Homeಅಂತರಾಷ್ಟ್ರೀಯಕ್ರಿಸ್ ಹಿಪ್ಕಿನ್ಸ್ ನ್ಯೂಜಿಲೆಂಡ್‌ನ ನೂತನ ಪ್ರಧಾನಿ

ಕ್ರಿಸ್ ಹಿಪ್ಕಿನ್ಸ್ ನ್ಯೂಜಿಲೆಂಡ್‌ನ ನೂತನ ಪ್ರಧಾನಿ

- Advertisement -
- Advertisement -

ಜಸಿಂಡಾ ಅರ್ಡೆರ್ನ್ ರಾಜೀನಾಮೆ ನೀಡಿದ್ದರಿಂದ ತೆರವಾದ ನ್ಯೂಜಿಲೆಂಡ್‌ನ ಪ್ರಧಾನಿ ಸ್ಥಾನಕ್ಕೆ ಹಿಂದಿನ ಕೋವಿಡ್ ನಿರ್ವಹಣೆ ಸಚಿವರಾಗಿದ್ದ ಕ್ರಿಸ್ ಹಿಪ್ಕಿನ್ಸ್ ರವರನ್ನು ಲೇಬರ್ ಪಕ್ಷ ಹೆಸರಿಸಿದೆ.

ಪಕ್ಷದ ಸಂಸದರು ನೂತನ ಪ್ರಧಾನಿಯನ್ನಾಗಿ ಕ್ರಿಸ್ ಹಿಪ್ಕಿನ್ಸ್‌ರವರನ್ನು ಬೆಂಬಲಿಸಿದ ನಂತರ ಅವರು ನ್ಯೂಜಿಲೆಂಡ್‌ನ 41ನೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

“ನಾಮನಿರ್ದೇಶನವನ್ನು ಅನುಮೋದಿಸಲು ಮತ್ತು ಕ್ರಿಸ್ ಹಿಪ್ಕಿನ್ಸ್ ಅವರನ್ನು ಪಕ್ಷದ ನಾಯಕನನ್ನಾಗಿ ದೃಢೀಕರಿಸಲು ಲೇಬರ್ ಪಕ್ಷವು ಭಾನುವಾರ ಮಧ್ಯಾಹ್ನ 1 ಗಂಟೆಗೆ ಸಭೆ ಸೇರಲಿದೆ” ಎಂದು ಲೇಬರ್ ಪಕ್ಷದ ಹಿರಿಯ ಸದಸ್ಯ ಡಂಕನ್ ವೆಬ್ ತಿಳಿಸಿದ್ದಾರೆ.

ಆಡಳಿತ ಪಕ್ಷದ ನಾಯಕರಾಗಿ, ಹಿಪ್ಕಿನ್ಸ್ ಪ್ರಧಾನ ಮಂತ್ರಿ ಕೂಡ ಆಗಲಿದ್ದಾರೆ. ಅವರು ಈ ಹಿಂದೆ ಕೋವಿಡ್ ನಿರ್ವಹಣೆ ಸಚಿವರಾಗಿ ಗಮನ ಸೆಳೆದಿದ್ದರು.

ಲೇಬರ್ ಪಕ್ಷವನ್ನು ಬಹುಮತದ ಮೂಲಕ ಅಧಿಕಾರಕ್ಕೆ ತಂದಿದ್ದ 41 ವರ್ಷದ ಜಸಿಂಡಾ ಎರಡನೇ ಬಾರಿಗೆ ನ್ಯೂಜಿಲೆಂಡ್‌ನ ಪ್ರಧಾನಿಯಾಗಿದ್ದರು. ಆದರೆ ಬೆಲೆ ಏರಿಕೆ, ಹಣದುಬ್ಬರ ಮತ್ತು ಹೆಚ್ಚುತ್ತಿರುವ ಕ್ರಿಮಿನಲ್ ಪ್ರಕರಣಗಳನ್ನು ತಡೆಗಟ್ಟಲು ವಿಫಲರಾದ ಹಿನ್ನೆಲೆಯಲ್ಲಿ ರಾಜೀನಾಮೆ ಘೋಷಿಸಿದ್ದಾರೆ.

ಇದನ್ನೂ ಓದಿ: ರಾಜೀನಾಮೆ ನೀಡುವುದಾಗಿ ಘೋಷಿಸಿದ ನ್ಯೂಜಿಲೆಂಡ್ ಪ್ರಧಾನಿ ಅರ್ಡೆರ್ನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...