಿಜೆಪಿ ಹಿನ್ನಡೆ ಕಾಣುತ್ತಿದೆ. ಕೆಲವೇ ಕ್ಷಣಗಳ ಹಿಂದೆ, ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಹಿಂದಿಕ್ಕಿ 40 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಇದೇ ವೇಳೆ ಬಿಜೆಪಿ 26 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿಯು ಕಾಂಗ್ರೆಸ್‌ಗಿಂತ ಸ್ವಲ್ಪ ಹೆಚ್ಚಿನ ಹಿಡಿತ ಸಾಧಿಸುವುದಾಗಿ ಎಕ್ಸಿಟ್ ಪೋಲ್‌ಗಳು ಹೇಳಿದ್ದವು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಮೂರು ದಶಕಗಳ ರಾಜಕೀಯ ಸಂಪ್ರದಾಯವೇ ತಲೆಕೆಳಗಾಗುತ್ತದೆ. ಏಕೆಂದರೆ ಒಮ್ಮೆ ಬಿಜೆಪಿ, ಒಮ್ಮೆ ಕಾಂಗ್ರೆಸ್ ಗೆಲ್ಲುತ್ತಿರುವುದು ಇಲ್ಲಿನ ಸಂಪ್ರದಾಯವಾಗಿದೆ. ಆದರೆ ಹಿಮಾಚಲದಲ್ಲಿ ಸರ್ಕಾರ ಬದಲಾಗಲಿದೆಯೇ ಹೊರತು ರಿವಾಜ್ (ಸಂಪ್ರದಾಯ) ಅಲ್ಲ ಎಂದು ಕಾಂಗ್ರೆಸ್ ಪುನರುಚ್ಚರಿಸಿದೆ.

ಸೋಮವಾರ ಹೊರಬಿದ್ದ ಎಕ್ಸಿಟ್ ಪೋಲ್‌ಗಳು ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ 24-41 ಸೀಟುಗಳನ್ನು ಮತ್ತು ಕಾಂಗ್ರೆಸ್‌ಗೆ 20-40 ಸೀಟುಗಳನ್ನು ನೀಡಿದ್ದವು. 68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಪಕ್ಷಕ್ಕೆ 35 ಸ್ಥಾನಗಳ ಅಗತ್ಯವಿದೆ. ಹೆಚ್ಚಿನ ಎಕ್ಸಿಟ್ ಪೋಲ್‌ಗಳು ಗುಡ್ಡಗಾಡು ರಾಜ್ಯದಲ್ಲಿ ಬಿಜೆಪಿ ಗರಿಷ್ಠ 40 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿವೆ. ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಪಕ್ಷವು 30-40 ಸ್ಥಾನಗಳನ್ನು, ಬಿಜೆಪಿ 24-34 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ.

ಹಿಮಾಚಲಪ್ರದೇಶದ 68 ಸ್ಥಾನಗಳಿಗೆ ಒಂದೇ ಹಂತದಲ್ಲಿ ನವೆಂಬರ್ 12 ರಂದು ಮತದಾನ ನಡೆದಿತ್ತು.

ಹರಿಯಾಣ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಕುಲದೀಪ್ ಸಿಂಗ್ ರಾಥೋಡ್ ಅವರು ಸಿಪಿಎಂನ ರಾಕೇಶ್ ಸಿಂಘಾ ಅವರಿಗಿಂತ ಕಡಿಮೆ (67 ಮತಗಳು) ಮುನ್ನಡೆ ಸಾಧಿಸಿದ್ದಾರೆ.

ಹಿಮಾಚಲದ ಶಿಮ್ಲಾ ಜಿಲ್ಲೆಯಲ್ಲಿ ಎಂಟು ಕ್ಷೇತ್ರಗಳಿವೆ. ಇದು ಸೇಬುಬೆಳೆಗಾರರ ಪ್ರದೇಶವಾಗಿದೆ. ಈ ಪೈಕಿ ಸದ್ಯ 5ರಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ. ಇದರಲ್ಲಿ ರೋಹ್ರು, ಥಿಯೋಗ್ ಮತ್ತು ಶಿಮ್ಲಾ ಸೇರಿವೆ. ಬಿಜೆಪಿ ಮುಖಂಡ ನರೇಂದ್ರ ಬ್ರಗ್ತಾ ಅವರ ನಿಧನದ ನಂತರ ತೆರವಾದ ಜುಬ್ಬಲ್ ಕೊಟ್‌ಖಾಯ್ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು. ಒಮ್ಮೆ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿರುವ ರಾಂಪುರದಲ್ಲಿ ಬಿಜೆಪಿ ಅಲ್ಪ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದೆ. ಆ್ಯಪಲ್ ಬೆಲ್ಟ್ ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಮಾಜಿ ಸಿಎಂ ಪ್ರೇಮ್ ಕುಮಾರ್ ಧುಮಾಲ್ ಅವರ ಅಧಿಕಾರಾವಧಿಯಲ್ಲಿ ಬಿಜೆಪಿ ಈ ಪ್ರದೇಶದಲ್ಲಿ ಖಾತೆ ತೆರೆದಿತ್ತು.

ಡಾಲ್‌ಹೌಸಿಯಲ್ಲಿ ಕಾಂಗ್ರೆಸ್‌ನ ಆರು ಬಾರಿ ಶಾಸಕಿಯಾಗಿರುವ ಆಶಾ ತಿವಾರಿ ಅವರು ಬಿಜೆಪಿಯ ಡಿಎಸ್ ಠಾಕೂರ್ ವಿರುದ್ಧ ಹಿನ್ನಡೆ ಸಾಧಿಸಿದ್ದಾರೆ.

ಪ್ರತಿ ಐದು ವರ್ಷಗಳಿಗೊಮ್ಮೆ ಪರ್ಯಾಯ ಪಕ್ಷಗಳನ್ನು ಆಯ್ಕೆ ಮಾಡುವ ಹಿಮಾಚಲ ಪ್ರದೇಶದ ರಾಜಕೀಯ ಕುತೂಹಲ ಕೆರಳಿಸಿದೆ. ಆಪರೇಷನ್‌ ಕಮಲದ ಭೀತಿಯು ಕಾಂಗ್ರೆಸ್ ಪಕ್ಷಕ್ಕಿದೆ.

ಚುನಾವಣೆಯ ನಂತರದ ಸನ್ನಿವೇಶವನ್ನು ನಿರ್ವಹಿಸಲು ಬಿಜೆಪಿ ಈಗಾಗಲೇ ತನ್ನ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರನ್ನು ಶಿಮ್ಲಾಕ್ಕೆ ಕಳುಹಿಸಿದೆ. ಬಿಜೆಪಿ ಶಾಸಕರು ಖರೀದಿಯಾಗದಂತೆ ನೋಡಿಕೊಳ್ಳುವುದು ಅಥವಾ ಸಮಯ ಬಿದ್ದರೆ ಇತರ ಶಾಸಕರನ್ನು ಬಿಜೆಪಿಯತ್ತ ಸೆಳೆಯುವುದು ಅವರ ಜವಾಬ್ದಾರಿಯಾಗಿದೆ ಎಂದು ಹೇಳಲಾಗುತ್ತಿದೆ.

ಈ ಸಮಯದಲ್ಲಿ ಐವರು ಸ್ವತಂತ್ರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಫಲಿತಾಂಶಗಳನ್ನು ಘೋಷಿಸಿದ ನಂತರ ಈ ಸ್ವತಂತ್ರ ಅಭ್ಯರ್ಥಿಗಳು ಪ್ರಮುಖ ಪಾತ್ರವನ್ನು ವಹಿಸುತ್ತಾರೆ.

ಪ್ರಮುಖ ಸ್ಥಾನವಾದ ಕಸುಂಪ್ಟಿ ಪ್ರಸ್ತುತ ಕಾಂಗ್ರೆಸ್‌ನ ಅನಿರುದ್ಧ್ ಸಿಂಗ್ ಪರವಾಗಿ ಹೋಗುತ್ತಿದೆ. ಅವರು ಬಿಜೆಪಿಯ ಸುರೇಶ್ ಭಾರದ್ವಾಜ್ ಅವರಿಗಿಂತ ಸುಮಾರು 4,500 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಎನ್‌ಡಿಎ ಮೈತ್ರಿ ಪಕ್ಷದ ನಾಯಕ ರಾಜೀನಾಮೆ

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬಿಜೆಪಿಯ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರ ಪುತ್ರನಿಗೆ ಟಿಕೆಟ್ ನೀಡಿದ ಬೆನ್ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ ಎನ್‌ಡಿಎ ಮೈತ್ರಿ ಪಕ್ಷ ಆರ್‌ಎಲ್‌ಡಿಯ ರಾಷ್ಟ್ರೀಯ ವಕ್ತಾರ ರೋಹಿತ್...