Homeಮುಖಪುಟಅಬಕಾರಿ ನೀತಿಯ ಅಕ್ರಮ ಪ್ರಕರಣ: ಸಿಸೋಡಿಯಾಗೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್

ಅಬಕಾರಿ ನೀತಿಯ ಅಕ್ರಮ ಪ್ರಕರಣ: ಸಿಸೋಡಿಯಾಗೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್

- Advertisement -
- Advertisement -

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈಗ ರದ್ದಾದ ಅಬಕಾರಿ ನೀತಿಯಲ್ಲಿನ ಅಕ್ರಮಗಳ ಬಗ್ಗೆ ಪರಿಶೀಲಿಸಲು ಕೇಂದ್ರೀಯ ತನಿಖಾ ದಳ ಸಲ್ಲಿಸಿದ ಪ್ರಕರಣದಲ್ಲಿ ಮಂಗಳವಾರ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾಗೆ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.

ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದ್ದು, ಅವರ ವಿರುದ್ಧದ ಆರೋಪಗಳು ”ತುಂಬಾ ಗಂಭೀರವಾಗಿದೆ” ಎಂದು ಹೇಳಿದ್ದಾರೆ.

”ಅರ್ಜಿದಾರರು ಪ್ರಭಾವಿ ವ್ಯಕ್ತಿಯಾಗಿರುವುದರಿಂದ… ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ” ಎಂದು ಅವರು ಹೇಳಿದರು.

ನವೆಂಬರ್ 2021ರಲ್ಲಿ ಜಾರಿಗೆ ಬಂದ ರಾಜ್ಯ ಸರ್ಕಾರದ ಅಬಕಾರಿ ನೀತಿಗೆ ಸಂಬಂಧಿಸಿದಂತೆ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಫೆಬ್ರವರಿ 26ರಂದು ಬಂಧಿಸಲಾಯಿತು.

ಅಬಕಾರಿ ನೀತಿಯಡಿ 849 ಮದ್ಯದಂಗಡಿಗಳ ಪರವಾನಗಿಯನ್ನು ಖಾಸಗಿ ಸಂಸ್ಥೆಗಳಿಗೆ ಮುಕ್ತ ಬಿಡ್ಡಿಂಗ್ ಮೂಲಕ ನೀಡಲಾಗಿದೆ. ಈ ಹಿಂದೆ ನಾಲ್ಕು ಸರ್ಕಾರಿ ನಿಗಮಗಳು 475 ಮದ್ಯದಂಗಡಿಗಳನ್ನು ನಡೆಸುತ್ತಿದ್ದು, ಉಳಿದ 389 ಖಾಸಗಿ ಅಂಗಡಿಗಳಾಗಿದ್ದವು.

ಇದನ್ನೂ ಓದಿ: ಪ್ರಧಾನಿಯ ಪದವಿ ಪ್ರಕರಣ: ಮಾನನಷ್ಟ ಮೊಕದ್ದಮೆಯಲ್ಲಿ ಕೇಜ್ರಿವಾಲ್, ಎಎಪಿ ಸಂಸದನಿಗೆ ಸಮನ್ಸ್

ಜುಲೈ 30ರಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಈ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ತನಿಖೆಗೆ ಶಿಫಾರಸು ಮಾಡಿದರು. ಆ ನಂತರ ಈ ನೀತಿಯನ್ನು ಹಿಂತೆಗೆದುಕೊಳ್ಳಲಾಯಿತು.

ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸಿಸೋಡಿಯಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರ ತನಿಖಾ ದಳ ಎರಡೂ ತನಿಖೆ ನಡೆಸುತ್ತಿದೆ. ಸಗಟು ವ್ಯಾಪಾರಿಗಳಿಗೆ 12% ಲಾಭಾಂಶ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಸುಮಾರು 185% ಲಾಭಾಂಶವನ್ನು ಪಡೆಯಲು ಅಬಕಾರಿ ನೀತಿಯನ್ನು ಮಾರ್ಪಡಿಸಲಾಗಿದೆ ಎಂದು ಎರಡು ಕೇಂದ್ರೀಯ ಏಜೆನ್ಸಿಗಳು ಆರೋಪಿಸಿವೆ.

ಮಾರ್ಚ್ 31ರಂದು, ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಂಕೆ ನಾಗ್ಪಾಲ್ ಅವರು ಸಿಸೋಡಿಯಾಗೆ ಜಾಮೀನು ನಿರಾಕರಿಸಿದರು, ಕೇಂದ್ರೀಯ ತನಿಖಾ ದಳ ಸಲ್ಲಿಸಿದ ಪ್ರಕರಣದಲ್ಲಿ ಅವರು ಪ್ರಾಥಮಿಕವಾಗಿ ”ಕ್ರಿಮಿನಲ್ ಪಿತೂರಿಯ ಮಾಸ್ಟರ್‌ಮೈಂಡ್” ಆಗಿರಬಹುದು ಎಂದು ಹೇಳಿದ್ದರು.

ಈ ತೀರ್ಪನ್ನು ಸಿಸೋಡಿಯಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ, ಕೇಂದ್ರೀಯ ತನಿಖಾ ದಳದ ಬಳಿ ತನ್ನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಆರೋಪಿಸಿದ್ದರು.

”ಸಿಸೋಡಿಯಾ ಅವರು ತನಿಖೆಗೆ ಸಹಕರಿಸುವುದಿಲ್ಲ ಎಂದು ಅವರು ಹೇಳುತ್ತಾರೆ. ಆದರೆ ಜಾಮೀನು ನಿರಾಕರಿಸಲು ಇದು ಎಂದಿಗೂ ಕಾರಣವಾಗುವುದಿಲ್ಲ. ಅವರು ಬಯಸಿದ ರೀತಿಯಲ್ಲಿ ಸಿಸೋಡಿಯಾ ಅವರು ಸಹಕರಿಸುವ, ಒಪ್ಪಿಕೊಳ್ಳುವ ಅಥವಾ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯವಿಲ್ಲ. ಸಿಸೋಡಿಯಾ ಅವರು ತಮಗೆ ಬೇಕಾದ ರೀತಿಯಲ್ಲಿ ಅವರು ಉತ್ತರಿಸಬೇಕಾಗಿದೆ ಎಂದು ” ಎಂದು ಸಿಸೋಡಿಯಾ ಪರ ವಕೀಲ ದಯನ್ ಕೃಷ್ಣನ್ ಹೈಕೋರ್ಟ್‌ಗೆ ತಿಳಿಸಿದರು.

ಏಪ್ರಿಲ್ 25 ರಂದು, ಕೇಂದ್ರೀಯ ತನಿಖಾ ದಳವು ಮೊದಲ ಬಾರಿಗೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಸಿಸೋಡಿಯಾ ಅವರನ್ನು ಆರೋಪಿ ಎಂದು ಹೆಸರಿಸಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...