Homeಮುಖಪುಟಮಾನವ ಹಕ್ಕುಗಳ ಹೋರಾಟಗಾರ ಕಾಶ್ಮೀರದ ಪರ್ವೇಜ್‌ಗೆ ಪ್ರತಿಷ್ಟಿತ ಮಾರ್ಟಿನ್ ಎನ್ನಲ್ಸ್‌ ಪ್ರಶಸ್ತಿ

ಮಾನವ ಹಕ್ಕುಗಳ ಹೋರಾಟಗಾರ ಕಾಶ್ಮೀರದ ಪರ್ವೇಜ್‌ಗೆ ಪ್ರತಿಷ್ಟಿತ ಮಾರ್ಟಿನ್ ಎನ್ನಲ್ಸ್‌ ಪ್ರಶಸ್ತಿ

- Advertisement -
- Advertisement -

ಹೊಸದಿಲ್ಲಿ: 2023ರ ಮಾರ್ಟಿನ್ ಎನ್ನಲ್ಸ್ ಪ್ರಶಸ್ತಿಗೆ ಭಾಜನರಾದ ಮೂವರಲ್ಲಿ ಬಂಧಿತ ಕಾಶ್ಮೀರದ ಮಾನವ ಹಕ್ಕುಗಳ ಕಾರ್ಯಕರ್ತ ಖುರ್ರಂ ಪರ್ವೇಜ್ ಒಬ್ಬರಾಗಿದ್ದಾರೆ.

ಪ್ರಖ್ಯಾತ ಬ್ರಿಟಿಷ್ ಮಾನವ ಹಕ್ಕುಗಳ ಕಾರ್ಯಕರ್ತನ ಹೆಸರಿನ ಈ ಪ್ರಶಸ್ತಿಯನ್ನು “ಮಾನವ ಹಕ್ಕುಗಳಿಗಾಗಿ ದುಡಿಯುವ ಅತ್ಯುತ್ತಮ ಕಾರ್ಯಕರ್ತರನ್ನು” ಗುರುತಿಸಿ ನೀಡಲಾಗುತ್ತದೆ. ಮಾನವ ಹಕ್ಕುಗಳ ವಕೀಲ ಡೆಲ್ಫಿನ್ ಜಿರೈಬೆ, ಆರೋಗ್ಯ ಹಕ್ಕುಗಳ ಕಾರ್ಯಕರ್ತ ಫೆಲಿಸಿಯಾನೊ ರೆಯ್ನಾ ಅವರಿಗೆ ಈ ಪ್ರಶಸ್ತಿ ದೊರತಿದೆ.

ವಿಶ್ವದ ಪ್ರಮುಖ ಮಾನವ ಹಕ್ಕುಗಳ 10 ಎನ್‌ಜಿಒಗಳ ತೀರ್ಪುಗಾರರಿಂದ ಮೂವರನ್ನು ಆಯ್ಕೆ ಮಾಡಲಾಗಿದೆ. ಅಮ್ನೆಸ್ಟಿ ಇಂಟರ್‌ನ್ಯಾಶನಲ್, ಹ್ಯೂಮನ್ ರೈಟ್ಸ್ ವಾಚ್, ಇಂಟರ್‌ನ್ಯಾಶನಲ್ ಫೆಡರೇಶನ್ ಫಾರ್ ಹ್ಯೂಮನ್ ರೈಟ್ಸ್, ಹ್ಯುರಿಡಾಕ್ಸ್, ಬ್ರೆಡ್ ಫಾರ್ ದಿ ವರ್ಲ್ಡ್, ಹ್ಯೂಮನ್ ರೈಟ್ಸ್ ಫಸ್ಟ್, ವರ್ಲ್ಡ್ ಆರ್ಗನೈಸೇಶನ್ ಎಗೇನ್ಸ್ಟ್ ಟಾರ್ಚರ್, ಇಂಟರ್‌ನ್ಯಾಶನಲ್ ಕಮಿಷನ್ ಆಫ್ ಜ್ಯೂರಿಸ್ಟ್, ಮಾನವ ಹಕ್ಕುಗಳ ಅಂತಾರಾಷ್ಟ್ರೀಯ ಸೇವೆ ಮತ್ತು ಫ್ರಂಟ್ ಲೈನ್ ಡಿಫೆಂಡರ್ಸ್ ಸಂಸ್ಥೆಗಳ ತೀರ್ಪುಗಾರರು ಇದರಲ್ಲಿದ್ದರು.

“2023ರ ಪ್ರಶಸ್ತಿ ವಿಜೇತರ ನಡುವಿನ ಸಾಮಾನ್ಯ ಅಂಶವೆಂದರೆ- ಧೈರ್ಯ, ಉತ್ಸಾಹ ಮತ್ತು ದನಿಯಿಲ್ಲದವರ ಧ್ವನಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತರುವ ಸಂಕಲ್ಪ. ಕೆಲವೊಮ್ಮೆ ಅವರು ಜೀವದ ಹಂಗು ತೊರೆದು ಹೋರಾಡುತ್ತಾರೆ, ಸವಾಲುಗಳನ್ನು ಸಹಿಸಿಕೊಳ್ಳುತ್ತಾರೆ” ಎಂದು ಪ್ರಶಸ್ತಿಯ ತೀರ್ಪುಗಾರರ ಅಧ್ಯಕ್ಷರಾದ ಹ್ಯಾನ್ಸ್ ಥೂಲೆನ್ ಹೇಳಿದ್ದಾರೆ.

ಪ್ರಶಸ್ತಿಗಳ ಅಧಿಕೃತ ಹೇಳಿಕೆಯಲ್ಲಿ ಖುರ್ರಂ ಪರ್ವೇಜ್ ಅವರ ಪರಿಚಯವು ಪತ್ರಕರ್ತೆ ರಾಣಾ ಅಯೂಬ್ ಅವರ ಅಭಿಪ್ರಾಯವನ್ನು ಹೊಂದಿದೆ. “ಬಲವಂತದ ನಾಪತ್ತೆಗಳಿಂದಾಗಿ ತಮ್ಮ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗೆ ಧ್ವನಿ ನೀಡಿದ ಆಧುನಿಕ ಡೇವಿಡ್ ಈ ಪರ್ವೇಜ್” ಎಂದು ರಾಣಾ ಅಯೂಬ್‌ ಹೇಳಿದ್ದಾರೆ.

“ಚಿಕ್ಕ ಹುಡುಗನಾಗಿದ್ದಾಗ ಪ್ರತಿಭಟನೆಯೊಂದರಲ್ಲಿ ತನ್ನ ಅಜ್ಜ ದುರಂತ ಗುಂಡಿನ ದಾಳಿಯಿಂದ ಸತ್ತಿದ್ದನ್ನು ಪರ್ವೇಜ್‌ ಕಂಡರು. ಅವರು ಸೇಡು ತೀರಿಸಿಕೊಳ್ಳಬಹುದಿತ್ತು, ಬದಲಿಗೆ ಮಿಲಿಟರಿ ಪ್ರದೇಶದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಹಿಂಸಾತ್ಮಕ ಹೋರಾಟಕ್ಕೆ ಮುಂದಾದರು” ಎಂದಿದ್ದಾರೆ.

ಪರ್ವೇಜ್ ಅವರು ‘ಜಮ್ಮು ಮತ್ತು ಕಾಶ್ಮೀರ ಒಕ್ಕೂಟದ ನಾಗರಿಕ ಸಮಾಜ’ದ (JKCCS) ಸಂಸ್ಥಾಪಕ ಮತ್ತು ಕಾರ್ಯಕ್ರಮ ಸಂಯೋಜಕರಾಗಿದ್ದಾರೆ. ಸಾಮೂಹಿಕ ಕಣ್ಮರೆಗಳ ವಿರುದ್ಧ ಕೆಲಸ ಮಾಡುವ 10 ಏಷ್ಯನ್‌ ರಾಷ್ಟ್ರಗಳ 13 ಸರ್ಕಾರೇತರ ಸಂಸ್ಥೆಗಳ ಏಷ್ಯನ್ ಫೆಡರೇಶನ್ ಅಧ್ಯಕ್ಷರಾಗಿದ್ದಾರೆ.

ನವೆಂಬರ್ 22, 2021 ರಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪರ್ವೇಜ್ ಅವರನ್ನು ಬಂಧಿಸಿತು. ಭಾರತೀಯ ದಂಡ ಸಂಹಿತೆ (IPC) ಮತ್ತು ಕಠಿಣ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ(UAPA) ಯ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಿದ ನಂತರ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾವೇರಿ| ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಲ್ಲೆ ಪ್ರಕರಣ: ಆರೋಪಿಗಳ ಬಂಧನ

0
ಹಾವೇರಿ ಜಿಲ್ಲೆಯಲ್ಲಿ ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ರಾಣೆಬೆನ್ನೂರು ತಾಲೂಕಿನ ಅರೆಮಲ್ಲಾಪುರ ಗ್ರಾಮದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆದಿದೆ. ಮಹಿಳೆಯ...