Homeರಂಜನೆಕ್ರೀಡೆವಿಶ್ವಕಪ್ ಕ್ರಿಕೆಟ್: ನಾಳೆ ಭಾರತ-ನ್ಯೂಝಿಲೆಂಡ್ ಸೆಮಿಫೈನಲ್. ಮರುಕಳಿಸಬಹುದೇ ಇತಿಹಾಸ?

ವಿಶ್ವಕಪ್ ಕ್ರಿಕೆಟ್: ನಾಳೆ ಭಾರತ-ನ್ಯೂಝಿಲೆಂಡ್ ಸೆಮಿಫೈನಲ್. ಮರುಕಳಿಸಬಹುದೇ ಇತಿಹಾಸ?

- Advertisement -
- Advertisement -

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ 2019 ರ ಲೀಗ್ ಪಂದ್ಯಗಳು ಮುಗಿದಿದ್ದು ಸೆಮಿ ಫೈನಲ್ ಹಂತ ತಲುಪಿದೆ. ಭಾರತದ ಸಂಘಟಿತ ಆಟದಿಂದಾಗಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ. ಇದೇ ತಿಂಗಳ 9 ರಂದು ಆರಂಭವಾಗಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ನ್ಯೂಝಿಲೆಂಡ್ ತಂಡದ ವಿರುದ್ಧ ಸೆಣಸಲಿದ್ದು ಈ ಪಂದ್ಯ ಹಲವಾರು ವಿಶೇಷತೆಯಿಂದ ಕೂಡಿದೆ. ಅಲ್ಲದೆ 2008 ರ ಇತಿಹಾಸ ಮತ್ತೊಮ್ಮೆ ಮರುಕಳಿಸಲಿದೆ ಎನ್ನುವ ಲೆಕ್ಕಾಚಾರಗಳು ಕ್ರಿಕೆಟ್ ಅಭಿಮಾನಿಗಳ ನಡಯವೆ ಚರ್ಚೆ ಆಗುತ್ತಿದೆ.

ಏನದು ಇತಿಹಾಸ?

ಅದು 2008, ಮಲೇಷಿಯಾದಲ್ಲಿ ನಡೆಯುತ್ತಿದ್ದ 19 ವರ್ಷದೊಳಗಿನ ವಿಶ್ವಕಪ್ ಟೂರ್ನಿಯಲ್ಲಿ ಇದೇ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಸೆಮಿಫೈನಲ್ಸ್ ಅಲ್ಲಿ ಸೆಣಸಾಡಿದ್ದವು. ಅಲ್ಲದೆ ಅಂದಿನ ಭಾರತ ತಂಡದ ನಾಯಕನಾಗಿದ್ದ ವಿರಾಟ್ ಕೋಹ್ಲಿ ಹಾಗೂ ನ್ಯೂಝಿಲೆಂಡ್ ತಂಡದ ನಾಯಕನಾಗಿದ್ದ ಕೇನ್ ವಿಲಿಯಮ್‌ಸನ್ ಅವರೇ ಇಂದಿನ 2019 ರ ವಿಶ್ವಕಪ್ ತಂಡದ ನಾಯಕರಾಗಿರುವುದು ವಿಶೇಷವಾಗಿದೆ‌. ಇದು ಅಪರೂಪವೂ ಹೌದು. 2008 ರಲ್ಲಿ ಕೋಹ್ಲಿ ನೇತೃತ್ವದ ತಂಡ ನ್ಯೂಝಿಲೆಂಡ್ ತಂಡದ ವಿರುದ್ಧ ಭರ್ಜರಿ 7 ವಿಕೆಟ್‌ಗಳ ಗೆಲುವು ಸಾಧಿಸಿದ್ದೂ ಅಲ್ಲದೆ ಟೂರ್ನಿಯ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿತ್ತು. ಈಗ ಮತ್ತೊಮ್ಮೆ ಅಂತಹದ್ದೇ ಸೆಮಿಫೈನಲ್ಸ್ ಘಟ್ಟವನ್ನು ತಲುಪಿರುವ ಈ ಸಮಯದಲ್ಲಿ ಭಾರತ ತಂಡ ಗೆಲ್ಲುವ ಫೆವರೇಟ್ ತಂಡವಾಗಿದೆ ಅಲ್ಲದೆ ಕ್ರಿಕೆಟ್ ಅಭಿಮಾನಿಗಳಲ್ಲಿ 2008 ರ ಇತಿಹಾಸ ಮರುಕಳಿಸಲಿದೆ ಎನ್ನುವ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ಬೇರೆ ವಿಶೇಷತೆಗಳೇನು?

ಸಧ್ಯ ICC ರ‌್ಯಾಂಕಿಗ್ ಪಟ್ಟಿಯಲ್ಲಿ ಮೊದಲೆರಡು ಅಗ್ರಸ್ಥಾನದಲ್ಲಿರುವ ನ್ಯೂಝಿಲೆಂಡ್ ಮತ್ತು ಭಾರತ (ವಿಶ್ವಕಪ್ ಟೂರ್ನಿಯ ಮುಂಚಿನ ರ‌್ಯಾಂಕಿಗ್) ಇದೇ ಮೊದಲ ಬಾರಿಗೆ ಮುಖಾಮುಖಿ ಆಗುತ್ತಿದೆ. ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದ ಒಂದು ಹಂತದಲ್ಲಿ ಒಂದೂ ಪಂದ್ಯ ಸೋಲದ ಎರಡು ತಂಡವಾಗಿ ಭಾರತ ಮತ್ತು ನ್ಯೂಝಿಲೆಂಡ್ ಉಳಿದುಕೊಂಡಿತ್ತು. ಎರಡು ತಂಡಗಳ ನಡುವಿನ ಬಹ ನಿರೀಕ್ಷಿತ ರೋಮಾಂಚಕಾರಿ ಪಂದ್ಯ ಮಳೆಯ ಕಾರಣಕ್ಕೆ ರದ್ಧಾಗಿತ್ತು. ಇದೀಗ ಸೆಮೀಸ್‌ನ ಮುಖಾಮುಖಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

2008ರ ನ್ಯೂಝಿಲೆಂಡ್ ತಂಡದ ವಿರುದ್ಧ ಸೆಮೀಸ್ ನಲ್ಲಿ ಪಂದ್ಯ ಪುರುಷೋತ್ತಮ ಪಡೆದುಕೊಂಡಿದ್ದ ಕೋಹ್ಲಿ, 2019ರ ಸೆಮೀಸ್ ನಲ್ಲೂ ಮ‌್ಯಾಜಿಕ್ ಮಾಡಬಹುದ ಎಂದು ಕಾದು ನೋಡಬೇಕು. ಟೂರ್ನಿಯಲ್ಲಿ ಹೆಚ್ಚು 50 ರನ್‌ಗಳನ್ನು ಗಳಿಸಿದ್ದಾರಾದರೂ ಈವರಗೂ ಶತಕ ಬಾರಿಸಿಲ್ಲ. ನಾಕೌಟ್‌ನ ಬಹುಮುಖ್ಯವಾದ ಈ ಪಂದ್ಯದಲ್ಲಿ ಶತಕಗಳಿಸುತ್ತಾರೆ ಎನ್ನುವುದು ಅಭಿಮಾನಿಗಳ ಲೆಕ್ಕಾಚಾರವಾಗಿದೆ.

ಇನ್ನು ಈವರೆಗೂ ಒಂದೂ ವಿಶ್ವಕಪ್ ಗೆಲ್ಲದಿರುವ ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ಸೆಮೀಸ್ ಕದನದಲ್ಲಿದ್ದು ಅವರ ಮೇಲೆ ಹೆಚ್ಚಿನ ನಿರೀಕ್ಷೆ ಮತ್ತು ಒತ್ತಡಗಳು ಇದೆ.
ಸಧ್ಯ ವಿಶ್ವಕಪ್ ಗೆಲ್ಲುವ ಫೆವರೇಟ್ ತಂಡವಾಗಿರುವ ಭಾರತ ತಂಡದ ಲೋವರ್ ಆರ್ಡರ್ ಬ್ಯಾಟಿಂಗ್ ಸುಧಾರಿಸಿಕೊಂಡರೆ ಮೂರನೇ ವಿಶ್ವಕಪ್ ಭಾರತಕ್ಕೆ ಸಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ನ್ನು ಚುನಾವಣೆಗೆ ಮುನ್ನ ಬಂಧಿಸಿದ್ದು ಏಕೆ? EDಗೆ ಉತ್ತರಿಸುವಂತೆ ಸೂಚಿಸಿದ ಸುಪ್ರೀಂ ಕೋರ್ಟ್‌

0
ಸಾರ್ವತ್ರಿಕ ಚುನಾವಣೆಗೆ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವಂತೆ ಸುಪ್ರೀಂಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದ್ದು, ಅರವಿಂದ್ ಕೇಜ್ರಿವಾಲ್ ಅವರನ್ನು ಚುನಾವಣೆಗೂ ಮುನ್ನ ಬಂಧಿಸಿದ್ದು ಏಕೆ? ಎಂದು...