Homeಮುಖಪುಟರಾಜೀನಾಮೆ ನೀಡುವುದಾಗಿ ಘೋಷಿಸಿದ ನ್ಯೂಜಿಲೆಂಡ್ ಪ್ರಧಾನಿ ಅರ್ಡೆರ್ನ್

ರಾಜೀನಾಮೆ ನೀಡುವುದಾಗಿ ಘೋಷಿಸಿದ ನ್ಯೂಜಿಲೆಂಡ್ ಪ್ರಧಾನಿ ಅರ್ಡೆರ್ನ್

- Advertisement -
- Advertisement -

ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರು ಮುಂದಿನ ತಿಂಗಳು ರಾಜೀನಾಮೆ ನೀಡುವುದಾಗಿ ಗುರುವಾರ ಘೋಷಿಸಿದ್ದಾರೆ.

ಈ ಬಗ್ಗೆ ಅವರು, ತಮ್ಮ ಲೇಬರ್ ಪಕ್ಷದ ಸದಸ್ಯರ ಸಭೆಯಲ್ಲಿಮಾತನಾಡಿದ್ದು, “ರಾಜೀನಾಮೆ ನೀಡಲು ಇದು ನನಗೆ ಸಮಯ, ನಾನು ನಾಲ್ಕು ವರ್ಷಗಳವರೆಗೆ ಈ ಹುದ್ದೆಯಲ್ಲಿ ಮುಂದುವರೆಯಲು ಆಗಲ್ಲ” ಎಂದು ತಿಳಿಸಿದ್ದಾರೆ.

ಅರ್ಡೆರ್ನ್ ಅವರು 2017 ರಲ್ಲಿ ಸಮ್ಮಿಶ್ರ ಸರ್ಕಾರದಲ್ಲೂ ಪ್ರಧಾನ ಮಂತ್ರಿಯಾಗಿದ್ದರು. ಮೂರು ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ತಮ್ಮ ಕೇಂದ್ರ-ಎಡ ಲೇಬರ್ ಪಕ್ಷವನ್ನು ಸಮಗ್ರ ವಿಜಯದತ್ತ ಅವರು ಮುನ್ನಡೆಸಿದರು. ಆದರೆ ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಅವರ ಪಕ್ಷ ಮತ್ತು ವೈಯಕ್ತಿಕ ಜನಪ್ರಿಯತೆಯಲ್ಲಿ ಕುಸಿತ ಕಂಡಿದೆ ಎಂದು ಹೇಳಲಾಗುತ್ತಿದೆ.

ಒಂದು ತಿಂಗಳ ಹಿಂದೆ ಸಂಸತ್ತು ತನ್ನ ಬೇಸಿಗೆಯ ವಿರಾಮಕ್ಕೆ ಹೋದ ನಂತರ ತಮ್ಮ ಮೊದಲ ಸಾರ್ವಜನಿಕ ಪ್ರದರ್ಶನದಲ್ಲಿ ಅವರು, ವಿರಾಮದ ಸಮಯದಲ್ಲಿ ನಾಯಕರಾಗಿ ಮುಂದುವರಿಯಲು ಸಾಮರ್ಥ್ಯ ಇದೆ ಎಂದು ಭರವಸೆ ವ್ಯಕ್ತಪಡಿಸಿದ್ದರು. ಆದರೆ ಇದೀಗ ನಾನು ಮುಂದುವರೆಯಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಅಕ್ಟೋಬರ್ 14 ರ ಶನಿವಾರದಂದು ಮುಂದಿನ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಅಲ್ಲಿಯವರೆಗೆ ಅವರು ಚುನಾವಣಾ ಸಂಸದರಾಗಿ ಮುಂದುವರಿಯುತ್ತಾರೆ ಎಂದು ಅರ್ಡೆರ್ನ್ ಹೇಳಿದರು.

“ನಾವು ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ ಹಾಗಾಗಿ ನಾನು ಹೊರಡುವುದಿಲ್ಲ. ಏಕೆಂದರೆ ನಾವು ಗೆದ್ದೇಗೆಲ್ಲುತ್ತೇವೆ ಎನ್ನುವ ನಂಬಿಕೆ ನನಗಿದೆ” ಎಂದು ಅವರು ಹೇಳಿದರು.

ತಮ್ಮ ರಾಜೀನಾಮೆಯೂ ಫೆಬ್ರವರಿ 7ರ ನಂತರ ಜಾರಿಗೆ ಬರಲಿದೆ. ಜನವರಿ 22 ರಂದು ಲೇಬರ್ ಕಾಕಸ್ ಹೊಸ ನಾಯಕನನ್ನು ಮತ ಚಲಾಯಿಸುವ ಮೂಲಕ ಆಯ್ಕೆ ಮಾಡುತ್ತದೆ ಎಂದು ಅರ್ಡೆರ್ನ್ ಹೇಳಿದರು.

ಉಪ ಪ್ರಧಾನ ಮಂತ್ರಿ ಗ್ರಾಂಟ್ ರಾಬರ್ಟ್ಸನ್ ಅವರು ತಮ್ಮ ಹೆಸರನ್ನು ಮುಂದಿಡುವುದಿಲ್ಲ ಎಂದು ಹೇಳಿದರು.

‘ತಮ್ಮ ರಾಜೀನಾಮೆಯ ಹಿಂದೆ ಯಾವುದೇ ರಹಸ್ಯವಿಲ್ಲ’ ಎಂದು ಅರ್ಡೆರ್ನ್ ಹೇಳಿದ್ದಾರೆ.

“ನಾನು ಮನುಷ್ಯ, ನಾವು ಎಲ್ಲಿಯವರೆಗೆ ಸಾಧ್ಯವೋ ಅಷ್ಟು ಕೆಲಸ ಮಾಡಿದ್ದೇನೆ. ಅದರೆ ಈಗ ನನಗೆ ಸಮಯ ಬಂದಿದೆ ಹಾಗಾಗಿ ನಾನು ಹೊರಡುತ್ತೇನೆ. ಜವಾಬ್ದಾರಿಯುತ ಕೆಲಸವನ್ನು ಸಮರ್ಥ ವ್ಯಕ್ತಿ, ನೀವು ಇಲ್ಲದಿರುವಾಗ ಹೇಗೆ ನಿಭಾಯಿಸುತ್ತಾನೆ ಎನ್ನುವ ಸಂಗತಿ ಈಗ ತಿಳಿಯುತ್ತದೆ” ಎಂದು ಅರ್ಡೆರ್ನ್ ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...