Homeಮುಖಪುಟಖಲಿಸ್ತಾನಿ ಪ್ರತಿಭಟನಾಕಾರರಿಂದ ಲಂಡನ್​ನಲ್ಲಿನ ಹೈಕಮಿಷನ್​ ಕಚೇರಿ ಎದುರು, ಭಾರತದ ತ್ರಿವರ್ಣ ಧ್ವಜ ಕೆಳಕ್ಕೆ

ಖಲಿಸ್ತಾನಿ ಪ್ರತಿಭಟನಾಕಾರರಿಂದ ಲಂಡನ್​ನಲ್ಲಿನ ಹೈಕಮಿಷನ್​ ಕಚೇರಿ ಎದುರು, ಭಾರತದ ತ್ರಿವರ್ಣ ಧ್ವಜ ಕೆಳಕ್ಕೆ

- Advertisement -
- Advertisement -

ಲಂಡನ್​ನಲ್ಲಿರುವ ಭಾರತೀಯ ಹೈಕಮಿಷನ್​ನಲ್ಲಿ ಖಲಿಸ್ತಾನಿ ಪ್ರತಿಭಟನಾಕಾರರು ಭಾರತೀಯ ಧ್ವಜವನ್ನು ಕೆಳಗಿಳಿಸಿದ್ದಾರೆ. ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಬ್ರಿಟಿಷ್ ಸರ್ಕಾರದ “ಉದಾಸೀನತೆ”ಯೇ ಕಾರಣ ಎಂದು ಆರೋಪಿಸಿದೆ. ಈ ಸಂಬಂಧ ಭಾನುವಾರ ರಾತ್ರಿ ಕೇಂದ್ರ ಸರ್ಕಾರ, ಬ್ರಿಟಿಷ್ ಡೆಪ್ಯೂಟಿ ಹೈ ಕಮಿಷನರ್ ಕ್ರಿಸ್ಟಿನಾ ಸ್ಕಾಟ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ (MEA) ಕರೆಸಿ ವಿಚಾರಣೆ ನಡೆಸಿದೆ.

ವಾರಿಸ್ ಪಂಜಾಬ್ ಡಿ (WPD) ಗುಂಪಿನ ಮೇಲೆ ಪಂಜಾಬ್‌ನಲ್ಲಿ ಭದ್ರತಾ ಪಡೆಗಳ ದಮನದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ ಪ್ರತಿಭಟನಾಕಾರರು, ಖಲಿಸ್ತಾನಿ ಘೋಷಣೆಗಳನ್ನು ಕೂಗಿದ್ದಲ್ಲದೇ ಹೈಕಮಿಷನ್ ಕಚೇರಿ ಪ್ರವೇಶಕ್ಕೂ ಪ್ರಯತ್ನಿಸಿದರು ಅದು ಸಫಲವಾಗಲಿಲ್ಲ. ಬಳಿಕ ಒಬ್ಬ ಸಿಖ್ ವ್ಯಕ್ತಿ ರಸ್ತೆಯಿಂದ ನೇರವಾಗಿ ಭಾರತೀಯ ಹೈಕಮಿಷನ್ ಕಚೇರಿಯ ಬಾಲ್ಕನಿಗೆ ಏರಿದರು. ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ್ದಾನೆ.

ಈ ವಿಚಾರವಾಗಿ ಕೇಮದ್ರ ಸರ್ಕಾರವು, ದೆಹಲಿಯಲ್ಲಿರುವ ಬ್ರಿಟಿಷ್ ಹೈಕಮಿಷನ್‌ನ ಉಪ ಮುಖ್ಯಸ್ಥರನ್ನು ಕರೆಸಿ ತನ್ನ ಕಠಿಣ ನಿಲುವಿನ ಬಗ್ಗೆ ಎಚ್ಚರಿಸಿದೆ. ದೆಹಲಿಯ ಹಿರಿಯ ಬ್ರಿಟಿಷ್ ರಾಜತಾಂತ್ರಿಕರನ್ನು ಕರೆಸಿಕೊಂಡು ಮಾತುಕತೆ ನಡೆಸಿದೆ.

ಧ್ವಜವನ್ನು ಕೆಳಗಿಳಿಸಿರುವ ಘಟನೆ ಕುರಿತು ದೆಹಲಿಯಲ್ಲಿರುವ ಹೈಕಮಿಷನ್​ನ ಅಧಿಕಾರಿಯನ್ನು ಎಂಇಎಗೆ ಕರೆಸಲಾಗಿದೆ. ಪ್ರತಿಭಟನಾಕಾರರಿಗೆ ಹೈಕಮಿಷನ್ ಆವರಣ ಪ್ರವೇಶಿಸಲು ಅವಕಾಶ ಮಾಡಿಕೊಟ್ಟ ಭದ್ರತಾ ಲೋಪದ ಕುರಿತು ವಿವರಣೆ ಕೇಳಲಾಗಿದೆ. ಭಾರತೀಯ ರಾಜತಾಂತ್ರಿಕರ ಭದ್ರತೆಗೆ ಬ್ರಿಟಿಷ್ ಸರ್ಕಾರದ ಉದಾಸೀನತೆ ಸ್ವೀಕಾರಾರ್ಹವಲ್ಲ ಎಂದು ಭಾರತ ಅಸಮಧಾನ ಹೊರ ಹಾಕಿದೆ.

ಇದನ್ನೂ ಓದಿ: ಖಲಿಸ್ತಾನಿ ನಾಯಕನ ಬಂಧನ; ಪಂಜಾಬ್‌ನಲ್ಲಿ ಇಂಟರ್‌ನೆಟ್ ಬಂದ್

ಈ ಘಟನೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಭಾನುವಾರ ರಾತ್ರಿ ಗಮನಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡಲೇ ಕ್ರಮ ವಹಿಸಿದೆ. ಹೈಕಮಿಷನ್ ಆವರಣಕ್ಕೆ ಖಾಲಿಸ್ತಾನಿಗಳ ಪ್ರವೇಶಕ್ಕೆ ಅನುಮತಿಸಿದ ಬ್ರಿಟಿಷ್ ಭದ್ರತೆಯ ವಿಫಲತೆ ಬಗ್ಗೆ ವಿವರಣೆ ಕೇಳಲಾಗಿದೆ. ಈ ಕುರಿತ ಸಚಿವಾಲಯದ ಹೇಳಿಕೆಯೊಂದನ್ನು ರಾತ್ರಿ ಬಿಡುಗಡೆ ಮಾಡಲಾಗಿದೆ.

ತ್ರಿವರ್ಣ ಧ್ವಜ ಕೆಳಗಿಳಿಸಿದ ಘಟನೆಯಲ್ಲಿ ಭಾಗಿಯಾದವರನ್ನು ಗುರುತಿಸಿ ಬಂಧಿಸಬೇಕು. ಅವರೆಲ್ಲರನ್ನು ವಿಚಾರಣೆಗೆ ಒಳಪಡಿಸಬೇಕು. ಮುಂದೆಂದೂ ಇಂತಹ ಪ್ರತಿಭಟನೆಗಳು/ಘಟನೆ ಮರುಕಳಿಸದಂತೆ ಅತ್ಯಗತ್ಯ ಮತ್ತು ಸೂಕ್ತ ಭದ್ರತಾ ಕ್ರಮಗಳನ್ನು ಯುಕೆ ಸರ್ಕಾರ ಕೈಗೊಳ್ಳಬೇಕೆಂದು ಭಾರತವು ನಿರೀಕ್ಷಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಹೈಕಮಿಷನ್ ಅಧಿಕಾರಿಯೊಬ್ಬರು ತಮ್ಮ ಸಿಬ್ಬಂದಿಯ ಸದಸ್ಯರ ಮೂಲಕ ತ್ರಿವರ್ಣ ಧ್ವಜವನ್ನು ಸೂಕ್ತವಾಗಿ ಕಚೇರಿ ಒಳಗೆ ಒಯ್ಯುವುದು ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆ ಕರಿತು ಲಂಡನ್‌ನಲ್ಲಿರುವ ವಿದೇಶಿ ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ (FCDO) ಕಚೇರಿಯು ಎಲ್ಲಿಸ್ ಅವರು ಟ್ವೀಟ್ ಮಾಡಿದ್ದಾರೆ.

”ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ಇಂದು ನಡೆದ ದಾಳಿಯಿಂದ ದಿಗ್ಭ್ರಮೆಗೊಂಡಿದ್ದೇನೆ. ಮಿಷನ್ ಮತ್ತು ಅದರ ಸಿಬ್ಬಂದಿಯ ಸಮಗ್ರತೆಯ ವಿರುದ್ಧ ಇದು ಸಹಿಸಿಕೊಳ್ಳುವಂತಥದ್ದಲ್ಲ. ಬ್ರಿಟಿಷ್ ಸರ್ಕಾರವು ಯಾವಾಗಲೂ ಭಾರತೀಯ ಹೈಕಮಿಷನ್ ಕಚೇರಿಗೆ ನೀಡುವ ಭದ್ರತೆಯನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಟ್ವೀಟ್ ನಲ್ಲಿ ಅವರು ಉಲ್ಲೇಖಿಸಿದ್ದಾರೆ.

ಲಂಡನ್‌ನಲ್ಲಿ (UK) ಇರುವ ಭಾರತೀಯ ರಾಜತಾಂತ್ರಿಕ ಕಚೇರಿಗಳ ವಿಚಾರದಲ್ಲಿ ಅಲ್ಲಿನ ಬ್ರೀಟಿಷ್ ಸರ್ಕಾರ ಅಗತ್ಯ ಎಚ್ಚರಿಕೆ ವಹಿಸಬೇಕು. ನಿರ್ಲಕ್ಷ್ಯ ಸರಿಯಲ್ಲ ಎಂದು ಭಾರತ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಈ ಹಿಂದೆ 2019ರಲ್ಲಿ ಕಾಶ್ಮೀರಿ ಮತ್ತು ಖಲಿಸ್ತಾನಿ ಪ್ರತ್ಯೇಕತಾವಾದಿ ಗುಂಪುಗಳ ರಾಯಭಾರಿ ಕಚೇರಿಯನ್ನು ಸುತ್ತುವರೆದು ಮೊಟ್ಟೆ ಸೇರಿದಂತೆ ಇನ್ನಿತರ ವಸ್ತು ಎಸೆದಿದ್ದರು. ಇವತ್ತಿನ ಘಟನೆ ಅದಕ್ಕಿಂತಲೂ ಕೆಟ್ಟದಾಗಿದೆ ಎಂದು ಹಳೆಯ ಘಟನೆಯೊಂದನ್ನು ಇಲ್ಲಿ ವಿವರಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ನವೀಕರಿಸಿದ ಅಂಕಿ ಅಂಶ: 4 ಹಂತಗಳಲ್ಲಿ 1.07 ಕೋಟಿ ಮತಗಳಲ್ಲಿ ವ್ಯತ್ಯಾಸ!

0
2024ರ ಲೋಕಸಭಾ ಚುನಾವಣೆಯ ಮೊದಲ ನಾಲ್ಕು ಹಂತಗಳ ಮತದಾನದ ಪ್ರತಿ ರಾತ್ರಿ ಚುನಾವಣಾ ಆಯೋಗ ನೀಡಿದ ಮತದಾನದ ಅಂಕಿ-ಅಂಶಗಳನ್ನು ವಿಶ್ಲೇಷಣೆ ಮಾಡಿದಾಗ ಮೊದಲ ನಾಲ್ಕು ಹಂತಗಳಲ್ಲಿ ಸುಮಾರು 1.07 ಕೋಟಿ ಮತಗಳ ವ್ಯತ್ಯಾಸವನ್ನು...