Homeರಾಜಕೀಯಕೇರಳದಲ್ಲಿ ಜೆಡಿಎಸ್‌‌ ಜೊತೆಗೆ ವಿಲೀನವಾದ ಎಲ್‌ಜೆಡಿ

ಕೇರಳದಲ್ಲಿ ಜೆಡಿಎಸ್‌‌ ಜೊತೆಗೆ ವಿಲೀನವಾದ ಎಲ್‌ಜೆಡಿ

- Advertisement -
- Advertisement -

ಕೇರಳದ ಲೋಕತಾಂತ್ರಿಕ ಜನತಾ ದಳ (ಎಲ್‌ಜೆಡಿ) ತನ್ನ ಮಾತೃ ಪಕ್ಷವಾದ ಜನತಾ ದಳ-ಜಾತ್ಯತೀತ (ಜೆಡಿಎಸ್‌‌) ನೊಂದಿಗೆ ವಿಲೀನಗೊಳ್ಳಲು ಸಿದ್ಧವಾಗಿದೆ. ಈ ಬಗ್ಗೆ ಗುರುವಾರದಂದು ಜೆಡಿಎಸ್‌ ಕೇರಳ ರಾಜ್ಯ ಸಮಿತಿಯು ಅನುಮೋದಿಸಿದೆ ಎಂದು ವರದಿಯಾಗಿದೆ. ವಿಲೀನಗೊಂಡ ನಂತರ ಪಕ್ಷವು ಎಚ್‌.ಡಿ. ದೇವೇಗೌಡ ಅವರ ನೇತೃತ್ವದ ಜೆಡಿಎಸ್ ರಾಷ್ಟ್ರೀಯ ಸಮಿತಿಯ ಭಾಗವಾಗಿ ಕಾರ್ಯನಿರ್ವಹಿಸಲಿದೆ.

ಕೇರಳದಲ್ಲಿ ಎಲ್‌ಜೆಡಿ ಮತ್ತು ಜೆಡಿಎಸ್‌‌ ಪಕ್ಷಗಳು ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಮೈತ್ರಿ ಕೂಟದ ಸಣ್ಣ ಮಿತ್ರಪಕ್ಷಗಳಾಗಿವೆ. ಎರಡು ರಾಜಕೀಯ ಪಕ್ಷಗಳ ವಿಲೀನವು ರಾಜ್ಯದ ರಾಜಕೀಯ ಲೆಕ್ಕಾಚಾರಗಳ ಮೇಲೆ ಯಾವುದೇ ಮಹತ್ವದ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕೇರಳದ 2021 ರ ಚುನಾವಣೆಯ ವೇಳೆ ಜೆಡಿಎಸ್‌ನಿಂದ ಇಬ್ಬರು ಶಾಸಕರು ಆಯ್ಕೆಯಾಗಿದ್ದರು. ಕೊಟ್ಟಾಯಂನ ತಿರುವಲ್ಲಾವನ್ನು ಪ್ರತಿನಿಧಿಸುವ ಮ್ಯಾಥ್ಯೂ ಟಿ. ಥಾಮಸ್ ಮತ್ತು ಪಾಲಕ್ಕಾಡ್‌ನ ಚಿತ್ತೂರು ಪ್ರತಿನಿಧಿಸುವ ಕೆ ಕೃಷ್ಣನ್‌ಕುಟ್ಟಿ ಜೆಡಿಎಸ್‌ನ ಶಾಸಕರಾಗಿದ್ದು, ಕಣ್ಣೂರಿನ ಕೂತುಪರಂಬದಿಂದ ಗೆದ್ದಿರುವ ಕೆ.ಪಿ. ಮೋಹನನ್ ಎಲ್‌ಜೆಡಿಯ ಏಕೈಕ ಶಾಸಕರಾಗಿದ್ದಾರೆ. ಎರಡು ಪಕ್ಷಗಳ ವಿಲೀನದೊಂದಿಗೆ ಜೆಡಿಎಸ್‌ ಶಾಸಕರ ಸಂಖ್ಯೆಯು ಕೇರಳದಲ್ಲಿ ಮೂರಕ್ಕೆ ಏರಲಿದೆ.

140 ಸದಸ್ಯರಿರುವ ಕೇರಳ ಅಸೆಂಬ್ಲಿಯಲ್ಲಿ ಎಲ್‌ಡಿಎಫ್‌ ಮೈತ್ರಿಕೂಟದಲ್ಲಿ ಒಟ್ಟು 99 ಸದಸ್ಯರಿದ್ದು, ಒಕ್ಕೂಟದ ನೇತೃತ್ವ ವಹಿಸಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) 62 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಎಲ್‌ಜೆಡಿ ಮುಖ್ಯಸ್ಥ ಎಂ.ಪಿ. ವೀರೇಂದ್ರ ಕುಮಾರ್ ಜೀವಂತವಾಗಿದ್ದಾಗ 2019 ರಲ್ಲಿ ಎಲ್‌ಜೆಡಿ ಮತ್ತು ಜೆಡಿಎಸ್‌ ನಡುವಿನ ವಿಲೀನದ ಕುರಿತು ಚರ್ಚೆಗಳು ಅನಧಿಕೃತವಾಗಿ ಪ್ರಾರಂಭವಾಗಿದ್ದವು. ಎರಡೂ ಪಕ್ಷಗಳು ನಾಯಕತ್ವದ ಹುದ್ದೆಗಳನ್ನು ಹಂಚಿಕೊಳ್ಳಲಿವೆ ಎಂದು ವರದಿಯಾಗಿದೆ. ಮಾಜಿ ಸಚಿವ ಮತ್ತು ಹಾಲಿ ಶಾಸಕ ಮ್ಯಾಥ್ಯೂ ಟಿ. ಥಾಮಸ್ ಜೆಡಿಎಸ್ ರಾಜ್ಯಾಧ್ಯಕ್ಷರಾಗುವ ಸಾಧ್ಯತೆಯಿದ್ದು, ವೀರೇಂದ್ರ ಕುಮಾರ್ ಅವರ ಪುತ್ರ ಎಂ.ವಿ. ಶ್ರೇಯಮ್ಸ್ ಕುಮಾರ್ ರಾಷ್ಟ್ರೀಯ ಕಾರ್ಯದರ್ಶಿಯಾಗುವ ನಿರೀಕ್ಷೆಯಿದೆ.

ವಯನಾಡಿನ ಕಲ್ಪೆಟ್ಟಾದಿಂದ ಎರಡು ಬಾರಿ ಶಾಸಕರಾಗಿದ್ದ, ರಾಜ್ಯಸಭೆಯ ಮಾಜಿ ಸಂಸದರಾದ ಶ್ರೇಯಮ್ಸ್ ಕುಮಾರ್ ಅವರು ತಮ್ಮ ತಂದೆಯ ಹಾದಿಯನ್ನು ಅನುಸರಿಸಿ ಮಾತೃಭೂಮಿ ಮಾಧ್ಯಮ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾಗಿ ಚುಕ್ಕಾಣಿ ಹಿಡಿದಿದ್ದಾರೆ. ಶ್ರೇಯಮ್ಸ್ 2021 ರಲ್ಲಿ ಕಲ್ಪೆಟ್ಟಾದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಚುನಾವಣೆಯಲ್ಲಿ ಎಲ್‌ಜೆಡಿ ಸ್ಪರ್ಧಿಸಿದ್ದ ಮೂರು ಸ್ಥಾನಗಳಲ್ಲಿ ಒಂದನ್ನು ಮಾತ್ರ ಗೆದ್ದಿತ್ತು.

ಇದನ್ನೂ ಓದಿ: ಪ್ರಧಾನಿ ಹುದ್ದೆಯನ್ನು ತಹಸೀಲ್ದಾರ್‌ ಮಟ್ಟಕ್ಕೆ ಇಳಿಸಿದ ಬೊಮ್ಮಾಯಿ: ಭಾಸ್ಕರ್‌ ರಾವ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...