Homeಮುಖಪುಟಈಗ ನಾನಿದಿದ್ದರೆ ಕಪಿಲ್ ಶರ್ಮಾ, ಠಾಕೂರ್ ಬಂಧಿಸಿರುತ್ತಿದ್ದೆ : ದೆಹಲಿ ಮಾಜಿ ಪೊಲೀಸ್ ಕಮಿಷನರ್

ಈಗ ನಾನಿದಿದ್ದರೆ ಕಪಿಲ್ ಶರ್ಮಾ, ಠಾಕೂರ್ ಬಂಧಿಸಿರುತ್ತಿದ್ದೆ : ದೆಹಲಿ ಮಾಜಿ ಪೊಲೀಸ್ ಕಮಿಷನರ್

- Advertisement -
- Advertisement -

‘ನಾನೇದಾರೂ ಈಗ ದೆಹಲಿಯ ಪೊಲೀಸ್ ಕಮಿಶನರ್ ಆಗಿದಿದ್ದರೆ, ಕಪಿಲ್ ಶರ್ಮಾ, ಅನುರಾಗ ಠಾಕೂರ್, ಪರ್ವೇಶ್ ವರ್ಮಾರನ್ನು ಬಂಧಿಸಿರುತ್ತಿದ್ದೆ’ ಎಂದು ದೆಹಲಿಯ ಮಾಜಿ ಪೊಲೀಸ್ ಕಮಿಷನರ್ ಮತ್ತು ಬಿಎಸ್‌ಎಫ್‌ನ ಮಾಜಿ ಡೈರೆಕ್ಟರ್ ಜನರಲ್ ಅಜಯರಾಜ್ ಶರ್ಮಾ ಹೇಳಿದ್ದಾರೆ.

ದೆಹಲಿಯ ಪೊಲೀಸರು ಕೋಮುವಾದಿಗಳಾಗುತ್ತಿದ್ದಾರೆ ಎಂಬ ಸಂಶಯವನ್ನೂ ವ್ಯಕ್ತಪಡಿಸಿರುವ ಅವರು, ದೆಹಲಿ ಪೊಲೀಸರು, ತಾವು ಕಪಿಲ್ ಶರ್ಮಾ ಮತ್ತು ಇತರರ ಪ್ರಚೋದನಾಕಾರಿ ಭಾಷಣಗಳ ವಿಡಿಯೋ ನೋಡಿಲ್ಲವೆಂದು ನ್ಯಾಯಾಲಯದೆದುರು ಸುಳ್ಳನ್ನು ಹೇಳಿದ್ದಾರೆ. ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಅಡಿಯಾಳಿನಂತೆ ದೆಹಲಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿ ವೈರ್ ಪೋರ್ಟಲ್‌ಗಾಗಿ ಕರಣ್‌ ಥಾಪರ್ ಅವರಿಗೆ ನೀಡಿರುವ ಸಂದರ್ಶನದಲ್ಲಿ ಅಜಯರಾಜ್ ಶರ್ಮಾ ದೆಹಲಿ ಪೊಲೀಸರು ಮತ್ತು ಕೇಂದ್ರ ಸರ್ಕಾರದ ದಬ್ಬಾಳಿಕೆ ವಿರಿದ್ಧ ಕಿಡಿ ಕಾರಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಜಾಮಿಯಾ ವಿವಿಯಲ್ಲಿ ಪೊಲೀಸರು ನಡೆಸಿದ ಹಿಂಸಾಚಾರದಿಂದ ಇದೆಲ್ಲ ಆರಂಭಗೊಂಡಿದೆ. ಕಪಿಲ್ ಶರ್ಮಾ ಪೊಲೀಸರಿಗೆ ಎಚ್ಚರಿಕೆ ನೀಡುವಾಗ ಪಕ್ಕದಲ್ಲೇ ಇದ್ದ ಡಿಸಿಪಿ (ಈಶಾನ್ಯ ದೆಹಲಿ) ವೇದಪ್ರಕಾಶ್ ಸೂರ್ಯ ಸುಮ್ಮನೇ ನಿಂತಿದ್ದರ ಕುರಿತು ಪ್ರಶ್ನೆ ಕೇಳಿದಾಗ, ನಾನು ಕಮಿಶನರ್ ಆಗಿದ್ದರೆ ವೇದಪ್ರಕಾಶರಿಂದ ವಿವರಣೆ ಕೇಳುತ್ತಿದ್ದೆ, ಅದು ಅರಿ ಅನಿಸದಿದ್ದರೆ ಆತನನ್ನು ಸಸ್ಪೆಂಡ್ ಮಾಡಿರುತ್ತಿದ್ದೆ ಎಂದು ಸಜಯ್ ಶರ್ಮಾ ಉತ್ತರಿಸಿದ್ದಾರೆ.

ಅನುರಾಗ್ ಠಾಕೂರ್ ಬಂಧಿಸಲು ಗೃಹ ಇಲಾಖೆಗೆ ಮತ್ತು ಪರ್ವೇಶ್ ವರ್ಮಾ ಬಂದಿಸಲು ಸ್ಪೀಕರ್‌ಗೆ ಮಾಹಿತಿ ನೀಡಿ, ಮುಂದಿನ ಕ್ರಮ ಜರುಗಿಸುತ್ತಿದ್ದೆ. ಕಪಿಲ್ ಶರ್ಮಾ ಬಂಧಿಸಲು ಯಾರಿಗೂ ಮಾಹಿತಿ ನೀಡುವ ಅಗತ್ಯವೇ ಇರುತ್ತಿರಲಿಲ್ಲ ಎಂದು ಮಾಜಿ ಪೊಲೀಸ್ ಕಮಿಷನರ್ ಉತ್ತರಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...