Homeಮುಖಪುಟತೂಗು ಸೇತುವೆ ದುರಂತದ ಮೊರ್ಬಿಯಲ್ಲಿ ಗೆಲುವಿನತ್ತ ಬಿಜೆಪಿ ಅಭ್ಯರ್ಥಿ

ತೂಗು ಸೇತುವೆ ದುರಂತದ ಮೊರ್ಬಿಯಲ್ಲಿ ಗೆಲುವಿನತ್ತ ಬಿಜೆಪಿ ಅಭ್ಯರ್ಥಿ

- Advertisement -
- Advertisement -

ಗುಜರಾತ್‌ನಲ್ಲಿ ಬಿಜೆಪಿ ಅಭೂತಪೂರ್ವ ದಿಗ್ವಿಜಯ ಸಾಧಿಸುತ್ತಿದ್ದು ಮೊರ್ಬಿಯಲ್ಲಿ ಗೆಲುವಿನತ್ತ ಮುನ್ನುಗ್ಗುತ್ತಿದೆ. ಭೀಕರ ಸೇತುವೆ ಕುಸಿತದಿಂದಾಗಿ 130ಕ್ಕೂ ಹೆಚ್ಚು ಜನರ ದುರ್ಮಣದ ಮೂಲಕ ಸುದ್ದಿಯಾಗಿದ್ದ ಮೊರ್ಬಿಯಲ್ಲಿ ಬಿಜೆಪಿ ಗೆಲುವಿನತ್ತ ಹೆಜ್ಜೆ ಇರಿಸಿದೆ.

ಅಕ್ಟೋಬರ್ 30ರಂದು ಘಟಿಸಿದ ಭೀಕರ ಸೇತುವೆ ಕುಸಿತದಲ್ಲಿ 130ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಸೇತುವೆ ದುರಂತದ ನಂತರ ಗಮನ ಸೆಳೆದಿದ್ದ ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿರುವ ಬಿಜೆಪಿಯ ಕಾಂತಿಭಾಯಿ ಅಮೃತಿಯಾ ಅವರು ಗೆಲುವಿನ ಹಾದಿಯಲ್ಲಿದ್ದಾರೆ.

ಸೇತುವೆ ದುರಸ್ತಿ ಮತ್ತು ನಿರ್ವಹಣೆಯ ಕೆಲಸವನ್ನು ಖಾಸಗಿ ಸಂಸ್ಥೆಗೆ ವಹಿಸುವಾಗ ನಿಯಮಗಳನ್ನು ಸ್ಥಳೀಯ ಆಡಳಿತ ಉಲ್ಲಂಘಿಸಿದೆ ಎಂದು ಆರೋಪಿಸಲಾಗಿತ್ತು. ಸೇತುವೆ ದುರಂತದ ಬಳಿಕ ಅಮೃತಿಯಾ ಅವರು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಓಡಾಡುತ್ತಿದ್ದ ವಿಡಿಯೊ ವೈರಲ್ ಆಗಿತ್ತು. ಜಯಂತಿ ಪಟೇಲ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಆಮ್ ಆದ್ಮಿ ಪಕ್ಷವು ಪಂಕಜ್ ರಣಸಾರಿಯಾ ಅವರನ್ನು ಕಣಕ್ಕಿಳಿಸಿದೆ.

ಪ್ರಾಥಮಿಕವಾಗಿ ಗಡಿಯಾರ ತಯಾರಕ ಸಂಸ್ಥೆ ಎಂದು ಕರೆಯಲ್ಪಡುವ ಒರೆವಾ ಕಂಪನಿಗೆ ವಸಾಹತುಶಾಹಿ ಕಾಲದ ಸೇತುವೆಯ ದುರಸ್ತಿ ಕೆಲಸವನ್ನು ವಹಿಸಲಾಗಿತ್ತು. ಆದರೆ ಕಂಪನಿಯ ಮಾಲೀಕರನ್ನು ಇನ್ನೂ ಬಂಧಿಸಬೇಕಿದೆ.

ಪಾಟಿದಾರ್ ಪ್ರಾಬಲ್ಯವಿರುವ ಮೊರ್ಬಿ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಬ್ರಿಜೇಶ್ ಮಿರ್ಜಾ ಬದಲಿಗೆ ಮಾಜಿ ಶಾಸಕ ಕಾಂತಿಲಾಲ್ ಅಮೃತಿಯ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು.

ಗುಜರಾತಿನ ಶತಮಾನದಷ್ಟು ಹಳೆಯದಾದ ಸೇತುವೆಯ ನವೀಕರಣ ನಡೆಸಿದ ಖಾಸಗಿ ಸಂಸ್ಥೆಯು ಕೆಲವು ಹಳೆಯ ತಂತಿಗಳನ್ನೂ ತನ್ನ ಏಳು ತಿಂಗಳ ನವೀಕರಣದ ಸಮಯದಲ್ಲಿ ಬದಲಿಸಿಲ್ಲ ಎಂದು ಮೂಲಗಳು ತಿಳಿಸಿದ್ದವು.

‘ಸೇತುವೆಯನ್ನು ನವೀಕರಿಸಿದ ಗುಜರಾತ್ ಮೂಲದ ಗಡಿಯಾರ ತಯಾರಿಕಾ ಒರೆವಾ ಸಂಸ್ಥೆಗೆ ಮಾರ್ಚ್‌ನಲ್ಲಿ ಮೋರ್ಬಿ ನಗರ ಪುರಸಭೆಯಿಂದ ಗುತ್ತಿಗೆ ನೀಡಲಾಯಿತು. ಆದರೆ ಯಾವುದೇ ಟೆಂಡರ್ ನೀಡುವ ಕ್ರಮ ಜರುಗಿಸಿರಲಿಲ್ಲ’ ಎಂದು ಒಪ್ಪಂದದ ಕಡತಗಳು ಹೇಳುತ್ತಿವೆ. ಸೇತುವೆಯಲ್ಲಿ ಕಟ್ಟಲಾಗಿದ್ದ ಕೆಲವು ಹಳೆಯ ತಂತಿಗಳನ್ನು ನವೀಕರಣದ ನಂತರವೂ ಉಳಿಸಿಕೊಳ್ಳಲಾಗಿದೆ ಎಂಬ ಸಂಗತಿ ಹೊರಬಿದ್ದಿತ್ತು.

“ಸೇತುವೆಯನ್ನು ಮತ್ತೆ ತೆರೆಯುವ ಬಗ್ಗೆ ಓರೆವಾ ಸಂಸ್ಥೆ ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿರಲಿಲ್ಲ. ಹಾಗೆ ಮಾಡಲು ಕಂಪನಿಗೆ ಫಿಟ್‌ನೆಸ್ ಪ್ರಮಾಣಪತ್ರವನ್ನು ನೀಡಲಾಗಿಲ್ಲ” ಎಂದು ಪುರಸಭೆಯ ಮುಖ್ಯಾಧಿಕಾರಿ ಸಂದೀಪ್‌ಸಿಂಗ್ ಝಾಲಾ ಹೇಳಿದ್ದರು.

ಓರೆವಾ ವ್ಯವಸ್ಥಾಪಕ ನಿರ್ದೇಶಕ ಜಯಸುಖ್ಭಾಯ್ ಪಟೇಲ್ ಮಾತನಾಡುತ್ತಾ, “ಕಂಪನಿಯು ₹ 2 ಕೋಟಿ ವೆಚ್ಚದಲ್ಲಿ 100 ರಷ್ಟು ನವೀಕರಣವನ್ನು ನೆರವೇರಿಸಿದೆ” ಎಂದಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಎನ್‌ಡಿಎ ಮೈತ್ರಿ ಪಕ್ಷದ ನಾಯಕ ರಾಜೀನಾಮೆ

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬಿಜೆಪಿಯ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರ ಪುತ್ರನಿಗೆ ಟಿಕೆಟ್ ನೀಡಿದ ಬೆನ್ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ ಎನ್‌ಡಿಎ ಮೈತ್ರಿ ಪಕ್ಷ ಆರ್‌ಎಲ್‌ಡಿಯ ರಾಷ್ಟ್ರೀಯ ವಕ್ತಾರ ರೋಹಿತ್...