Homeಮುಖಪುಟಐಐಟಿ ಜಾತಿ ತಾರತಮ್ಯ ಸರ್ವೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವಾಪಾಸ್ಸು

ಐಐಟಿ ಜಾತಿ ತಾರತಮ್ಯ ಸರ್ವೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವಾಪಾಸ್ಸು

- Advertisement -
- Advertisement -

ದೆಹಲಿಯ ಐಐಟಿಯಲ್ಲಿ ಇಬ್ಬರು ಪರಿಶಿಷ್ಟ ಜಾತಿಯ (SC) ವಿದ್ಯಾರ್ಥಿಗಳ ಆತ್ಮಹತ್ಯೆಯ ನಂತರ ಬೋರ್ಡ್‌ ಫಾರ್‌ ಸ್ಟುಡೆಂಟ್ಸ್‌ ಪಬ್ಲಿಕೇಶನ್ (BSP ) ಜಾತಿ ತಾರತಮ್ಯದ ಕುರಿತು ಸರ್ವೆಯನ್ನು ಪ್ರಕಟಿಸಿದ್ದು, ಅದನ್ನು ಕೆಲವೇ ಗಂಟೆಗಳ ಒಳಗೆ ಹಿಂಪಡೆಯಲಾಗಿದೆ.

ಕ್ಯಾಂಪಸ್‌ನಲ್ಲಿರುವ ಹಲವಾರು ವಿದ್ಯಾರ್ಥಿಗಳು ಸಮೀಕ್ಷೆಯು ಅಪ್ರಸ್ತುತ ಮತ್ತು ಸೂಕ್ಷ್ಮವಲ್ಲದ ಅನಾವಶ್ಯಕ ಪ್ರಶ್ನೆಗಳನ್ನು ಹೊಂದಿದೆ ಎಂದು ಆರೋಪಿಸಿದ್ದರು.

ಈ ಕುರಿತು ವಿದ್ಯಾರ್ಥಿಯೋರ್ವರು ಪ್ರತಿಕ್ರಿಯಿಸಿ, ಸರ್ವೆಯಲ್ಲಿ ಸಂಸ್ಥೆಯ ಮೀಸಲಾತಿ ನೀತಿಯ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಅದಕ್ಕೆ ಆಯ್ಕೆಯಾಗಿ ಕೆಳಗೆ,  ಪ್ರಸ್ತುತ  ವಿಧಾನವನ್ನು ಬೆಂಬಲಿಸಿ, ಸಂಪೂರ್ಣವಾಗಿ ಆರ್ಥಿಕ ಪರಿಸ್ಥಿತಿಗಳ ಆಧಾರದ ಮೇಲೆ ಹೊಸ ನೀತಿಯನ್ನು ಬದಲಿಸಿ, ಮೀಸಲಾತಿಯನ್ನು ರದ್ದುಗೊಳಿಸಿ ಕೊನೆಗೆ ಉತ್ತರಿಸದಿರಲು ಆದ್ಯತೆ ನೀಡಿ ಎಂದು ಆಯ್ಕೆ ನೀಡಲಾಗಿದೆ. ಸಮೀಕ್ಷೆಯಲ್ಲಿ ಕೊನೆಯ ಆಯ್ಕೆಯನ್ನು ಏಕೆ ಹಾಕಬೇಕು. ಅದರ ಬಗ್ಗೆ ಮುಕ್ತವಾಗಿರುವುದರಲ್ಲಿ ಸಮಸ್ಯೆ ಏನು? ಎಂದು ವಿದ್ಯಾರ್ಥಿ ಪ್ರಶ್ನಿಸಿದ್ದಾರೆ.

ಪ್ರಶ್ನೆಗಳಲ್ಲಿ ವಿದ್ಯಾರ್ಥಿಗಳ ವಾರ್ಷಿಕ ಕುಟುಂಬದ ಆದಾಯ, ಗ್ರಾಮೀಣ ಅಥವಾ ನಗರ ಹಿನ್ನೆಲೆ, ಪ್ರವೇಶದ ವರ್ಷ, ಲಿಂಗ ಮತ್ತು ಪದವಿ ಕೇಳಲಾಗಿದೆ.

SC/ST ಕೋಶವು ಇದನ್ನು ಪರಿಶೀಲಿಸುತ್ತಿದೆ ಮತ್ತು ಅಧಿಕೃತ ಚಾನಲ್‌ಗಳ ಮೂಲಕ ಶೀಘ್ರದಲ್ಲೇ ಹೊಸ ಸಮೀಕ್ಷೆಯನ್ನು ಬಿಡುಗಡೆ ಮಾಡಲು BSP ಯೊಂದಿಗೆ ಕೆಲಸ ಮಾಡುತ್ತಿದೆ ಎಂದು  IIT-ದೆಹಲಿ SC/ST ಸೆಲ್ ಸಂಪರ್ಕಾಧಿಕಾರಿ ಪ್ರವೀಣ್ ಇಂಗೋಲ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಸರ್ವೆ ಅಧಿಕೃತ ಮಾರ್ಗಗಳ ಮೂಲಕ ನಡೆದಿಲ್ಲ. ಬಿಎಸ್‌ಪಿಯ ಚಟುವಟಿಕೆಗಳನ್ನು ನಿರ್ದೇಶಿಸುವ ಅಧ್ಯಾಪಕರು ಮಂಡಳಿಯ, ಬೋರ್ಡ್‌ನ ಸದಸ್ಯ ವಿದ್ಯಾರ್ಥಿಗಳಿಗೆ ಎಸ್‌ಸಿ/ಎಸ್‌ಟಿ ಕೋಶವನ್ನು ಸಂಪರ್ಕಿಸಲು ಸಲಹೆ ನೀಡಿದ್ದರು. ಅದನ್ನು ಅವರು ಮಾಡಲಿಲ್ಲ. ಸಮೀಕ್ಷೆಯು ಸರಿಯಾಗಿ ನಡೆಯದೆ ಬಿಡುಗಡೆಯಾಗಿದೆ. ನಾವು ಅದನ್ನು ಕಂಡುಕೊಂಡ ತಕ್ಷಣ ಅದನ್ನು ಹಿಂಪಡೆಯಲಾಗಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದರು.

ಹೆಸರು ಹೇಳಲಿಚ್ಛಿಸದ ಬಿಎಸ್‌ಪಿ ಬೋರ್ಡ್‌ನ ವಿದ್ಯಾರ್ಥಿ ಮುಖ್ಯಸ್ಥರು ಈ ಬಗ್ಗೆ ಪ್ರತಿಕ್ರಿಯಿಸಿದ್ದು,  ಕ್ಯಾಂಪಸ್‌ನಲ್ಲಿ ಜಾತಿ ಆಧಾರಿತ ತಾರತಮ್ಯದ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ನಾವು ಈ ವಾರದ ಆರಂಭದಲ್ಲಿ ಸಮೀಕ್ಷೆಯನ್ನು ನಡೆಸಿದ್ದೇವೆ. ಆದರೆ, ಸಂಸ್ಥೆಯ ಎಸ್‌ಸಿ/ಎಸ್‌ಟಿ ಸೆಲ್‌ನಿಂದ ಕೆಲವು ದೂರುಗಳ ಕಾರಣ ತಾತ್ಕಾಲಿಕವಾಗಿ ಸಮೀಕ್ಷೆ ಹಿಂಪಡೆಯಲಾಗಿದೆ. ಈ ವಿಷಯವನ್ನು ಆಂತರಿಕವಾಗಿ ಪರಿಹರಿಸಲಾಗಿದೆ ಮತ್ತು BSP ಪ್ರಸ್ತುತ SC/ST ಸೆಲ್‌ನೊಂದಿಗೆ ಹೊಸ ಸಮೀಕ್ಷೆಯನ್ನು ನಡೆಸುವಲ್ಲಿ ತೊಡಗಿಸಿಕೊಂಡಿದೆ, ಅದು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.

ಕೆಲವು ವಾರಗಳ ಹಿಂದೆ ಐಐಟಿಯಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ  ವಿದ್ಯಾರ್ಥಿ ಅನಿಲ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಿಟೆಕ್ ವ್ಯಾಸಂಗ ಮಾಡಲು ಅವರು 2019ರಲ್ಲಿ ಐಐಟಿಗೆ ಸೇರಿದರು. ಇದಲ್ಲದೆ ಐಐಟಿಯಲ್ಲಿ ಇನ್ನೊಬ್ಬ ಎಸ್‌ಸಿ ವಿದ್ಯಾರ್ಥಿ ಆಯುಷ್ ಅಶ್ನಾ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವೆರಡು ಆತ್ಮಹತ್ಯೆಗಳು ಒಂದು ತಿಂಗಳ ಅಂತರದಲ್ಲಿ ನಡೆದಿದೆ.

ಸಮೀಕ್ಷೆಯನ್ನು ಆತ್ಮಹತ್ಯೆ ವಿಚಾರವನ್ನು ಮುಂದಿಟ್ಟು ಮಾಡಲಾಗಿಲ್ಲ. ಈ ಸಮೀಕ್ಷೆಯು ಐಐಟಿ-ದೆಹಲಿಯಲ್ಲಿ ಇತ್ತೀಚೆಗೆ ನಡೆದ ಆತ್ಮಹತ್ಯೆಗೆ ನೇರವಾಗಿ ಸಂಬಂಧಿಸಿಲ್ಲ ಎಂದು ಬಿಎಸ್‌ಪಿ ವಿದ್ಯಾರ್ಥಿ ಮುಖ್ಯಸ್ಥರು ಹೇಳಿದ್ದಾರೆ.

ಇದನ್ನು ಓದಿ: ಆಂಧ್ರಪ್ರದೇಶ: ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಎಇಒ ಕ್ರೈಸ್ತ ಧರ್ಮದವರಲ್ಲ

0
ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯಕ್ಕೆ ನೂತನ ಸಹಾಯಕ ಕಾರ್ಯನಿರ್ವಹಣಾಧಿಕಾರಿ (ಎಇಒ) ಆಗಿ ಯೇಸುರಾಜ್ ನೇಮಕಗೊಂಡಿದ್ದಾರೆ. ರಾಮನಗರ ಜಿಲ್ಲಾ ಮುಜರಾಯಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೇಸುರಾಜ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ...