Homeಮುಖಪುಟಹೈದರಾಬಾದ್‌: ಮುನಾವರ್‌ ಫಾರೂಖಿ ಕಾರ್ಯಕ್ರಮ ನಡೆಯದಂತೆ ನೋಡಿಕೊಳ್ಳಲು ಕಾರ್ಯಕರ್ತರಿಗೆ ಬಿಜೆಪಿ ಕರೆ

ಹೈದರಾಬಾದ್‌: ಮುನಾವರ್‌ ಫಾರೂಖಿ ಕಾರ್ಯಕ್ರಮ ನಡೆಯದಂತೆ ನೋಡಿಕೊಳ್ಳಲು ಕಾರ್ಯಕರ್ತರಿಗೆ ಬಿಜೆಪಿ ಕರೆ

- Advertisement -
- Advertisement -

ಜನವರಿ 9 ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಖ್ಯಾತ ಸ್ಟಾಂಡ್‌‌ಅಪ್‌‌‌‌‌ ಕಾಮೇಡಿಯನ್‌‌‌‌‌ ಮುನಾವರ್ ಫಾರೂಖಿ ಅವರ ಕಾರ್ಯಕ್ರಮ ನಡೆಯಲು ಬಿಡದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಬಿಜೆವೈಎಂ (ಭಾರತೀಯ ಜನತಾ ಯುವ ಮೋರ್ಚಾ) ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.

ಶನಿವಾರ ಹೈದರಾಬಾದ್‌ನ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಸಂದರ್ಭದಲ್ಲಿ ಬಿಜೆಪಿ ಮತ್ತು ಬಿಜೆವೈಎಂ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಜಯ್ ಕುಮಾರ್, ’ಐಟಿ ಮತ್ತು ಕೈಗಾರಿಕಾ ಸಚಿವ ಕೆಟಿ ರಾಮರಾವ್ ಅವರು ವಿವಾದಾತ್ಮಕ ಸ್ಟಾಂಡ್‌‌ಅಪ್‌‌‌‌‌ ಕಾಮೇಡಿಯನ್‌‌‌‌‌ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ’ ಎಂದು ಕಿಡಿಕಾರಿದ್ದಾರೆ.

’ಸ್ಟಾಂಡ್‌‌ಅಪ್‌‌‌‌‌ ಕಾಮೇಡಿಯನ್‌‌‌‌‌ ಮುನಾವರ್ ಫಾರೂಖಿ ತಮ್ಮ ಕಾರ್ಯಕ್ರಮಗಳಲ್ಲಿ ಹಿಂದೂ ದೇವರುಗಳು ಮತ್ತು ದೇವತೆಗಳನ್ನು ಅವಮಾನಿಸಿದ ಆರೋಪದ ಮೇಲೆ ಅನೇಕ ರಾಜ್ಯಗಳು ಈಗಾಗಲೇ ಅವರ ಕಾರ್ಯಕ್ರಮಗಳನ್ನು ನಿಷೇಧಿಸಿವೆ. ಹೀಗಿರುವಾಗ ಇವರು ನಗರಕ್ಕೆ ಆಹ್ವಾನಿಸಿದ್ದಾರೆ’ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಕಾಮೇಡಿಯನ್‌‌ ಮುನಾವರ್‌ ಫಾರೂಖಿಗೆ ಪ್ರತಿದಿನ 50 ಬೆದರಿಕೆ ಕರೆ; ಹಲವು ಶೋ ರದ್ದು

“ಮುನಾವರ್ ಫಾರೂಖಿ ತಮ್ಮ ಶೋಗಳಲ್ಲಿ ದುರ್ಗಾ, ಸೀತೆ, ರಾಮ, ರಾಮಾಯಣ ಮತ್ತು ಭಗವದ್ಗೀತೆಯನ್ನು ಅವಮಾನಿಸಿದ್ದಾರೆ. ಅಂತಹದರಲ್ಲಿ ಈ ಜನ ಅವರನ್ನು ಇಲ್ಲಿ ಸ್ವಾಗತಿಸುತ್ತಿದ್ದಾರೆ. ನಮಗೆ ಎಂಥಹ ಜನ ರಾಜ್ಯ ನಡೆಸುತ್ತಿದ್ದಾರೆ ಎಂಬುದು ಎಲ್ಲವೂ ನಮಗೆ ಅರ್ಥವಾಗುತ್ತಿದೆ” ಎಂದಿದ್ದಾರೆ.

ಜೊತೆಗೆ ಹೈದರಾಬಾದ್‌ನಲ್ಲಿ ಮುನಾವರ್ ಫಾರೂಖಿ ಅವರ ಕಾರ್ಯಕ್ರಮ ನಡೆಯದಂತೆ ನೋಡಿಕೊಳ್ಳಬೇಕು ಎಂದು ಯುವ ಮೋರ್ಚಾದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಈಗಾಗಲೇ ಬಿಜೆಪಿಯ ಒತ್ತಡದಿಂದಾಗಿ ದೇಶದ ಹಲವೆಡೆ ಮುನಾವರ್‌ ಫಾರೂಖಿ ಕಾರ್ಯಕ್ರಮಗಳು ರದ್ದಾಗಿವೆ. ಈ ಸುದ್ದಿ ವೈರಲ್‌ ಆದ ಬಳಿಕ ಹಲವು ಸಂಘಟನೆಗಳು, ರಾಜಕೀಯ ನಾಯಕರು ಕಾರ್ಯಕ್ರಮ ಆಯೋಜಿಸುವುದಾಗಿ ಹೇಳಿದ್ದಾರೆ.

ಈ ನಡುವೆ ನಟ, ಜನವರಿ 16 ರಂದು ಕೊಲ್ಕತ್ತಾದಲ್ಲಿ ಪ್ರದರ್ಶನ ನೀಡುವುದಾಗಿ ಹೇಳಿದ್ದಾರೆ. ‘ಧಂಧೋ’ ಎಂಬ ತನ್ನ ಎರಡು ಗಂಟೆಗಳ ಕಾರ್ಯಕ್ರಮದ ಪೋಸ್ಟರ್ ಅನ್ನು ಮತ್ತು ಟಿಕೆಟ್‌ಗಳನ್ನು ಕಾಯ್ದಿರಿಸುವ ಲಿಂಕ್‌‌‌‌ ಅನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ಬಿಜೆಪಿ ಆಗ್ರಹದ ಬಳಿಕ ಮುನಾವರ್‌ ಫಾರೂಖಿಯ ಮತ್ತೊಂದು ಕಾರ್ಯಕ್ರಮ ರದ್ದು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...