Homeಕರ್ನಾಟಕಮ್ಯಾನ್‌ಹೋಲ್‌ಗೆ ಇಳಿದ ಪರಿಣಾಮ ಗಂಭೀರ ಆರೋಗ್ಯ ಸಮಸ್ಯೆ: ಪೌರಕಾರ್ಮಿಕ ICU ಗೆ ದಾಖಲು

ಮ್ಯಾನ್‌ಹೋಲ್‌ಗೆ ಇಳಿದ ಪರಿಣಾಮ ಗಂಭೀರ ಆರೋಗ್ಯ ಸಮಸ್ಯೆ: ಪೌರಕಾರ್ಮಿಕ ICU ಗೆ ದಾಖಲು

- Advertisement -
- Advertisement -

ಮ್ಯಾನ್‌ಹೋಲ್‌‌ಗೆ ಇಳಿದ ಪರಿಣಾಮದಿಂದಾಗಿ ಚಿನ್ಮಯ ಮಿಷನ್ ಆಸ್ಪತ್ರೆಯ (CMH) ಉದ್ಯೋಗಿ ದೈವದೀನಂ(53) ಅವರು ಉಸಿರಾಟದ ತೊಂದರೆ, ರಕ್ತದೊತ್ತಡ ಮತ್ತು ಇತರ ಅನಾರೋಗ್ಯ ತೊಂದರೆಗೆ ಒಳಗಾಗಿದ್ದಾರೆ ಎಂದು TOI ವರದಿ ಮಾಡಿದೆ. ಇದರ ನಂತರ ಅವರನ್ನು ಅದೇ ಆಸ್ಪತ್ರೆಯ ICU ಗೆ ದಾಖಲಿಸಲಾಗಿದೆ.

ಅವರನ್ನು ಮ್ಯಾನ್‌ಹೋಲ್‌ಗೆ ಇಳಿದು ಅದನ್ನು ಸ್ವಚ್ಛ ಮಾಡುವಂತೆ ಆಸ್ಪತ್ರೆಯ ಮೇಲಾಧಿಕಾರಿಗಳು ಒತ್ತಾಯಿಸಿದ್ದರಿಂದ ಅವರು ಮ್ಯಾನ್‌ಹೋಲ್‌ಗೆ ಇಳಿದಿದ್ದರು. ಈ ಬಗ್ಗೆ ಕಳೆದ ಮಂಗಳವಾದಂದು ವರದಿಯಾಗಿತ್ತು. ಘಟನೆಯ ಬಗ್ಗೆ ವರದಿಯಾದ ಎರಡು ದಿನಗಳ ನಂತರ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರು ಗುರುವಾರ ಆಸ್ಪತ್ರೆಗೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಆಸ್ಪತ್ರೆ ಮತ್ತು ಅದರ ಇಬ್ಬರು ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಮ್ಯಾನ್ಯುಯಲ್‌ ಸ್ಕ್ಯಾವೆಂಜಿಂಗ್‌: ಪ್ರಶ್ನಿಸಿದ್ದಕ್ಕೆ ‘ಈ ಕೆಲಸ ಮಾಡಲೆಂದೇ ಜಾತಿಗಳಿವೆ’ ಎಂದ ಇಂಜಿನಿಯರ್‌‌‌!

ಹಲಸೂರು ಸಹಾಯಕ ಪೊಲೀಸ್ ಆಯುಕ್ತ ಕುಮಾರ್, ನಡೆಯುತ್ತಿರುವ ತನಿಖೆಯ ವಿವರಗಳನ್ನು ಬಹಿರಂಗಪಡಿಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆಂದು TOI ವರದಿ ಹೇಳಿದೆ. “ತನಿಖೆಯಲ್ಲಿ ಪ್ರಗತಿ ಕಂಡುಬಂದಿದೆ ಆದರೆ ಸಂಪೂರ್ಣ ಪ್ರಕ್ರಿಯೆಯು ಪೂರ್ಣಗೊಂಡ ನಂತರ ಮಾತ್ರ ಅದನ್ನು ಬಹಿರಂಗಪಡಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಚಿನ್ಮಯ ಮಿಷನ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋಪಾಲ್ ಬಿ ಹೊಸೂರ್ ಅವರಯ ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ಅಥವಾ ವಿವರಿಸಲು ನಿರಾಕರಿಸಿದ್ದು, “ಆಸ್ಪತ್ರೆಯು ಅಧಿಕಾರಿಗಳೊಂದಿಗೆ ಸಹಕರಿಸುತ್ತದೆ” ಎಂದು ಅವರು ಹೇಳಿದ್ದಾರೆ.

ದೈವದೀನಂ ಅವರು ಆಸ್ಪತ್ರೆಯ ಒಳಚರಂಡಿ ಸ್ವಚ್ಛಗೊಳಿಸಿದ ನಂತರ ಅವರ ಆರೋಗ್ಯವು ಹದಗೆಟ್ಟಿದೆ ಎಂದು ಸಿಎಂಹೆಚ್ ಮೂಲಗಳು ತಿಳಿಸಿವೆ ಎಂದು ಪತ್ರಿಕೆ ಹೇಳಿದೆ.

ಇದನ್ನೂ ಓದಿ:ಪೊಲಿಟಿಕಲ್ ಕರೆಕ್ಟ್‌ನೆಸ್ ಮತ್ತು ಸಂವೇದನೆ; ಚಿತ್ರ, ಕಾರ್ಟೂನು, ಮಾಧ್ಯಮ ಮತ್ತು ತಿಳಿವಳಿಕೆಯ ಸಂವಾದ

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಮಾತನಾಡಿ, “ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಎಸಿಪಿ ಮತ್ತು ಆ ಭಾಗದ ವಿಭಾಗೀಯ ಮ್ಯಾಜಿಸ್ಟ್ರೇಟ್‌ ಆಗಿರುವ ಸಹಾಯಕ ಆಯುಕ್ತರಿಗೆ ಸೂಚನೆ ನೀಡಿದ್ದೇನೆ” ಎಂದು ಹೇಳಿದ್ದರೆ.

ಭಾರಿ ಬೆಲೆ ತೆರುತ್ತಿರುವ ನೈರ್ಮಲ್ಯ ಕಾರ್ಮಿಕರು

“ನೈರ್ಮಲ್ಯ ಕಾರ್ಮಿಕರ ತೆರುತ್ತಿರುವ ಅಂತಿಮ ಬೆಲೆ ಸಾವಾಗಿದೆ. ಉಸಿರಾಟದ ತೊಂದರೆಗಳು ಸೇರಿದಂತೆ ಇತರ ಗಂಭೀರ ಆರೋಗ್ಯ ಸಮಸ್ಯೆಗಳು ಅವರು ಸತತವಾಗಿ ಆಸ್ಪತ್ರೆ ಸೇರುವಂತೆ ಮಾಡುತ್ತದೆ” ಎಂದು ಸಫಾಯಿ ಕರ್ಮಚಾರಿಗಳು ಹೇಳಿದ್ದಾರೆ.

“ನನ್ನ ವೈದ್ಯಕೀಯ ಬಿಲ್‌ಗಳು ತುಂಬಾ ಹೆಚ್ಚಿದ್ದು, ಅದಕ್ಕೆ ಅಂತ್ಯವಿಲ್ಲ. ಇದರಿಂದ 4 ಲಕ್ಷ ರೂ.ಗೂ ಹೆಚ್ಚು ಸಾಲ ಹೊಂದಿದ್ದೇನೆ’’ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ನೈರ್ಮಲ್ಯ ಕಾರ್ಮಿಕ ಸತೀಶ್ ಜೆ.ಆರ್. ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ:ಪುರಸಭೆ ಅಧಿಕಾರಿಗಳಿಂದ ಕಿರುಕುಳ: ಡೆತ್‌ನೋಟ್ ಬರೆದಿಟ್ಟು ಪೌರಕಾರ್ಮಿಕ ಆತ್ಮಹತ್ಯೆ

ಅಪಾಯಕಾರಿ ಮತ್ತು ದೈಹಿಕವಾಗಿ ಹಾನಿಕರ ಕೆಲಸದ ಕಾರಣದಿಂದಾಗಿ ನೈರ್ಮಲ್ಯ ಕಾರ್ಮಿಕರು ಹೆಚ್ಚಾಗಿ ನ್ಯುಮೋಕೊನಿಯೋಸಿಸ್, ಸಿಲಿಕೋಸಿಸ್, ವಿವಿಧ ಚರ್ಮ ಮತ್ತು ಕಣ್ಣಿನ ಸೋಂಕುಗಳಿಂದ ಬಳಲುತ್ತಿದ್ದಾರೆ ಎಂದು ಸಫಾಯಿ ಕರ್ಮಾಚಾರಿಗಳ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವ ಕಾರ್ಯಕರ್ತರು ಹೇಳಿದ್ದಾರೆ.

“ಕೆಲವು ಸಾವುಗಳು ಅವರು ಕೆಲಸದಲ್ಲಿರುವಾಗ ಸಂಭವಿಸುತ್ತವೆ. ಆದರೆ ಕಾನೂನುಬಾಹಿರ ಕೆಲಸಗಳಿಗೆ ಅವರನ್ನು ಹಚ್ಚುವುದರಿಂದ ಉಂಟಾಗುವ, ಅದರಿಂದ ಉಲ್ಬಣಗೊಳ್ಳುವ ತೀವ್ರ ಆರೋಗ್ಯ ಸಮಸ್ಯೆಗಳಿಂದಾಗಿಯೆ ನೈರ್ಮಲ್ಯ ಕಾರ್ಮಿಕರಲ್ಲಿ ಹೆಚ್ಚಿನವರು ಬೇಗನೆ ಸಾಯುತ್ತಾರೆ” ಎಂದು ನೈರ್ಮಲ್ಯ ಕಾರ್ಮಿಕರನ್ನು ಪ್ರತಿನಿಧಿಸುವ ವಕೀಲ ಎಸ್. ಬಾಲನ್ ಹೇಳಿದ್ದಾರೆ.

ಇದನ್ನೂ ಓದಿ:ಚಂದ್ರಯಾನ ಇರಲಿ; ಒಳಚರಂಡಿ ಸ್ವಚ್ಛಗೊಳಿಸುವ ತಂತ್ರಜ್ಞಾನ ಎಲ್ಲಿದೆ? ಗುಜರಾತ್ ಸರಕಾರಕ್ಕೆ ಜಿಗ್ನೇಶ್ ಮೇವಾನಿ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಕುಟುಂಬದ ಮೂವರ ಹತ್ಯೆ ಪ್ರಕರಣ: ಪೊಲೀಸರ ವರ್ಗಾವಣೆ

0
ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಸಂದೀಪನ್ ಘಾಟ್ ಪ್ರದೇಶದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ದಲಿತ ಕುಟುಂಬದ ಮೂವರು ಸದಸ್ಯರ ಹತ್ಯೆ ನಡೆದಿದ್ದು, ಇದೀಗ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮತ್ತು ಹೊರಠಾಣೆ ಪ್ರಭಾರ ಅಧಿಕಾರಿಯನ್ನು ವರ್ಗಾಯಿಸಲಾಗಿದೆ. ಸಾಂದೀಪನ್...