Homeಅಂತರಾಷ್ಟ್ರೀಯಗಾಝಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ದಾಳಿ: 117 ಮಕ್ಕಳು ಸೇರಿ 266 ಫೆಲೆಸ್ತೀನಿಯರು ಸಾವು

ಗಾಝಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ದಾಳಿ: 117 ಮಕ್ಕಳು ಸೇರಿ 266 ಫೆಲೆಸ್ತೀನಿಯರು ಸಾವು

- Advertisement -
- Advertisement -

ಇಸ್ರೇಲ್‌ ಗಾಝಾ ಮೇಲೆ ವೈಮಾನಿಕ ದಾಳಿಯನ್ನು ನಡೆಸಿದ್ದು, ಕಳೆದ 24 ಗಂಟೆಯಲ್ಲಿ 117 ಮಕ್ಕಳು ಸೇರಿ 266 ಫೆಲೆಸ್ತೀನೀಯರು ಬಲಿಯಾಗಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ವೆಸ್ಟ್ ಬ್ಯಾಂಕ್‌ನ ರಾಮಲ್ಲಾ ಬಳಿಯ ಜಲಜೋನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ದಾಳಿ ನಡೆಸಿ ಇಬ್ಬರು ನಾಗರಿಕರನ್ನು ಹತ್ಯೆ ಮಾಡಿದ್ದು, ಹಲವರನ್ನು ಬಂಧಿಸಿದೆ ಎಂದು ತಿಳಿದು ಬಂದಿದೆ.

ಪ್ಯಾಲೇಸ್ತೀನ್ ಮಾಧ್ಯಮಗಳ ಪ್ರಕಾರ, ಗಾಜಾದಲ್ಲಿನ ವಸತಿ ಕಟ್ಟಡಕ್ಕೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಕನಿಷ್ಠ 30 ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ. ಜಬಾಲಿಯಾ ನಿರಾಶ್ರಿತರ ಶಿಬಿರದ ಅಲ್-ಶುಹಾದಾ ಪ್ರದೇಶದಲ್ಲಿ ಈ ಕಟ್ಟಡವಿತ್ತು. ದಾಳಿಗೆ ಕಟ್ಟಡ  ನೆಲಸಮಗೊಂಡಿದ್ದು ಮತ್ತು ಹಲವಾರು ಅಕ್ಕಪಕ್ಕದ ಮನೆಗಳು ಕೂಡ ಧ್ವಂಸಗೊಂಡಿದೆ.

ಇಸ್ರೇಲ್‌ ದಾಳಿಯಿಂದ ಇತ್ತೀಚಿನ ವರದಿಯ ಪ್ರಕಾರ 4,600 ಜನರು ಕೊಲ್ಲಲ್ಪಟ್ಟಿದ್ದಾರೆ. ಮತ್ತು 14,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಝಾ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ ಇಸ್ರೇಲಿ ವಾಯು ದಾಳಿಗಳಿಗೆ 117 ಮಕ್ಕಳ ಸಹಿತ 266 ಫೆಲೆಸ್ತೀನೀಯರು ಬಲಿಯಾಗಿದ್ದಾರೆ.

ಹಮಾಸ್‌ ನಡೆಸಿದ ದಾಳಿಗೆ 1,400 ಇಸ್ರೇಲ್‌ ಪ್ರಜೆಗಳು ಕೊಲ್ಲಲ್ಪಟ್ಟರು ಮತ್ತು 212 ಜನರನ್ನು ಒತ್ತೆಯಾಳಾಗಿರಿಸಲಾಗಿದೆ.

ಈ ಮಧ್ಯೆ ಈಜಿಪ್ಟ್‌ನಿಂದ ಗಾಝಾಗೆ ಪರಿಹಾರ ಸಾಮಾಗ್ರಿ ಹೊತ್ತ 14  ಟ್ರಕ್‌ಗಳು ರಫಾ ಕ್ರಾಸಿಂಗ್‌ ಮೂಲಕ ಪ್ರವೇಶಿಸಿದೆ. ಆದರೆ ಯುಎನ್‌ ಕಚೇರಿಯು ಗಾಝಾಗೆ ಬೇಕಾಗಿರುವ ದೈನಂದಿನ ಸರಾಸರಿ ಅಗತ್ಯ ವಸ್ತುಗಳಲ್ಲಿ ಕೇವಲ 4% ಮಾತ್ರ ಬಂದಿದೆ ಎಂದು ಹೇಳಿದ್ದಾರೆ.

ಇದಲ್ಲದೆ ಇಸ್ರೇಲ್ ಸೇನೆಯು ಸೋಮವಾರ ಮುಂಜಾನೆ ಲೆಬನಾನ್‌ನಲ್ಲಿ ಎರಡು ಹೆಜ್ಬೊಲ್ಲಾ ಘಟಕಗಳನ್ನು ಹೊಡೆದು ಹಾಕಿದೆ. ಹೆಜ್ಬೊಲ್ಲಾ ಇಸ್ರೇಲ್ ಕಡೆಗೆ  ಕ್ಷಿಪಣಿಗಳು ಮತ್ತು ರಾಕೆಟ್‌ಗಳನ್ನು ಉಡಾಯಿಸುವ ಸಾಧ್ಯತೆ ಹಿನ್ನೆಲೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿದೆ.

ಹಮಾಸ್‌ ಸಶಸ್ತ್ರ ಗುಂಪು ಇಸ್ರೇಲ್‌ ಮೇಲೆ ವಾಯು, ಭೂ ಮತ್ತು ಜಲ ಮಾರ್ಗಗಳಲ್ಲಿ ದಾಳಿ ನಡೆಸಿತ್ತು. ಆ ಬಳಿಕ ಇಸ್ರೇಲ್‌ ಯುದ್ಧವನ್ನು ಘೋಷಿಸಿತ್ತು. ಗಾಝಾ ಪಟ್ಟಿಗೆ ನೀರು, ಆಹಾರ, ವಿದ್ಯುತ್‌ ಸರಬರಾಜನ್ನು ತಡೆ ಹಿಡಿದಿತ್ತು.

ಇದನ್ನು ಓದಿ: ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಮಾಝ್ ಮಾಡಲು ಅವಕಾಶ ಕೊಟ್ಟ ಮುಖ್ಯ ಶಿಕ್ಷಕಿ ಅಮಾನತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಓಂ ಬಿರ್ಲಾ ಪುತ್ರಿಯ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್; ಧ್ರುವ ರಾಠಿ ನಕಲಿ ಖಾತೆ ವಿರುದ್ಧ...

0
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿಯ ಬಗ್ಗೆ ಎಕ್ಸ್‌ನಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ ನಂತರ, ಮಹಾರಾಷ್ಟ್ರದ ಸೈಬರ್ ಪೊಲೀಸರು ಜನಪ್ರಿಯ ಯೂಟ್ಯೂಬರ್ ಧ್ರುವ ರಾಠಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ...