Homeಮುಖಪುಟಅಸ್ಸಾಂನ ಬಂಧನ ಕೇಂದ್ರಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ

ಅಸ್ಸಾಂನ ಬಂಧನ ಕೇಂದ್ರಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ

- Advertisement -
- Advertisement -

ಭಾರತದ ಅತಿದೊಡ್ಡ ಬಂಧನ ಕೇಂದ್ರ ಗೋಲ್‌ಪಾರಾ ಜಿಲ್ಲೆಯ ಮಾಟಿಯಾ ಟ್ರಾನ್ಸಿಟ್ ಕ್ಯಾಂಪ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪಗಳು ಕೇಳಿ ಬಂದಿದ್ದು, ಅಕ್ರಮ ವಲಸಿಗರನ್ನು ಕ್ರಿಮಿನಲ್‌ಗಳ ಜೊತೆ ಒಂದೇ ಸೆಲ್‌ನಲ್ಲಿ ಇರಿಸಲಾಗುತ್ತಿದೆ. ಅಸ್ಸಾಂನಲ್ಲಿ ಪೌರತ್ವ ಬಿಕ್ಕಟ್ಟಿನಿಂದಾಗಿ 2010ರಿಂದ ಬಂಧನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅಸ್ಸಾಂನ ಬಂಧನ ಕೇಂದ್ರಗಳು ಮಾನವೀಯ ಕಾಳಜಿಯ ಬಗ್ಗೆ ಪ್ರಶ್ನೆಗಳನ್ನು ಹೆಚ್ಚಿಸಿವೆ.

ಅಸ್ಸಾಂನಲ್ಲಿನ ಈ ಬಂಧನ ಕೇಂದ್ರಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಬಯಲು ಮಾಡಲು ಸೆಂಟರ್ ಫಾರ್ ನ್ಯೂ ಎಕನಾಮಿಕ್ಸ್ ಸ್ಟಡೀಸ್‌ನ ಆಜಾದ್ ಆವಾಜ್ ತಂಡವು ಪ್ರಾಥಮಿಕ ಸಂದರ್ಶನಗಳನ್ನು ನಡೆಸಿದೆ. ಈ ವೇಳೆ ಈ ಬಂಧನ ಕೇಂದ್ರಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಅಲ್ಲಿ ಹೇಗೆ ವ್ಯಕ್ತಿಗಳ  ಹಕ್ಕುಗಳನ್ನು ಕಸಿದುಕೊಳ್ಳುತ್ತದೆ ಎಂಬುವುದನ್ನು ಬಹಿರಂಗಪಡಿಸಿದೆ.

1951ರ ನಿರಾಶ್ರಿತರ ಕನ್ವೆನ್ಸನ್‌ ಪ್ರಕಾರ, ಸದಸ್ಯ ರಾಷ್ಟ್ರಗಳು, ವಲಸಿಗರು ಅನುಮತಿಯಿಲ್ಲದೆ ಪ್ರವೇಶಿಸಿದ್ದರೂ ಸಹ ವಲಸಿಗರನ್ನು ಬಂಧಿಸಲು, ಹೊರಹಾಕಲು ಸಾಧ್ಯವಿಲ್ಲ. ಭಾರತವು ಸದಸ್ಯ ರಾಷ್ಟ್ರವಲ್ಲದ ಕಾರಣ ಈ ನಿಯಮಗಳಿಗೆ ಅದು ಅನ್ವಯವಾಗಲ್ಲ. ಆದ್ದರಿಂದ ಅಕ್ರಮ ವಲಸಿಗರ ಪತ್ತೆ, ಬಂಧನ ಮತ್ತು ಗಡೀಪಾರು ಮಾಡುವುದಕ್ಕೆ ನಿರ್ಬಂಧ ಅನ್ವಯವಾಗುವುದಿಲ್ಲ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವಿಶೇಷ ಪರಿವೀಕ್ಷಕ ಹರ್ಷ್ ಮಂದರ್ ಅವರು ಶಿಬಿರಗಳಲ್ಲಿನ ಭೀಕರ ಪರಿಸ್ಥಿತಿಯನ್ನು ಬಹಿರಂಗಪಡಿಸಿದ ನಂತರ ಬಂಧಿತರು ಎದುರಿಸುತ್ತಿರುವ ಶೋಚನೀಯ ಪರಿಸ್ಥಿತಿಗಳು ಬೆಳಕಿಗೆ ಬಂದವು. ಇದಲ್ಲದೆ ಸುಮಿ ಗೋಸ್ವಾಮಿ ಪ್ರಕರಣವು ಬಂಧನ ಕೇಂದ್ರದಲ್ಲಿನ ಪರಿಸ್ಥಿತಿಗಳನ್ನು ಬಯಲುಗೊಳಿಸಿದೆ.

ಫಾರಿನರ್ಸ್ ಟ್ರಿಬ್ಯೂನಲ್‌ನ ತಾಂತ್ರಿಕ ದೋಷದ ಕಾರಣ ಸುಮಿ ಗೋಸ್ವಾಮಿ ಅವರನ್ನು ಮಾಟಿಯಾ ಬಂಧನ ಕೇಂದ್ರಕ್ಕೆ ಕಳುಹಿಸಲಾಗಿದೆ. ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿದ್ದರೂ ಆಕೆಯನ್ನು ಮೂರು ದಿನಗಳ ಕಾಲ ಬಂಧನ ಶಿಬಿರದಲ್ಲಿ ಇರಿಸಲಾಗಿದೆ. ನಂತರ ಅವಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಸುಮಿ ಗೋಸ್ವಾಮಿ ಬಂಧನ ಕೇಂದ್ರದಲ್ಲಿನ ತನ್ನ ನೆನಪನ್ನು ವಿವರಿಸುತ್ತಾ, ನಾನು ಏನು ಅನುಭವಿಸಿದೆ ಎಂದು ಯಾರಿಗೂ ಅರ್ಥವಾಗಲು ಸಾಧ್ಯವಿಲ್ಲ. ನನಗೆ ಮಾತ್ರ ಸಾಧ್ಯ. ನೀವು ಬಂಧನ ಶಿಬಿರಕ್ಕೆ ಹೋಗದಿದ್ದರೆ, ಅಲ್ಲಿ ವಾಸಿಸುವುದು ಹೇಗೆಂದು ನಿಮಗೆ ಅರ್ಥವಾಗುತ್ತಿರಲಿಲ್ಲ. ನಾನು ಇದನ್ನು ಅನುಭವಿಸುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ ಎಂದು ಹೇಳಿದ್ದಾರೆ.

ಅಲ್ಲಿನ ಜೀವನ ಪರಿಸ್ಥಿತಿಗಳ ಬಗ್ಗೆ ಮಾತನಾಡಿದ ಅವರು, ಒಂದು ಸೆಲ್‌ನಲ್ಲಿ ಸುಮಾರು 14 ರಿಂದ 15 ಜನರಿದ್ದರು. ಒಂದು ಅಟ್ಯಾಚ್ಡ್ ಬಾತ್ರೂಮ್ ಇತ್ತು. ನಾನು ಅಲ್ಲಿಗೆ ಹೋದ ಮೊದಲ ದಿನ, ಸ್ನಾನಗೃಹಗಳ ಬಾಗಿಲುಗಳು ಅರ್ಧ ಮಾತ್ರ ನಿರ್ಮಿಸಲ್ಪಟ್ಟಿರುವುದನ್ನು ಗಮನಿಸಿದಾಗ ನನಗೆ ಆಶ್ಚರ್ಯವಾಯಿತು. ಅಲ್ಲಿ ನಿಮ್ಮ ಮುಖವನ್ನು ಹೊರಗಿನಿಂದ ನೋಡಬಹುದು. ಒಬ್ಬ ಅಧಿಕಾರಿಯನ್ನು ಕೇಳಿದಾಗ, ಕೈದಿಗಳು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಿರ್ಬಂಧಿಸಲು ಆ ರೀತಿಯಲ್ಲಿ ನಿರ್ಮಿಸಲಾಗಿದೆ ಎಂದು ನಾನು ಅರಿತುಕೊಂಡೆ. ಸ್ನಾನಗೃಹದಲ್ಲಿ ದುರ್ವಾಸನೆ ಬರುತ್ತಿತ್ತು. ಅಲ್ಲಿ ವಾಸಿಸುವುದು ಅಸಹನೀಯವಾಗಿದೆ. ನನಗೆ ಸತತ ಎರಡು ರಾತ್ರಿ ನಿದ್ರೆ ಬರಲಿಲ್ಲ. ನಾನು ಇಡೀ ರಾತ್ರಿ ಕುಳಿತಿದ್ದೆ. ಅವರು ನನಗೆ ಒದಗಿಸಿದ ಹಾಸಿಗೆಯಂತಿರುವ ವಸ್ತುಗಳನ್ನು ನಾನು ನನ್ನ ಜೀವನದಲ್ಲಿ ಎಂದೂ ಬಳಕೆ ಮಾಡಿರಲಿಲ್ಲ. ಅಷ್ಟು ಕಳಪೆಯಾಗಿತ್ತು ಎಂದು ಹೇಳಿದ್ದಾರೆ.

UNHRC ಮಾರ್ಗಸೂಚಿಗಳು ರಾಜ್ಯ ಕಾರಾಗೃಹಗಳನ್ನು ವಲಸಿಗರ ಬಂಧನಕ್ಕೆ ಬಳಸಬಾರದು ಎಂದು ಹೇಳುತ್ತದೆ. ಆದರೆ ವಲಸಿಗರನ್ನು ಶಿಕ್ಷೆಗೊಳಗಾದ ಕೈದಿಗಳೊಂದಿಗೆ ಅದೇ ಸೆಲ್‌ಗಳಲ್ಲಿ ಇರಿಸಲಾಗುತ್ತದೆ. ಸುಮಿ ಗೋಸ್ವಾಮಿ ತನ್ನ ಸೆಲ್‌ನಲ್ಲಿದ್ದವಳನ್ನು ಮಾತನಾಡಿಸಿದಾಗ ಆಕೆ ಜಮೀನಿಗಾಗಿ ಸಹೋದರನಿಗೆ ಕೊಲೆ ಮಾಡಿ ಜೈಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಮತ್ತೋರ್ವ ಕೈದಿ ಜೊತೆ ಮಾತನಾಡಿದಾಗ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಜೈಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ. ನಿಮ್ಮ ಸುತ್ತಲೂ ಅಪರಾಧಿಗಳಿರುವ ಕೋಣೆಯಲ್ಲಿ ನೀವು ಹೇಗೆ ಶಾಂತಿಯುತವಾಗಿ ಮಲಗಬಹುದು? ಯಾರೋ ಬಂದು ನಿಮ್ಮನ್ನು ಕೊಲ್ಲಬಹುದು. ನಮ್ಮನ್ನು ಅಪರಾಧಿಗಳೊಂದಿಗೆ ಏಕೆ ಇರಿಸಲಾಗಿದೆ? ವಲಸಿಗರು ಮಾಡಿದ ಅಪರಾಧವೇನು? ಎಂದು ಸುಮಿ ಗೋಸ್ವಾಮಿ ಪ್ರಶ್ನಿಸಿದ್ದಾರೆ.

ಅಲ್ಲಿ ಒಬ್ಬಾಕೆ ಹತ್ತು ವರ್ಷಗಳಿಂದ ವಾಸ ಮಾಡುತ್ತಿದ್ದಾಳೆ ಎಂದು ಹೇಳಿದಾಗ ನನಗೆ ಆಘಾತವಾಯಿತು. ನಾನು ಅಲ್ಲಿ ಶಾಶ್ವತವಾಗಿ ವಾಸಿಸಬೇಕಾದರೆ ನಾನು ಜೀವಂತವಾಗಿರಲು ಸಾಧ್ಯವೇ ಇಲ್ಲ. ಎಲ್ಲಾ ಬಂಧಿತರು ಕೆಳದರ್ಜೆಯ ಪರಿಸ್ಥಿತಿಗಳಲ್ಲಿ ಬದುಕುತ್ತಿದ್ದಾರೆ. ಲೈಂಗಿಕ ದೌರ್ಜನ್ಯ ಮತ್ತು ಬಲವಂತದ ಗರ್ಭಪಾತ ಸೇರಿದಂತೆ ಮಹಿಳೆಯರು ಇನ್ನೂ ಕೆಟ್ಟ ಪರಿಸ್ಥಿತಿಗಳನ್ನು ಅನುಭವಿಸುತ್ತಾರೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಸಂಸದರ ಸಾಮೂಹಿಕ ಅಮಾನತ್ತಿನಿಂದ ಸಂಸದೀಯ ಪ್ರಜಾಪ್ರಭುತ್ವಕ್ಕೆ ಹಾನಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಕಿತ್ತುಹಾಕುತ್ತದೆ: ರಾಹುಲ್ ಗಾಂಧಿ

0
"ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಬಡವರು, ದಲಿತರು, ಆದಿವಾಸಿಗಳು ಮತ್ತು ಒಬಿಸಿಗಳಿಗೆ ಹಕ್ಕುಗಳನ್ನು ನೀಡಿರುವ ಸಂವಿಧಾನವನ್ನು ಒಡೆದು, ಎಸೆದುಬಿಡುತ್ತದೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ. ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ...