Homeಮುಖಪುಟಗಾಜಾದಿಂದ ತೆರಳದಿದ್ದರೆ ಭಯೋತ್ಪಾದಕರೆಂದು ಪರಿಗಣಿಸಲಾಗುವುದು: ಪ್ಯಾಲೆಸ್ತೀನಿಯರಿಗೆ ಇಸ್ರೇಲ್ ಎಚ್ಚರಿಕೆ

ಗಾಜಾದಿಂದ ತೆರಳದಿದ್ದರೆ ಭಯೋತ್ಪಾದಕರೆಂದು ಪರಿಗಣಿಸಲಾಗುವುದು: ಪ್ಯಾಲೆಸ್ತೀನಿಯರಿಗೆ ಇಸ್ರೇಲ್ ಎಚ್ಚರಿಕೆ

- Advertisement -
- Advertisement -

ಇಸ್ರೇಲ್-ಹಮಾಸ್‌ನ ನಡುವಿನ ಯುದ್ಧ ಮೂರನೇ ವಾರಕ್ಕೆ ಕಾಲಿಟ್ಟಿದೆ. ಉತ್ತರ ಗಾಜಾದ ಮೇಲೆ ಆಕ್ರಮಣ ಮಾಡುವ ಮುಂಚಿತವಾಗಿ ಇಸ್ರೇಲ್, ದಾಳಿಗಳನ್ನು ತೀವ್ರಗೊಳಿಸುವುದಾಗಿ ಹೇಳಿಕೊಂಡಿದೆ. ರಾತ್ರಿಯಿಡೀ ಗಾಜಾದ ಮೇಲೆ ಇಸ್ರೇಲ್ ಭಾರಿ ಬಾಂಬ್ ಸ್ಫೋಟಿಸಿತು.

ಪ್ಯಾಲೆಸ್ತೀನಿಯನ್ನರಿಗೆ ಉತ್ತರ ಗಾಜಾದಿಂದ ದಕ್ಷಿಣಕ್ಕೆ ತೆರಳುವಂತೆ ಇಸ್ರೇಲ್​ ತುರ್ತು ಎಚ್ಚರಿಕೆ ನೀಡಿದೆ. ಒಂದೊಮ್ಮೆ ಹೋಗದಿದ್ದರೆ ಅಂಥವರನ್ನು ನಾವು ಉಗ್ರರೆಂದು ಪರಿಗಣಿಸಬೇಕಾಗುತ್ತದೆ ಎಂದು ಹೇಳಿದೆ. ಗಾಜಾದ ಉತ್ತರ ಭಾಗದಲ್ಲಿರುವುದು ನಿಮ್ಮ ಜೀವಕ್ಕೆ ಅಪಾಯವನ್ನುಂಟು ಮಾಡಲಿದೆ, ನಿಮಗೆ ಈಗಾಗಲೇ ದಕ್ಷಿಣಕ್ಕೆ ತೆರಳುವಂತೆ ನಾವು ಕೇಳಿಕೊಂಡಿದ್ದಾಗಿದೆ. ಇನ್ನೂ ನೀವು ಈ ಜಾಗವನ್ನು ಬಿಟ್ಟು ಹೋಗಿಲ್ಲ ಎಂದಾದರೆ ನಿಮ್ಮನ್ನು ಉಗ್ರರೆಂದು ಪರಿಗಣಿಸಲಾಗುತ್ತದೆ ಎಂದು ಇಸ್ರೇಲ್ ಹೇಳಿದೆ.

ಇಸ್ರೇಲ್​ ಇಂದು ಬೆಳಗ್ಗೆ ಗಾಜಾದ ಮಸೀದಿಯೊಂದರ ಮೇಲೆ ವೈಮಾನಿಕ ದಾಳಿ ನಡೆಸಿದೆ. ಗಾಜಾದ ವೆಸ್ಟ್​ ಬ್ಯಾಂಕ್​ನ ಜೆನಿನ್ ನಗರದಲ್ಲಿರುವ ಅಲ್​-ಅನ್ಸಾರ್ ಮಸೀದಿ ಸಂಕೀರ್ಣದಲ್ಲಿರುವ ಭಯೋತ್ಪಾದಕ ಸಂಘಟನೆ ಹಮಾಸ್ ಹಾಗೂ ಇಸ್ಲಾಮಿಕ್ ಜಿಹಾದ್ ಕಮಾಂಡ್ ಸೆಂಟರ್ ಮೇಲೆ ಇಸ್ರೇಲಿ ಸೇನೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ವೈದ್ಯರನ್ನು ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿದೆ.

ಆದರೆ, ಇದು ಇನ್ನೂ ದೃಢಪಟ್ಟಿಲ್ಲ. ಇದಕ್ಕೂ ಮುನ್ನ ನೂರ್ ಶಮ್ಸ್ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲ್ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಐವರು ಮಕ್ಕಳು ಸೇರಿದಂತೆ 13 ಪ್ಯಾಲೆಸ್ತೀನ್ ಪ್ರಜೆಗಳು ಸಾವನ್ನಪ್ಪಿದ್ದರು. ಗಾಜಾ ನಗರದ ಜನರು ತಮ್ಮ ಸುರಕ್ಷತೆಗಾಗಿ ದಕ್ಷಿಣ ಗಾಜಾದ ಕಡೆಗೆ ವಲಸೆ ಹೋಗುವಂತೆ ಇಸ್ರೇಲ್ ಕೇಳಿಕೊಂಡಿತ್ತು. ಹಮಾಸ್ ಗುಂಪು ಇಬ್ಬರು ಅಮೆರಿಕದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಮತ್ತೊಮ್ಮೆ ಗಾಜಾವನ್ನು ವಶಪಡಿಸಿಕೊಳ್ಳುವವರೆಗೆ ಯುದ್ಧವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.

ಅಕ್ಟೋಬರ್ 7ರಂದು ಗಾಜಾದ ನೆಲದ ಮೇಲೆ ಇಸ್ರೇಲ್ ಆಕ್ರಮಣ ಆರಂಭವಾಯಿತು. ಟ್ಯಾಂಕ್‌ಗಳು ಮತ್ತು ಹತ್ತಾರು ಸಾವಿರ ಸೈನಿಕರು ಗಡಿಯಲ್ಲಿ ಜಮಾವಣೆಗೊಂಡರು.

ಅಂದಾಜು 7,00,000 ಜನರು ಈಗಾಗಲೇ ಪಲಾಯನ ಮಾಡಿದ್ದಾರೆ. ಆದರೆ ಇನ್ನೂ ಅನೇಕ ಜನರು ಅಲ್ಲಿಯೇ ಉಳಿದಿದ್ದಾರೆ. ಇದು ನಾಗರಿಕ ಸಾವುನೋವುಗಳಿಗೆ ಕಾರಣವಾಗಿದೆ.

ಹಮಾಸ್‌ನ ಮೂಲಸೌಕರ್ಯ ಮತ್ತು ಭೂಗತ ಸುರಂಗ ವ್ಯವಸ್ಥೆಯು ಗಾಜಾ ನಗರದಲ್ಲಿ ಕೇಂದ್ರೀಕೃತವಾಗಿದೆ. ಅಲ್ಲಿ ಮುಂದಿನ ಹಂತದ ಆಕ್ರಮಣವು ಭೀಕರವಾಗಿರಲಿದೆ ಎಂದು ಇಸ್ರೇಲಿ ಮಿಲಿಟರಿ ಅಧಿಕಾರಿಗಳು ಹೇಳುತ್ತಾರೆ.

ಇದನ್ನೂ ಓದಿ: ಗಾಝಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ದಾಳಿ: 117 ಮಕ್ಕಳು ಸೇರಿ 266 ಫೆಲೆಸ್ತೀನಿಯರು ಸಾವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ-2024: ಕುಗ್ಗಿದ ಮೋದಿ ವರ್ಚಸ್ಸು; ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವಲೋಕನ…

0
2014 ಮತ್ತು 2019ರ ಲೋಕಸಭೆ ಚುನಾವಣೆಗೆ ಹೋಲಿಕೆ ಮಾಡಿದರೆ 2024ರಲ್ಲಿ ದೇಶದಲ್ಲಿ ಮೋದಿ ವರ್ಚಸ್ಸು ಕಡಿಮೆಯಾಗಿದೆ. ಈ ಬಾರಿ ಬ್ರ್ಯಾಂಡ್ ಮೋದಿ ದುರ್ಬಲವಾಗುತ್ತಿದೆ, ಮೋದಿ ಕುರಿತು ನಿರೂಪಣೆಯಲ್ಲಿ ಬದಲಾವಣೆ ಇದೆ, ಜನರಲ್ಲಿ ಮೋದಿ...