Homeಮುಖಪುಟಮೂರನೇ ದಿನಕ್ಕೆ ಕಾಲಿಟ್ಟ ಖಲಿಸ್ತಾನಿ ನಾಯಕನ ಬೇಟೆ ಕಾರ್ಯಾಚರಣೆ: ಮಾ.21ರ ಮಧ್ಯಾಹ್ನದವರೆಗೂ ಇಂಟರ್ನೆಟ್ ಬಂದ್

ಮೂರನೇ ದಿನಕ್ಕೆ ಕಾಲಿಟ್ಟ ಖಲಿಸ್ತಾನಿ ನಾಯಕನ ಬೇಟೆ ಕಾರ್ಯಾಚರಣೆ: ಮಾ.21ರ ಮಧ್ಯಾಹ್ನದವರೆಗೂ ಇಂಟರ್ನೆಟ್ ಬಂದ್

- Advertisement -
- Advertisement -

ಪಂಜಾಬ್ ಸರ್ಕಾರವು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಎಸ್‌ಎಂಎಸ್ ಸೇವೆಗಳ ನಿಷೇಧವನ್ನು ಮಂಗಳವಾರ ಮಧ್ಯಾಹ್ನದವರೆಗೆ ವಿಸ್ತರಿಸಿದೆ. ಖಲಿಸ್ತಾನಿ ನಾಯಕ ಮತ್ತು ವಾರಿಸ್ ಪಂಜಾಬ್ ಡಿ ಮುಖ್ಯಸ್ಥ ಅಮೃತಪಾಲ್ ಸಿಂಗ್ ಅವರ ಚಿಕ್ಕಪ್ಪ ಮತ್ತು ಚಾಲಕ ಜಲಂಧರ್ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖಲಿಸ್ತಾನಿ ನಾಯಕನ ಬೇಟೆ ಕಾರ್ಯಾಚರಣೆಯು ಸೋಮವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ರಾಜ್ಯ ಪೊಲೀಸರು ಅಮೃತಪಾಲ್ ಸಿಂಗ್‌ನನ್ನು ಶೀಘ್ರವಾಗಿ ಬಂಧಿಸಲು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ.

ಅಮೃತಪಾಲ್ ಅವರ ಚಿಕ್ಕಪ್ಪ ಹರ್ಜಿತ್ ಸಿಂಗ್ ಮತ್ತು ಚಾಲಕ ಹರ್‌ಪ್ರೀತ್ ಸಿಂಗ್ ಅವರು ಭಾನುವಾರ ತಡರಾತ್ರಿ ಜಲಂಧರ್‌ನ ಮೆಹತ್‌ಪುರ ಪ್ರದೇಶದ ಗುರುದ್ವಾರದ ಬಳಿ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

“ಅಮೃತಪಾಲ್‌ಗಾಗಿ ಹುಡುಕಾಟ ಇನ್ನೂ ಮುಂದುವರೆದಿದೆ” ಎಂದು ಜಲಂಧರ್ ಎಸ್‌ಎಸ್‌ಪಿ (ಗ್ರಾಮೀಣ) ಸ್ವರನ್‌ದೀಪ್ ಸಿಂಗ್ ಹೇಳಿದ್ದಾರೆ.

ಪಂಜಾಬ್ ಸರ್ಕಾರವು ಮೊಬೈಲ್ ಇಂಟರ್ನೆಟ್ ಮತ್ತು SMS ಸೇವೆಗಳ ಅಮಾನತುವನ್ನು ಮಂಗಳವಾರ ಮಧ್ಯಾಹ್ನದವರೆಗೆ ವಿಸ್ತರಿಸಿದೆ.

ಇದನ್ನೂ ಓದಿ: ಖಲಿಸ್ತಾನಿ ಪ್ರತಿಭಟನಾಕಾರರಿಂದ ಲಂಡನ್​ನಲ್ಲಿನ ಹೈಕಮಿಷನ್​ ಕಚೇರಿ ಎದುರು, ಭಾರತದ ತ್ರಿವರ್ಣ ಧ್ವಜ ಕೆಳಕ್ಕೆ

”ಎಲ್ಲಾ ಮೊಬೈಲ್ ಇಂಟರ್ನೆಟ್ ಸೇವೆಗಳು (2G/3G/45/5G/CDMA/GPRS), ಎಲ್ಲಾ SMS ಸೇವೆಗಳು (ಬ್ಯಾಂಕಿಂಗ್ ಮತ್ತು ಮೊಬೈಲ್ ರೀಚಾರ್ಜ್ ಹೊರತುಪಡಿಸಿ) ಮತ್ತು ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ಒದಗಿಸಲಾದ ಎಲ್ಲಾ ಡಾಂಗಲ್ ಸೇವೆಗಳು, ಧ್ವನಿ ಕರೆಗಳನ್ನು ಹೊರತುಪಡಿಸಿ, ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ, ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಸಾಧನಗಳನ್ನು ತಡೆಗಟ್ಟಲು ಮತ್ತು ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗವನ್ನು ತಡೆಗಟ್ಟಲು ಪಂಜಾಬ್‌ನ ಪ್ರಾದೇಶಿಕ ಇಂಟರ್ನೆಟ್ ಸೇವೆಗಳನ್ನು ಮಾರ್ಚ್ 20 (12.00 ಗಂಟೆಗಳು) ರಿಂದ ಮಾರ್ಚ್ 21 (12.00 ಗಂಟೆಗಳು) ವರೆಗೆ ನಿಷೇಧಿಸಲಾಗಿದೆ ಎಂದು ಗೃಹ ವ್ಯವಹಾರಗಳ ಇಲಾಖೆ ಮತ್ತು ನ್ಯಾಯಾಂಗದ ಆದೇಶವನ್ನು ಸೋಮವಾರ ಹೊರಡಿಸಲಾಗಿದೆ.

ಬ್ಯಾಂಕಿಂಗ್ ಸೌಲಭ್ಯಗಳು, ಆಸ್ಪತ್ರೆ ಸೇವೆಗಳು ಮತ್ತು ಇತರ ಅಗತ್ಯ ಸೇವೆಗಳಿಗೆ ಅಡ್ಡಿಯಾಗದಂತೆ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿಲ್ಲ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆದೇಶದಲ್ಲಿ ತೀಳಿಸಿದ್ದಾರೆ.

ರಾಜ್ಯ ಅಧಿಕಾರಿಗಳು ಶನಿವಾರದಂದು ಇಂಟರ್ನೆಟ್ ಮತ್ತು ಎಸ್‌ಎಂಎಸ್ ಸೇವೆಗಳನ್ನು ಭಾನುವಾರ ಮಧ್ಯಾಹ್ನದವರೆಗೆ ಸ್ಥಗಿತಗೊಳಿಸಿದ್ದರು. ನಂತರ ಸೋಮವಾರ ಮಧ್ಯಾಹ್ನದವರೆಗೆ ನಿರ್ಬಂಧಗಳನ್ನು ವಿಸ್ತರಿಸಲಾಯಿತು.

ಏತನ್ಮಧ್ಯೆ, ಅಮೃತಪಾಲ್ ಅವರ ಮರ್ಸಿಡಿಸ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ ಅವರ ಬೆಂಗಾವಲು ಪಡೆಯ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಭಾನುವಾರ ಪೊಲೀಸರು ಪಂಜಾಬ್‌ನಾದ್ಯಂತ ಧ್ವಜ ಮೆರವಣಿಗೆ ಮತ್ತು ಶೋಧ ಕಾರ್ಯವನ್ನು ಮುಂದುವರೆಸಿದರು. ಈ ಮಧ್ಯೆ 34 ಬೆಂಬಲಿಗರನ್ನು ಬಂಧಿಸಿದ್ದಾರೆ ಮತ್ತು ಬಂಧನದಲ್ಲಿದ್ದ ನಾಲ್ವರನ್ನು ದೂರದ ಅಸ್ಸಾಂನ ಜೈಲಿಗೆ ಸ್ಥಳಾಂತರಿಸಿದ್ದಾರೆ.

ಅಮೃತಪಾಲ್ ನೇತೃತ್ವದ ‘ವಾರಿಸ್ ಪಂಜಾಬ್ ದೇ’ ಅಂಶಗಳು ಮತ್ತು ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಕದಡಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳ ವಿರುದ್ಧ ದಮನ ಕಾರ್ಯಾಚರಣೆಗಳ ನಡೆಸುತ್ತಿರುವ ಪೊಲೀಸರು ಇದುವರೆಗೆ 112 ಜನರನ್ನು ಬಂಧಿಸಿದ್ದಾರೆ.

ಅಮೃತ್‌ಪಾಲ್ ಮತ್ತು ಅವರ ಬೆಂಬಲಿಗರು ಅಮೃತಸರ ಬಳಿಯ ಅಜ್ನಾಲಾ ಪೊಲೀಸ್ ಠಾಣೆಗೆ ನುಗ್ಗಿ ಬಂಧನಕ್ಕೊಳಗಾದ ವ್ಯಕ್ತಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ ವಾರಗಳ ನಂತರ ಪೊಲೀಸರು ದಮನಕಾರಿ ನಡೆ ಅನುಸರಿಸಿದ್ದಾರೆ.

ರಾಜ್ಯವು ಹೈ ಅಲರ್ಟ್‌ನಲ್ಲಿದ್ದು, ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ವದಂತಿಗಳಿಗೆ ಕಿವಿಗೊಡದಂತೆ ಸಾರ್ವಜನಿಕರಲ್ಲಿ ಪಂಜಾಬ್‌ನ ಹಿರಿಯ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪೊಲೀಸ್ ಚೆಕ್‌ಪಾಯಿಂಟ್ ಭೇದಿಸಿದ ಅಮೃತಪಾಲ್ ಮತ್ತು ಅವರ ಬೆಂಬಲಿಗರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಜಲಂಧರ್ ಗ್ರಾಮದಲ್ಲಿ ಪತ್ತೆಯಾದ ವಾಹನದಲ್ಲಿದ್ದ ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ಹೇಳಿದ್ದಾರೆ

ಆ ಜಿಲ್ಲೆಯಲ್ಲಿ ಅಮೃತಪಾಲ್‌ನ ಏಳು ಸಹಚರರನ್ನು ಬಂಧಿಸಿದ ನಂತರ ಅಮೃತಸರ ಗ್ರಾಮಾಂತರ ಪೊಲೀಸರು ಶನಿವಾರ ರಾತ್ರಿ ಶಸ್ತ್ರಾಸ್ತ್ರ ಕಾಯ್ದೆಯಡಿ ಮತ್ತೊಂದು ಎಫ್‌ಐಆರ್ ದಾಖಲಿಸಿದ್ದಾರೆ.

ವಿವಿಧ ದೇಶಗಳು, ರಾಜ್ಯಗಳು ಮತ್ತು ನಗರಗಳಿಂದ ನಕಲಿ ಸುದ್ದಿಗಳನ್ನು ಹರಡುವವರ ಮತ್ತು ದ್ವೇಷ ಭಾಷಣಗಳನ್ನು ಮಾಡುವವರ ಮೇಲೆ ನಿಗಾ ಇಡಲಾಗಿದೆ. ವದಂತಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...