Homeಮುಖಪುಟ'ನಾನು ದಣಿದಿಲ್ಲ, ನಿವೃತ್ತಿಯಾಗಿಲ್ಲ': ಅಜಿತ್ ಹೇಳಿಕೆಗೆ ಶರದ್ ಪವಾರ್ ತಿರುಗೇಟು

‘ನಾನು ದಣಿದಿಲ್ಲ, ನಿವೃತ್ತಿಯಾಗಿಲ್ಲ’: ಅಜಿತ್ ಹೇಳಿಕೆಗೆ ಶರದ್ ಪವಾರ್ ತಿರುಗೇಟು

- Advertisement -
- Advertisement -

ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರಿಗೆ ವಯಸ್ಸಾಗಿದೆ ಅವರಿನ್ನು ನಿವೃತ್ತಿ ಪಡೆಯಬಹುದು ಎಂಬ ಅಜಿತ್ ಪವಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಶರದ್ ಪವಾರ್, ವಾಜಪೇಯಿ ಮಾತನ್ನು ಉಲ್ಲೇಖಿಸಿ ನಾನು ದಣಿದಿಲ್ಲ, ನಿವೃತ್ತಿಯಾಗಿಲ್ಲ ಎಂದಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಅವರು ಪಕ್ಷದ ನಾಯಕತ್ವವನ್ನು ಅಡ್ವಾಣಿ ಅವರಿಗೆ ವರ್ಗಾಯಿಸಿದಾಗ ”ನಾನು ದಣಿದಿಲ್ಲ, ನಿವೃತ್ತಿ ಹೊಂದಿಲ್ಲ ಆದರೆ ಈಗ ಅಡ್ವಾಣಿ ನೇತೃತ್ವದಲ್ಲಿ ಗೆಲುವಿನತ್ತ ಮುನ್ನಡೆಯಬೇಕು ಎಂದು ಹೇಳಿದ್ದರು” ಎಂದು ಶರದ್ ಪವಾರ್ ವಾಜಪೇಯಿ ಮಾತುಗಳನ್ನು ಶರದ್ ಪವಾರ್ ನೆನೆದಿದ್ದಾರೆ.

”ಎಲ್ಲರ ಮುಂದೆ ನನ್ನನ್ನು ಖಳನಾಯಕನನ್ನಾಗಿ ಬಿಂಬಿಸಿದ್ದೀರಿ. ಅವರ (ಶರದ್ ಪವಾರ್) ಬಗ್ಗೆ ನನಗೆ ಇನ್ನೂ ಅತೀವ ಗೌರವವಿದೆ. ಆದರೆ ನೀವು ಹೇಳಿ, ಐಎಎಸ್ ಅಧಿಕಾರಿಗಳು 60 ವರ್ಷಕ್ಕೆ ನಿವೃತ್ತಿ ಹೊಂದುತ್ತಾರೆ. ರಾಜಕೀಯದಲ್ಲಿಯೂ ಬಿಜೆಪಿ ನಾಯಕರು 75ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದುತ್ತಾರೆ. ನೀವು ಎಲ್‌ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರ ಉದಾಹರಣೆಯನ್ನು ನೋಡಬಹುದು. ಅದು ಹೊಸ ಪೀಳಿಗೆಯನ್ನು ಏರಲು ಅನುವು ಮಾಡಿಕೊಡುತ್ತದೆ” ಎಂದು ಅಜಿತ್ ಪವಾರ್ ಹೇಳಿದ್ದರು.

ಅಜಿತ್ ಪವಾರ್‌ ಹೇಳಿಕೆಗೆ ತಿರುಗೇಟು ನೀಡಿದ ಶರದ್ ಪವಾರ್, ”ನನ್ನ ವಯಸ್ಸು 82 ಅಥವಾ 92 ಆಗಿರಲಿ ನಾನು ಇನ್ನೂ ಚುರುಕಾಗಿಯೇ ಇದ್ದೇನೆ ಎಂದು ಹೇಳಿದ್ದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೊರಾರ್ಜಿ ದೇಸಾಯಿ ಅವರು ಯಾವ ವಯಸ್ಸಿನಲ್ಲಿ ಪ್ರಧಾನಿ ಆದರು ಎಂಬುದು ಗೊತ್ತಿದೆಯೇ? ನಾನು ಪ್ರಧಾನಿ ಆಗಲು ಅಥವಾ ಸಚಿವನಾಗಲು ಬಯಸುವುದಿಲ್ಲ. ಜನ ಸೇವೆಯೊಂದೇ ನನ್ನ ದ್ವೇಯ’ ಎಂದಿದ್ದಾರೆ.

‘ನನಗೆ ನಿವೃತ್ತಿಯ ಸಲಹೆ ನೀಡಲು ಅವರು ಯಾರು? ನಾನು ಇನ್ನೂ ದುಡಿಯಬಲ್ಲೆ’ ಎಂದು ಮುಂಬೈ ಟಾಕ್‌ಗೆ ನೀಡಿದ ಸಂದರ್ಶನದಲ್ಲಿ ಪವಾರ್ ಗುಡುಗಿದ್ದಾರೆ.

ತಮ್ಮ ಪುತ್ರನಲ್ಲ ಎಂಬ ಕಾರಣಕ್ಕೆ ನನ್ನನ್ನು ಶರದ ಕಡೆಗಣಿಸಿದರು ಎಂಬ ಅಜಿತ್‌ ಪವಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ”ಕುಟುಂಬದ ವಿಷಯವನ್ನು ನಾನು ಹೊರಗೆ ಚರ್ಚಿಸಲು ಬಯಸುವುದಿಲ್ಲ. ಅಜಿತ್‌ ಪವಾರ್‌ ಅವರು ಮಂತ್ರಿ, ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಆದರೆ ಮಗಳು ಸುಪ್ರಿಯಾ ಸುಳೆಗೆ ಯಾವುದೇ ಮಂತ್ರಿ ಹುದ್ದೆ ನೀಡಿಲ್ಲ” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯ ಅಸ್ಥಿರತೆ: ಶರದ್ ಪವಾರ್ ಭೇಟಿಯಾದ ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...