Homeಅಂತರಾಷ್ಟ್ರೀಯಪ್ಯಾಲೆಸ್ತೀನ್‌ ಬಗ್ಗೆ ತಪ್ಪು ಮಾಹಿತಿಯು ಹೆಚ್ಚಾಗಿ ಭಾರತದಿಂದ ಯಾಕೆ ವೈರಲ್‌ ಆಗುತ್ತಿದೆ?

ಪ್ಯಾಲೆಸ್ತೀನ್‌ ಬಗ್ಗೆ ತಪ್ಪು ಮಾಹಿತಿಯು ಹೆಚ್ಚಾಗಿ ಭಾರತದಿಂದ ಯಾಕೆ ವೈರಲ್‌ ಆಗುತ್ತಿದೆ?

- Advertisement -
- Advertisement -

ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ನಡುವಿನ ಯುದ್ಧದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ತಪ್ಪು ಮಾಹಿತಿ, ಸುಳ್ಳು ಸುದ್ದಿಗಳು, ಪ್ಯಾಲೇಸ್ತೀನಿಯನ್ ವಿರೋಧಿ ಮತ್ತು ಇಸ್ಲಾಮೋಫೋಬಿಕ್‌ ತಪ್ಪು ಮಾಹಿತಿಯು ವೈರಲ್‌ ಆಗುತ್ತಿರುತ್ತದೆ. ಇದರಲ್ಲಿ ಹೆಚ್ಚಿನವು ಬಲಪಂಥೀಯ ಖಾತೆಗಳಿಂದ ಹಂಚಿಕೆಯಾಗಿದೆ ಎಂಬುವುದು ವಿಶ್ಲೇಷಣೆಯಲ್ಲಿ ಬಯಲಾಗಿದೆ.

ದಕ್ಷಿಣ ಇಸ್ರೇಲ್‌ನ ಮೇಲೆ ಹಮಾಸ್‌ನ ಅ.7ರಂದು ದಾಳಿ ಮಾಡಿದ ಬಳಿಕ ಸಾಮಾಜಿಕ ಮಾದ್ಯಮಗಳಲ್ಲಿ ತುಂಬಿರುವ ತಪ್ಪು ಮಾಹಿತಿಯಲ್ಲಿ ಬಹಳಷ್ಟು ಭಾರತದಿಂದ ಹೊರಗಿರುವ ಬಲಪಂಥೀಯರ ಖಾತೆಗಳಿಂದ ಉತ್ಪಾದಿಸಲ್ಪಟ್ಟಿದೆ ಮತ್ತು ವೈರಲ್‌ ಆಗಿದೆ.

ಕೆಲವು ಹಮಾಸ್ ಸಶಸ್ತ್ರದಾರಿಗಳ ಗುಂಪು ಯಹೂದಿ ಮಗುವನ್ನು ಅಪಹರಿಸುವುದು ಮತ್ತು ಟ್ರಕ್‌ನ ಹಿಂಭಾಗದಲ್ಲಿ ಚಿಕ್ಕ ಬಾಲಕನ ಶಿರಚ್ಛೇದವನ್ನು ಮಾಡುವುದು ವೈರಲ್‌ ಆಗಿತ್ತು. ಇದನ್ನು ಸಾವಿರಾರು ಮಂದಿ ಟ್ವೀಟ್‌ ಮಾಡಿದ್ದರು. ಆದರೆ ಇದು ಸುಳ್ಳು ಎನ್ನುವುದು ಫ್ಯಾಕ್ಟ್‌ ಚೆಕ್‌ ವೇಳೆ ಬಯಲಾಗಿತ್ತು.

BOOM ಭಾರತದ ಅತ್ಯಂತ ಹೆಸರುವಾಸಿ ಫ್ಯಾಕ್ಟ್‌ ಸಂಸ್ಥೆಯಾಗಿದೆ. ಇದು ಭಾರತದ ಎಕ್ಸ್‌ ಬಳಕೆದಾರರ ಹೆಚ್ಚಿನ ಸುಳ್ಳು ಮಾಹಿತಿ ಹಂಚಿಕೆಯನ್ನು ಬಯಲು ಮಾಡಿದೆ.

BOOM ಪ್ರಕಾರ, ತಪ್ಪು ಮಾಹಿತಿಯನ್ನು ಹಂಚಿಕೊಳ್ಳುವ ಪ್ರಭಾವಿಗಳು ಹೆಚ್ಚಾಗಿ ಪ್ಯಾಲೆಸ್ತೀನ್‌ ಬಗ್ಗೆ ನೆಗೆಟಿವ್‌ ಮಾಹಿತಿ ವೈರಲ್‌ ಮಾಡುತ್ತಿದ್ದು, ಇಸ್ರೇಲ್‌ನ್ನು ಬೆಂಬಲಿಸುತ್ತಿದ್ದಾರೆ. ಅವರು ಪ್ಯಾಲೆಸ್ತೀನಿಯನ್ನರನ್ನು ಕ್ರೂರವಾಗಿ ಪ್ರದರ್ಶಿಸಲು ಪ್ರಯತ್ನಿಸಿದ್ದಾರೆ.

ಉದಾಹರಣೆಗೆ, ಖಾತೆಯೊಂದು ವಿಡಿಯೋವನ್ನು ಹಂಚಿಕೊಂಡಿತ್ತು. ಅದು ಪ್ಯಾಲೆಸ್ತೀನಿ ಹೋರಾಟಗಾರರು  ಲೈಂಗಿಕ ಗುಲಾಮರನ್ನಾಗಿ ಮಾಡಿಕೊಂಡಿದ್ದಾರೆಂದು ಡಜನ್‌ಗಟ್ಟಲೆ ಯುವತಿಯರನ್ನು ತೋರಿಸುತ್ತದೆ. ಆದರೆ ವಿಡಿಯೋ ಜೆರುಸಲೆಮ್‌ನ ಶಾಲೆಯ ಪ್ರವಾಸದ ವಿಡಿಯೋವಾಗಿತ್ತು. ವಿಡಿಯೋದಲ್ಲಿ ಯುವತಿಯರು ಮೊಬೈಲ್‌ ಬಳಸುವುದು ಕೂಡ ಕಂಡು ಬಂದಿತ್ತು. ವೀಡಿಯೊವನ್ನು ಸಾವಿರಾರು ಮಂದಿ ರೀಟ್ವೀಟ್‌ ಮಾಡಿದ್ದಾರೆ. ವಿಡಿಯೋ ಕನಿಷ್ಠ 6 ಮಿಲಿಯನ್ ಇಂಪ್ರೆಶನ್‌ಗಳನ್ನು ಗಳಿಸಿತ್ತು. ವಿಡಿಯೋವನ್ನು ಹಂಚಿಕೊಳ್ಳುವ ಖಾತೆಗಳಲ್ಲಿ ಹೆಚ್ಚಿನವು ಭಾರತದ್ದಾಗಿತ್ತು.

ಮತ್ತೊಂದು ಉದಾಹರಣೆಯಲ್ಲಿ, ಹಮಾಸ್ ಸಶಸ್ತ್ರ ಗುಂಪು ಯಹೂದಿ ಮಗುವನ್ನು ಅಪಹರಿಸುತ್ತಿದ್ದಾರೆ ಎಂದು ತಪ್ಪಾಗಿ ತೋರಿಸುವ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವೀಡಿಯೊ ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ತಪ್ಪುದಾರಿಗೆಳೆಯುವ ವಿಡಿಯೋವನ್ನು ಅತಿಹೆಚ್ಚು ಭಾರತೀಯ ಖಾತೆಗಳಿಂದ ಹಂಚಿಕೊಳ್ಳಲಾಗಿದೆ. ಈ ಕುರಿತ ಟ್ವೀಟ್‌ಗಳು 3 ಮಿಲಿಯನ್‌ಗಿಂತಲೂ ಹೆಚ್ಚು ಇಂಪ್ರೆಶನ್‌ಗಳನ್ನು ಪಡೆದಿವೆ. ಆದರೆ ವೀಡಿಯೊ ಸೆಪ್ಟೆಂಬರ್‌ನದ್ದಾಗಿದೆ ಮತ್ತು ವಿಡಿಯೋಗೆ ಮತ್ತು ಗಾಜಾಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗಿದೆ.

ಈ ಸುಳ್ಳು ವಿಡಿಯೋಗಳನ್ನು ಹಂಚಿಕೊಳ್ಳುವ ಅನೇಕ ಖಾತೆಗಳು ಎಕ್ಸ್‌ನಲ್ಲಿ ಮುಸ್ಲಿಂ ವಿರೋಧಿ ಕಾಮೆಂಟ್‌ಗಳನ್ನು ಹೆಚ್ಚಾಗಿ ಪೋಸ್ಟ್ ಮಾಡಿದೆ. ಹಮಾಸ್‌ನಿಂದ ಬಾಲಕನ ಶಿರಚ್ಛೇದನದ ಸುಳ್ಳು ವೀಡಿಯೊವನ್ನು ಹಂಚಿಕೊಂಡಿರುವ ಶ್ರೀ ಸಿನ್ಹಾಎಂಬ ಖಾತೆಯು ಅದೇ ಪೋಸ್ಟ್‌ನಲ್ಲಿ #IslamIsTheProblem ಎಂಬ ಹ್ಯಾಶ್‌ಟ್ಯಾಗ್‌ನ್ನು ಸೇರಿಸಿದೆ.

ಫೆಲೆಸ್ತೀನಿಯರು ಲೈಂಗಿಕ ಗುಲಾಮರನ್ನಾಗಿಸಲು ಯುವತಿಯರ ಅಪಹರಣ ಎಂಬ ಸುಳ್ಳು ಟ್ವೀಟ್ ಹಂಚಿಕೊಂಡ ಮತ್ತೊಂದು ಖಾತೆಯು ಈ ಹಿಂದೆ ‘ಒಂದೇ ವ್ಯತ್ಯಾಸವೆಂದರೆ ಮುಸ್ಲಿಂ ಹುಡುಗಿಯರು ಹಿಂದೂ ಧರ್ಮಕ್ಕೆ ಮತಾಂತರಗೊಂಡಾಗ ಅವರು ಎಂದೆಂದಿಗೂ ಸಂತೋಷದಿಂದ ಬದುಕುತ್ತಾರೆ. ಆದರೆ ಹಿಂದೂ ಹುಡುಗಿಯರು ಇಸ್ಲಾಂಗೆ ಮತಾಂತರಗೊಂಡಾಗ ಅವರು ಸೂಟ್‌ಕೇಸ್‌ ಅಥವಾ ಫ್ರಿಡ್ಜ್‌ನಲ್ಲಿ ಕೊನೆಗೊಳ್ಳುತ್ತಾರೆ ಎಂದು ಬರೆದಿತ್ತು.

ನಿವೃತ್ತ ಭಾರತೀಯ ಸೈನಿಕನಿಗೆ ಸೇರಿದ್ದೆಂದು ಹೇಳಲಾದ ಒಂದು ಭಾರತೀಯ ಖಾತೆಯು, ಇಸ್ರೇಲ್ ಪ್ಯಾಲೆಸ್ತೀನನ್ನು ಗ್ರಹದಿಂದಲೇ ಕೊನೆಗೊಳಿಸಬೇಕು ಎಂದು ಹೇಳಿದೆ.

ಭಾರತವು ಇಸ್ಲಾಮೋಫೋಬಿಯಾ ಸಮಸ್ಯೆಯನ್ನು ಹೊಂದಿದೆ ಎಂಬುದು ರಹಸ್ಯವಲ್ಲ, ಇದು ಪ್ರಧಾನಿ ನರೇಂದ್ರ ಮೋದಿ ಆಳ್ವಿಕೆ ಬಳಿಕ  ಹೆಚ್ಚಾಗಿದೆ. ಆಸ್ಟ್ರೇಲಿಯಾ ಮೂಲದ ಇಸ್ಲಾಮಿಕ್ ಕೌನ್ಸಿಲ್ ಆಫ್ ವಿಕ್ಟೋರಿಯಾದ ವರದಿಯ ಪ್ರಕಾರ, ಎಲ್ಲಾ ಇಸ್ಲಾಮೋಫೋಬಿಕ್ ಟ್ವೀಟ್‌ಗಳಲ್ಲಿ ಹೆಚ್ಚಿನದನ್ನು ಭಾರತದಲ್ಲಿ ಕಾಣಬಹುದು ಎಂದು ಹೇಳಿದೆ.

ಸತ್ಯ-ಪರಿಶೀಲನಾ ವೆಬ್‌ಸೈಟ್ ಆಲ್ಟ್‌ನ್ಯೂಸ್‌ನ ಸಹ-ಸಂಸ್ಥಾಪಕ ಮತ್ತು ಸಂಪಾದಕ ಪ್ರತೀಕ್ ಸಿನ್ಹಾ ಈ ಕುರಿತು ಟ್ವೀಟ್ ಮಾಡಿದ್ದು, ಭಾರತೀಯ ಮುಖ್ಯವಾಹಿನಿಯ ಮಾದ್ಯಮಗಳಲ್ಲಿ ಮತ್ತು ಸಾಮಾಜಿಕ ಮಾದ್ಯಮಗಳಲ್ಲಿ ಇಸ್ರೇಲ್‌ಗೆ ಬೆಂಬಲವಾಗಿ ತನ್ನ ತಪ್ಪು ಮಾಹಿತಿ ರಫ್ತು ಮಾಡಲಾಗುತ್ತಿದೆ. ಜಗತ್ತು ಈಗ ಭಾರತೀಯ ಬಲಪಂಥೀಯರು ಭಾರತವನ್ನು ಹೇಗೆ ವಿಶ್ವದ ತಪ್ಪು ಮಾಹಿತಿಯ ರಾಜಧಾನಿಯನ್ನಾಗಿ ಮಾಡಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ವಾರ ಇಸ್ರೇಲ್ ಮೇಲೆ ಹಮಾಸ್ ದಾಳಿಯ ನಂತರ ಎಕ್ಸ್‌ನಲ್ಲಿ ತಪ್ಪು ಮಾಹಿತಿಯ ಪ್ರವಾಹ ಹರಿದಿದೆ. ಈ ಬಗ್ಗೆ ಯುರೋಪಿಯನ್ ಒಕ್ಕೂಟವು ಟ್ವಿಟ್ಟರ್‌ನ ಎಲೆನ್‌ ಮಸ್ಕ್‌ಗೆ ಎಚ್ಚರಿಕೆಯನ್ನು ಕೂಡ ಕಳುಹಿಸಿತ್ತು.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರ ಕನ್ನಡ “ಲೋಕ” ಲಡಾಯಿ; ಕೇಸರಿಪಡೆಯ ಕಲಹ ಕಾಂಗ್ರೆಸ್‌ಗೆ ವರವಾದೀತೆ?

0
ಉತ್ತರ ಕನ್ನಡದ ಅಷ್ಟೂ ಎಂಟು ವಿಧಾನಸಭಾ ಕ್ಷೇತ್ರಗಳ ಜತೆ ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ಸೇರಿಸಿ ರಚಿಸಲಾಗಿರುವ "ಉತ್ತರ ಕನ್ನಡ ಲೋಕಸಭಾ ಕ್ಷೇತ್ರ" ವಿಭಿನ್ನತೆ, ವೈವಿಧ್ಯತೆಗಳ ವಿಶಿಷ್ಟ ಸೀಮೆ. ಭೋರ್ಗರೆವ ಅರಬ್ಬೀ...