Homeಮುಖಪುಟಇಸ್ರೇಲ್‌ ಪೊಲೀಸರಿಗೆ ಕೇರಳದ ಉಡುಪು ಕಾರ್ಖಾನೆಯಿಂದ ಸಮವಸ್ತ್ರ ರಫ್ತು

ಇಸ್ರೇಲ್‌ ಪೊಲೀಸರಿಗೆ ಕೇರಳದ ಉಡುಪು ಕಾರ್ಖಾನೆಯಿಂದ ಸಮವಸ್ತ್ರ ರಫ್ತು

- Advertisement -
- Advertisement -

ಪ್ಯಾಲೆಸ್ತೀನ್ ಮೇಲಿನ ಇಸ್ರೇಲ್ ಯುದ್ಧದ ಬಗ್ಗೆ ಕೇರಳದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ಕೇರಳದ ಕಂಪೆನಿಯೊಂದು ಇಸ್ರೇಲ್ ಪೊಲೀಸ್ ಪಡೆಗಳೊಂದಿಗೆ ದೃಢವಾದ ವ್ಯವಹಾರ ಸಂಬಂಧವನ್ನು ಹೊಂದಿದೆ ಎನ್ನವುದು ಇದೀಗ ಬಹಿರಂಗವಾಗಿದೆ.

ಕೇರಳದ ಕಣ್ಣೂರು ಜಿಲ್ಲೆಯ ಒಂದು ಉಡುಪು ಕಾರ್ಖಾನೆಯು ಕಳೆದ ಆರು ವರ್ಷಗಳಿಂದ ಇಸ್ರೇಲ್‌ ಪೊಲೀಸ್ ಸಿಬ್ಬಂದಿಗೆ ಸಮವಸ್ತ್ರವನ್ನು ಪೂರೈಸುತ್ತಿದೆ. ಕಣ್ಣೂರಿನ ಕೂತುಪರಂಬದಲ್ಲಿರುವ ಮರಿಯನ್ ಅಪ್ಯಾರಲ್ ಫ್ಯಾಕ್ಟರಿಯಿಂದ ಪ್ರತಿ ವರ್ಷ ಇಸ್ರೇಲಿ ಪೊಲೀಸ್ ಸಿಬ್ಬಂದಿಗೆ ಸುಮಾರು ಒಂದು ಲಕ್ಷ ಸಮವಸ್ತ್ರಗಳನ್ನು ರಫ್ತು ಮಾಡಲಾಗುತ್ತಿದೆ.

ಇದಲ್ಲದೆ ಕಂಪೆನಿಯು ವಿವಿಧ ದೇಶಗಳಿಗೆ ಯುನಿಫಾರ್ಮ್‌ ರಫ್ತು ಮಾಡುತ್ತಿದೆ. ಕಂಪೆನಿಯಲ್ಲಿ 1,500 ಉದ್ಯೋಗಿಗಳಲ್ಲಿ ಸುಮಾರು 1,300 ಮಂದಿ ಮಹಿಳಾ ಸಿಬ್ಬಂದಿಗಳಿದ್ದಾರೆ. ಬೀಡಿ ಉದ್ಯಮ ಬಿಕ್ಕಟ್ಟನ್ನು ಎದುರಿಸಿದ ಬಳಿಕ ಉದ್ಯೋಗ ಕಳೆದುಕೊಂಡ ಅನೇಕರಿಗೆ ಸಂಸ್ಥೆಯು ಉದ್ಯೋಗವನ್ನು ಒದಗಿಸಿದೆ. ಮುಂಬೈನಲ್ಲಿ ಸಂಸ್ಥೆಯ ಪ್ರಧಾನ ಕಚೇರಿ ಇದ್ದು, ಸಂಸ್ಥೆಯನ್ನು ಉದ್ಯಮಿ ಥಾಮಸ್ ಒಲಿಕಲ್ ನಡೆಸುತ್ತಿದ್ದಾರೆ.

ಈ ವರ್ಷವೂ ಇಸ್ರೇಲ್‌ನ ಪುರುಷ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಗೆ ಸುಮಾರು 1 ಲಕ್ಷ ಸಮವಸ್ತ್ರಗಳನ್ನು ಪೂರೈಸಲು ಬುಕ್ಕಿಂಗ್ ಮಾಡಲಾಗಿದೆ ಎಂದು ಮರಿಯನ್ ಫ್ಯಾಕ್ಟರಿ ಮ್ಯಾನೇಜರ್ ಶಿಜಿನ್ ಕುಮಾರ್ ಹೇಳಿದ್ದಾರೆ.

ನಾವು ಆರು ವರ್ಷಗಳ ಹಿಂದೆ ಮೊದಲ ಆರ್ಡರ್‌ನ್ನು ಸ್ವೀಕರಿಸಿದ್ದೇವೆ. ಇಸ್ರೇಲ್‌ನ ತಂಡವು ನಮ್ಮ ಕಂಪೆನಿಗೆ ಭೇಟಿ ನೀಡಿದೆ ಮತ್ತು ನಮ್ಮ ಬಟ್ಟೆಗಳಿಂದ ಅವರು ತೃಪ್ತರಾಗಿದ್ದಾರೆ. ಆ ಬಳಿಕ ನಾವು ಅವರಿಂದ ಪ್ರತಿ ವರ್ಷ ಆರ್ಡರ್‌ಗಳನ್ನು ಪಡೆಯುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಕಾರ್ಖಾನೆಯಲ್ಲಿ ಉತ್ಪಾದಿಸಿದ ಮತ್ತು ಆಮದು ಮಾಡಿಕೊಳ್ಳುವ ಬಟ್ಟೆಗಳನ್ನು ಒಳಗೊಂಡಂತೆ ವಿವಿಧ ರೀತಿಯ ಬಟ್ಟೆಗಳನ್ನು ಬಳಸಲಾಗುತ್ತದೆ. ಉಡುಪು ಕಾರ್ಖಾನೆಯು ಇಸ್ರೇಲ್‌ನ ಜೈಲು ಅಧಿಕಾರಿಗಳಿಗೆ ಸಮವಸ್ತ್ರಕ್ಕಾಗಿ ಆರ್ಡರ್‌ ಪಡೆಯುತ್ತಿತ್ತು.

ಮೇರಿಯನ್ ಅಪ್ಯಾರಲ್ ಸಮವಸ್ತ್ರ ತಯಾರಿಕೆಯ ಜವಾಬ್ಧಾರಿ ನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಯಿಂದ ಇಸ್ರೇಲ್ ಫಿಲಿಪೈನ್ಸ್ ಮತ್ತು ಕುವೈತ್‌ನಂತಹ ಹಲವು ದೇಶಗಳ ಭದ್ರತಾ ಸಂಸ್ಥೆಗಳಿಗೆ ಸಮವಸ್ತ್ರವನ್ನು ಪೂರೈಸುತ್ತಿದ್ದಾರೆ. ಸಂಸ್ಥೆಯ ಉತ್ಪಾದನಾ ಘಟಕವು ಆರಂಭದಲ್ಲಿ ತಿರುವನಂತಪುರದಲ್ಲಿತ್ತು ಬಳಿಕ ಕಣ್ಣೂರಿಗೆ ಸ್ಥಳಾಂತರಗೊಳಿಸಲಾಗಿದೆ.

ಇದನ್ನು ಓದಿ: ಸಲಿಂಗ ವಿವಾಹ: ಕಾನೂನು ರೂಪಿಸುವ ಅಧಿಕಾರ ಸಂಸತ್ತಿಗೆ ಇರುವುದು; ಸುಪ್ರೀಂಕೋರ್ಟ್‌

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕವಿತಾಗೆ ಜಾಮೀನು ನೀಡಿದರೆ ತನಿಖೆಗೆ ಅಡ್ಡಿ: ಜಾರಿ ನಿರ್ದೇಶನಾಲಯ

0
ಆಪಾದಿತ ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರ ಜಾಮೀನು ಅರ್ಜಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ದೆಹಲಿ ಹೈಕೋರ್ಟ್‌ನಲ್ಲಿ ವಿರೋಧಿಸಿದೆ. "ಅವರ...