Homeಮುಖಪುಟನಾನು ಇನ್ನೂ ಕಾಂಗ್ರೆಸ್ಸಿಗ, ಬಿಜೆಪಿ ಸೇರುವುದಿಲ್ಲ: ಪೈಲಟ್ ಮಾತಿನ ಅರ್ಥವೇನು?

ನಾನು ಇನ್ನೂ ಕಾಂಗ್ರೆಸ್ಸಿಗ, ಬಿಜೆಪಿ ಸೇರುವುದಿಲ್ಲ: ಪೈಲಟ್ ಮಾತಿನ ಅರ್ಥವೇನು?

ಕಳೆದ ವರ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದ ನಂತರವೇ ರಾಜಸ್ಥಾನದಲ್ಲಿ ತನ್ನನ್ನು ಅವಮಾನಿಸುವ ಪ್ರಕ್ರಿಯೆಯನ್ನು ಗೆಹ್ಲೋಟ್ ಹೆಚ್ಚಿಸಿದರು ಎಂಬುದು ಪೈಲಟ್‌ ಆರೋಪವಾಗಿದೆ.

- Advertisement -
- Advertisement -

ರಾಜಸ್ಥಾನ ಬಿಕ್ಕಟ್ಟಿಗೆ ಕಾರಣವಾಗಿರುವ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ “ನಾನು ಇನ್ನೂ ಕಾಂಗ್ರೆಸ್ಸಿಗ, ಬಿಜೆಪಿ ಸೇರುವುದಿಲ್ಲ” ಎಂಬ ಹೇಳಿಕೆ ನೀಡುವ ಮೂಲಕ ಹೊಸ ಸುಳಿವುಗಳನ್ನು ನೀಡುತ್ತಿದ್ದಾರೆ. ಅದೆಂದರೆ ತನ್ನ ಪಾಲಿಗೆ ಕಾಂಗ್ರೆಸ್ ಮುಗಿದ ಅಧ್ಯಾಯವಲ್ಲ ಬದಲಿಗೆ ತನ್ನ ಬೇಡಿಕೆಗಳನ್ನು ಈಡೇರಿಸಿದರೆ ಕಾಂಗ್ರೆಸ್‌ನಲ್ಲೇ ಉಳಿಯಲು ಅಡ್ಡಿಯಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.

ಸಚಿನ್ ಪೈಲಟ್‌ ಮೇಲೆ ಕಾಂಗ್ರೆಸ್ ತೆಗೆದುಕೊಂಡ ನಿರ್ದಾಕ್ಷಿಣ್ಯ ಕ್ರಮಗಳ ನಂತರ ಇದೆಲ್ಲವೂ ಘಟಿಸಿದೆ. ರಾಜ್ಯ ಅಧ್ಯಕ್ಷ ಸ್ಥಾನದಿಂದ ಮತ್ತು ಉಪಮುಖ್ಯಮಂತ್ರಿ ಹುದ್ದೆಯಿಂದ ಕಾಂಗ್ರೆಸ್‌ ಪೈಲಟ್‌ರನ್ನು ವಜಾಗೊಳಿಸಿದೆ. ಅವರ ಸಹಚರರ ಸಚಿವ ಸ್ಥಾನವನ್ನು ಕಸಿದುಕೊಂಡಿದೆ. ಅಲ್ಲದೇ ಪಕ್ಷವಿರೋಧ ಚಟುವಟಿಕೆಗಳ ಆಧಾರದ ಮೇಲೆ ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಬಾರದೇಕೆ? ಎಂದು ನೋಟಿಸ್ ಕೂಡ ನೀಡಿರುವುದು ಸಚಿನ್ ಪೈಲಟ್‌ರನ್ನು ಇಕ್ಕಟ್ಟಿಗೆ ಸಿಲುಕಿಸಲಾಗಿದೆ ಎನ್ನಲಾಗುತ್ತಿದೆ.

ಇಂದು ಬೆಳಿಗ್ಗೆ 10 ಗಂಟೆಗೆ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಪೈಲಟ್ ಮಧ್ಯಾಹ್ನ 1 ಗಂಟೆಗೆ ಮೂಂದೂಡಿದರು. ತದನಂತರ ಪತ್ರಿಕಾಗೊಷ್ಠಿಯನ್ನೇ ರದ್ದುಗೊಳಿಸಿದ್ದಾರೆ. ಅಲ್ಲದೇ ನಾನಿನ್ನೂ ಕಾಂಗ್ರೆಸ್‌ ಸದಸ್ಯ, ಬಿಜೆಪಿ ಸೇರುವುದಿಲ್ಲ. ಬಿಜೆಪಿ ಸೇರುತ್ತಾರೆ ಎಂಬ ವದಂತಿ ಗಾಂಧಿಯವರ ದೃಷ್ಟಿಯಲ್ಲಿ ನನ್ನನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಎಂದು ಹೇಳಿದ್ದಾರೆ.

ನಿನ್ನೆ ಪ್ರಿಯಾಂಕ ಗಾಂಧಿಯವರು ಎರಡು ಬಾರಿ ಸಚಿನ್ ಪೈಲಟ್‌ಗೆ ಫೋನ್ ಕರೆ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದ್ದರು. ರಾಹುಲ್ ಗಾಂಧಿ ಅವರೆಂದಿಗೂ ತನ್ನ ಹೃದಯಲ್ಲಿದ್ದಾರೆ ಎಂದು ತಿಳಿಸಿದ್ದರು. ಸೋನಿಯಾ ಗಾಂಧಿ ಕೂಡ ಪಕ್ಷದ ಅಧೀಕೃತ ಮೂಲಗಳಿಂದ ಇಮೇಲ್ ಮಾಡಿ ಸಂಧಾನ ಪ್ರಕ್ರಿಯೆ ನಡೆಸಿದ್ದರು. ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲ ಪ್ರತ್ಯೇಕ ಭೇಟಿಯ ಮೂಲಕ ಮಾತುಕತೆ ನಡೆಸಲು ಪ್ರಯತ್ನಿಸಿದ್ದರು. ಆದರೆ ಇವುಗಳಿಗೆ ಪೈಲಟ್ ಬಗ್ಗಿಲ್ಲ.

ಕಳೆದ ವರ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದ ನಂತರವೇ ರಾಜಸ್ಥಾನದಲ್ಲಿ ತನ್ನನ್ನು ಅವಮಾನಿಸುವ ಪ್ರಕ್ರಿಯೆಯನ್ನು ಗೆಹ್ಲೋಟ್ ಹೆಚ್ಚಿಸಿದರು ಎಂಬುದು ಪೈಲಟ್‌ ಆರೋಪವಾಗಿದೆ.

ಈಗ ಪೈಲಟ್ ಮುಂದಿನ ಕ್ರಮ ತೆಗೆದುಕೊಳ್ಳಲು ಸಮಯ ತೆಗೆದುಕೊಂಡಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಸರ್ಕಾರವು ಅಲ್ಪಮತಕ್ಕೆ ಕುಸಿಯುವ ಭೀತಿಯಲ್ಲಿದೆ. ಸಚಿನ್ ಜೊತೆಗಿರುವ 20ಕ್ಕು ಹೆಚ್ಚು ಶಾಸಕರನ್ನು ಅನರ್ಹಗೊಳಿಸಿದಲ್ಲಿ ಬಹುಮತದ ಸಂಖ್ಯೆ ಇಳಿಯುವುದರಿಂದ ಸರ್ಕಾರ ರಕ್ಷಿಸಿಕೊಳ್ಳಬಹುದೆಂಬ ಆಲೋಚನೆಯು ಕಾಂಗ್ರೆಸ್‌ಗಿದೆ. ಏನಾಲಿದೆ ಎಂಬುದು ಕೆಲವೇ ದಿನಗಳಲ್ಲಿ ಸ್ಪಷ್ಟವಾಗಲಿದೆ.


ಸಚಿನ್ ಪೈಲಟ್ ಕಾಂಗ್ರೆಸ್ ತೊರೆಯಲು ಕಾರಣವಾದ ಮೂರು ಪ್ರಮುಖ ಬೇಡಿಕೆಗಳಿವು…!!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read